Vogga Valaya

ವಗ್ಗ ವಲಯದ ಸಭೆ

ವಗ್ಗ ವಲಯದ ಸಭೆ

ದಿ. 06-11-2017ರಂದು SPSP ವಗ್ಗ ವಲಯದ ಸಭೆಯು ಮುರಳೀಧರ ಪ್ರಭುರವರ ಕಛೇರಿಯಲ್ಲಿ ನಡೆಯಿತು.

ದಿ. 24, 25ರಂದು ನಮ್ಮ ಸಮಾಜದ ಉಪನಯನ ಆದ ಬ್ರಾಹ್ಮಣ ವಟುಗಳಿಗೆ ಸಂಧ್ಯಾವಂದನೆಯ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ತರಬೇತಿ ಹಾಗೂ ಮಹಿಳೆಯರಿಗೆ ಕನ್ಯಾ ಸಂಸ್ಕಾರದ ಬಗ್ಗೆ ತರಬೇತಿ ನೀಡುವುದಾಗಿ ಹಾಗೂ ಶ್ರೀ ಕಟೀಲು ಕ್ಷೇತ್ರ ಯಕ್ಷಗಾನ ಮೇಳದಲ್ಲಿ ಸತತ 25 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ವಿಶ್ವನಾಥ ನಾಯಕ್ SPSP ವಗ್ಗ ವಲಯದ ಕಾರ್ಯದರ್ಶಿ ಇವರನ್ನು ಸಮಾಜ ಬಾಂಧವರೆಲ್ಲ ಸೇರಿ ಅಭಿನಂದಿಸುವುದಾಗಿ ತೀರ್ಮಾನಿಸಲಾಯಿತು ಮತ್ತು ಈ ಎಲ್ಲಾ ಕಾರ್ಯಕ್ರಮವು ವಗ್ಗ ಪೂರ್ಣಾನಂದ ಕಲ್ಯಾಣ ಮಂಟಪ (ಮಂಗಳಧಾಮ)ದಲ್ಲಿ ಜರಗಿಸುವುದೆಂದು ನಿರ್ಧರಿಸಲಾಯಿತು.

ಈ ಸಭೆಗೆ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ್ ನಾಯಕ್ ಮೈರಾ, ಕಾರ್ಯದರ್ಶಿಯಾದ ಡಾ| ವಿಜಯಲಕ್ಷ್ಮೀ ನಾಯಕ್, ಕೋಶಾಧಿಕಾರಿ ಸಂಜೀವ ಸಾವಂತ್, ಅನಂತ ಪ್ರಭು, ಶಿವರಾಯ ನಾಯಕ್ ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಿದರು. ಈ ವಲಯದ ಕುಟುಂಬದ ಸಮೀಕ್ಷೆ ನಡೆಸಲು ಅರ್ಜಿಗಳನ್ನು ವಿತರಿಸಲಾಯಿತು. ಡಿ. 10ರಂದು ಸಿ.ವಿ. ನಾಯಕ್ ಹಾಲ್ ಮಂಗಳೂರು ಇಲ್ಲಿ ಜರುಗುವ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭಕ್ಕೆ ಸಮಾಜ ಬಾಂಧವರು ಭಾಗವಹಿಸಬೇಕೆಂದು ಆಮಂತ್ರಣ ಪತ್ರಿಕೆ ನೀಡಲಾಯಿತು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿತು. ಈ ಸಭೆಯಲ್ಲಿ ಹಿರಿಯರಾದ ವಗ್ಗ ಗೋಪಾಲಕೃಷ್ಣ ಪ್ರಭು ಕುಡಾಲ ದೇಶಸ್ಥ ಗೌಡ್ ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷರಾದ ಡಿ. ಗಣಪತಿ ಶೆಣೈಯವರು, SPSP ವಗ್ಗ ವಲಯದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

   ವಗ್ಗ ವಲಯದ ಮಾಸಿಕ ಸಭೆ

ವಗ್ಗ ವಲಯದ ಮಾಸಿಕ ಸಭೆಯೂ ಡೆಚ್ಚಾರು ಶ್ರೀ ರಾಘವೇಂದ್ರ ಶೆಣೈಯವರ ಮನೆಯಲ್ಲಿ ಜು. 23ರಂದು ನಡೆಯಿತು. ಈ ಸಭೆಯಲ್ಲಿ ಸಮಾಜದ ಉಪನಯನ ಆದ ಬ್ರಾಹ್ಮಣ ವಟುಗಳಿಗೆ ಅಕ್ಟೋಬರ್ ರಜೆಯಲ್ಲಿ ಸಂಧ್ಯಾ ವಂದನೆ ಹಾಗೂ ನಿತ್ಯ ವಿಧಿಗಳ ಸಂಸ್ಕಾರ ನೀಡುವ ಬಗ್ಗೆ ಹಾಗೂ ಕಾರ್ತಿಕ್ ಸಾಮಂತ್‍ನಿಗೆ ಆರ್ಥಿಕ ಸಹಾಯ ನೀಡುವುದು ಮತ್ತು ವಲಯದ ಎಲ್ಲಾ ಮನೆಯವರು ಕೂಡ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡನ್ನು ಮಾಡಲು ಮನವರಿಕೆ ಮಾಡುವುದಾಗಿ ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಸಮಾಜದ ಪುರೋಹಿತರಾದ ಶ್ರೀ ಜಯರಾಮ್ ಭಟ್ ಮತ್ತು ಡೆಚ್ಚಾರು ಶ್ರೀ ಗಣಪತಿ ಶೆಣೈ ಹಾಗೂ ವಗ್ಗ ಶ್ರೀ ಗೋಪಾಲಕೃಷ್ಣ ಪ್ರಭು ಉಪಸ್ಥಿತರಿದ್ದರು.

   ಎಸ್.ಪಿ.ಎಸ್.ಪಿ. ವಗ್ಗ ವಲಯ ಮಾಸಿಕ ಸಭೆ  

ವಗ್ಗ ವಲಯ ಎಸ್.ಪಿ.ಎಸ್.ಪಿ.ಯ ಮಾಸಿಕ ಸಭೆಯು ಕಾರ್ಯದರ್ಶಿ ವಿಶ್ವನಾಥ ನಾಯಕ್ ನೆಲ್ಲಿಗುಡ್ಡೆ ಅವರ ಮನೆಯಲ್ಲಿ ಜೂ. 25ರಂದು ನಡೆಯಿತು. ಸಭೆಯಲ್ಲಿ ಅನಾರೋಗ್ಯ ಪೀಡಿತ ಕಾರ್ತಿಕ್ ಸಾವಂತ್‍ಗೆ ಧನಸಹಾಯ ನೀಡುವುದಾಗಿ ಹಾಗೂ ಮುಂದಿನ ಸಭೆ ಡೆಚ್ಚಾರು ರಾಘವೇಂದ್ರ ಶೆಣೈ ಅವರ ಮನೆಯಲ್ಲಿ ನಡೆಸುವುದಾಗಿಯೂ ತೀರ್ಮಾನಿಸಲಾಯಿತು. 

   ಎಸ್.ಪಿ.ಎಸ್.ಪಿ. ವಗ್ಗ ವಲಯ ಸಭೆ

ವಗ್ಗ ವಲಯದ ಏಪ್ರಿಲ್ ತಿಂಗಳ ಮಾಸಿಕ ಸಭೆಯು ಏ. 30ರಂದು ಸುಂದರಿ ಪ್ರಭು ಕಲಾೈ ಇವರ ಮನೆಯಲ್ಲಿ ಜರುಗಿತು. ಕಿರಿಯ ಸ್ವಾಮಿಗಳು ಆಗಮಿಸುವ ಬಗ್ಗೆ ವಲಯದ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಕೂಡಿಬೈಲು ದೇವಸ್ಥಾನದಲ್ಲಿ ನಡೆಯುವ ಸ್ವಾಮೀಜಿಯವರ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದೆಂದು ನಿರ್ಣಯಿಸಲಾಯಿತು.

ಕಲಾೈಯ ಸಮಾಜದ ಯುವಕರೆಲ್ಲರೂ ಸಕ್ರೀಯವಾಗಿ ಭಾಗವಹಿಸಿದ್ದರು, ಕೂಡಿ ಬೈಲು ಶ್ರೀನಿವಾಸ ಶೆಣೈ, ಹೆಬ್ಬಾರು, ಗಣ ಪತಿ ಶೆಣೈ ಹಾಗೂ ವಲಯದ ಸದಸ್ಯರೆಲ್ಲ ಭಾಗವಹಿಸಿದ್ದರು.

 

      ವಲಯ ಸಮಿತಿ ಸಭೆ

ಶ್ರೀ ಪೂರ್ಣಾ ನಂದ ಸೇವಾ ಪ್ರತಿಷ್ಠಾನ ವಗ್ಗ ವಲಯದ ಮಾಸಿಕ ಸಭೆಯು ಹಂಚಿಕಟ್ಟೆ ಮಾಲತಿ ಗೋಪಾಲ ಪ್ರಭು ಅವರ ಮನೆಯಲ್ಲಿ ಮಾ. 26ರಂದು ಸಂಜೆ 3ಗಂಟೆಗೆ ನಡೆಯಿತು. ಅಧ್ಯಕ್ಷ ಸ್ಥಾನವನ್ನು ಎಸ್.ಪಿ.ಎಸ್.ಪಿ. ವಗ್ಗ ವಲಯದ ಅಧ್ಯಕ್ಷ ರಾಮಕೃಷ್ಣ ಪ್ರಭು ವಹಿಸಿದ್ದರು. ಕಾರ್ಯದರ್ಶಿಯಾದ ವಿಶ್ವನಾಥ ನಾಯಕ್ ನೆಲ್ಲಿಗುಡ್ಡೆ ಇವರು ವರದಿ ವಾಚಿಸಿದರು. ಈ ಸಭೆಯಲ್ಲಿ ದಾಭೋಲಿ ಮಠದ ಕಿರಿಯ ಸ್ವಾಮೀಜಿಯವರಾದ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ಆಗಮಿಸುವ ಮತ್ತು ಸಹಭಾಗಿತ್ವದ ಬಗ್ಗೆ ಮುರಳೀಧರ ಪ್ರಭು ಅವರು ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಕಲ್ಲಡ್ಕದ ಮೀನಾಕ್ಷಿ ಸಭಾಭವನದಲ್ಲಿ ಏ. 14ರಂದು ಮಾಹಿತಿ ನೀಡುವ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಹಂಚಿಕಟ್ಟೆ ಸದಾಶಿವ ಪ್ರಭು ಉಪಸ್ಥಿತರಿದ್ದರು. ವಿಶ್ವನಾಥ ನಾಯಕ್ ವಂದಿಸಿದರು.