ಸಾಮೂಹಿಕ ಋಗುಪಾಕರ್ಮ ಕಾರ್ಯಕ್ರಮ
ದಿನಾಂಕ 28.07.17 ರಂದು ಮರೋಳಿ ಶ್ರೀ ಸಂಜೀವ ಸಾಮಂತ್, ಇವರ ಮನೆಯಲ್ಲಿ ಪ್ರತಿಷ್ಠಾನದ ವತಿಯಿಂದ ಶ್ರೀ ಪ್ರಶಾಂತ್ ಭಟ್ ಕಟ್ಟಣಿಗೆ, ಇವರ ನೇತೃತ್ವದಲ್ಲಿ ಸಾಮೂಹಿಕ ಋಗುಪಾಕರ್ಮ’ ಕಾರ್ಯಕ್ರಮ ನೆರವೇರಿತು. ಅದೇ ರೀತಿ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಸಮುದಾಯ ಭವನದಲ್ಲಿ, ವಾಮದಪದವು ವಲಯ ಸಮಿತಿಯಿಂದ ಶ್ರೀ ವಸಂತ್ ಭಟ್ ಕಿನ್ನಾಜೆ ಮತ್ತು ಶ್ರೀ ಶಿವರಾಯ್ ಭಟ್ ವಾಮದಪದವು, ಇವರ ನೇತೃತ್ವದಲ್ಲಿ ‘ಸಾಮೂಹಿಕ ಋಗುಪಾಕರ್ಮ’ ಕಾರ್ಯಕ್ರಮ ಜರುಗಿತು. ವಗ್ಗ ವಲಯದಿಂದ ಶ್ರೀ ಜಯರಾಮ್ ಭಟ್ ಮತ್ತು ಶ್ರೀ ಹರೀಶ್ ಭಟ್, ಇವರ ನೇತೃತ್ವದಲ್ಲಿ ಶಾರದಾಂಭ ಭಜನಾ ಮಂದಿರದಲ್ಲಿ ಋಗುಪಾಕರ್ಮ ಕಾರ್ಯಕ್ರಮ ನಡೆಯಿತು.