ವಲಯ ಸಮೀತಿ
ದಿನಾಂಕ 24.06.2017 ರಂದು ಶ್ರೀ ಸದಾಶಿವ ರಾವ್ ಬೋಲ್ಡೆ, ಇವರ ಮನೆಯಲ್ಲಿ ಪ್ರತಿಷ್ಠಾನದ ವತಿಯಿಂದ ಒಡ್ಡಾರು, ಪದ್ರೆಂಗಿ, ಮಳಲಿ ಹಾಗೂ ಇರುವೈಲು, ಪಂಜ ಸಮುದಾಯವನ್ನು ಸೇರಿಸಿ ‘ ವಲಯ ಸಮೀತಿ’ಯನ್ನು ರಚಿಸಲಾಯಿತು.
ದಿನಾಂಕ 02.05.2016 ರಂದು ಇರುವೈಲಿನಲ್ಲಿ, ದಿನಾಂಕ 10.07.2016 ರಂದು ವಗ್ಗ ವಲಯ ಮತ್ತು ಸಿದ್ಧಕಟ್ಟೆ ವಲಯದಲ್ಲಿ, ದಿನಾಂಕ 17.07.2016 ರಂದು ಪುತ್ತೂರು ವಲಯದಲ್ಲಿ, ದಿನಾಂಕ ರಂದು ಬೆಳ್ತಂಗಡಿ ವಲಯ ಮತ್ತು 31.06.2016 ರಂದು ಕಲ್ಲಡ್ಕ ವಲಯದಲ್ಲಿ ಹೀಗೆ 6 ಕಡೆಗಳಲ್ಲಿ ಪ್ರತೀಷ್ಠಾನದ ಉಪಸಮಿತಿಗಳನ್ನು ರಚಿಸಲಾಯಿತು.
ದಿನಾಂಕ ಆಗಸ್ಟ್ 5 ರಿಂದ 7 ರ ತನಕ ವಿಶ್ವ ಕೊಂಕಣಿ ಕೇಂದ್ರದಲ್ಲಿ ಪದವೀಧರ, ಇಂಜೆನಿಯರಿಂಗ್, ಸ್ನಾತಕೋತರ ವಿದ್ಯಾರ್ಥಿಗಳಿಗೆ 3 ದಿನಗಳ ಸ್ಪೂರ್ತಿ-ಉನ್ನತಿ ವಾಸ್ತವ್ಯ ಶಿಬಿರವನ್ನು ಆಯೋಜಿಸಿದ್ದು, ಸುಮಾರು 78 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದಿನಾಂಕ ಆಗಸ್ಟ್ 14 ರಂದು ಇಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ತರಬೇತಿಯು ಎರಡು ಗುಂಪುಗಳಲ್ಲಿ ನಡೆಯುತ್ತಿದೆ.
ದಿನಾಂಕ 10.07.2016 ರಂದು ವಗ್ಗ ವಲಯದ ಸಮಾಜ ಬಾಂಧವರೊಂದಿಗೆ ‘ವಗ್ಗ ವಲಯ ಸಮಿತಿ’ ರಚಿಸುವ ನಿಟ್ಟಿನಲ್ಲಿ, ವಗ್ಗದ ಶಾರದಾ ಭಜನಾ ಮಂದಿರದಲ್ಲಿ ಸಭೆ ಕರೆದು, ಸಮಿತಿಯನ್ನು ರಚಿಸಲಾಯಿತು. ಅದೇ ದಿನ ಸಾಯಂಕಾಲ, ಸಿದ್ಧಕಟ್ಟೆ, ಕರ್ಪೆ ಮತ್ತು ವಾಮದಪದವು ಸಮಾಜ ಬಾಂಧವರೊಂದಿಗೆ ಚರ್ಚಿಸಿ, ವಾಮದಪದವು-ಸಿದ್ಧಕಟ್ಟೆ ವಲಯ ಸಮಿತಿಯನ್ನು ರಚಿಸಲಾಯಿತು. ದಿನಾಂಕ 17.07.2016 ರಂದು, ಪುತ್ತೂರಿನ ನಟರಾಜ ಮಂದಿರದಲ್ಲಿ ಪುತ್ತೂರು, ಉಪ್ಪಿನಂಗಡಿಯನ್ನು ಸೇರಿಸಿ ‘ ಪುತ್ತೂರು ವಲಯ ‘ ಸಮಿತಿಯನ್ನು ರಚಿಸಲಾಯಿತು.
ದಿನಾಂಕ 24.07.2016 ರಂದು ಅಪರಾಹ್ನ, ಪ್ರತಿಷ್ಠಾನದ ಪದಾಧಿಕಾರಿಯಾದ ಶ್ರೀ ಯಶವಂತ ನಾಯಕ್, ಇವರ ಮನೆಯಲ್ಲಿ ‘ಬೆಳ್ತಂಗಡಿ ವಲಯ’ ಸಮಿತಿ ರಚಿಸಲಾಯಿತು.
ದಿನಾಂಕ 31.07.2016 ರಂದು, ಕಲ್ಲಡ್ಕ ಮೀನಾಕ್ಷಿ ಮಂದಿರದಲ್ಲಿ, ಇನೋಳಿ, ಬೋಳಂಗಡಿ, ಮತ್ತು ಕಲ್ಲಡ್ಕ ವ್ಯಾಪ್ತಿಯನ್ನು ಸೇರಿಸಿ, ‘ಕಲ್ಲಡ್ಕ ವಲಯ’ ಸಮಿತಿಯನ್ನು ರಚಿಸಲಾಯಿತು.