ಬ್ರಹ್ಮೋಪದೇಶ 2015
ದಿನಾಂಕ 8.03.2015 ಶ್ರೀದೇವಿ ಮೀನಾಕ್ಷಿ ದೇವಸ್ಥಾನ, ಮಟಪಾಡಿ ಕಲ್ಲಡ್ಕ ಇದರ ಪ್ರತಿಷ್ಠಾ ಮಹೋತ್ಸವ ಮತ್ತು ಸಾಮೂಹಿಕ ಬ್ರಹ್ಮೋಪದೇಶ-ಸುಬ್ರಮಣ್ಯ ಮಠಾಧೀಶರಿಂದ ಆಶೀರ್ವಚನ ಮತ್ತು ಡಾ. ಪ್ರಭಾಕರ್ ಭಟ್ ರವರಿಂದ ಹಿತನುಡಿಗಳು.
ಗಾಯತ್ರಿ ಮಂತ್ರ, ಅತ್ಯಂತ ಪ್ರಭಾವಶಾಲಿಯಾದುದು, ತೇಜಸ್ಸು, ಬುದ್ಧಿಶಕ್ತಿ ಮತ್ತು ಚಿತ್ತವೃತ್ತಿಯನ್ನು ಪಾವನಗೊಳಿಸುವುದೇ ಗಾಯತ್ರಿ ಮಂತ್ರ, ಗಾಯತ್ರಿ ಮಂತ್ರದಿಂದ ಉತ್ತಮ ಸಂಸ್ಕಾರ
“ಬ್ರಹ್ಮ ಪವಿತ್ರವಾದ ಸೂರ್ಯನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ, ಅತ್ಯಂತ ಪ್ರಭಾವಶಾಲಿಯಾದುದು. ಈ ಮಂತ್ರವು ‘ನನಗೆ ತೇಜಸ್ಸನ್ನು ಕೊಡು, ನನ್ನ ಬುದ್ಧಿಶಕ್ತಿಯನ್ನು ಅರಳಿಸು, ಮತ್ತು ಚಿತ್ತವೃತ್ತಿಯನ್ನು ಪಾವನಗೊಳಿಸು’ ಎನ್ನುವ ಅರ್ಥದೊಂದಿಗೆ ಎಲ್ಲರಿಗೂ ಶುಭವಾಗಲಿ ಎನ್ನುವ ಪರ್ಯಾಯ ಸಂದೇಶವನ್ನು ನೀಡುತ್ತದೆ. ಸ್ವಸ್ಥಿಕ ಮುದ್ರೆಯಲ್ಲಿ ಅಡ್ಡಗೆರೆ ಮತ್ತು ಉದ್ದಗೆರೆಯು ಸಮಾನವಾಗಿದ್ದು, ಕ್ರಮವಾಗಿ ಧರ್ಮದ ಪಾಲನೆ ಮತ್ತು ಬ್ರಹ್ಮಜ್ಞಾನದ ಸಂಪಾದನೆ ಎತ್ತರಕ್ಕೆ ಬೆಳೆಯಲಿ ಎಂದು ತಿಳಿಸುತ್ತದೆ. ಪ್ರತಿದಿನದ ಸೂರ್ಯೋದಯವನ್ನು ನೋಡಿ ಅನುಭವಿಸಿದರೆ, ಅದೇ ಶುಭಘಳಿಗೆಯಾಗಿ ಪವಿತ್ರವೆನಿಸುವುದು.” ಎಂದು ಪೂಜ್ಯ ಶ್ರೀ ಶ್ರೀ ಶ್ರೀ ಶ್ರೀವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಮಾಜ ಬಂಧುಗಳಿಗೆ ಆಶೀರ್ವಚನ ನೀಡಿದರು.
ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಟಾನ, ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ(ರಿ), ದ.ಕ.ಜಿಲ್ಲೆ, ಪುರೋಹಿತ ವರ್ಗ ಮತ್ತು ಶ್ರೀ ದೇವಿ ಮೀನಾಕ್ಷಿ ದೇವಸ್ಥಾನ, ಮಟ್ಪಾಡಿ. ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ‘ಪ್ರತಿಷ್ಠಾ ಮಹೋತ್ಸವ ಹಾಗೂ ಉಚಿತ ಸಾಮೂಹಿಕ ಬ್ರಹ್ಮೋಪದೇಶ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಮಾಜದ ಏಳು ವಟುಗಳಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವಚಿಸಿದರು.
“ಗಾಯತ್ರಿ ಮಂತ್ರವನ್ನು ಪಠಿಸಿದ್ದಲ್ಲಿ, ಉತ್ತಮ ಸಂಸ್ಕಾರವನ್ನು, ಸು:ಖ, ಶಾಂತಿ, ನೆಮ್ಮದಿಯನ್ನು ಕರುಣಿಸುತ್ತದೆ. ‘ಬ್ರಹ್ಮೋಪದೇಶ’, ಎರಡನೇ ಜನ್ಮ ಪಡೆದಂತೆ. ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕøತಿಯನ್ನು ಅನುಸರಿಸದೆ, ಹಿಂದು ಸಂಸ್ಕಾರಗಳನ್ನು ತಿಳಿಕೊಳ್ಳುವಂತೆ ಪೋಷಕರು ತಿಳುಹಿಸಿ ಅಡಿಪಾಯ ಗಟ್ಟಿಗೊಳಿಸಬೇಕು. ಇಂದು ಪಾಶ್ಚಾತ್ಯ ಜನರು ನಮ್ಮ ಸಂಸ್ಕøತಿಯತ್ತ ಒಲವು ತೋರಿಸುತ್ತಿದ್ದಾರೆಂಬುದನ್ನು ಗಮನಿಸಬೇಕು” ಎಂದು ಕಲ್ಲಡ್ಕ ಡಾ. ಪ್ರಭಾಕರ ಭಟ್ರವರು ಮುಖ್ಯ ಅತಿಥಿಯವರಾಗಿ ಅಭಿಪ್ರಾಯಪಟ್ಟರು.
ಪುರೋಹಿತರಾದ ಜಯರಾಂ ಭಟ್ರವರು ಶ್ರೀ ದೇವಿ ಮೀನಾಕ್ಷಿ ದೇವಸ್ಥಾನ, ಮಟ್ಪಾಡಿಯ ‘ಪ್ರತಿಷ್ಠಾ ಮಹೋತ್ಸವ’ದ ಹಿನ್ನಲೆಯನ್ನು ತಿಳಿಸಿದರು. ಹಿರಿಯ ಪುರೋಹಿತರಾದ ಸಂಜೀವ ಭಟ್ರವರು ‘ಬ್ರಹ್ಮೋಪದೇಶ’ದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಬೆಂಗಳೂರಿನ ದರ್ಭೆ ಇಂಡಸ್ಟ್ರೀಸ್ನ ಮಾಲಕರಾದ ಶ್ರೀಧರ್ ನಾಯಕ್, ನಾರಾಯಣ್ ನಾಯಕ್ ದಂಡೆಮಾರ್, ಡಾ. ಪ್ರವೀಣ್ ನಾಯಕ್, ಗೋಪಾಲ್ ಕೃಷ್ಣ ಕಂಟಿಕ, ಡೆಚ್ಚಾರು ಗಣಪತಿ ಶೆಣೈ, ಸಂಜಯ್ ಪ್ರಭು, ಮಟ್ಪಾಡಿ ಗೋಪಾಲ್ ಶೆಣೈ, ದಿನೇಶ್ ಪ್ರಭು, ಮಹೇಶ್ ಠಾಕೂರ್ ಉಪಸ್ಥಿತರಿದ್ದರು. ಪುರೋಹಿತ ವರ್ಗದವರಿಂದ ಪ್ರಾರ್ಥನಾ ವೇದಘೋಷ ನೆರವೇರಿತು.
ಕಲ್ಲಡ್ಕದ ಕೀರ್ತಿ ಪ್ರಭುರವರಿಂದ ಭರತನಾಟ್ಯ ಮತ್ತು ವಾಮದಪದವು ರಾಮರಾಯ್ ನಾಯಕ್ ಬಳಗದವರಿಂದ ಶಾಸ್ತ್ರೀಯ ಸಂಗೀತ ನೆರವೇರಿತು.
ದ.ಕ.ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ(ರಿ) ನ ಅಧ್ಯಕ್ಷರಾದ ಎಂ.ಎಂ. ಪ್ರಭು ಪ್ರಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಟಾನದ ಅಧ್ಯಕ್ಷರಾದ ರಮೇಶ್ ನಾಯಕ್ ಸ್ವಾಗತಿಸಿ, ಸುಮಿತ್ರ ನಾಯಕ್ ವಂದಿಸಿದರು. ಶಾಂತರಾಮ್ ಪ್ರಭು ಮತ್ತು ಡಾ. ವಿಜಯಲಕ್ಷೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸ್ವ ಸಮಾಜದ ಸುಮಾರು 35 ಸಂಘ ಸಂಸ್ಥೆಗಳು ಸಹಕರಿಸಿದರು. ಭರದ್ವಾಜ್ ಫೌಂಡೇಶನ್ನ ಪರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಜಬಾಂಧವರಿಗೆ ಪದಾಧಿಕಾರಿಗಳಾದ ಡಾ. ಸುಚೇತ ಶೆಣೈ ಮತ್ತು ಸುಧಾಕರ್ ಶೆಣೈಯವರು ಮೌಲ್ಯಾಧಾರಿತ ಪುಸ್ತಕಗಳನ್ನು ಹಂಚಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಮುರಳೀಧರ ಪ್ರಭು, ವೆಂಕಟ್ರಾಯ ಪ್ರಭು, ಶಿವರಾಯ್, ಗಣೇಶ್ ಶೆಣೈ, ರತ್ನಾಕರ್ ಸಾಮಂತ್, ರವೀಂಧ್ರ ನಾಯಕ್, ನಾಗೇಶ್ ಪ್ರಭು, ರಾಮ್ ಗಣೇಶ್, ಚಂದ್ರಹಾಸ್ ಪ್ರಭು, ನಾರಾಯಣ್ ನಾಯಕ್, ಚಿದಾನಂದ ಪ್ರಭು ಸಹಕರಿಸಿದರು. ಸುಮಾರು 700 ಬಂಧು ಭಾಂಧವರು ನೆರೆದಿದ್ದರು.