2017 – ವೀರ ವೆಂಕಟೇಶ ಕ್ರಿಕೇಟರ್ಸ್ 14ನೇ ವರ್ಷದ ವಾರ್ಷಿಕೋತ್ಸವ

ದಿನಾಂಕ 18, ಫೆಬ್ರವರಿ, 2017 ರಂದು ಮಂಗಳೂರು ಶಕ್ತಿನಗರದ ವೀರ ವೆಂಕಟೇಶ ಕ್ರಿಕೇಟರ್ಸ್, ಇದರ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು, ಶಕ್ತಿನಗರದ ಸರಕಾರಿ ಶಾಲಾ ಮೈದಾನದಲ್ಲಿ ನೆರವೇರಿತು. ಪ್ರತಿಷ್ಟಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಯುವ ಸಂಘಟನೆಗಳ ಅಪಾರವಾದ ಯುವಶಕ್ತಿಯಿಂದ ಸಮುದಾಯದ ಅಭಿವೃದಿ-ಶಾಸಕ ಜೆ.ಆರ್.ಲೋಬೋ

“ಯುವ ಸಂಘಟನೆಗಳ ಅಪಾರವಾದ ಯುವಶಕ್ತಿಯಿಂದ ಸಮುದಾಯ ಅಭಿವೃದ್ಧಿಯಾಗುತ್ತದೆ, ಮಾತೃವಲ್ಲದೆ ಶಿಸ್ತು ಬೆಳೆಯುತ್ತದೆ.  ಯುವಕರಲ್ಲಿ ಒಗ್ಗಟ್ಟಿದ್ದಾಗ ಆರೋಗ್ಯವಂತ, ಅತ್ಮವಿಶ್ವಾಸ, ಸ್ನೇಹಿ ಸಮಾಜದ ನಿರ್ಮಾಣ ಸಾಧ್ಯ. ಯುವಕರು ಸದಾ ಸಕಾರಾತ್ಮಕ ದೃಷ್ಠಿಯಲ್ಲಿ ತನ್ನ ಚಿಂತನೆಗಳನ್ನು ಬೆಳೆಸಿಕೊಂಡಾಗ ಸಮಾಜವೂ ಸಕಾರಾತ್ಮಕವಾಗಿ ಬದಲಾಗಲು ಸಾಧ್ಯ ” ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ತಿಳಿಸಿದರು.

ಮಂಗಳೂರಿನ ಕೊಡಂಗೆ-ಶಕ್ತಿನಗರ ಪರಿಸರದ ಸ್ವಜಾತಿಯ ಯುವಕರ “ವೀರ ವೆಂಕಟೇಶ ಕ್ರಿಕೇಟರ್ಸ್”, ತಂಡವು ಶಕ್ತಿನಗರದ ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡ ತನ್ನ 14ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಶಕ್ತಿನಗರ ಪರಿಸರದ ಖ್ಯಾತ ಉದ್ಯಮಿ ಹಾಗೂ ಪದವು ಫ್ರೆಂಢ್ಸ್ ಕ್ಲಬ್ ಅಧ್ಯಕ್ಷರಾದ ಗಣೇಶ್ ಕುಂಟಲ್ಪಾಡಿ, ಮತ್ತು ಲಕುಮಿ ತಂಡದ ಮಾಲಕರಾದ ಕಿಶೋರ್ ಡಿ.ಶೆಟ್ಟಿ, ಇವರುಗಳನ್ನು ಅಭಿನಂದಿಸಲಾಯಿತು.

ವೀರ ವೆಂಕಟೇಶ ಕ್ರಿಕೇಟರ್ಸ್ ತಂಡವು ಕಳೆದ 14 ವರುಷಗಳಿಂದ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದ ಧನಸಹಾಯ, ರಕ್ತದಾನ ಶಿಬಿರ, ಅನೇಕ ಪುಣ್ಯ ಕ್ಷೇತ್ರಗಳಿಗೆ ಪ್ರವಾಸ, ಹೃದಯ ಮತ್ತು ಕ್ಯಾನ್ಸರ್ ಸಂಬಂಧಿ ಬಡ ರೋಗಿಗಳ ಚಿಕಿತ್ಸಾ ವೆಚ್ಚ,  ಮಾತೃವಲ್ಲದೆ ಸಮಾಜದಲ್ಲಿ ಉತ್ತಮ ಸಾಧನೆಗೈಧ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಅಭಿನಂದಿಸುವ ಮಹತ್ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಹಲವಾರು ಕ್ರಿಕೇಟ್ ತಂಡಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಿಟ್ಟಿಸಿಕೊಂಡ ಈ ತಂಡವು ಮುಂಬೈ, ಗೋವಾಗಳಲ್ಲಿ ನಡೆದ ಕ್ರಿಕೇಟ್ ಪಂದ್ಯಾಟದಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತದೆ.

ಈ ಸಂದರ್ಭದಲ್ಲಿ ವಾಮದಪದವು ಗಣೇಶ್ ಪ್ರಭು ಮತ್ತು  ಸ್ವಾತಿ ಪ್ರಭುರವರ ಪುತ್ರಿಯಾದ ರಕ್ಷಾ ಪ್ರಭು ಇವರ ಭರತನಾಟ್ಯ ಕಾರ್ಯಕ್ರಮ ನೆರವೇರಿತು. ತದನಂತರ ಖ್ಯಾತ ಲಕುಮಿ ತಂಢದಿಂದ  ಕಿಶೋರ್ ಡಿ.ಶೆಟ್ಟಿಯವರ ನಿರ್ದೇಶನದ ‘ದುಂಬೋರಿ ಪಂತೆಗೆ’ ಹಾಸ್ಯ ನಾಟಕದ ಪ್ರದರ್ಶನವಾಯಿತು. ಈ ಕಾರ್ಯಕ್ರಮದಲ್ಲಿ ಊರಿನ ಹಾಗೂ ಪರವೂರಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.

ವೇದಿಕೆಯಲ್ಲಿ ಪದವು ವಾರ್ಡ್‍ನ ಮ.ನ.ಪಾ ಸದಸ್ಯರಾದ ಅಖಿಲಾ ಆಳ್ವ, ಕಂಟ್ರಾಕ್ಟರ್ ಉಮೇಶ್ ದಂಡೆಕೇರಿ. ಬಿರುವೆರ್ ಕುಢ್ಲಾದ ಅಭಿಷೇಕ್ ಅಮೀನ್, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಕೆ.ಎಸ್.ಆರ್.ಟಿ.ಸಿ ಉಪಾಧ್ಯಕ್ಷ ಸುಧೀರ್ ಟಿ.ಕೆ, ಉದ್ಯಮಿ ವಿದ್ಯಾಧರ್ ಉಪಸ್ಥಿತರಿದ್ದರು. ರಕ್ಷಾ ಪ್ರಭು ಪ್ರಾರ್ಥಿಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.