ಉಚಿತ ಸಾಮೂಹಿಕ ಬ್ರಹ್ಮೋಪದೇಶ
ದಿನಾಂಕ 2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ(ರಿ), ಮಂಗಳೂರು ಮತ್ತು ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನ, ಮುಲಾರು ಇವರ ಜಂಟಿ ಆಶ್ರಯದಲ್ಲಿ ವೇದಮೂರ್ತಿ ಶ್ರೀ ಸಂಜೀವ ಭಟ್, ಇರುವೈಲು ಇವರ ನೇತೃತ್ವದಲ್ಲಿ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಪುರೋಹಿತರ ಪೌರೋಹಿತ್ಯದಲ್ಲಿ ಸಮಾಜದ ವಟುಗಳಿಗೆ ‘ಉಚಿತ ಸಾಮೂಹಿಕ ಬ್ರಹ್ಮೋಪದೇಶ’ವನ್ನು ಮುಲಾರು ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ದಿನಾಂಕ 03.04.2016 ರಂದು ಸ್ವ-ಸಮಾಜದ ಪುರೋಹಿತ ವರ್ಗ, ಇವರ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ, ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ 5 ವಟುಗಳಿಗೆ ಉಚಿತ ಸಾಮೂಹಿಕ ಬ್ರಹ್ಮೋಪದೇಶ ನಡೆಯಿತು.
ದಿನಾಂಕ 18.08.2016 ರಂದು ಶ್ರೀ ಪ್ರಶಾಂತ್ ಭಟ್ ಇವರ ನೇತೃತ್ವದಲ್ಲಿ ಶ್ರೀ ಸಂಜೀವ ಸಾಮಂತ್, ಇವರ ಮನೆಯಲ್ಲಿ ‘ಯಜುರ್ಪಾಕರ್ಮ’ ಕಾರ್ಯಕ್ರಮ ನೆರವೇರಿತು.