ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ – 2015
ದಿನಾಂಕ 08.02.2015, ಉಚಿತ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರವನ್ನು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಭಾರತ ಸರಕಾರದ ಆಯುಷ್ ಸಚಿವರಾದ ಶ್ರೀ ಪಾದ ನಾಯಕ್, ಕರ್ನಾಟಕ ಸರಕಾರದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಮತ್ತು 108 ಜಿ.ಎಮ್.ಆರ್ ನ ಸಿ.ಇ.ಒ ಶ್ರೀ ಜಗದೀಶ್ ಪಾಟೀಲ್ ರವರ ಗೌರವ ಉಪಸ್ಥಿತಿಯಲ್ಲಿ -ಲಯನ್ಸ್ ಸೇವಾ ಮಂದಿರ, ಬಿ.ಸಿ.ರೋಡ್ನಲ್ಲಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ವಿಶೇಷ ಹಾಗೂ ನುರಿತ ತಜ್ಞ ವೈದ್ಯರುಗಳಾದ ಡಾ. ಅರುಣ್ ಎಸ್ (ಸಾಮಾನ್ಯ ರೋಗ ತಜ್ಞರು, ಡಾ. ಪದ್ಮನಾಭ ಕಾಮತ್ (ಹೃದಯ ರೋಗ ತಜ್ಞರು), ಡಾ. ಈಶ್ವರ ಕೀರ್ತಿ (ಬೆನ್ನು ಮೂಳೆ ತಜ್ಞರು), ಡಾ. ಪ್ರವೀಣ್ಚಂದ್ರ ನಾಯಕ್ ( ಮಧುಮೇಹ ತಜ್ಞರು), ಡಾ. ಪ್ರಹ್ಲಾದ್ ಕುಷ್ಟಗಿ (ಸ್ತ್ರಿ ರೋಗ ತಜ್ಞರು) ಮತ್ತು ಡಾ. ಅಭಿನ್ ಹೊಳ್ಳ ( ಕಣ್ಣಿನ ತಜ್ಞರು) ಭಾಗವಹಿಸಿದ್ದರು. ಸಮಾಜದ ವೈದ್ಯರುಗಳಾದ ಡಾ. ತ್ರಿವೇಣಿ ಕೂಡಿಬೈಲು, ಡಾ. ರಿತೇಶ್ ಬಿ ಪ್ರಭು, ಡಾ. ಪ್ರವೀಣ್ಚಂದ್ರ ನಾಯಕ್, ಡಾ. ಮನೋಹರ್ ಪ್ರಭು, ಡಾ. ಸುಚೇತ ಶೆಣೈ, ಡಾ. ರಾಮ್ ರಾಜೇಶ್ ಮುಂತಾದವರು ಮಾಹಿತಿ ನೀಡಿದರು. ಡಾ.ವಾಣಿ ರಿತೇಶ್, ಮತ್ತು ಡಾ.ಪೂರ್ಣಾನಂದ ಜನಸಾಮಾನ್ಯರ ತಪಾಸಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಜತೆಗೆ ಆರೋಗ್ಯ ಕಾರ್ಯಕರ್ತರಾದ ಸುಜಾತ ರಮೇಶ್ ಸಾಮಂತ್, ಸರೋಜಾ, ಸುಜಾತ ರಾಘವೇಂದ್ರ ಕಶೆಕೋಡಿ, ಅಶ್ವಿನಿ ಗುರುಪ್ರಸಾದ್, ರಮೇಶ್ ಪ್ರಭು, ವಿಜಯ ಉಪೇಂದ್ರ ನಾಯಕ್, ಮಂಜುನಾಥ್, ಗುರುರಾಜ್, ವಿನೀತ್ ವಗ್ಗ ಸಹಕರಿಸಿದರು. ಸುಮಾರು 600 ಜನಕ್ಕಿಂತಲೂ ಹೆಚ್ಚು ಜನರು ಶಿಬಿರದ ಸದುಪಯೋಗವನ್ನು ಪಡೆದು ಕೊಂಡರು.