Belthangady Valaya

ನಂಬಿಕೆ ಮತ್ತು ಕರ್ಮ ಶೃದ್ಧೆಯೇ ಯಶಸ್ಸಿನ ಮೂಲ – ರೊ. ಡಾ. ಪ್ರದೀಪ್

“ವೃತಾಚರಣೆಗಳು ಕೇವಲ ಆಚರಣೆಗೆ ಸೀಮಿತವಾಗಿರದೆ ನಮ್ಮಲ್ಲಿ ಸಾತ್ವಿಕವಾದ ಪರಿವರ್ತನೆಯನ್ನು ತರಬೇಕಾದ ಅವಶ್ಯಕತೆ ಇದೆ. ನಾವು ಮಾಡುವ ಕೆಲಸದ ಮೇಲೆ ಶೃದ್ಧೆ ಮತ್ತು ನಂಬಿಕೆ ಇದ್ದಾಗ ಆ ಕಾರ್ಯ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಪ್ರಾಮಾಣಿಕತೆ ಮತ್ತು ಸತ್ಯ ಸಂಧತೆಗೆ ಜಯ ಯಾವತ್ತೂ ಇದ್ದೇ ಇರುತ್ತದೆ. ಇಂತಹ ಸದ್ಗುಣಗಳಿಂದ ನಾವು ಶ್ರೀಮಂತರಾಗಬೇಕಾಗಿದೆ” ಎಂದು ನಾವೂರಿನ ವೈದ್ಯ ರೋಟರಿ ಕ್ಲಬ್ ಕಾರ್ಯದರ್ಶಿ ಡಾ| ಪ್ರದೀಪ್ ಹೇಳಿದರು. ಅವರು ಪುಂಜಾಲಕಟ್ಟೆಯ ನಂದಗೋಕುಲ ಸಭಾಭವನದಲ್ಲಿ ಕುಡಾಲ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘ (ರಿ), ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಟಾನ ಬೆಳ್ತಂಗಡಿ, ಕುಡಾಲ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಮಹಿಳಾ ಸಂಘ, ಹಾಗೂ ರೋಟರಿ ಕ್ಲಬ್  ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
    ಸಭೆಯ ಅಧ್ಯಕ್ಷತೆಯನ್ನು ಶ್ರೀ ಪ್ರಭಾಕರ ಪ್ರಭು ವೇಣೂರು ವಹಿಸಿ ಸ್ವಾಗತಿಸಿದರು. ಪ್ರಾರ್ಥನೆಯನ್ನು ಪುರೋಹಿತರಾದ ಶ್ರೀ ಪ್ರಭಾಕರ ಪ್ರಭು ಇಡ್ಯ ನೆರವೇರಿಸಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿಗಳಾದ ಸತೀಶ್ ಪ್ರಭು ನೇರಳಕಟ್ಟೆ, ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ   ತಾರಾ    ಪ್ರಭು,   ಕಾರ್ಯದರ್ಶಿಗಳಾದ   ಶ್ರೀಮತಿ  ವೀಣಾ ನಾಯಕ್,
ಶ್ರೀ ಮುರಳೀಧರ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ದಯಾನಂದ ನಾಯಕ್ ಬೆಳ್ತಂಗಡಿ ನಡೆಸಿಕೊಟ್ಟರು. ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ “ಹಸಿರಿದ್ದರೆ ಉಸಿರು, ಜಲವಿದ್ದರೆ ಜೀವ, ಸ್ವಚ್ಚತೆಯಿದ್ದಲ್ಲಿ ಸ್ವಾಸ್ಥ್ಯ” ಎಂಬ ಧ್ಯೇಯದಂತೆ ಪ್ರತಿಯೊಂದು ಮನೆಗೊಂದರಂತೆ ಔಷಧೀಯ ಗಿಡಗಳನ್ನು ವಿತರಿಸಲಾಯಿತು. ಶ್ರೀಮತಿ ಶಾರದಾ ಡಿ. ನಾಯಕ್, ಸುಧಾಕರ ಪ್ರಭು ಇಡ್ಯ, ವಿಶ್ವನಾಥ ಶೆಣೈ ಮದ್ದಡ್ಕ ಸಹಕರಿಸಿದರು.

   ಬೆಳ್ತಂಗಡಿ ವಲಯ ಸಭೆ

ಬೆಳ್ತಂಗಡಿ ವಲಯ ಸಭೆ