ಧಾಬೋಳಿ ಮಠಾಧೀಶರಿಗೆ ಭಕ್ತಿಪೂರ್ವಕ ಬೀಳ್ಕೊಡುಗೆ
ಇದೇ ದಿ. 01-06-2017ರಂದು ಕುಡಾಳ್ ದೇಶಸ್ತ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಧಾಬೋಲಿ ಮಠಾಧೀಶರ ದಕ್ಷಿಣ ಕನ್ನಡ ಜಿಲ್ಲೆಯ ದಿಗ್ವಿಜಯೋತ್ಸವವು ಕೊನೆಗೊಂಡಿದ್ದು ಶಕ್ತಿನಗರದ ಶಾರದಾ ಚಂದ್ರಮೌಳೇಶ್ವರ ಜ್ಞಾನ ಮಂದಿರದಲ್ಲಿ ಸಂಪನ್ನಗೊಂಡಿದ್ದು, ಶ್ರೀ ಶ್ರೀಗಳನ್ನು ಸಮಾಜ ಬಾಂಧವರು ಆತ್ಮೀಯವಾಗಿ ಬೀಳ್ಕೊಂಡರು.
ಈ ಸಮಾರಂಭದಲ್ಲಿ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಸಭಾಭವನದ ನಿರ್ಮಾಣದ ಪ್ರಸ್ತಾವನೆ ಬಂದಾಗ ಸಮಾಜದ ಗಣ್ಯ ವ್ಯಕ್ತಿಗಳಾದ ಶಕ್ತಿನಗರದ ಕೊಡಂಗೆಯಲ್ಲಿ ನೆಲೆಸಿರುವ ಹಿರಿಯರಾದ, ಮಂಗಳೂರು ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆದ ಶ್ರೀ ಗೋಪಾಲ ಶೆಣೈಯವರು ತಮ್ಮ ಸ್ವಂತ ಭೂಮಿಯಲ್ಲಿ 20 ಸೆಂಟ್ಸ್ ಸ್ಥಳವನ್ನು ಪ್ರಸ್ತುತ ಕಟ್ಟಡ ನಿರ್ಮಾಣಕ್ಕೆ ದಾನವಾಗಿ ನೀಡುವುದಾಗಿ ತಿಳಿಸಿದರು. ಅದೇ ವೇಳೆಗೆ ಸಭಾಭವನದ ನಿರ್ಮಾಣದ ಉದ್ದೇಶಕ್ಕಾಗಿ ಮಂಗಳೂರು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ವಿಜಯ ಶೆಣೈ ಕೊಡಂಗೆಯವರು ತಮ್ಮ ವತಿಯಿಂದ ತಂದೆಯವರಾದ ದಿ. ಕೃಷ್ಣಪ್ಪ ಶೆಣ್ಯೆ ಕೊಡಂಗೆ ಮತ್ತು ಮಾತೃಶ್ರೀಯವರಾದ ದಿ. ಶಾಂಭವಿ ಕೃಷ್ಣಪ್ಪ ಶೆಣ್ಯೆ ಕೊಡಂಗೆ, ಇವರ ಸ್ಮರಣಾರ್ಥ 10 ಲಕ್ಷ ರೂ.ಗಳ ಕೊಡುಗೆಯನ್ನು ಘೋಷಿಸಿದರು. ಹಿರಿಯ ಧಾರ್ಮಿಕ ವ್ಯಕ್ತಿ ಶ್ರೀ ಬರೆಪ್ಪಾಡಿ ನಾರಾಯಣ ಪ್ರಭು ಹಾಗೂ ಶ್ರೀ ಪೂರ್ಣಾನಂದ ಸೇವಾ ಪ್ರತ್ತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಸುಧೀರ್ ನಾಯಕ್, ಬೆಂಗಳೂರು ಇವರು ತಲಾ 1 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡುವುದಾಗಿ ಹೇಳಿದರು.
ಸಮಾಜದ ಅಭಿವೃದ್ಧಿಗೆ ಸಮಾಜ ಬಾಂಧವರ ಕಳಕಳಿಯನ್ನು ಪ್ರಸ್ತಾಪಿಸುತ್ತಾ ಶ್ರೀ ಗಳು ತಮ್ಮ ದ.ಕ. ಜಿಲ್ಲೆಯ ದಿಗ್ವಿಜಯವನ್ನು ಯಶಸ್ವಿ ಕಾರ್ಯಕ್ರಮವೆಂದು ಬಣ್ಣಿಸುತ್ತಾ, ಇಲ್ಲಿಯ ಜನರು ತೋರಿದ ಗೌರವ, ಅಭಿಮಾನ ಹಾಗೂ ಭಕ್ತಿಪೂರ್ವಕ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಪ್ರವಾಸದಿಂದಾಗಿ ಮಠ ಹಾಗೂ ಸ್ಥಳೀಯ ಶಿಷ್ಯಂದಿರ ಭಕ್ತಿಪೂರ್ವಕ ಬಾಂಧವ್ಯವು ಮತ್ತಷ್ಟು ಗಟ್ಟಿಗೊಂಡಿದೆ. ಈ ಬಂಧನವು ಇನ್ನೂ ದೃಢವಾಗುವ ಸಲುವಾಗಿ ಸಮಾಜದ ಸಮಸ್ತರೂ ದಾಬೋಲಿ ಮಠವನ್ನು ಸಂದರ್ಶಿಸಿ ಶ್ರೀ ಶ್ರೀ ಪೂರ್ಣಾನಂದ ಸ್ವಾಮೀಜಿಯವರ ಸಂಜೀವಿನಿ ಸಮಾಧಿ ಹಾಗೂ ಪಾದುಕೆಗಳ ದರ್ಶನ ಪಡೆದು ಆಶೀರ್ವಾದಗಳೊಂದಿಗೆ ಪುನೀತಗೊಳ್ಳುವಂತೆ ಆದೇಶಿಸಿದರು.
ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು ಹಾಗೂ ಸ್ವಾಗತ ಸಮಿತಿಯ ಕಾರ್ಯದಕ್ಷತೆ ಹಾಗೂ ಚಟುವಟಿಕೆಗಳನ್ನು ಪ್ರಸ್ತಾಪಿಸಿ ಇದೇ ರೀತಿಯ ಕಾರ್ಯಕ್ರಮಗಳನ್ನು ಸಮಾಜದ ಅಭಿವೃದ್ಧಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಹಾಗೂ ಉತ್ಸಾಹಗಳಿಂದ ನಡೆಸಲಿ ಎಂದು ಪ್ರತಿಷ್ಠಾನದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳನ್ನು ತುಂಬು ಹೃದಯದಿಂದ ಪ್ರಶಂಶಿಸಿದರು.
ಸಭಾಭವನದ ನಿರ್ಮಾಣಕ್ಕೆ ಇಂಬು ನೀಡಿದ ಕೊಡುಗೈದಾನಿಗಳ ಮನಃಪೂರ್ವಕ ಕೊಡುಗೆಯನ್ನು ತಮ್ಮ ಆಶೀರ್ವಚನದಲ್ಲಿ ಶ್ಲಾಘಿಸುತ್ತಾ ಮುಂದೆ ಸಭಾಭವನದ ಉದ್ಘಾಟನಾ ಸಮಾರಂಭಕ್ಕೂ ತಾವು ಚಿತ್ತೈಸುವುದಾಗಿ ಹೇಳಿದರು. ನಂತರ ಸ್ಥಳದಾನಿಗಳಾದ ಕೊಡಂಗೆ ಶ್ರೀ ಗೋಪಾಲ ಶೆಣೈ ದಂಪತಿಗಳಿಗೆ ಫಲ ಮಂತ್ರಾಕ್ಷತೆಗಳನ್ನಿತ್ತು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠ ಹಾಗೂ ದ.ಕ.ದ ಸಮಾಜ ಬಾಂಧವರ ನಡುವೆ ಕೊಂಡಿಯಂತಿರುವ ಶ್ರೀ ಎಂ.ಎಂ. ಪ್ರಭುಗಳು ಶ್ರೀಗಳೊಂದಿಗಿನ ತಮ್ಮ ಒಡನಾಟ ಹಾಗೂ ಕಳೆದ 13 ದಿನಗಳ ಅನುಭವಗಳನ್ನು ತಮ್ಮ ಮಾತುಗಳಲ್ಲಿ ತಿಳಿಸುತ್ತಾ, ಶ್ರೀ ಮಠದ ವತಿಯಿಂದ ಕಳೆದ 20 ವರ್ಷಗಳ ನಂತರ ಯತಿಗಳೋರ್ವರು ದ.ಕ. ಜಿಲ್ಲೆಗೆ ದಿಗ್ವಿಜಯಗೈದುದು ಅಪೂರ್ವ ಅನುಭವ ಎಂದರು ಹಾಗೆಯೇ ಶ್ರೀಗಳ ನಿತ್ಯಕರ್ಮ ಅನುಷ್ಟಾನಗಳಿಗೆ ನಮ್ಮಿಂದೇನಾದರೂ ತಿಳಿಯದೇ ಚ್ಯುತಿ ಉಂಟಾಗಿದ್ದಲ್ಲಿ ಅದಕ್ಕೆ ಕ್ಷಮೆ ಬೇಡುತ್ತಾ ಶ್ರೀಗಳು ವರ್ಷಂಪ್ರತೀ ಜಿಲ್ಲೆಗೆ ಭೇಟಿ ಇತ್ತು ಸಮಾಜದ ಉತ್ತರೋತ್ತರ ಅಭಿವೃದ್ಧಿಗೆ ಮಾರ್ಗದರ್ಶನವೀಯಬೇಕೆಂದು ತಿಳಿಸಿದರು.
ಸಮಾಜದ ಸುಮಂಗಲಿಯರು ಶ್ರೀಗಳಿಗೆ ಆರತಿಯನ್ನೆತ್ತಿದ ನಂತರ ಸಮಸ್ತ ಸಮಾಜ ಬಾಂಧವರು ದಂಡಪ್ರಣಾಮ ನೆರವೇರಿಸಿ ಆಶೀರ್ವಾದವನ್ನು ಬೇಡಿಕೊಂಡು ಆತ್ಮೀಯವಾಗಿ ಶ್ರೀಗಳನ್ನು ಬೀಳ್ಕೊಂಡರು.
ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಶ್ರೀ ಮಠ್ ಸಂಸ್ಥಾನ್ ದಾಭೋಳಿಯ ಕಿರಿಯ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಬಂಟ್ವಾಳ ತಾಲೂಕಿನ ವಾಮದಪದವು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರನ್ನು ಕರ್ಪೆ ಸಂಗಬೆಟ್ಟು, ವಾಮಪದವು ಸಮಾಜದವರು ಗುರುಕಾಣಿಕೆ ಕೊಟ್ಟು ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀ ಸದಾಶಿವ ಪ್ರಭು ದಂಪತಿಗಳು ನಯನಾಡು, ಪ್ರಭಾಕರ ಪ್ರಭು ನಟ್ಟಿಬೈಲು, ರವೀಂದ್ರ ಪ್ರಭು ಅರಮನೆ, ಗಣಪತಿ ನಾಯಕ್ ದೇವರ ಮನೆ, ರವೀಂದ್ರ ನಾಯಕ್ ಕಿನ್ನಾಜೆ, ಶಶಿಧರ ಶೆಣೈ, ವಿದ್ಯಾಧರ ಪ್ರಭು ದೋಟ, ಗಣೇಶ್ ಪ್ರಭು ಓಮ, ಪ್ರಭಾಕರ ಪ್ರಭು ಬಸ್ತಿಕೋಡಿ, ವಿಶ್ವನಾಥ ನಾಯಕ್ ಪರಾರಿ, ರಾಮರಾಯ ನಾಯಕ್ ವಾಮದಪದವು, ಯೋಗೀಶ್ ಪ್ರಭು ವಾಮದಪದವು, ಪುರಂದರ ನಾಯಕ್ ವಾಮಪದವು, ರಾಜೇಶ್ ನಾಯಕ್ ಬಿಲ್ಲಾಡಿ, ಶಿವರಾಮ ನಾಯಕ್, ರಾಘವೇಂದ್ರ ಪ್ರಭು ಭವಂತಬೆಟ್ಟು, ಶಿವರಾವ್ ಭಟ್, ಡಿ. ರಮೇಶ್ ನಾಯಕ್ ಮೈರಾ, ಎಂ.ಎಂ. ಪ್ರಭು, ಪ್ರಕಾಶ್ ಪ್ರಭು ಗುಂಡಿದಡ್ಡ, ನಿತ್ಯಾನಂದ ಭಟ್ ಬರೆಪ್ಪಾಡಿ, ನವೀನ್ ಭಟ್, ಡಾ| ವಿಜಯಲಕ್ಷ್ಮೀ ನಾಯಕ್, ರವೀಂದ್ರ ನಾಯಕ್ ಬೋಳಂಗಡಿ ಇವರು ಉಪಸ್ಥಿತರಿದ್ದರು.
ಕರಾಡಭವನದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಾಮಪದವು ರಾಮರಾಯ ನಾಯಕ್, ವೀಣಾ ನಾಯಕ್, ಪುರಂದರ್ ನಾಯಕ್ ಮತ್ತು ಬಳಗದವರು ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಬೆಳ್ತಂಗಡಿ, ಮದ್ದಡ್ಕ, ನೇರಳಕಟ್ಟೆ, ಸತೀಶ್ ಪ್ರಭು ಅವರ ಪುತ್ರಿ ಕು| ಸಂಗೀತ ಪ್ರಭು ಭರತನಾಟ್ಯ ಕಾರ್ಯಕ್ರಮ ನೀಡಿದ ಸಂದರ್ಭ.
ಮೇ 21ರಂದು ಸಂಘನಿಕೇತನದಲ್ಲಿ ನಡೆದ ಆಶೀರ್ವಚನ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಿತಾರ್ ವಾದಕ ಕೊಚ್ಚಿಕಾರ್ ಶ್ರೀ ದೇವ್‍ದಾಸ್ ಪ್ರಭು ಅವರನ್ನು ಸದ್ರಿಯವರ 25 ವರ್ಷಗಳ ಸಿತಾರ ವಾದನ ಸೇವೆಯನ್ನು ಗಮನಿಸಿ ‘ಸಿತಾರ್ ಕಲಾ ಶ್ರೇಷ್ಠ’ ಬಿರುದಿನೊಂದಿಗೆ ಶ್ರೀಶ್ರೀಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ಅಭಿನಂದಿಸಿ ದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಮೈರಾ, ಮಠದ ಟ್ರಸ್ಟಿಗಳಾದ ಶ್ರೀ ಎಂ.ಎಂ. ಪ್ರಭು, ಅರೂರು ಡಾ| ರಮೇಶ್ ಪ್ರಭು, ಉಡುಪಿಯ ಶ್ರೀ ಕಟ್ಟೆ ಪಾಂಡುರಂಗÀ ಪ್ರಭು, ಕೊಡಂಗೆ ಶ್ರೀ ವಿಜಯ ಶೆಣೈ ಮತ್ತು ಬೋಳಂಗಡಿ ಶ್ರೀ ರವೀಂದ್ರ ನಾಯಕ್ ಇವರು ಉಪಸ್ಥಿತರಿದ್ದರು.
ಮೇ 28ರಂದು ಶಕ್ತಿನಗರ ಕರಾಡ ಭವನದಲ್ಲಿ ಸ್ವಾಮೀಜಿಯವರ ಸಾರಥ್ಯದಲ್ಲಿ ಬೆಳ್ತಂಗಡಿ ವಲಯದ ಸಮಾಜ ಬಾಂಧÀವರಿಂದ ಗುರುದಕ್ಷಿಣೆ (ಪಾಂಚಜನ್ಯ) ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರು: ಹರೀಶ್ ಪ್ರಭು ಹಿರ್ತೊಟ್ಟು, ಮದ್ದಳೆ: ಸುರೇಶ್ ಪ್ರಭು ಹಿರ್ತೊಟ್ಟು, ಚೆಂಡೆ: ಯೋಗೀಶ, ಪಾತ್ರಧಾರಿಗಳು ಕೃಷ್ಣ-ಪ್ರಭಾಕರ ಪ್ರಭು, ಬಲರಾಮ-ವಿನಿತ್ ಪ್ರಭು ಪಚ್ಚಾಜೆ, ಸಾಂದೀಪನಿ: ಗಣಪತಿ ಶೆಣೈ ಡೆಚ್ಚಾರು, ಶ್ರುತಸ್ರವೆ ಹಾಗೂ ಚಿತ್ರಗುಪ್ತ-ಪದ್ಮನಾಭ ರೈ ಪಂಚಜನಃ -ದಾಸಪ್ಪ ರೈ, ಯಮ-ಸುಬ್ರಹ್ಮಣ್ಯ ಭಟ್, ಎಸ್.ಪಿ.ಎಸ್.ಪಿ. ಸಂಘ, ಬೆಳ್ತಂಗಡಿ ವಲಯದ ಆಧ್ಯಕ್ಷರಾದ ದಯಾನಂದ ನಾಯಕ್ ಇವರ ನೇತೃತ್ವದಲ್ಲಿ ಜರಗಿತು.
ಕರಾಡ ಭವನದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಡಾ| ವಿಜಯಲಕ್ಷ್ಮೀ ನಾಯಕ್ ಮತ್ತು ಅವರ ಮಗಳಾದ ಐಶ್ವರ್ಯ ನಾಯಕ್ ಭರತನಾಟ್ಯ ಕಾರ್ಯಕ್ರಮ ನೀಡಿದ ಸಂದರ್ಭ.
ಕರಾಡ ಭವನದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಂಗಳೂರು, ಕುಲಶೇಖರ ಸುಧಾ ಪ್ರಭು ಮತ್ತು ರತ್ನಾ ಪ್ರಭು ಹಾಗೂ ಬಳಗದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.