ಇರುವೈಲಿನಲ್ಲಿ ಆರೋಗ್ಯ ಶಿಬಿರ
ಇರುವೈಲಿನಲ್ಲಿ ಆರೋಗ್ಯಬೃಹತ್ ಉಚಿತ ಆರೋಗ್ಯ,ಕಣ್ಣಿನ ತಪಾಸಣಾ ಹಾಗೂ ಮಾಹಿತಿ ಶಿಬಿರ
ಇರುವೈಲು: ಬೃಹತ್ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರವು ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಆ.16, 2025 ರಂದು ನಡೆಯಿತು.

ಬೆಳಿಗ್ಗೆ 9.00ರಿಂದ ಮಧ್ಯಾಹ್ನ 2.00ರವರೆಗೆ ನಡೆದ ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

ಶ್ರೀ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು, ಕೆ.ಎಂ.ಸಿ ಆಸ್ಪತ್ರೆ ಕಟೀಲು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇರುವೈಲು, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) ಮಂಗಳೂರು, ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ ಹಾಗೂ ಫಲ್ಗುಣಿ ಯುವಕ ಮಂಡಲ (ರಿ.) ಇರುವೈಲು ಇವರ ಹಾಗೂ ಊರ ಹತ್ತು ಹಲವು ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಯಿತು.
ದೇವಸ್ಥಾನದ ಶ್ರೀ ರಾಘವೇಂದ್ರ ಅಸ್ರಣ್ಣರವರು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು “ಆರೋಗ್ಯವೇ ನಿಜವಾದ ಸಂಪತ್ತು ಎಂಬ ಹಿರಿಯರ ಮಾತನ್ನು ವೈದ್ಯ ಲೋಕವು ಸಾಬೀತುಪಡಿಸಿದೆ. ಚಿಕಿತ್ಸೆಗಿಂತ ತಡೆಯುವ ಕ್ರಮವೇ ಶ್ರೇಷ್ಠ. ಆದ್ದರಿಂದ ಮನಸ್ಸು ಆಹಾರ ಮತ್ತು ಜೀವನಶೈಲಿ ಮುಂತಾದವುಗಳನ್ನು ಕ್ರಮಬದ್ಧವಾಗಿ ಬದುಕಲ್ಲಿ ಅಳವಡಿಸಿಕೊಂಡರೆ ದೇಹದ ಆರೋಗ್ಯ ಉತ್ತಮವಾಗಿರುತ್ತದೆ” ಎಂದರು.
ಕಾರ್ಯಕ್ರಮದ ಪ್ರಸ್ತಾವನೆ ನೀಡಿದ ಡಿ. ರಮೇಶ ನಾಯಕ್ ಮೈರಾ ಅವರು, “ಶ್ರೀಕೃಷ್ಣಾಷ್ಟಮಿಯ ಧಾರ್ಮಿಕ ಸಡಗರದ ಜೊತೆಗೆ ಆರೋಗ್ಯ ಜಾಗೃತಿ ಶಿಬಿರಗಳು ಸಮಾಜಮುಖಿ ಹಬ್ಬಗಳೇ ಆಗಿವೆ. ಇದು ಆರೋಗ್ಯಕರ ಸಮಾಜ ನಿರ್ಮಾಣದ ಪ್ರಮುಖ ಹೆಜ್ಜೆ. ಆರೋಗ್ಯದ ಮಾಹಿತಿ ಮತ್ತು ಅರಿವಿನತ್ತ ಒಂದು ಬೆಳಕು ಚೆಲ್ಲುವ ಜೀವದಾಯಿಕ ಕಾರ್ಯಕ್ರಮವಾಗಿದೆ. ಶರೀರವೇ ಸಾಧನೆಯ ಮಂದಿರ, ಆರೋಗ್ಯವೇ ಅದರ ಬಲಿಷ್ಠ ಕಂಬಗಳು” ಎಂದು ನುಡಿದರು.
ಕೆ.ಎಂ. ಸಿಯ ಹಿರಿಯ ತಜ್ಞ ವೈದ್ಯ ಡಾ. ಶಿವಾನಂದ ಪ್ರಭು ಅವರು, “ನಿಯಮಿತ ಆಹಾರ, ವ್ಯಾಯಾಮ ಹಾಗೂ ತಪಾಸಣೆ ಅಗತ್ಯ. ಯಾವುದೇ ತೊಂದರೆ ಕಂಡಾಗ ತಕ್ಷಣ ವೈದ್ಯರ ಸಲಹೆ ಪಡೆಯಬೇಕು” ಎಂದು ಜನರಿಗೆ ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿ ಸಾಮಾನ್ಯ ರೋಗ ತಪಾಸಣೆ, ಎಲುಬು– ಕೀಲು, ಕಿವಿ–ಮೂಗು–ಗಂಟಲು, ಕ್ಯಾನ್ಸರ್, ಹೃದಯ ರೋಗ, ಸ್ತ್ರೀರೋಗ ಹಾಗೂ ಕಣ್ಣಿನ ತಪಾಸಣೆ ಸೇರಿದಂತೆ ಹತ್ತುಕ್ಕೂ ಹೆಚ್ಚು ವಿಭಾಗಗಳಲ್ಲಿ ತಜ್ಞ ವೈದ್ಯರು ಸೇವೆ ನೀಡಿದರು. ಬಿ.ಪಿ. ಮಧುಮೇಹ ತಪಾಸಣೆ, ಉಚಿತ ಇಸಿಜಿ, ಕನ್ನಡಕ ವಿತರಣೆ ಹಾಗೂ ಅಗತ್ಯ ಔಷಧಿ ವಿತರಣೆ ನೆರವೇರಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿರುವವರಿಗೆ ಕೆಎಂಸಿ ಹಸಿರು ಕಾರ್ಡ್ ಮೂಲಕ ವಿಶೇಷ ಸೌಲಭ್ಯ ಕಲ್ಪಿಸಲಾಯಿತು.
ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು. ಶಿಬಿರ ಯಶಸ್ವಿಗೆ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಭಜನಾ ಮಂಡಳಿ ಶ್ರೀ ಕ್ಷೇತ್ರ ಇರುವೈಲು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಇರುವೈಲು, ಗ್ರಾಮ ಪಂಚಾಯತ್ ಇರುವೈಲು, ಹಾಲು ಉತ್ಪಾದಕರ ಸಹಕಾರಿ ಸಂಘ (ರಿ.) ಇರುವೈಲು, ವ್ಯವಸಾಯ ಸೇವಾ ಸಹಕಾರಿ ಸಂಘ (ರಿ.) ಹೊಸಬೆಟ್ಟು, ಫ್ರೆಂಡ್ಸ್ ಕ್ಲಬ್ (ರಿ.) ಇರುವೈಲು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಇರುವೈಲು ಪುಚ್ಚಮೊಗರು, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಕಟ್ಟಣಿಗೆ ಪಂಜ ಇರುವೈಲು, ಓಂ ಶಕ್ತಿ ಭಜರಂಗದಳ ಘಟಕ ಇರುವೈಲು, ಅಶ್ವತ್ಥ ನಾರಾಯಣ ಪೂಜಾ ಸೇವಾ ಸಮಿತಿ ಕಟ್ಟಣೆಗೆ, ನಮ್ಮ ಜವನರ್ ಇರುವೈಲು, ಗೆಳೆಯರ ಬಳಗ ಪಂಜ, ಕುತ್ಯಾಡಿ ಫ್ರೆಂಡ್ಸ್ ಕ್ಲಬ್ ಇರುವೈಲು, ಪುರೋಹಿತರ ಸಂಘ ಕುಡಾಳ್ ದೇಶಸ್ಥ ಸಮಾಜ ಸಕ್ರಿಯವಾಗಿ ಸಹಕರಿಸಿದವು.
ಶ್ರೀಮತಿ ಸುಜಾತ ಶೆಟ್ಟಿ ಶುಭಾಶಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಂಜ ಚಂದ್ರಹಾಸ್ ಭಟ್ ,ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ಮಂಗಳೂರು, ಕುಡಾಳ್ ದೇಶಸ್ಥ ಸಮಾಜದ ಜಿಲ್ಲಾ ಸಂಘದ ಅಧ್ಯಕ್ಷರಾದ ದಯಾನಂದ ನಾಯಕ್ ಪುಂಜಾಲ್ ಕಟ್ಟೆ, ಸುಧೀರ್ ನಾಯಕ್ ಬೆಂಗಳೂರು , ಪ್ರಶಾಂತ್ ಗಾಣಿಗ ಇರುವೈಲು , ಪ್ರಭಾಕರ್ ಆಚಾರ್ಯ, ಶಿವಾನಂದ ನಾಯಕ್, ವಿಶ್ವನಾಥ ದೇವಾಡಿಗ ಇರುವೈಲು ,ಸುರೇಂದ್ರ ಸಾಮಂತ್, ವಿಜಯ ಶೆಣೈ ಕೊಡಂಗೆ, ಉಪೇಂದ್ರ ನಾಯಕ್ ಮಂಗಳೂರು, ಅನಂತ ಪ್ರಭು ಮರೋಳಿ, ಹಿರಿಯರಾದ ನಾರಾಯಣ್ ನಾಯಕ್ ಕಿನ್ನಾಜೆ, ಬಾಲಕೃಷ್ಣ ಪ್ರಭು ಕೊಡಂಗೆ, ದಿನೇಶ್ ನಾಯಕ್ ಪಂಜ, ಮೋಹನ್ ನಾಯಕ್ ಪಂಜ, ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಹಾಗೂ ಮುಂತಾದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಕಟ್ಟನಿಗೆ ವಾಸುದೇವ ಸಾಮಂತ್ ಮುರಳಿಧರ ಪ್ರಭು ವಗ್ಗ ಹಾಗೂ ಕೆ.ಎಂ.ಸಿ ಯ ನಿತೇಶ್ ಶೆಟ್ಟಿ ಎಕ್ಕಾರು ಇವರ ನೇತೃತ್ವದಲ್ಲಿ ಶಿಬಿರವು ಯಶಸ್ವಿಯಾಗಿ ನೆರವೇರಿತು.
ಗ್ರಾಮಸ್ಥರು ಶಿಬಿರದ ಉತ್ತಮ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ, “ಈ ಶಿಬಿರ ಆರೋಗ್ಯದತ್ತ ಬೆಳಕು ಹರಡಿದ ಜೀವದಾಯಕ ಕಾರ್ಯಕ್ರಮ” ಎಂದು ಅಭಿಪ್ರಾಯಪಟ್ಟರು.
ಶಿಬಿರವನ್ನು ಶೀನ ನಾಯ್ಕ್ ಇರುವೈಲು ಇವರು ಸ್ವಾಗತಿಸಿ, ನಿರೂಪಿಸಿದರು. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮುರಳಿಧರ ಪ್ರಭು ವಗ್ಗ ಧನ್ಯವಾದ ಸಲ್ಲಿಸಿದರು.

