ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ

June 2018 – DATA COLLECTION FOR ADDRESS BOOK
ಸಮಾಜದ ಅಭಿವೃದ್ಧಿ ಯೋಜನೆಗಳಿಗೆ ಸಮೀಕ್ಷೆ ಬಲಿಷ್ಠ ಅಡಿಪಾಯ -ಬಸ್ತಿ ವಾಮನ್ ಶೆಣೈ.

ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಮೂಲಭೂತ ಸಮೀಕ್ಷೆಯಿಂದ ಸಮುದಾಯದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ತಿಳಿದು, ಸಮಸ್ಯೆಗಳನ್ನು ಗುರುತಿಸುವ ಮೂಲಕ ಅಭಿವೃದ್ಧಿ ಪರ ಯೋಜನೆಗಳನ್ನು ಹಮ್ಮಿಕೊಳ್ಳಬಹುದಾಗಿದೆ. ನುಡಿದಂತೆ ನಡೆಯುವ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಒಂದು ಪ್ರಬಲ ಸಂಘಟನೆಯಾಗಿದ್ದು, ಸಮೀಕ್ಷಾ ಕಾರ್ಯವನ್ನು ಖಂಡಿತವಾಗಿಯೂ ಯಶಸ್ವಿಯಾಗಿ ನೆರವೇರಿಸುತ್ತದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷರಾದ ಶ್ರೀ ಬಸ್ತಿ ವಾಮನ ಶೆಣೈ, ಅಭಿಪ್ರಾಯ ಪಟ್ಟರು.

    ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಆಯೋಜಿಸಿದ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪೂರ್ವಭಾವಿಯಾಗಿ ಕ್ಷೇತ್ರ ಕಾರ್ಯಕರ್ತರ ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಈ ಸಮುದಾಯವು ತನ್ನ ಸಮಾಜದ ಮಾನವ ಸಂಪನ್ಮೂಲದಿಂದ ಮೊದಲ ಹಂತದಲ್ಲಿ ಉಡುಪಿ, ದ.ಕ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡುವ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಬಲಿಷ್ಠ ಅಡಿಪಾಯವನ್ನು ಹಾಕುವ ಅಪೂರ್ವ ಸಾಧನೆ ಮಾಡುತ್ತಿರುವುದು ಪ್ರಶಂಸನೀಯ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬ್ರಹ್ಮಾವರದ ಎಸ್.ಎಮ್.ಎಸ್. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|. ವೈ. ರವೀಂದ್ರನಾಥ ರಾವ್ ನುಡಿದರು. ಇವರು ಪ್ರಶ್ನಾವಳಿಯನ್ನು ಕ್ಷೇತ್ರದಲ್ಲಿ ಬಳಸುವ ಬಗೆ ಮಾರ್ಗದರ್ಶನ ನೀಡಿದರು.

    ವಿಶ್ವ ಕೊಂಕಣಿ ಕೇಂದ್ರದ ಸಹ ನಿರ್ದೇಶಕರಾದ ಶ್ರೀ ಗುರುದತ್ತ್ ಬಂಟ್ವಾಳಕರ್, ಕಾರ್ಯಕರ್ತರನ್ನು ಗುಂಪು ಚರ್ಚೆಯ ಮೂಲಕ ಕ್ಷೇತ್ರ ವಿಂಗಡಣೆ ಹಾಗೂ ಮನೆ-ಮನೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವ ರೀತಿಯನ್ನು ವಿವರಿಸಿದರು.

    ಸುಮಾರು 150 ಮಂದಿ ಕ್ಷೇತ್ರ ಕಾರ್ಯಕರ್ತರು ಸಮೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಕರ್ತರಾದ ಗೋಪಾಲಕೃಷ್ಣ ಪ್ರಭು, ಯಶವಂತ್ ಪ್ರಭು, ಪ್ರಕಾಶ್. ಜಿ, ಮುರಳೀಧರ್ ಪ್ರಭು ಮತ್ತು ಡಾ| ಪ್ರವೀಣ್ ಚಂದ್ರ ನಾಯಕ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

    ಶ್ರೀ ದಿನೇಶ್ ಪ್ರಭು, ಅಧ್ಯಕ್ಷರು ಉಡುಪಿ ಜಿಲ್ಲಾ ಸಂಘ, ಬೆಂಗಳೂರಿನ ಪದಾಧಿಕಾರಿ ಶ್ರೀ ಪ್ರಭಾಕರ ಪ್ರಭು ಹೆಣ್ಣೂರು, ಪಾಟ್ಕರ್ ಶಾಲೆಯ ಸ್ಥಾಪಕರಾದ ಶ್ರೀ ರಮಾನಂದ ಪಾಟೀಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಕ್ತಿನಗರದ ವೀರ ವೆಂಕಟೇಶ್ ಕ್ರಿಕೇಟರ್ಸ್ ಬಳಗವು ಕಾರ್ಯಕ್ರಮಕ್ಕೆ ಸಹಕರಿಸಿದರು. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್ ಸ್ವಾಗತಿಸಿ, ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ್ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಸಂಜೀವ್ ಸಾಮಂತ್ ವಂದಿಸಿ, ಡಾ| ವಿಜಯಲಕ್ಷ್ಮಿ ನಾಯಕ್ ಮತ್ತು ಶ್ರೀ ರವೀಂದ್ರ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.

•    ಮೇ 22, 2014ರಂದು ಸುಮಾರು 50 ಸಮಾಜ ಭಾಂದವರು ಸೇರಿಕೊಂಡು ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಪೂರಕವಾದ ಪ್ರಶ್ನಾವಳಿಯನ್ನು ಡಾ. ವೈ. ರವೀಂಧ್ರ ರಾವ್ ರವರ ಮಾರ್ಗದರ್ಶನದಲ್ಲಿ ರಚಿಸಲಾಯಿತು.
•    ದಿನಾಂಕ 20.08.2014ರಂದು ನಮ್ಮ ಸಮಾಜದ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು, ಪೂರ್ವ ತಯಾರಿಯಾಗಿ ಸುಮಾರು 120 ಕ್ಷೇತ್ರ ಕಾರ್ಯಕರ್ತರಿಗೆ ಪ್ರಶ್ನಾವಳಿಯನ್ನು ಬಳಸುವ ತರಬೇತಿಯನ್ನು ವಿಶ್ವ ಕೊಂಕಣಿ ಕೇಂದ್ರದ ಸಹಭಾಗಿತ್ವದಲ್ಲಿ ಡಾ. ವೈ. ರವೀಂಧ್ರ ರಾವ್ ಮತ್ತು ಶ್ರೀ ಗುರುದತ್ತ ಬಾಳಿಗರವರ ಮಾರ್ಗದರ್ಶನದಲ್ಲಿ ನೆರವೇರಿತು. ತರಬೇತಿಯ ಸಮಾರೋಪ ಸಮಾರಂಭದಲ್ಲಿ ಡಾ. ವೈ. ರವೀಂಧ್ರ ರಾವ್‍ರವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
•    ದಿನಾಂಕ 12.10.2016ರಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ, ನಮ್ಮ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿದ ಕುರಿತು ಮಾರ್ಗದರ್±ಕರಾದ ಡಾ. ರವೀಂಧ್ರನಾಥ್ ರಾವ್, ಬ್ರಹ್ಮಾವರ, ಇವರೊಂದಿಗೆ ಚರ್ಚೆ ನಡೆಸಲಾಗಿತ್ತು. ಈ ಅಧ್ಯಯನಕ್ಕೆ ಪೂರಕವಾದ ಅಂಶಗಳನ್ನು ಸಂಗ್ರಹಿಸಿ ಕೊಡುವ ಜವಾಬ್ದಾರಿಯನ್ನು ಶ್ರೀ ಎಂ.ಎಂ.ಪ್ರಭು ವಹಿಸಿದರು.

ದಿನಾಂಕ 12.10.2016 ರಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ, ನಮ್ಮ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿದ ಕುರಿತು ಮಾರ್ಗದರ್ಶಕರಾದ ಡಾ. ರವೀಂಧ್ರನಾಥ್ ರಾವ್, ಬ್ರಹ್ಮಾವರ, ಇವರೊಂದಿಗೆ ಚರ್ಚೆ ನಡೆಸಲಾಗಿತ್ತು.