Scholarship – 2014

ದಿನಾಂಕ 29, ಜೂನ್, 2014, ಆದಿತ್ಯವಾರದಂದು 17ನೇ ವರ್ಷದ ‘ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಮತ್ತು ಆರೋಗ್ಯ ಮಾಹಿತಿ’ ಕಾರ್ಯಕ್ರಮವು ಮಂಗಳೂರಿನ ಸುಬ್ರಮಣ್ಯ ಸದನದಲ್ಲಿ ನೆರವೇರಿತು. ಶ್ರೀ ಮುರಳೀಧರ ಪ್ರಭು ವಗ್ಗ – ಕೊಂಕಣಿ ಕಾರ್ಡ್ ಮಾಹಿತಿ, ಶ್ರೀ ದಿನೇಶ್ ಸಾಮಂತ್ ಆರೋಗ್ಯವಿಮೆ ಹಾಗೂ ಡಾ ಪ್ರವೀಣ್ ಚಂದ್ರ – ಡಯಾಬಿಟೀಸ್ ಮತ್ತು ಅಂಗಾಂಗಗಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಸುಮಾರು 85 ಮಂದಿಗೆ ವಿದ್ಯಾರ್ಥಿವೇತನ ಮತ್ತು 25 ಮಂದಿಗೆ ಪ್ರತಿಭಾ ಪುರಸ್ಕಾರ ಪ್ರಧಾನ. ಸುಮಾರು 6 ಲಕ್ಷ ಮೊತ್ತ ವಿದ್ಯಾರ್ಥಿವೇತನ ಪ್ರಧಾನ. ಬೆಂಗಳೂರಿನ ಉದ್ಯಮಿ ಶ್ರೀ ಸದಾಶಿವ ರಾವ್ ದಂಪತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯರಾಗಿ ಶ್ರೀ ಉಮಾನಾಥ ಶೆಣೈ, ಶ್ರೀಮತಿ ವಿಜಯಾ ಉಮಾನಾಥ ಶೆಣೈ,  ಮೇರಿಹಿಲ್ ಶ್ರೀ ಶಿವಾನಂದ ದಪಂತಿ, ಶ್ರೀ ಪ್ರೇಮ್‍ನಾಥ್ ನಾಯಕ್ ಸೋಲ್ತಾಡಿ, ಶ್ರೀ ಸುನೀಲ್ ಪಾಟೀಲ್ ದಂಪತಿ, ಶ್ರೀ ಅಣ್ಣಪ್ಪ ನಾಯಕ್, ಡಾ. ರಾಜಲಕ್ಷ್ಮಿ ನಿರಂಜನ ರಾವ್, ಶ್ರೀಮತಿ ಕೀರ್ತಿ, ಶ್ರೀ ದಿನೇಶ್ ಪ್ರಭು, ಶ್ರೀಮತಿ ಗೀತಾ. ಪಿ. ಶೆಣೈ,  ಶ್ರೀ ಸಂಜಯ್ ಕುಲಕರ್ಣಿ, ವಿಶ್ವ ಕೊಂಕಣಿ ಕೇಂದ್ರದ ಸಹನಿರ್ದೇಶಕರಾದ ಶ್ರೀ ಗುರುದತ್ತ ಬಾಳಿಗ, ಭವಾನಿ ಶಂಕರ ಭಟ್, ಕೂಡಿಬೈಲು ಶ್ರೀನಿವಾಸ ಶೆಣೈ, ಡಾ ರಿತೇಶ್ ಪ್ರಭು ದಂಪತಿ, ಡಾ ಗಿರೀಶ್ ದಂಪತಿ, ಶ್ರೀ ರಾಜಾರಾಮ್ ಪ್ರಭು ಕಲ್ಲಗುಡ್ಡೆ, ಶ್ರೀ ಮನೋಜ್, ಶ್ರೀ ಬಾಲಕೃಷ್ಣ ಪರ್ಕಳ, ಶ್ರೀಮತಿ ಸುಚೇತಾ ಬಾಲಕೃಷ್ಣ ಉಪಸ್ಥಿತರಿದ್ದರು. ಬೆಂಗಳೂರಿನ ಶ್ರೀಮತಿ ಗೀತಾ. ಪಿ. ಶೆಣೈ ಮತ್ತು ಬೆಳಗಾಂ ನ ಶ್ರೀ ಸಂಜಯ್ ಕುಲಕರ್ಣಿ ಪ್ರತಿಷ್ಠಾನದ ವೆಬೆಸೈಟನ್ನು ಉದ್ಘಾಟಿಸಿದರು. ವಿಶ್ವ ಕೊಂಕಣಿ ಕೇಂದ್ರ ಮತ್ತು ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಣೆ, ಶ್ರೀ ನಾರಾಯಣ ಮಾಸ್ಟರ್ ಕಿನ್ನಾಜೆ, ಶ್ರೀ ಡೆಚ್ಚಾರು ಗಣಪತಿ ಶೆಣೈ,  ಶ್ರೀ ರಾಮಚಂದ್ರ ಅಂಕೋಲಾ ರವರನ್ನು ಸನ್ಮಾನಿಸಲಾಯಿತು. ಶ್ರೀ ಎಂ.ಎಂ. ಪ್ರಭು ಅಧ್ಯಕ್ಷತೆವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ನಾಯಕ್ ವಾರ್ಷಿಕ ವರದಿ ಮಂಡಿಸಿದರು. ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಸ್ವಾಗತಿಸಿದರು. ಶ್ರೀ ಸಂಜಯ್ ಪ್ರಭು ಪ್ರಾಸ್ತಾವಿಕವಾಗಿ ನುಡಿದರು. ಶ್ರೀ ಭಾಸ್ಕರ್ ಪ್ರಭು ಮತ್ತು ಶ್ರೀ ಪ್ರಭಾಕರ್ ಪ್ರಭು ವಂದಿಸಿದರು. ಶ್ರೀ ರಮೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.