ಶ್ರೀ ಪೂರ್ಣಾನಂದ ವಾಣಿ
ದಿನಾಂಕ 06.01.2017 ರಂದು ಸಮುದಾಯದ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ, ಇಡೀ ಸಮಾಜವೇ ಸಂಘಟನಾತ್ಮಕವಾಗಿ ಬಲಗೊಳ್ಳುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಹೊಸವರುಷದ ಶುಭವಸರದಲ್ಲಿ ಸಮುದಾಯಕ್ಕೆಂದೇ ಮೀಸಲಾದ ‘ಶ್ರೀ ಪೂರ್ಣಾನಂದ ವಾಣಿ’ ಪತ್ರಿಕೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ಇವರು ಪ್ರತಿಷ್ಠಾನದ ಕಛೇರಿಯಲ್ಲಿ ಅನಾವರಣಗೊಳಿಸಿ, “ಈ ಪತ್ರಿಕೆಯು ತಮ್ಮ ಮೂಲ ಉದ್ದೇಶವನ್ನು ಈಡೇರಿಸುವಂತಾಗಿ, ಉತ್ತಮ ಹೆಸರನ್ನು ಪಡೆಯಲಿ” ಎಂದು ಶುಭಹಾರೈಸಿದರು. ಪತ್ರಿಕೆಯ ಮೂಲ ಆಶಯವನ್ನು ಶ್ರೀ ಮುರಳೀಧರ ಪ್ರಭು, ವಗ್ಗ ತಿಳಿಸಿದರು.