Iruvailu Valaya
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಇರುವೈಲು-ಒಡ್ಡೂರು ವಲಯ ಮಟ್ಟದ ಸಮಿತಿ ರಚನೆ
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ವತಿಯಿಂದ ಒಡ್ಡೂರು, ಪದ್ರೆಂಗಿ, ಮಳಲಿ ಹಾಗೂ ಇರುವೈಲು-ಪಂಜ ಸಮುದಾಯವನ್ನು ಸೇರಿಸಿ ಸುಮಾರು 45 ಪದಾಧಿಕಾರಿಗಳನ್ನೊಳಗೊಂಡ ವಲಯ ಮಟ್ಟದ ಸಮಿತಿಯನ್ನು ರಚಿಸಲಾಯಿತು. ವಲಯದ ಅಧ್ಯಕ್ಷರಾಗಿ ಶ್ರೀ ಮೋಹನ್ ನಾಯಕ್ ಒಡ್ಡೂರು, ಕಾರ್ಯಾಧ್ಯಕ್ಷರಾಗಿ ಶ್ರೀ ಚಂದ್ರಹಾಸ ಭಟ್ ಇರುವೈಲು, ಗೌರವಾಧ್ಯಕ್ಷರಾಗಿ ಶ್ರೀ ಸದಾಶಿವ ರಾವ್ ಬೋಲ್ಡೆ, ಶ್ರೀ ಹರಿಶ್ಚಂದ್ರ ನಾಯಕ್, ವಾಸುದೇವ ಸಾಮಂತ್ ಕಟ್ಟಣಿಗೆ, ಉಪಾಧ್ಯಕ್ಷರಾಗಿ ಶ್ರೀ ಚಿದಾನಂದ ಪ್ರಭು ಒಡ್ಡೂರು, ಗಣೇಶ್ ಸಾಮಂತ್ ಮಣೇಲು, ಯೋಗೀಶ್ ಪ್ರಭು ಪಂಜ, ಶಕುಂತಲಾ ಕಿಟ್ಟುಬೆಟ್ಟು, ಶ್ರೀಮತಿ ಅನುರಾಧ ನಾಯಕ್ ಪದ್ರೆಂಗಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸಂದೇಶ್ ಭಟ್ ಇರುವೈಲು, ಸುಬ್ರಹ್ಮಣ್ಯ ನಾಯಕ್ ಪರಾರಿ, ರಾಘವೇಂದ್ರ ಪ್ರಭು ಪಂಜ, ಕೋಶಾಧಿಕಾರಿ ಯಾಗಿ ಶ್ರೀ ಪ್ರಭಾಕರ ಭಟ್ ಪರಾರಿ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಪ್ರಭು ಪರಾರಿ, ಪ್ರಶಾಂತ್ ನಾಯಕ್ ಪಂಜ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೋಹನ್ ನಾಯಕ್ ಪಂಜ, ಸುರೇಶ್ ಪ್ರಭು ನಡುಬರಿಕೆ, ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು. ಪ್ರತಿಷ್ಠಾನದ ವತಿಯಿಂದ ನಡೆಸುವ ಸನಿವಾಸ ಶಿಬಿರ ಹಾಗೂ ವಿದ್ಯಾರ್ಥಿವೇತನದ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ತಿಳಿಸಿದರು. ಈಗಾಗಲೇ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ ಕು. ಅಂಕಿತಾ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ನಾಯಕ್ ಇರುವೈಲು ತಮ್ಮ ಶಿಬಿರದ ಅನುಭವಗಳನ್ನು ವ್ಯಕ್ತಪಡಿಸಿದರು. ವಲಯ ಅಧ್ಯಕ್ಷರಾದ ಶ್ರೀ ಮೋಹನ್ ನಾಯಕ್ ಒಡ್ಡೂರು, ಅಧ್ಯಕ್ಷೀಯ ಮಾತು ಗಳನ್ನಾಡಿದರು. ಚಂದ್ರಹಾಸ ಭಟ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಾದ ರತ್ನಾಕರ್ ಸಾಮಂತ್, ಅನಂತ ಪ್ರಭು ಮರೋಳಿ ಮುಂತಾದವರು ಉಪಸ್ಥಿತರಿದ್ದರು.