ಸ್ನೇಹಮಿಲನ ಕಾರ್ಯಕ್ರಮ
ದಿನಾಂಕ 25.06.2016 ರಂದು ಬೆಂಗಳೂರಿನ ಸಮಾಜಭಾಂಧವರೊಂದಿಗೆ ಸ್ನೇಹಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿಷ್ಠಾನಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು.
ದಿನಾಂಕ 25.06.2016 ರಂದು ಬೆಂಗಳೂರಿನ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜ ಮತ್ತು ಬೆಂಗಳೂರಿನ ಬಂಧು-ಭಾಂಧವರೊಂದಿಗೆ ಶ್ರೀ ಸದಾಶಿವ ರಾವ್, ಇವರ ನೂತನವಾಗಿ ಉದ್ಘಾಟಿಸಿದ ಸಭಾಭವನದಲ್ಲಿ ಪ್ರಪ್ರಥಮ ಬಾರಿಗೆ ‘ಸ್ನೇಹಮಿಲನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾಜದಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸಿದವರನ್ನು ಹಾಗೂ ಪ್ರತಿಷ್ಠಾನಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು.