Scholarship – 2016
ದಿನಾಂಕ 20.11.2016 ರಂದು ಬಂಟ್ಸ್ ಹಾಸ್ಟೆಲ್ನ ಸಿ.ವಿ.ನಾಯಕ್ ಸಭಾಂಗಣದಲ್ಲಿ ಪ್ರತಿಷ್ಠಾನದ ಮೂಲಕ ‘19ನೇ ವಿದ್ಯಾರ್ಥಿವೇತನಾ ಮತ್ತು ಪ್ರತಿಭಾ ಪುರಸ್ಕಾರ- 2016’ ಕಾರ್ಯಕ್ರಮವು ಜರುಗಿತು. ಈ ಸಂಧರ್ಭದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್ ರವರು ನಿವೃತ್ತ ಯೋಧರನ್ನು, ಕೃಷಿಕರನ್ನು ಅಭಿನಂದಿಸಿದರು.
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದಿಂದ 13 ಲಕ್ಷ ಮೊತ್ತದ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ – ಇದೊಂದು ಐತಿಹಾಸಿಕ ಅಭಿವೃದ್ಧಿ
‘ಶ್ರೀ ಪೂರ್ಣಾನಂದ’ ಹೆಸರಿನಲ್ಲಿ ಆಧ್ಯಾತ್ಮಿಕ ಶಕ್ತಿ ಇದೆ’ –
‘ಶ್ರೀ ಪೂರ್ಣಾನಂದ’ ಹೆಸರಿನಲ್ಲಿ ಆಧ್ಯಾತ್ಮಿಕ ಶಕ್ತಿ ಇದೆ. ಯಾರ ಬದುಕು ಇತರಿಗಾಗಿ ಇದೆಯೋ ಅದುವೇ ನಿಜವಾದ ಬದುಕು. ಇದುವೇ ಜೀವನದಲ್ಲಿ ಪೂರ್ಣ ಆನಂದವನ್ನು ಬಯಸುವುದು ಎಂದರ್ಥ. ಈ ಸಂದೇಶವನ್ನು ಸಾರಲು ಇಡೀ ಸಮುದಾಯದಿಂದ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವುದು ಒಂದು ಪವಿತ್ರವಾದ ಕೆಲಸ. ಸಮಾಜಮುಖಿ ಸಂಘಟನೆಗಳು ಪ್ರತಿಭಾವಂತ ಮಕ್ಕಳಿಗೆ ಶೈಕ್ಷಣಿಕ ಬದುಕಿಗೆ ಸ್ಪಂದನೆ ನೀಡುತ್ತಾ, ಪ್ರೋತ್ಸಾಹಿಸುವ ಕಾರ್ಯವನ್ನು ನಿರಂತರ ಹಮ್ಮಿಕೊಂಡಾಗ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ’ ಎಂದು ವಿಧಾನಪರಿಷತ್ತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಅವರು ತಿಳಿಸಿದರು.
ಇವರು ‘ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಮ್ಮಿಕೊಂಡ 19ನೇ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಿಯುಸಿಯಿಂದ ಸ್ನಾತಕೋತ್ತರ ಪದವಿ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ 170 ವಿದ್ಯಾರ್ಥಿಗಳಿಗೆ 13 ಲ.ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕರ್ನಲ್ ಮಾಧವ ಶ್ಯಾನುಭಾಗ್, ಮಾಧವ ಪ್ರಭು, ಚಿದಾನಂದ ಬಸವಬೈಲು, ಶಾಂತರಾಮ್ ಪಾಟೀಲ್, ಸತೀಶ್ ಸಾಮಂತ್ ಶಿವ ಪಾಡಿ, ದೇವೇಂದ್ರ ಶ್ಯಾನುಭಾಗ್, ಹಾಗೂ ರಾಜಕೀಯ ಕ್ಷೇತ್ರದಿಂದ ತಾ.ಪಂ ಸದಸ್ಯ ಪ್ರಭಾಕರ್ ಪ್ರಭು, ಗ್ರಾ.ಪಂ. ಸದಸ್ಯರಾದ ರತ್ನಾಕರ ಪ್ರಭು, ವೆಂಕಟ್ರಾಯ ಪ್ರಭು ಪೂರ್ಲಪಾಡಿ, ಮತ್ತು ಜಯವಂತ ಪ್ರಭು ಕಾವಲಕಟ್ಟೆ ಹಾಗೂ ಶಿಕ್ಷಣ ಕ್ಷೇತ್ರದಿಂದ ಸಂದೀಪ್ ನಾಯಕ್, ಕಲಾ ಕ್ಷೇತ್ರದಿಂದ ರವಿ ಶೆಣೈ ಪುತ್ತೂರು, ಶ್ರೀಮತಿ ಅನುಷಾ ಶೆಣೈ, ಶ್ರೀಮತಿ ಸುಹಾನಿ ಪ್ರಭು, ವಿಶ್ವನಾಥ ನಾಯಕ್ ಕಾವಳಕಟ್ಟೆ, ಮಂಜುನಾಥ ಪ್ರಭು, ಪೇತ್ರಿ, ಹರೀಶ್ ಇರ್ತೋಟ್ಟು, ಕೃಷಿಕರಾದ ವಿಠಲ್ ಪ್ರಭು ಪತ್ತುಮುಡಿ, ದಾಮೋದರ್ ಶೆಣೈ ನಡಿಬೈಲು, ಗಣೇಶ್ ಪ್ರಭು ಪಂಜಿಕಲ್ಲು, ವೈದ್ಯರಾದ ಡಾ. ಪ್ರವೀಣ್ ಚಂದ್ರ ನಾಯಕ್, ಡಾ. ಗಿರೀಶ್ ನಾಯಕ್, ಡಾ. ವಿನಯ ಗಿರೀಶ್ ನಾಯಕ್, ಡಾ. ಪೂರ್ಣಾನಂದ ಪ್ರಭು, ಡಾ. ರಾಮ್ ರಾಜೇಶ್ ನಾಯಕ್, ಡಾ. ತ್ರಿವೇಣಿ ರವೀಂದ್ರ ಪ್ರಭು ಕೂಡಿಬೈಲು, ಡಾ. ಸುಚೇತಾ ಸುಧಾಕರ್ ಶೆಣೈ ಮುಂತಾದವರನ್ನು ಅಭಿನಂದಿಸಲಾಯಿತು. ಕ್ಯಾ. ಗಣೇಶ್ ಕಾರ್ಣಿಕ್ ಮತ್ತು ಕ್ಯಾ. ಬ್ರಿಜೇಶ್ ಚೌಟ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಪ್ರತಿಷ್ಠಾನದ ವತಿಯಿಂದ ರಚಿತಗೊಂಡ ವಿವಾಹ ವೇದಿಕೆಯ ಉದ್ದೇಶಗಳನ್ನು ಡಾ. ಸುಚೇತಾ ಸುಧಾಕರ್ ಶೆಣೈ ಮಂಡಿಸಿದರು ಹಾಗೂ ವೇದಿಕೆಯ ಸದಸ್ಯರಾದ ಶ್ರೀಮತಿ ಸುಚಿತ್ರ ರಮೇಶ್ ನಾಯಕ್, ಶ್ರೀಮತಿ ಮಾಲತಿ ಕೊಡಂಗೆ, ಶ್ರೀಮತಿ ವಿನಯಾ ಮರೋಳಿ, ರಾಮಚಂದ್ರ ಪ್ರಭು ಅಂಕೋಲಾ ಇವರನ್ನು ಗೌರವಿಸಲಾಯಿತು. ವಲಯ ಸಮಿತಿ ಅಧ್ಯಕ್ಷರು ಗಳಾದ ಕೇಶವ ಮೈರ, ಶಾಂತರಾಮ್ ನಾಯಕ್ ಕಡಂಬು, ರಾಮಕೃಷ್ಣ ಮಾರಿಬೆಟ್ಟು, ನಾರಾಯಣ ನಾಯಕ್ ಕಿನ್ನಾಜೆ ಮುಂತಾದವರನ್ನು ಅಭಿನಂದಿಸಲಾಯಿತು.
ನಮ್ಮ ಸಮಾಜದ ಮುಂದಿನ ಜನಾಂಗವನ್ನು ಸದೃಢಗೊಳಿಸುವುದೇ ಪ್ರತಿಷ್ಠಾನದ ಮುಖ್ಯ ಉದ್ದೇಶ – ಡಾ. ಪ್ರವೀಣ್ ಚಂದ್ರ ನಾಯಕ್
“ಪ್ರತಿಷ್ಠಾನದಿಂದ ನಡೆಯುವ 3 ದಿನಗಳ ವಾಸ್ತವ್ಯ ಶಿಬಿರದಿಂದ ಮಕ್ಕಳು ಜೀವನದ ಅನುಭವವನ್ನು ಪಡೆಯುತ್ತಾರೆ. ಕಾಲೇಜು ದಿನಗಳ ಬಳಿಕ ಹೊರಗಿನ ಜೀವನ ಹೇಗಿರುತ್ತದೆ ? ಮತ್ತು ಮಾನಸಿಕವಾಗಿ ಯಾವ ರೀತಿ ತಯಾರಿ ನಡೆಸಬೇಕು? ಎನ್ನುವುದನ್ನು ತಿಳಿಸಲಾಗುತ್ತದೆ. ವಿದ್ಯಾರ್ಥಿವೇತನವನ್ನು ಬೇರೆ ಯವರಿಂದ ಪಡೆಯಬಹುದು ಆದರೆ ಇಂತಹ ತರಬೇತಿ ಎಲ್ಲೂ ಸಿಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಮುಂದಿನ ಜನಾಂಗ ಸದೃಢವಾಗಿ ಬೆಳೆಸುವ ಉದ್ದೇಶವನ್ನು ಈಡೇರಿಸುವಂತಾಗಲು ತನು-ಮನ-ಧನ ಗಳಿಂದ ನಮ್ಮ ಸಮಾಜದ ಪ್ರತಿಯೊಬ್ಬರೂ ಸಹಕರಿಸಬೇಕು” ಎಂದು ಡಾ. ಪ್ರವೀಣ್ ಚಂದ್ರ ನಾಯಕ್ ಅಧ್ಯಕ್ಷತೆ ವಹಿಸಿ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕೆ.ಎಲ್. ರಾವ್ ದಂಪತಿ, ಉಜಿರೆ ಎಸ್.ಡಿ.ಎಮ್. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ವೈ. ಉಮಾನಾಥ ಶೆಣೈ, ಶ್ರೀಮತಿ ವಿಜಯಾ ಕುಮಾರಿ ಶೆಣೈ, ಭಾರಧ್ವಾಜ ಫೌಂಡೇಶನ್ನ ಶ್ರೀಮತಿ ಸೀಮಂತಿ ಪ್ರಭು, ಸುಧಾಕರ ನಾಯಕ್ ಮೈರ, ಬಾಯಿಲ ರತ್ನಾಕರ್ ಪ್ರಭು, ರಾಘವೇಂದ್ರ ಶೆಣೈ ಡೆಚ್ಚಾರ್, ವೆಂಕಟ್ರಮಣ ನಾಯಕ್ ಮಲ್ಲಿಕಟ್ಟೆ, ನಾರಾಯಣ ನಾಯಕ್ ಸೋಲ್ತಾಡಿ, ಸುಧಾಕರ ಶೆಣೈ ಮರೋಳಿ, ಪ್ರೇಮ್ನಾಥ್ ನಾಯಕ್ ಸೋಲ್ತಾಡಿ, ಕಮಲಾಬಾಯಿ ಟ್ರಸ್ಟ್ನ ಮನೋಜ್ ಪ್ರಭು, ಪ್ರತಿಷ್ಠಾನದ ಕೋಶಾಧಿಕಾರಿ ಸಂಜೀವ್ ಸಾಮಂತ್, ಪದಾಧಿಕಾರಿ ರತ್ನಾಕರ್ ಸಾಮಂತ್, ಚಂದ್ರಶೇಖರ್ ಹೆಣ್ಣೂರು, ಗೋಪಾಲ ಸಾಮಂತ್ ಮೈರ, ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ್ ಸಂಘ (ರಿ.) ವಗ್ಗ ಇದರ ಅಧ್ಯಕ್ಷರು ಗಣಪತಿ ಶೆಣೈ ಡೆಚ್ಚಾರ್, ರಾಮಚಂದ್ರ ನಾಯಕ್ ಬಿಜೈ, ವಸಂತಿ ಎನ್. ಪ್ರಭು ಕೊಡಿ ಯಾಲ್ ಬೈಲ್, ಕಂಟಿಗ ಗೋಪಾಲ್ ಶೆಣೈ, ಕಂಟಿಗ ಶಾಂತ ರಾಮ್ ಶೆಣೈ, ಶ್ರೀಮತಿ ಕಸ್ತೂರಿ ಎನ್. ಪಾಟೀಲ್ ಪರ್ಕಳ, ಮತ್ತು ಎಮ್.ಎಮ್. ಪ್ರಭು ಉಪಸ್ಥಿತರಿದ್ದರು. ಅಧ್ಯಕ್ಷ ರಮೇಶ್ ನಾಯಕ್ ಸ್ವಾಗತಿಸಿ, ಸಂಜಯ್ ಪ್ರಭು ಪ್ರ್ರಾಸ್ತಾವಿಕ ಮಾತುಗಳ ನ್ನಾಡಿದರು. ಸುಧೀರ್ ನಾಯಕ್ ವಂದಿಸಿ, ಶಾಂತರಾಮ್ ಪ್ರಭು ಮುಚ್ಚಿಲ್ಕೋಡಿ ಮತ್ತು ಡಾ. ವಿಜಯಲಕ್ಷ್ಮೀ ನಾಯಕ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.