ದಿನಾಂಕ 06.01.2017 ರಂದು ಸಮುದಾಯದ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ, ಇಡೀ ಸಮಾಜವೇ ಸಂಘಟನಾತ್ಮಕವಾಗಿ ಬಲಗೊಳ್ಳುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಹೊಸವರುಷದ ಶುಭವಸರದಲ್ಲಿ ಸಮುದಾಯಕ್ಕೆಂದೇ ಮೀಸಲಾದ ‘ಶ್ರೀ ಪೂರ್ಣಾನಂದ ವಾಣಿ’ ಪತ್ರಿಕೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ಇವರು ಪ್ರತಿಷ್ಠಾನದ ಕಛೇರಿಯಲ್ಲಿ ಅನಾವರಣಗೊಳಿಸಿದರು.