Visits
ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಅನೇಕ ಗಣ್ಯ ವ್ಯಕ್ತಿಗಳು, ಶ್ರೀ ಮಠ್ ದಾಭೋಳಿ ಸಂಸ್ಥಾನದ ಆಡಳಿತ ಮಂಡಳಿಯಲ್ಲಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಹಾಗೂ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು, ಪ್ರಪ್ರಥಮ ಬಾರಿಗೆ ದ.ಕ ಜಿಲ್ಲೆಯ ವಿವಿಧ ಸ್ಥಳಗಳಿಗೆ ಬೇಟಿ ನೀಡಿದರು. ಇವರು ಕಶೆಕೋಡಿ ಶ್ರೀ ಲಕ್ಮೀ ವೆಂಕಟ್ರಮಣ ದೇವಸ್ಥಾನದ ‘ದೃಢ ಕಲಶ ಹಾಗೂ ಶ್ರೀನಿವಾಸ ಕಲ್ಯಾಣ’ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಶೆಕೋಡಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸಂಜೀವ ನಾಯಕ್ ಕಲ್ಲೇಗ ಹಾಗೂ ಇತರ ಟ್ರಸ್ಟಿಗಳು, ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪ್ರಸಾದವನ್ನು ನೀಡಿ ಗೌರವಿಸಿದರು. ಈ ಸುಸಂದರ್ಭದಲ್ಲಿ, ದ.ಕ ಜಿಲ್ಲೆಯ ಸಮಾಜ ಬಾಂಧವರೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದಿಂದ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಅವರೊಂದಿಗೆ ಒಂದು ದಿನದ ಸಮಾಲೋಚನಾ ಸಭೆಯನ್ನು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಿತು. ಈ ಸಭೆಯಲ್ಲಿ ನಮ್ಮ ಸಮಾಜದ ಶಾಲೆಗಳು, ದೇವಾಲಯಗಳು, ಜನರ ಔದ್ಯೋಗಿಕ ಕ್ಷೇತ್ರ, ವಿವಿಧ ಸಂಘಟನೆಗಳು, ಸಂಘ-ಸಂಸ್ಥೆಗಳು ನಡೆಸುವ ಕೆಲಸಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ವಿಚಾರ ವಿನಿಮಯ ನಡೆಸಲಾಯಿತು. ಈ ಸಂದರ್ಭದಲ್ಲಿ ಕಳೆದ ವರ್ಷ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಗಳ 13 ದಿನಗಳ ಆಶೀರ್ವಚನ ಕಾರ್ಯಕ್ರಮದ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಸಭೆಯಲ್ಲಿ ದಾಬೋಲಿ ಮಠದಲ್ಲಿನ ಮೂಲಭೂತ ಸಮಸ್ಯೆಗಳು, ಪ್ರಸ್ತುತ ಬೆಳವಣಿಗೆಗಳು ಹಾಗೂ ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಚರ್ಚಿಸಲಾಯಿತು. “ ದ.ಕ ಜಿಲ್ಲೆಯ ಭೇಟಿ ನಮಗೆ ಖುಷಿ ಕೊಟ್ಟಿದೆ. ನಮ್ಮನ್ನು ಪ್ರೀತಿ-ಗೌರವದಿಂದ ಸತ್ಕರಿಸಿದ್ದೀರಿ. ಇಲ್ಲಿಯ ಸಮಾಜ ಬಾಂಧವರಿಗೆ ಮಠ ಹಾಗೂ ಸ್ವಾಮೀಜಿಗಳ ಮೇಲಿನ ಶ್ರದ್ಧಾ ಭಕ್ತಿ, ಗೌರವ ಪ್ರೀತಿ ಮತ್ತು ದೈವಿಕತೆಯನ್ನು ನಾವು ಅರ್ಥೈಯಿಸಿಕೊಂಡಿದ್ದೇವೆ. ಈ ಸಭೆಯು ನಮ್ಮೊಳಗೆ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಹಾಗೂ ಪ್ರಾಂತ್ಯದ ವಿಚಾರಗಳನ್ನು ಅರಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಮಠದ ಕಾರ್ಯಕ್ರಮಗಳಲ್ಲಿ ತಾವುಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಮಠದ ಅಭಿವೃದ್ಧಿ ಕಾರ್ಯಗಳಿಗೆ ಸಲಹೆ ಸೂಚನೆ, ಮಾರ್ಗದರ್ಶನವನ್ನು ನೀಡುತ್ತಿರಬೇಕೆಂದು” ವಿನಂತಿಸಿ ಕೊಂಡರು. ಸಭೆಯಲ್ಲಿ ಶ್ರೀ ಮಠದ ವಿಭಾಕರ್ ನಾಯಕ್, ದೀಪಕ್ ನಾಯಕ್, ಗುರುನಾಥ್ ಖಾನೋಲ್ಕರ್, ಸತೀಶ್ ಸಾಮಂತ್, ಸಂದೀಪ್ ಖಾನೋಲ್ಕರ್, ಪ್ರದೀಪ್ ನೆರೋಲ್ಕರ್, ಮಿಲಿಂದ್ ಖಾನೋಲ್ಕರ್, ಅರುಣ್ ನಾಯಕ್, ಸದಾನಂದ ಸಾಮಂತ್ ಮುಂತಾದವರು ಭಾಗವಹಿಸಿದ್ದರು.
ಕಶೆಕೋಡಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸಂಜೀವ ನಾಯಕ್ ಕಲ್ಲೇಗ, ಟ್ರಸ್ಟಿ ವಿಠಲ್ ಪ್ರಭು ಪತ್ತುಮುಡಿ, ಬೆಂಗಳೂರು ಸಂಘದಿಂದ ಜಯಪ್ರಕಾಶ್ ನಾಯಕ್, ವಾಮನ್ ಶೆಣೈ ಹಂಡೀರ್, ಉಡುಪಿಯ ವಿಷ್ಣುದಾಸ್ ಪಾಟೀಲ್, ಅಂಕೋಲಾದ ರಾಮಚಂದ್ರ ಸಾಮಂತ್, ದ.ಕ.ಜಿಲ್ಲಾ ಕು.ದೇ.ಗೌ.ಬ್ರಾಹ್ಮಣ ಸಂಘದ ಅಧ್ಯಕ್ಷ ಡೆಚ್ಚಾರ್ ಗಣಪತಿ ಶೆಣೈ, ಮಂಗಳೂರು ತಾಲೂಕು ಸಂಘದ ಅಧ್ಯಕ್ಷ ಪ್ರವೀಣ್ ಎಸ್. ದರ್ಬೆ, ಮುಲಾರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ನಾಯಕ್ ದರ್ಬೆ, ಬೆಳ್ತಂಗಡಿ ತಾಲೂಕು ಸಂಘದ ಅಧ್ಯಕ್ಷ ದಯಾನಂದ ನಾಯಕ್, ಕೊಡಂಗೆ ಗೋಪಾಲ್ ಶೆಣೈ, ಕೊಡಂಗೆ ವಿಜಯ್ ಶೆಣೈ, ಅನಂತ್ ಪ್ರಭು ಮರೋಳಿ, ಸಂಜೀವ್ ಸಾಮಂತ್, ರಾಘವೇಂದ್ರ ಪ್ರಭು ಡೆಚ್ಚಾರ್, ಮುಂತಾದ ಧಾರ್ಮಿಕ ಹಾಗೂ ಸಮಾಜದ ಮುಖಂಡರು, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸಂeಯ್ ಪ್ರಭು, ಮುರಳಿಧರ್ ಪ್ರಭು ವಗ್ಗ ಮುಂತಾದವರು ಉಪಸ್ಥಿತರಿದ್ದು ಸಮಾಲೋಚನೆಯಲ್ಲಿ ಕೆಲವು ಧನಾತ್ಮಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ಮೈರಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜಾರಾಂ ನಾಯಕ್ ಕಲಾಯಿ ವಂದಿಸಿದರು. ಡಾ|| ವಿಜಯಲಕ್ಷ್ಮೀ ನಾಯಕ್ ನಿರೂಪಿಸಿದರು.
ಭೇಟಿ