ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ – 2016

ದಿನಾಂಕ 10.01.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಮತ್ತು ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಂಘ (ರಿ), ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಪುಂಜಾಲ್ಕಟ್ಟೆಯ ನಂದಗೋಕುಲ ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಪುರೋಹಿತರು, ಜ್ಯೋತಿಷ್ಯರು ಮತ್ತು ವಾಸ್ತು ಸಲಹೆಗಾರರಾದ ಶ್ರೀ ರತ್ನಾಕರ ಭಟ್ ಸರಪಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಶಿಬಿರದ ವಿಶೇಷವಾದ ಅಂಶವೆಂದರೆ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜದ ವೈದ್ಯರುಗಳು ಮತ್ತು ಆರೋಗ್ಯಕಾರ್ಯಕರ್ತರು ಮುಂದಾಳುತ್ವ ವಹಿಸಿ ಶಿಬಿರದ ಸಂಪೂರ್ಣ ಜವಾಬ್ದಾರಿ ವಹಿಸಿರುವುದು ಶ್ಲಾಘನೀಯ . ಶಿಬಿರದಲ್ಲಿ ಆರೋಗ್ಯ ತಪಾಸಣೆಯ ಜತೆಗೆ ‘ಆಯುರ್ವೇದ ಮನೆ-ಮದ್ದು, ಮಕ್ಕಳ ಹಲ್ಲಿನ ರಕ್ಷಣೆ, ಮುಖಾಂಗದ ಶಸ್ತ್ರಚಿಕಿತ್ಸೆ, ಮಧುಮೇಹ ಚಿಕಿತ್ಸೆ, ಪಾಶ್ರ್ವವಾಯು -ಪ್ರಥಮ ಚೆಕಿತ್ಸೆ, ಹೃದಯಾಘಾತ, ಬೆನ್ನು ಮೂಳೆ- ಸ್ಲಿಪ್ ಡಿಸ್ಕ್, ಆರೋಗ್ಯ ವಿಮೆ’ ಮುಂತಾದ ವಿಷಯಗಳ ಮಾಹಿತಿಯನ್ನು ಕ್ರಮವಾಗಿ ಸಮಾಜದ ವೈದ್ಯರುಗಳಾದ ಡಾ. ತ್ರಿವೇಣಿ ಕೂಡಿಬೈಲು, ಡಾ.ಗಿರೀಶ್ ನಾಯಕ್, ಡಾ. ರಿತೇಶ್ ಬಿ ಪ್ರಭು, ಡಾ. ಪ್ರವೀಣ್ ಚಂದ್ರ ನಾಯಕ್, ಡಾ. ಮನೋಹರ್ ಪ್ರಭು, ಡಾ. ಭಾಸ್ಕರ್ ಪ್ರಭು, ವಿಕ್ರಮ್ ಮುಂತಾದವರು ಮಾಹಿತಿ ನೀಡಿದರು. ಡಾ. ಸುಚೇತ ಸುಧಾಕರ ಶೆಣೈ, ಡಾ. ವಿನಯ ಗಿರೀಶ ನಾಯಕ್, ಡಾ.ವಾಣಿ ರಿತೇಶ್, ಡಾ. ಶಿವಪ್ರಕಾಶ್, ಜನ ಸಾಮಾನ್ಯರ ತಪಾಸಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಜತೆಗೆ ಆರೋಗ್ಯ ಕಾರ್ಯಕರ್ತರಾದ ಸುಜಾತ ರಮೇಶ್ ಸಾಮಂತ್, ಸುನಂದ, ಸುಜಾತ ಕಶೆಕೋಡಿ, ವಿಜಯಲಕ್ಷ್ಮಿ ಪುತ್ತೂರು, ರಮೇಶ್ ಕೊಡ್ನೀರು, ವರುಣ್, ರಮೇಶ್ ಪ್ರಭು ಸಹಕರಿಸಿದರು.

 

ನಿಸ್ವಾರ್ಥ ಸೇವೆಯೇ ಸಂಘ ಸಂಸ್ಥೆಗಳ ಗುರಿಯಾಗಬೇಕು: ಗಣಪತಿ ಶೆಣೈ ಡೆಚ್ಚಾರು

ಪುಂಜಾಲಕಟ್ಟೆ: ಇತ್ತೀಚೆಗೆ ಆರೋಗ್ಯ ಸೇವೆಗಳು ಗ್ರಾಮಾಂತರ ಬಡ ಜನತೆಗೆ ಗಗನ ಕುಸುಮವಾಗು ತ್ತಿದೆ. ತಮ್ಮ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗಳಿಗೆ ಬರುವ ಅವರು ಇಲ್ಲಿನ ವಿವಿಧ ವೈದ್ಯಕೀಯ ಪರೀಕ್ಷೆಗಳ, ಚಿಕಿತ್ಸಾ ವೆಚ್ಚವನ್ನು ಭರಿಸಲು ಹೈರಾ ಣಾಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಿಂದ ಗ್ರಾಮಾಂತರ ಪ್ರದೇಶದ ಜನತೆಯನ್ನು ಮುಕ್ತಗೊಳಿಸುವ ಹಿನ್ನಲೆಯಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಕಂಕಣ ಬದ್ಧರಾಗಬೇಕೆಂದು ಗಣಪತಿ ಶೆಣೈ ಡೆಚ್ಚಾರು, ಅಧ್ಯಕ್ಷರು, ಕುಡಾಲ ದೇಶಸ್ಥ ಅದ್ಯ ಗೌಡ ಬ್ರಾಹ್ಮಣ ಸಂಘ ದ.ಕ. ಜಿಲ್ಲೆ ಹೇಳಿದರು.

    ಅವರು ಕುಡಾಲ ದೇಶಸ್ಥ ಆದ್ಯ ಬ್ರಾಹ್ಮಣ ಸಂಘ ಬೆಳ್ತಂಗಡಿ ವಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ , ಉಜಿರೆ, ಶ್ರೀ  ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು, ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಮಹಿಳಾ ಸಂಘ, ಬೆಳ್ತಂಗಡಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಎ. 16ರಂದು “ನಂದಗೋಕುಲ ಸಭಾಭವನ” ಪುಂಜಾಲಕಟ್ಟೆ ಇಲ್ಲಿ ಸಮಾಜ ಬಾಂಧವರಿಗಾಗಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದರು.

    ಶ್ರೀ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇದರ ಕಾರ್ಯನಿರ್ವಹಣಾಧಿಕಾರಿ ಮನ್ಮಥ್ ಕುಮಾರ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆ ಇಲ್ಲಿ ದೊರೆಯುವ ಸೌಲಭ್ಯಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಡಾ| ಪ್ರಭಾತ್ ಕುಮಾರ್, ಮೆಡಿಕಲ್ ಸುಪರಿಂಟೆಂಡೆಂಟ್, ಎಸ್.ಡಿ.ಎಂ ಆಸ್ಪತ್ರೆ ಉಜಿರೆ, ಶಾಂತರಾಮ ಪ್ರಭು, ವಗ್ಗ, ನಿದೇರ್ಶಕರು ಶ್ರೀ ಪೂರ್ಣಾನಂದ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ, ಮಂಗಳೂರು. ತಾರಾ ಶಿವರಾಯ ಪ್ರಭು, ಅಧ್ಯಕ್ಷರು, ಮಹಿಳಾ ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘ ಬೆಳ್ತಂಗಡಿ, ರಮೇಶ್ ನಾಯಕ್, ಅಧ್ಯಕ್ಷರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ, ಇದರ ತಜ್ಞ ವೈದ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಿಬಿರದ ಸಂಯೋಜನೆಯನ್ನು ದಯಾನಂದ ನಾಯಕ್ ಅಧ್ಯಕ್ಷರು ಶ್ರೀ ಪೂರ್ಣನಂದ ಸೇವಾ ಪ್ರತಿಷ್ಠಾನ, ಬೆಳ್ತಂಗಡಿ ವಲಯ ಮಾಡಿದ್ದರು.  ಪುರೋಹಿತರಾದ ಪ್ರಭಾಕರ ಭಟ್, ಪ್ರಾರ್ಥಿಸಿದರು. ಸುಧಾಕರ ಪ್ರಭು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಸಹಕರಿಸಿದರು. ಯೋಗೀಶ್ ನಾಯಕ್, ಕಾರ್ಯದರ್ಶಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಕಾರ್ಯಕ್ರಮ ನಿರೂಪಿಸಿದರು.

ಪುಂಜಾಲ್‍ಕಟ್ಟೆ ನಂದಗೋಕುಲ
ದಿನಾಂಕ 10.01.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಮತ್ತು ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಂಘ (ರಿ), ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಪುಂಜಾಲ್ಕಟ್ಟೆಯ ನಂದಗೋಕುಲ ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಪುರೋಹಿತರು, ಜ್ಯೋತಿಷ್ಯರು ಮತ್ತು ವಾಸ್ತು ಸಲಹೆಗಾರರಾದ ಶ್ರೀ ರತ್ನಾಕರ ಭಟ್ ಸರಪಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

“ಮನುಷ್ಯನಿಗೆ ಮುತ್ತು, ರತ್ನ, ವೈಢೂರ್ಯಗಳಿಗಿಂತಲೂ ಮಿಗಿಲಾದ ಸಂಪತ್ತು ಆರೋಗ್ಯ. ಇಂದಿನ ದಿನಗಳಲ್ಲಿ ವಿಷಪೂರಿತ ಆಹಾರದ ನಡುವೆ ನಮ್ಮ ಆರೋಗ್ಯವನ್ನು ಕಾಪಾಡುವ ವಿಚಾರಗಳನ್ನು ಬಲ್ಲವರಿಂದ ತಿಳಿದು ಅನುಸರಿಸುವುದು ಅನಿವಾರ್ಯ. ಉತ್ತಮ ಆರೋಗ್ಯವಿದ್ದಾಗ ಸದೃಢ ಮಾನಸಿಕ ನೆಮ್ಮದಿ ಇರಲು ಸಾಧ್ಯ. ಹಾಗಾಗಿ ಇಂತಹ ಆರೋಗ್ಯ ಶಿಬಿರಗಳು ಜನ ಸಾಮಾನ್ಯರಿಗೆ ಹೆಚ್ಚು ಉಪಯುಕ್ತವಾಗುತ್ತದೆ” ಎಂದು ಪುರೋಹಿತರು, ಜ್ಯೋತಿಷ್ಯರು ಮತ್ತು ವಾಸ್ತು ಸಲಹೆಗಾರರಾದ ಶ್ರೀ ರತ್ನಾಕರ ಭಟ್ ಸರಪಾಡಿ ಅಭಿಪ್ರಾಯ ಪಟ್ಟರು.
ಇವರು ದಿನಾಂಕ 10.01.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಮತ್ತು ಕುಡಾಳ್ ದೇ±ಸ್ಥ ಆದ್ಯಗೌಡ್ ಬ್ರಾಹ್ಮಣ ಸಂಘ (ರಿ), ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಪುಂಜಾಲ್ಕಟ್ಟೆಯ ನಂದಗೋಕುಲ ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಪುರೋಹಿತರು, ಜ್ಯೋತಿಷ್ಯರು ಮತ್ತು ವಾಸ್ತು ಸಲಹೆಗಾರರಾದ ಶ್ರೀ ರತ್ನಾಕರ ಭಟ್ ಸರಪಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಶಿಬಿರದ ವಿಶೇಷವಾದ ಅಂಶವೆಂದರೆ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜದ ವೈದ್ಯರುಗಳು ಮತ್ತು ಆರೋಗ್ಯಕಾರ್ಯಕರ್ತರು ಮುಂದಾಳುತ್ವ ವಹಿಸಿ ಶಿಬಿರದ ಸಂಪೂರ್ಣ ಜವಾಬ್ದಾರಿ ವಹಿಸಿರುವುದು ಶ್ಲಾಘನೀಯ. ಶಿಬಿರದಲ್ಲಿ ಆರೋಗ್ಯ ತಪಾಸಣೆಯ ಜತೆಗೆ ‘ಆಯುರ್ವೇದ ಮನೆ-ಮದ್ದು, ಮಕ್ಕಳ ಹಲ್ಲಿನ ರಕ್ಷಣೆ, ಮುಖಾಂಗದ ಶಸ್ತ್ರಚಿಕಿತ್ಸೆ, ಮಧುಮೇಹ ಚಿಕಿತ್ಸೆ, ಪಾಶ್ರ್ವವಾಯು -ಪ್ರಥಮ ಚೆಕಿತ್ಸೆ, ಹೃದಯಾಘಾತ, ಬೆನ್ನು ಮೂಳೆ- ಸ್ಲಿಪ್ ಡಿಸ್ಕ್, ಆರೋಗ್ಯ ವಿಮೆ’ ಮುಂತಾದ ವಿಷಯಗಳ ಮಾಹಿತಿಯನ್ನು ಕ್ರಮವಾಗಿ ಸಮಾಜದ ವೈದ್ಯರುಗಳಾದ ಡಾ. ತ್ರಿವೇಣಿ ಕೂಡಿಬೈಲು, ಡಾ.ಗಿರೀಶ್ ನಾಯಕ್, ಡಾ. ರಿತೇಶ್ ಬಿ ಪ್ರಭು, ಡಾ. ಪ್ರವೀಣ್ ಚಂದ್ರ ನಾಯಕ್, ಡಾ. ಮನೋಹರ್ ಪ್ರಭು, ಡಾ. ಭಾಸ್ಕರ್ ಪ್ರಭು, ವಿಕ್ರಮ್ ಮುಂತಾzವರು ಮಾಹಿತಿ ನೀಡಿದರು. ಡಾ. ಸುಚೇತ ಸುಧಾಕರ ಶೆಣೈ, ಡಾ. ವಿನಯ ಗಿರೀಶ ನಾಯಕ್, ಡಾ.ವಾಣಿ ರಿತೇಶ್, ಡಾ. ಶಿವಪ್ರಕಾಶ್, ಜನ ಸಾಮಾನ್ಯರ ತಪಾಸಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಜತೆಗೆ ಆರೋಗ್ಯ ಕಾರ್ಯಕರ್ತರಾದ ಸುಜಾತ ರಮೇಶ್ ಸಾಮಂತ್, ಸುನಂದ, ಸುಜಾತ ಕಶೆಕೋಡಿ, ವಿಜಯಲಕ್ಷ್ಮಿ ಪುತ್ತೂರು, ರಮೇಶ್ ಕೊಡ್ನೀರು, ವರುಣ್, ರಮೇಶ್ ಪ್ರಭು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ಗಣೇಶ್ ಶೆಣೈ, ಎಂ,ಎಂ.ಪ್ರಭು, ಸಂಜೀವ್ ಸಾಮಂತ್, ರತ್ನಾಕರ್ ಸಾಮಂತ್, ರವೀಂದ್ರ ನಾಯಕ್, ಯಶವಂತ್ ಮೊಡಂತ್ಯಾರ್, ಪ್ರಕಾಶ್ ಗುಂಡಿದಡ್ಡ ಮುಂತಾದವರು ಸಕ್ರೀಯವಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಸಂಜಯ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ವಿಜಯಲಕ್ಷ್ಮಿ ನಾಯಕ್ ವಂದಿಸಿ, ಪ್ರದೀಪ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರಿನ ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ
ದಿನಾಂಕ 07.02.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಮತ್ತು ಶ್ರೀ ಪೂರ್ಣಾನಂದ ಮಂದಿರ(ರಿ), ಪುತ್ತೂರು, ಇದರ ಜಂಟಿ ಆಶ್ರಯದಲ್ಲಿ ಪುತ್ತೂರಿನ
ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಪೂರ್ಣಾನಂದ ಮಂದಿರದ ಅಧ್ಯಕ್ಷರಾದ ಬಾಲಕೃಷ್ಣ ಪ್ರಭು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾಜದ ವೈದ್ಯರುಗಳು ಮತ್ತು ಪ್ಯಾರಾ ಮೆಡಿಕಲ್ ಕಾರುಕರ್ತರು ಪಾಲ್ಗೋಂಡು ಶಿಬಿರದಲ್ಲಿ ಭಾಗವಹಿಸಿದವರಿಗೆ ಆರೋಗ್ಯ ತಪಾಸಣೆ ನಡೆಸಿದರು.

ಬ್ರಿಂಡೆಲ್ನಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ
ದಿನಾಂಕ 07.02.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ),ವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬ್ರಿಂಡೆಲ್ನಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ವೇದಮೂರ್ತಿ ಶ್ರೀ ಸಂಜೀವ ಭಟ್ ಇರುವೈಲು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

“ಇಂದಿನ ವಿಷಯುಕ್ತ ಆಹಾರ ಸೇವಿಸುತ್ತಿರುವ ಈ ವಿದ್ಯಾಮಾನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ. ಪೌಷ್ಟಿಕ ಆಹಾರವನ್ನು ಸ್ವೀಕರಿಸಿ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಮಾರಕ ರೋಗಗಳ ಬಗ್ಗೆ ತಿಳಿದು ಮುನ್ನೆಚ್ಚರಿಕೆವಹಿಸುವುದು ಅನಿವಾರ್ಯ. ಹಾಗಾಗಿ ಇಂತಹ ಆರೋಗ್ಯ ಶಿಬಿರಗಳು ಹಳ್ಳಿಯ ಮೂಲೆ ಮೂಲೆಗಳಲ್ಲಿ ಆಯೋಜಿಸುವ ಮೂಲಕ ಜನ ಸಾಮಾನ್ಯರಿಗೆ ಮಾಹಿತಿ ಹಾಗೂ ಅವರ ಆರೋಗ್ಯ ತಪಾಸಣೆ ನಡೆಸಿದಂತಾಗುತ್ತದೆ” ಎಂದು ವೇದಮೂರ್ತಿ ಶ್ರೀ ಸಂಜೀವ ಭಟ್ ಇರುವೈಲು ಅಭಿಪ್ರಾಯ ಪಟ್ಟರು.

ಇವರು, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ),ವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬ್ರಿಂಡೆಲ್‍ನಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಶಿಬಿರದ ವಿಶೇಷವಾದ ಅಂಶವೆಂದರೆ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜದ ವೈದ್ಯರುಗಳು ಮತ್ತು ವೈದ್ಯಕೀಯ ಸಹಾಯಕರು ಮುಂದಾಳುತ್ವ ವಹಿಸಿ ಶಿಬಿರದ ಸಂಪೂರ್ಣ ಜವಾಬ್ದಾರಿ ವಹಿಸಿರುವುದು ಶ್ಲಾಘನೀಯ. ಶಿಬಿರದಲ್ಲಿ ಆರೋಗ್ಯ ತಪಾಸಣೆಯ ಜತೆಗೆ ‘ಆಯುರ್ವೇದ ಮನೆ-ಮದ್ದು, ಮಕ್ಕಳ ಹಲ್ಲಿನ ರಕ್ಷಣೆ, ಮಧುಮೇಹ ಚಿಕಿತ್ಸೆ -ಪಾದದ ರಕ್ಷಣೆ, ಪಾಶ್ರ್ವವಾಯು -ಪ್ರಥಮ ಚೆಕಿತ್ಸೆ, ಹೃದಯಾಘಾತ, ಮಹಿಳೆಯರ ಋತುಬಂಧದ ಸಮಯದಲ್ಲಾಗುವ ಸಮಸ್ಯೆಗಳು-ಪರಿಹಾರ, ರಕ್ತಹೀನತೆ ಮತ್ತು ಅದರ ಉಪಶಮನ ಮುಂತಾದ ವಿಷಯಗಳ ಮಾಹಿತಿಯನ್ನು ಕ್ರಮವಾಗಿ ಸಮಾಜದ ವೈದ್ಯರುಗಳಾದ ಡಾ. ತ್ರಿವೇಣಿ ಕೂಡಿಬೈಲು, ಡಾ. ರಿತೇಶ್ ಬಿ ಪ್ರಭು, ಡಾ. ಪ್ರವೀಣ್‍ಚಂದ್ರ ನಾಯಕ್, ಡಾ. ಮನೋಹರ್ ಪ್ರಭು, ಡಾ. ಸುಚೇತ ಶೆಣೈ, ಡಾ. ರಾಮ್ ರಾಜೇಶ್ ಮುಂತಾದವರು ಮಾಹಿತಿ ನೀಡಿದರು. ಡಾ.ವಾಣಿ ರಿತೇಶ್, ಮತ್ತು ಡಾ.ಪೂರ್ಣಾನಂದ ಜನಸಾಮಾನ್ಯರ ತಪಾಸಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಜತೆಗೆ ಆರೋಗ್ಯ ಕಾರ್ಯಕರ್ತರಾದ ಸುಜಾತ ರಮೇಶ್ ಸಾಮಂತ್, ಸರೋಜಾ, ಸುಜಾತ ರಾಘವೇಂದ್ರ ಕಶೆಕೋಡಿ, ಅಶ್ವಿನಿ ಗುರುಪ್ರಸಾದ್, ರಮೇಶ್ ಪ್ರಭು, ವಿಜಯ ಉಪೇಂದ್ರ ನಾಯಕ್, ಮಂಜುನಾಥ್, ಗುರುರಾಜ್, ವಿನೀತ್ ವಗ್ಗ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ಸಂಜೀವ್ ಸಾಮಂತ್, ರವೀಂದ್ರ ನಾಯಕ್, ಸುಧೀರ್ ನಾಯಕ್, ಪ್ರಶಾಂತ್ ಭಟ್, ನವೀನ್ ಭಟ್, ಬ್ರಿಂಡೆಲ್ ಶಾಲೆಯ ನಿವೃತ ಶಿಕ್ಷಕರಾದ ಬಾಲಕೃಷ್ಣ, ಆರೋಗ್ಯ ಕಾರ್ಯಕರ್ತರಾದ ಶ್ರೀಮತಿ ಗೀತಾ, ಜಲಜಾಕ್ಷ, ಜಯಪಾಲ್ ಮುಂತಾದವರು ಸಕ್ರೀಯವಾಗಿ ಭಾಗವಹಿಸಿದ್ದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸಂಜಯ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ವಿಜಯಲಕ್ಷ್ಮಿ ನಾಯಕ್ ವಂದಿಸಿ, ಚಿದಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಮೀನಾಕ್ಷಿ ಕಲಾ ಮಂದಿರ ಕಲ್ಲಡ್ಕ