ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ – 2017
ಮೀನಾಕ್ಷಿ ಕಲಾ ಮಂದಿರ
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ವಿಜಯಾ ಬ್ಯಾಂಕ್ ಗ್ರಾಮೀಣ ಅಭಿವೃದ್ಥಿ ಪ್ರತಿಷ್ಠಾನ (ರಿ), ಕಲ್ಲಡ್ಕ ವಲಯ ಸಮಿತಿ, ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 26.02.2017ರಂದು ಆದಿತ್ಯವಾರ ಮೀನಾಕ್ಷಿ ಕಲಾ ಮಂದಿರ, ಕಲ್ಲಡ್ಕದಲ್ಲಿ “ಉಚಿತ ಆರೋಗ್ಯ ತಪಾಸಣಾ ಶಿಬಿರ”ವನ್ನು ಆಯೋಜಿಸಲಾಗಿತ್ತು. ಕಲ್ಲಡ್ಕ ವಲಯ ಸಮಿತಿ ಅಧ್ಯಕ್ಷ ಶಾಂತರಾಂ ನಾಯಕ್ ಕಡಂಬು, ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿಬಿರದಲ್ಲಿ ಮುಖ್ಯವಾಗಿ ರಕ್ತದೊತ್ತಡ, ರಕ್ತ ಪರೀಕ್ಷೆ, ಹೃದಯ, ಕಣ್ಣು, ಮೂಗು, ಕಿವಿ, ಎಲುಬು ನೋವು, ಸ್ತ್ರೀ ರೋಗ, ಮಕ್ಕಳ ತಪಾಸಣೆ ಹಾಗೂ ಚರ್ಮರೋಗಕ್ಕೆ ಸಂಬಂಧಿಸಿದ ತಜ್ಞ ವೈದ್ಯರು ಭಾಗವಹಿಸಿ ತಪಾಸಣೆ ನಡೆಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಫಲಾನುಭವಿಗಳಿಗೆ ಉಚಿತ ಕನ್ನಡಕ ಮಾತೃವಲ್ಲದೆ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ. ಇ.ಎಫ್.ಎ ರೋಡ್ರಿಗಸ್, ಡಾ. ಹಬೀಬ್. ಯು. ಖಾನ್, ಡಾ. ಮಂಜುನಾಥ್, ಇತರ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಶಿಬಿರವನ್ನು ನಡೆಸಿಕೊಟ್ಟರು.
ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ರವೀಂಧ್ರ ನಾಯಕ್, ಗೋಪಾಲಕೃಷ್ಣ ಪ್ರಭು ಮಟ್ಪಾಡಿ, ಸಂಜೀವ ಸಾಮಂತ್ ಮರೋಳಿ, ಕಲ್ಲಡ್ಕ ವಲಯ ಸಮಿತಿ ಅಧ್ಯಕ್ಷ ಶಾಂತರಾಂ ನಾಯಕ್ ಕಡಂಬು, ರಮೇಶ್ ನಾಯಕ್ ಗುಂಡೂರು, ಮುರಳೀಧರ ಪ್ರಭು ಶಂಭೂರು, ಸವಿತಾ ಸಾಮಂತ್ ಶಂಭೂರು, ಗೋಪಾಲ್ ಪ್ರಭು ಅಯ್ಯದಕೋಡಿ, ಹರೀಶ್ ಬೋಳಂಗಡಿ, ಪ್ರಕಾಶ್ ಬೋಳಂಗಡಿ, ಸಂದೇಶ್ ಬೋಳಂಗಡಿ, ವಿಠಲ್ ಪ್ರಭು ಪತ್ತುಮುಡಿ, ವಾಸುದೇವ ನಾಯಕ್ ಇನೋಳಿ, ಫವನ್ ಮೈರಾ, ಸವಿತಾ ಶಂಭೂರು, ಶ್ರೀ ಮಹಮ್ಮಾಯಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ನಾಯಕ್ ದರ್ಬೆ, ಶಿವರಾಂ ಪ್ರಭು ಬಾಯಿಲ, ಮುರಳೀಧರ ಪ್ರಭು ವಗ್ಗ, ವಿಜಯಾ ಬ್ಯಾಂಕ್ ಶಾಖಾಧಿಕಾರಿ ಡೆರಿಕ್ ಅಜಿತ್ ಡಿ’ಸೋಜ ಉಪಸ್ಥಿತರಿದ್ದರು. ನಿತ್ಯಾನಂದ ಭಟ್ ಸುರುಕುಮೇರಿ ಪ್ರಾರ್ಥಿಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ವೆಂಕಟ್ರಾಯ ಪ್ರಭು ಪೂರ್ಲಪಾಡಿ ವಂದಿಸಿದರು.
ಪುಂಜಾಲ್‍ಕಟ್ಟೆ ನಂದಗೋಕುಲ
ದಿನಾಂಕ 16.04.17 ರಂದು, ಕು.ಆ,ಗೌ. ಬ್ರಾಹ್ಮಣ ಸಂಘ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ, ಪ್ರತಿಷ್ಠಾನದ ಬೆಳ್ತಂಗಡಿ ವಲಯ, ಮಹಿಳಾ ಸಂಘ, ಇವರ ಸಂಯುಕ್ತ ಆಶ್ರಯದಲ್ಲಿ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವನ್ನು ಪುಂಜಾಲ್‍ಕಟ್ಟೆಯ ನಂದಗೋಕುಲ ಸಭಾಭವನದಲ್ಲಿ ನಡೆಯಿತು.
ನಿಸ್ವಾರ್ಥ ಸೇವೆಯೇ ಸಂಘ ಸಂಸ್ಥೆಗಳ ಗುರಿಯಾಗಬೇಕು: ಗಣಪತಿ ಶೆಣೈ ಡೆಚ್ಚಾರು
ಪುಂಜಾಲಕಟ್ಟೆ: ಇತ್ತೀಚೆಗೆ ಆರೋಗ್ಯ ಸೇವೆಗಳು ಗ್ರಾಮಾಂತರ ಬಡ ಜನತೆಗೆ ಗಗನ ಕುಸುಮವಾಗು ತ್ತಿದೆ. ತಮ್ಮ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗಳಿಗೆ ಬರುವ ಅವರು ಇಲ್ಲಿನ ವಿವಿಧ ವೈದ್ಯಕೀಯ ಪರೀಕ್ಷೆಗಳ, ಚಿಕಿತ್ಸಾ ವೆಚ್ಚವನ್ನು ಭರಿಸಲು ಹೈರಾ ಣಾಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಿಂದ ಗ್ರಾಮಾಂತರ ಪ್ರದೇಶದ ಜನತೆಯನ್ನು ಮುಕ್ತಗೊಳಿಸುವ ಹಿನ್ನಲೆಯಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಕಂಕಣ ಬದ್ಧರಾಗಬೇಕೆಂದು ಗಣಪತಿ ಶೆಣೈ ಡೆಚ್ಚಾರು, ಅಧ್ಯಕ್ಷರು, ಕುಡಾಲ ದೇಶಸ್ಥ ಅದ್ಯ ಗೌಡ ಬ್ರಾಹ್ಮಣ ಸಂಘ ದ.ಕ. ಜಿಲ್ಲೆ ಹೇಳಿದರು.
ಅವರು ಕುಡಾಲ ದೇಶಸ್ಥ ಆದ್ಯ ಬ್ರಾಹ್ಮಣ ಸಂಘ ಬೆಳ್ತಂಗಡಿ ವಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ , ಉಜಿರೆ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು, ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಮಹಿಳಾ ಸಂಘ, ಬೆಳ್ತಂಗಡಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಎ. 16ರಂದು “ನಂದಗೋಕುಲ ಸಭಾಭವನ” ಪುಂಜಾಲಕಟ್ಟೆ ಇಲ್ಲಿ ಸಮಾಜ ಬಾಂಧವರಿಗಾಗಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಶ್ರೀ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಇದರ ಕಾರ್ಯನಿರ್ವಹಣಾಧಿಕಾರಿ ಮನ್ಮಥ್ ಕುಮಾರ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆ ಇಲ್ಲಿ ದೊರೆಯುವ ಸೌಲಭ್ಯಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಡಾ| ಪ್ರಭಾತ್ ಕುಮಾರ್, ಮೆಡಿಕಲ್ ಸುಪರಿಂಟೆಂಡೆಂಟ್, ಎಸ್.ಡಿ.ಎಂ ಆಸ್ಪತ್ರೆ ಉಜಿರೆ, ಶಾಂತರಾಮ ಪ್ರಭು, ವಗ್ಗ, ನಿದೇರ್ಶಕರು ಶ್ರೀ ಪೂರ್ಣಾನಂದ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ, ಮಂಗಳೂರು. ತಾರಾ ಶಿವರಾಯ ಪ್ರಭು, ಅಧ್ಯಕ್ಷರು, ಮಹಿಳಾ ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘ ಬೆಳ್ತಂಗಡಿ, ರಮೇಶ್ ನಾಯಕ್, ಅಧ್ಯಕ್ಷರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ, ಇದರ ತಜ್ಞ ವೈದ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಿಬಿರದ ಸಂಯೋಜನೆಯನ್ನು ದಯಾನಂದ ನಾಯಕ್ ಅಧ್ಯಕ್ಷರು ಶ್ರೀ ಪೂರ್ಣನಂದ ಸೇವಾ ಪ್ರತಿಷ್ಠಾನ, ಬೆಳ್ತಂಗಡಿ ವಲಯ ಮಾಡಿದ್ದರು. ಪುರೋಹಿತರಾದ ಪ್ರಭಾಕರ ಭಟ್, ಪ್ರಾರ್ಥಿಸಿದರು. ಸುಧಾಕರ ಪ್ರಭು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಸಹಕರಿಸಿದರು. ಯೋಗೀಶ್ ನಾಯಕ್, ಕಾರ್ಯದರ್ಶಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಕಾರ್ಯಕ್ರಮ ನಿರೂಪಿಸಿದರು.