ನಾಟ್ಯ ಕಲಾವಿದೆ ಕೀರ್ತಿ ಪ್ರಭು ರಂಗ ಪ್ರವೇಶ 2017

‘ಭರತನಾಟ್ಯದಂತಹ ಶಾಸ್ತ್ರೀಯ ಕಲೆ ಮನುಜನಲ್ಲಿ ಉತ್ತಮ ಸಂಸ್ಕøತಿಯನ್ನು ಬೆಳೆಸುತ್ತದೆ ಮಾತೃವಲ್ಲದೆ ಮನಸ್ಸಿಗೆ ಮತ್ತು ಶಾರೀರಿಕವಾದ ಆರೋಗ್ಯವನ್ನು ಕಾಪಾಡುವ ಶಕ್ತಿ ಇದೆ. ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ್ ಸಮುದಾಯದಲ್ಲಿ ಅನೇಕ ಸಮಾಜ ಮುಖಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿ ರುವುದು ಶ್ಲಾಘನೀಯ. ಇಂದು ರಂಗಪ್ರವೇಶ ಮಾಡುತ್ತಿರುವ ಕು. ಕೀರ್ತಿ ಪ್ರಭು ಇವರಿಗೆ ಮತ್ತಷ್ಟು ಕೀರ್ತಿ ಒದಗಿ ಬರಲಿ’ ಎಂದು ಕಲಾವಿದ ಹಾಗೂ ಚಿತ್ರನಟ ಕಾಸರಗೋಡು ಚಿನ್ನಾರವರು ಶುಭ ಹಾರೈಸಿದರು.

    ಇವರು ದಿನಾಂಕ 01.01.2017ರಂದು ಮಂಗಳೂರು ಪುರಭವನದಲ್ಲಿ ಹಮ್ಮಿಕೊಂಡ ಕು. ಕೀರ್ತಿ ಪ್ರಭು ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

    ನಾಟ್ಯಗುರುಗಳಾದ ವಿದುಷಿ. ಶ್ರೀಮತಿ ವಿದ್ಯಾಮನೋಜ್ ಇವರನ್ನು ಕು. ಕೀರ್ತಿ ಪ್ರಭು ಮತ್ತು ಹೆತ್ತವರಾದ ಶ್ರೀಮತಿ ಜಯಲಕ್ಷ್ಮೀ ಪ್ರಭು ಮತ್ತು ಶ್ರೀ ಭಾಸ್ಕರ ಪ್ರಭು ಇವರು, ಶಾಲು ಹೊದಿಸಿ, ಫಲಪುಷ್ಪವಿತ್ತು ಗೌರವಿಸಿದರು.

 
ವೇದಿಕೆಯಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪರಸ್ಕøತ ಗುರು ಶ್ರೀ ಕುದ್ಕೋಡಿ ವಿಶ್ವನಾಥ ರೈ, ಶಾಂತಲಾ ನಾಟ್ಯ ಪ್ರಶಸ್ತಿ ಪರಸ್ಕøತ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಶುಭಹಾರೈಸಿದರು. ಸುಮಾರು ಎರಡು ಗಂಟೆಗಳ ಅವಧಿಯ ನಾಟ್ಯ ಪ್ರದರ್ಶನದಲ್ಲಿ ವಿವಿಧ ನೃತ್ಯಗಳಾದ ತೋಡಯಂ, ಅಲರಿಪು, ಜತಿ, ಪದಂ, ಜಾವಳಿ, ಮತ್ತು ಕೊನೆಯಲ್ಲಿ ತಿಲ್ಲಾನದೊಂದಿಗೆ ಮುಕ್ತಾಯಗೊಳಿಸಿದರು.

 

ಕಿರು ಪರಿಚಯ

    ಕಲ್ಲಡ್ಕದ ಶ್ರೀ ಭಾಸ್ಕರ ಪ್ರಭು ಮತ್ತು ಜಯಲಕ್ಷ್ಮೀ ದಂಪತಿಗಳ ಪುತ್ರಿಯಾದ ಕೀರ್ತಿ ಪ್ರಭುರವರು ವಿದುಷಿ ಶ್ರೀಮತಿ ವಿದ್ಯಾ ಮನೋಜ್‍ರವರಿಂದ ನಾಟ್ಯಾಭ್ಯಾಸ ಕಲಿತಿದ್ದಾರೆ. ಭರತನಾಟ್ಯದಲ್ಲಿ ರಾಜ್ಯಮಟ್ಟದ ಹಾಗೂ ಅಂತಾರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ರುವ ಕೀರ್ತಿ ಪ್ರಭು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2010ರಲ್ಲಿ ತಾಲೂಕು ಮಟ್ಟದಲ್ಲಿ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಾಧನೆ ಆಕೆಯದು.

    ಕರ್ನಾಟಕ ಸಂಗೀತದಲ್ಲೂ ಪಾರಂಗತೆಯಾಗಿರುವ ಕೀರ್ತಿ, ಅಧ್ಯಯನಲ್ಲೂ ಪ್ರತಿಭಾವಂತೆ. ಪಿಯುಸಿ ಪರೀಕ್ಷೆಯಲ್ಲಿ ಶೇ. 97 ಅಂಕಗಳೊಂದಿಗೆ ತನ್ನ ಕಾಲೇಜಿನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಪ್ರಸ್ತುತ ಆಕೆ ಕೆನರಾ ಕಾಲೇಜಿನಲ್ಲಿ ಅಂತಿಮ ಬಿಕಾಂ ಕಲಿಯುತ್ತಿದ್ದಾರೆ.

    ಕೀರ್ತಿಯ ತಂದೆ ಭಾಸ್ಕರ ಪ್ರಭುರವರು ಕಲ್ಲಡ್ಕದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ.

    
  ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ರಮೇಶ್ ನಾಯಕ್ ಮತ್ತು ಸುಚಿತ್ರಾ ಅವರು ಕೀರ್ತಿ ಪ್ರಭು ಅವರಿಗೆ ಹೂಗುಚ್ಛ ಹಾಗೂ ಸರಸ್ವತಿ ಮೂರ್ತಿಯನ್ನು ನೀಡಿ ಅಭಿನಂದಿಸಿದರು.