ಮಂಗಳ ನಿಧಿ
ಗೃಹಪ್ರವೇಶದಂದು ಮಂಗಳನಿಧಿ ಸಮರ್ಪಣೆ
ಶ್ರೀ ನಂದ ಕಿಶೋರ್ ನಾಯಕ್ ಮತ್ತು ಡಾ| ವಿಜಯಲಕ್ಷ್ಮೀ ನಾಯಕ್ ಸೊಲ್ತಾಡಿ ಇವರ ನೂತನ ಗೃಹ ‘ಶ್ರೀ ಭಗವತಿ’ ಇದರ ಗೃಹಪ್ರವೇಶವು 23/11/2017ರಂದು ಮಂಜುಶ್ರೀ ರೆಸಿಡೆನ್ಸಿ, ಕದ್ರಿ ನ್ಯೂ ರೋಡ್, ಕದ್ರಿ, ಮಂಗಳೂರು ಇಲ್ಲಿ ನಡೆಯಿತು.
ಸಮಾಜಕ್ಕಾಗಿ ಬಾಳಿದಾಗ ಸಾರ್ಥಕ ಬದುಕು – ಪ್ರಶಾಂತ್ ಭಟ್
“ಬದುಕಲ್ಲಿ ಭರವಸೆ ಇದ್ದಾರೆ. ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತೆ. ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗಿಯೇ ತೆರೆಯುತ್ತೆ. ಮನುಷ್ಯ ತಾನು ಸಂಪಾದಿಸಿದ ಸ್ನೇಹ, ವಿದ್ಯೆ, ಪರೋಪಕಾರ, ತ್ಯಾಗ ಹಾಗೂ ದಾನ ಮುಂತಾದವುಗಳಿಂದ ಪುಣ್ಯವನ್ನು ಸಂಪಾದಿಸುತ್ತಾನೆ” ಎಂದು ಪುರೋಹಿತರಾದ ಶ್ರೀಯುತ ಪ್ರಶಾಂತ್ ಭಟ್ ಅವರು ಸೋಲ್ತಾಡಿ ಶ್ರೀ ನಂದಕಿಶೋರ ಮತ್ತು ವಿಜಯಲಕ್ಷ್ಮೀ ದಂಪತಿಗಳ “ಶ್ರೀ ಭಗವತಿ” ನೂತನ ಗೃಹಪ್ರವೇಶದ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
“ಮನೆಯಲ್ಲಿ ನಡೆಯುತ್ತಿರುವ ಯಾವುದೇ ಮಂಗಳ ಕಾರ್ಯಕ್ರಮಗಳಲ್ಲಿ ಸಮಾಜಕ್ಕೋಸ್ಕರ ಮಂಗಳ ನಿಧಿಯನ್ನು ಸಮರ್ಪಿಸುತ್ತಿರುವುದು ಬಹಳ ಸೂಕ್ತ ಹಾಗೂ ಮಾದರಿಯಾಗಿದೆ” ಎಂದು ಹೇಳುತ್ತಾ ದಂಪತಿಗಳನ್ನು ಆಶೀರ್ವದಿಸಿ ಅವರ ಮುಂದಿನ ಜೀವನವು ಈ ಮನೆಯಲ್ಲಿ ಉತ್ತರೋತ್ತರ ಅಭಿವೃದ್ಧಿ ಹಾಗೂ ಯಶಸ್ಸು ದೊರಕಲಿ ಎಂದು ಶುಭ ಹಾರೈಸಿದರು.
ಈ ಶುಭ ಸಮಾರಂಭದಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಮೈರ, ಶ್ರೀಮತಿ ಸುಚಿತ್ರಾ ರಮೇಶ್ ನಾಯಕ್ ಮೈರ, ಶ್ರೀ ನಾರಾಯಣ್ ನಾಯಕ್ ದಂಪತಿ ಸೊಲ್ತಾಡಿ, ಶ್ರೀ ವೆಂಕಟರಮಣ ನಾಯಕ್ ದಂಪತಿ ಮಂಗಳೂರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂಜಯ ಪ್ರಭು ದಂಪತಿ, ಶ್ರೀ ರತ್ನಾಕರ ಸಾಮಂತ್ ದಂಪತಿ, ಶ್ರೀ ಸುಧಾಕರ ಶೆಣೈ ದಂಪತಿ ಮರೋಳಿ, ಶ್ರೀ ಗೋಪಾಲ್ ಸಾವಂತ್ ಮೈರಾ, ಕೋಶಾಧ್ಯಕ್ಷರಾದ ಶ್ರೀ ಸಂಜೀವ ಸಾವಂತ್, ಶ್ರೀ ರವೀಂದ್ರ ನಾಯಕ್ ದಂಪತಿ ಶಕ್ತಿನಗರ, ಶ್ರೀ ಗಣೇಶ್ ಶೆಣೈ ಮರೋಳಿ, ಶ್ರೀ ಮುರಳೀಧರ ಪ್ರಭು ವಗ್ಗ, ಶ್ರೀ ಜಯರಾಮ ನಾಯಕ್ ಶಕ್ತಿನಗರ ಉಪಸ್ಥಿತರಿದ್ದರು.
ಪಾಣೆಮಂಗಳೂರಿನ ವೀರ ವಿಠಲ ಸುಕೃತೀಂದ್ರ ಕಲಾ ಮಂದಿರದಲ್ಲಿ ಜರಗಿದ ಚಿ| ರವೀಂದ್ರ ನಾಯಕ್ ಶಕ್ತಿನಗರ ಮತ್ತು ಚಿ|ಸೌ| ಅಕ್ಷತಾ ನಾಯಕ್ ಅವರ ವಿವಾಹ ಸಂದರ್ಭದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನಕ್ಕೆ ಮಂಗಳನಿಧಿಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್ ಮೈರಾ ಸ್ವೀಕರಿಸಿದರು. ಪುರೋಹಿತರಾದ ಶ್ರೀ ಪ್ರಶಾಂತ್ ಭಟ್ ಇರುವೈಲು, ಕು.ದೇ.ಗೌ. ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಡಿ. ಗಣಪತಿ ಶೆಣೈ ಉಪಸ್ಥಿತರಿದ್ದರು.
ದಿನಾಂಕ 03-12-2017ರಂದು ಬಂಟ್ವಾಳ ಕಾಶೀಮಠ ಶ್ರೀ ಮಾಧವೇಂದ್ರ ಸಭಾ ಮಂದಿರದಲ್ಲಿ ಜರಗಿದ ಚಿ|ಸೌ| ಅಶ್ವಿನಿ ಮತ್ತು ಚಿ| ಸಂತೋಷ್ ಅವರ ಶುಭವಿವಾಹ ಸಂದರ್ಭದಲ್ಲಿ ವಧುವಿನ ಮಾವ ಶ್ರೀ ರಾಮಕೃಷ್ಣ ಪ್ರಭು, ಅಧ್ಯಾಪಕರು, ಮಾರಿಬೆಟ್ಟು ಇವರು ಪ್ರತಿಷ್ಠಾನದ ಅಧ್ಯಕ್ಷರಿಗೆ ಮಂಗಳನಿಧಿಯನ್ನು ನೀಡಿ ಸಮಾಜಸೇವೆ ಮಾದರಿಯಾದರು..