ಪ್ರತಿಷ್ಟಾನದ ಸಮಾಜಮುಖಿ ಯೋಜನೆಗಳು
ದಿನಾಂಕ 08.04.2016 ರಂದು ಎಂದು ವೇದಮೂರ್ತಿ ಶ್ರೀ ಸಂಜೀವ ಭಟ್ ರವರು ಆಶೀರ್ವಚಿಸಿದರು.
ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ನೇತೃತ್ವದಲ್ಲಿ ಹಮ್ಮಿಕೊಂಡ ಪಡಂಬೋಡಿ ಕುಟುಂಬದ ನೂತನ ಗೃಹಪ್ರವೇಶದ ಸಮಾರಂಭದಲ್ಲಿ ವೇದಮೂರ್ತಿ ಶ್ರೀ ಸಂಜೀವ ಭಟ್ ರವರು ಸಾಂಕೇತಿಕವಾಗಿ ಮನೆಯ ಕೀಯನ್ನು ಆ ಕುಟುಂಬದ ಯಜಮಾನಿ ಶ್ರೀಮತಿ ಜಲಜ ಇವರಿಗೆ ಹಸ್ತಾಂತರಿಸಿ ಆಶೀರ್ವಚಿಸಿದರು. ತಾ. ಪಂ. ಸದಸ್ಯರಾದ ಶ್ರೀಮತಿ ರೀಟಾ ಕುಟಿನೋ ಮತ್ತು ಪ್ರಭಾಕರ್ ಪ್ರಭು, ಗ್ರಾ.ಪಂ. ಸದಸ್ಯರಾದ ಶ್ರೀ ಜಯರಾಮ್ ಬಂಗೇರ, ಮತ್ತು ಶ್ರೀ ವಲೇರಿಯನ್ ಕುಟಿನೋ, ಅಂಗನವಾಡಿ ವಲಯಾಧಿಕಾರಿ ಶ್ರೀಮತಿ ನಾಗರತ್ನಮ್ಮ, ಸುಧೀರ್ ನಾಯಕ್, ಬರೆಪ್ಪಾಡಿ ನಾರಾಯಣ ಪ್ರಭು, ಸ್ಥಾಪಕ ಪ್ರಾಯೋಜಕರಾದ ಎಂ.ಎಂ.ಪ್ರಭು ಮುಂತಾದವರು ಪ್ರತಿಷ್ಟಾನವು ತೆಗೆದು ಕೊಂಡ ಈ ಕಾರ್ಯಯೋಜನೆಯನ್ನು ಪ್ರಶಂಸಿಸಿ ಶುಭಹಾರೈಸಿದರು. ಈ ಕಾರ್ಯಯೋಜನೆಯಲ್ಲಿ ವಿಶೇಷ ವಾಗಿ ಶ್ರಮಿಸಿದ ಪ್ರಶಾಂತ್ ಪ್ರಭು, ಪ್ರವೀಣ್ ಶೆಣ್ಯೆ, ಗಣೇಶ್ ವಾಮದಪದವು, ಯೋಗೀಶ್ ವಾಮದಪದವು ಮತ್ತು ಬಾಲಕೃಷ್ಣ ನಾಯಕ್ ಇವರಿಗೆ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಮುಲಾರು ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಶ್ರೀ ನಾರಾಯಣ ನಾಯಕ್ ದರ್ಬೆ, ಬೆಂಗಳೂರಿನ ಅಭಿವೃದ್ದಿ ಬಿಲ್ಡರ್ಸ್ ನ ಮಾಲಕ ಜಯಂತ್ ನಾಯಕ್, ಶ್ರೀ ಗೋಪಾಲ ಪ್ರಭು, ಉಡುಪಿ ಇಂಡಿಯನ್ ಫಾರ್ಮಸಿಟಿಕಲ್ ಕಂಪೆನಿಯ ಶ್ರೀಮತಿ ಕೀರ್ತಿಮಾಲಿನಿ ಪ್ರಭು, ಉಡುಪಿ ವಿದ್ಯಾಪ್ರಸರಕ್ ಮಂಡಲ್ ನ ಅಧ್ಯಕ್ಷರಾದ ಶ್ರೀ ಸತೀಶ್ ಪಾಟೀಲ್, ಶ್ರೀ ಉಂಡಾರ್ ಪ್ರಭಾಕರ್ ಪ್ರಭು, ಬೆಂಗಳೂರಿನ ಶ್ರೀ ಪ್ರಭಾಕರ್ ಪ್ರಭು ಹೆಣ್ಣೂರು, ಶ್ರೀ ರಾಘವೇಂದ್ರ ಶೆಣೈ ಡೆಚ್ಚಾರು, ಕೆ.ಎಂ.ಸಿ, ಪೋಡ್ಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್ ಚಂದ್ರನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಟಾನದ ಅಧ್ಯಕ್ಷರಾದ ರಮೇಶ್ ನಾಯಕ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ಸಂಜಯ್ ಪ್ರಭು ವಂದಿಸಿದರು. ಸಂದೇಶ ಭಟ್ ಪ್ರಾರ್ಥಿಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ಪ್ರಸ್ತಾವಿಕ ಮಾತುಗಳಾಡಿದರು. ಸುರೇಶ್ ಇರುವೈಲು ಕಾರ್ಯಕ್ರಮ ನಿರ್ವಹಿಸಿದರು.
ದಿನಾಂಕ 08.04.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ನೇತೃತ್ವದಲ್ಲಿ ಹಮ್ಮಿಕೊಂಡ ಪಡಂಬೋಡಿ ಕುಟುಂಬದ ನೂತನ ಗೃಹಪ್ರವೇಶದ ಸಮಾರಂಭದಲ್ಲಿ ವೇದಮೂರ್ತಿ ಶ್ರೀ ಸಂಜೀವ ಭಟ್ ರವರು ಸಾಂಕೇತಿಕವಾಗಿ ಮನೆಯ ಕೀಯನ್ನು ಆ ಕುಟುಂಬದ ಯಜಮಾನಿ ಶ್ರೀಮತಿ ಜಲಜ ಇವರಿಗೆ ಹಸ್ತಾಂತರಿಸಿ ಪ್ರತಿಷ್ಟಾನದ ಸಮಾಜಮುಖಿ ಯೋಜನೆಗಳು ಇನ್ನಿತರ ಸಮುದಾಯಕ್ಕೆ ಮಾದರಿಯಾಗಿದೆ, ಈ ಬಗ್ಗೆ ಹೆಮ್ಮೆಯೆನಿಸುತ್ತಿದೆ ಎಂದು ವೇದಮೂರ್ತಿ ಶ್ರೀ ಸಂಜೀವ ಭಟ್ ರವರು ಆಶೀರ್ವಚಿಸಿದರು. ತಾ. ಪಂ. ಸದಸ್ಯರಾದ ಶ್ರೀಮತಿ ರೀಟಾ ಕುಟಿನೋ ಮತ್ತು ಪ್ರಭಾಕರ್ ಪ್ರಭು, ಗ್ರಾ.ಪಂ. ಸದಸ್ಯರಾದ ಶ್ರೀ ಜಯರಾಮ್ ಬಂಗೇರ, ಮತ್ತು ಶ್ರೀ ವಲೇರಿಯನ್ ಕುಟಿನೋ, ಅಂಗನವಾಡಿ ವಲಯಾಧಿಕಾರಿ ಶ್ರೀಮತಿ ನಾಗರತ್ನಮ್ಮ, ಶ್ರೀ ಸುಧೀರ್ ನಾಯಕ್, ಬರೆಪ್ಪಾಡಿ ಶ್ರೀ ನಾರಾಯಣ ಪ್ರಭು, ಸ್ಥಾಪಕ ಪ್ರಾಯೋಜಕರಾದ ಶ್ರೀ ಎಂ.ಎಂ.ಪ್ರಭು ಮುಂತಾದವರು ಪ್ರತಿಷ್ಟಾನವು ತೆಗೆದು ಕೊಂಡ ಈ ಕಾರ್ಯಯೋಜನೆಯನ್ನು ಪ್ರಶಂಸಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.