ಪಡಂಬೋಡಿ ವರದಿ

“ಉತ್ತಮ ನಾಯಕನಿದ್ದಾಗ ಇಡೀ ಸಮಾಜವೇ ಅವನನ್ನು ಬೆಂಬಲಿಸುತ್ತದೆ. ಹಾಗೆಯೇ ಪ್ರಸ್ತುತ: ದಿನಗಳಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ವು ರಾಜ್ಯಾದ್ಯಂತ ಇಡೀ ಕುಡಾಲ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮುದಾಯವನ್ನು ಒಟ್ಟು ಸೇರಿಸಿ, ಸಮಾಜದ ಮಾನಸಿಕ ಅಸ್ಥಿತ್ವದಿಂದ ಕೂಡಿದ ಕುಟುಂಬವನ್ನು ಗುರುತಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮನೆಯನ್ನು ಕಟ್ಟಿಸಿPಟ್ಟು, ಆ ಕುಟುಂಬ ನೆಮ್ಮದಿಯ ಜೀವನವನ್ನು ಸಾಗಿಸಲು ಬೇಕಾದ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಟ್ಟು ಎಲ್ಲರ ಪ್ರೀತಿಗೆ ಪಾತ್ರರಾಗಿ ಪೂರ್ಣ ಆನಂದವನ್ನು ನೀಡುವಲ್ಲಿ ಸಫಲರಾಗಿದ್ದಾರೆ.” ಎಂದು ವೇದಮೂರ್ತಿ ಶ್ರೀ ಸಂಜೀವ ಭಟ್ ರವರು ಆಶೀರ್ವಚಿಸಿದರು.

ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ನೇತೃತ್ವದಲ್ಲಿ ದಿನಾಂಕ 08.04.2016 ರಂದು ಹಮ್ಮಿಕೊಂಡ ಪಡಂಬೋಡಿ ಕುಟುಂಬದ ನೂತನ ಗೃಹಪ್ರವೇಶದ ಸಮಾರಂಭದಲ್ಲಿ ಸಾಂಕೇತಿಕವಾಗಿ ಮನೆಯ ಕೀಯನ್ನು ಆ ಕುಟುಂಬದ ಯಜಮಾನಿ ಶ್ರೀಮತಿ ಜಲಜ ಇವರಿಗೆ ಹಸ್ತಾಂತರಿಸುವ ಸಂಧರ್ಭದಲ್ಲಿ ಅಭಿಪ್ರಾಯ ಪಟ್ಟರು.

ತಾ. ಪಂ. ಸದಸ್ಯರಾದ  ಶ್ರೀಮತಿ ರೀಟಾ ಕುಟಿನೋ ಮತ್ತು ಪ್ರಭಾಕರ್ ಪ್ರಭು, ಗ್ರಾ.ಪಂ. ಸದಸ್ಯರಾದ ಶ್ರೀ ಜಯರಾಮ್ ಬಂಗೇರ, ಮತ್ತು ಶ್ರೀ ವಲೇರಿಯನ್ ಕುಟಿನೋ, ಅಂಗನವಾಡಿ ವಲಯಾಧಿಕಾರಿ ಶ್ರೀಮತಿ ನಾಗರತ್ನಮ್ಮ, ಸುಧೀರ್ ನಾಯಕ್, ಬರೆಪ್ಪಾಡಿ ನಾರಾಯಣ ಪ್ರಭು, ಸ್ಥಾಪಕ ಪ್ರಾಯೋಜಕರಾದ ಎಂ.ಎಂ.ಪ್ರಭಾಕರ ಮುಂತಾದವರು ಪ್ರತಿಷ್ಟಾನವು ತೆಗೆದು ಕೊಂಡ ಈ ಕಾರ್ಯಯೋಜನೆಯನ್ನು ಪ್ರಶಂಸಿಸಿ ಶುಭಹಾರೈಸಿದರು. ಈ ಕಾರ್ಯಯೋಜನೆಯಲ್ಲಿ ವಿಶೇಷವಾಗಿ ಶ್ರಮಿಸಿದ ಪ್ರಶಾಂತ್ ಪ್ರಭು, ಪ್ರವೀಣ್ ಶೆಣ್ಯೆ, ಗಣೇಶ್ ವಾಮದಪದವು, ಯೋಗೀಶ್ ವಾಮದಪದವು ಮತ್ತು ಬಾಲಕೃಷ್ಣ ನಾಯಕ್ ಇವರಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುಲಾರು ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಶ್ರೀ ನಾರಾಯಣ ನಾಯಕ್ ದರ್ಬೆ,  ಬೆಂಗಳೂರಿನ ಅಭಿವೃದ್ದಿ ಬಿಲ್ಡರ್ಸ್ ನ ಮಾಲಕ ಜಯಂತ್ ನಾಯಕ್, ಶ್ರೀ ಗೋಪಾಲ ಪ್ರಭು, ಉಡುಪಿ ಇಂಡಿಯನ್ ಫಾರ್ಮಸಿಟಿಕಲ್ ಕಂಪೆನಿಯ ಶ್ರೀಮತಿ ಕೀರ್ತಿಮಾಲಿನಿ ಪ್ರಭು, ಉಡುಪಿ ವಿದ್ಯಾಪ್ರಸರಕ್ ಮಂಡಲ್‍ನ ಅಧ್ಯಕ್ಷರಾದ ಶ್ರೀ ಸತೀಶ್ ಪಾಟೀಲ್, ಶ್ರೀ ಉಂಡಾರ್ ಪ್ರಭಾಕರ್ ಪ್ರಭು, ಬೆಂಗಳೂರಿನ ಶ್ರೀ ಪ್ರಭಾಕರ್ ಪ್ರಭು ಹೆಣ್ಣೂರು, ಶ್ರೀ ರಾಘವೇಂದ್ರ ಶೆಣೈ ಡೆಚ್ಚಾರು, ಕೆ.ಎಂ.ಸಿ, ಪೋಡ್ಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್ ಚಂದ್ರನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಪಧಾಧಿಕಾರಿಗಳಾದ ಸಂಜೀವ್ ಸಾಮಂತ್, ಗಣೇಶ್ ಶೆಣೈ ಮರೋಳಿ, ಕೂಡಿಬೈಲು ಶಿವರಾವ್, ಚಂದ್ರಶೇಖರ್ ಪ್ರಭು ಬಿ.ಸಿ.ರೋಡ್, ಮುರಳೀಧರ ಪ್ರಭು ವಗ್ಗ, ಡೆಚ್ಚಾರ್ ಗಣಪತಿ ಶೆಣೈ, ಭಾಸ್ಕರ್ ಪ್ರಭು, ವೆಂಕಟ್ರಾಯ ಪ್ರಭು, ಚಂದ್ರಹಾಸ ಪ್ರಭು, ಡಾ. ಸುಚೇತ ಶೆಣ್ಯೆ, ಸುಚಿತ್ರ ನಾಯಕ್, ರವೀಂದ್ರ ನಾಯಕ್, ಅಕ್ಷಯ್ ಪ್ರಭು, ನಿತೀನ್, ನಾಗೇಶ್ ಪ್ರಭು, ಶ್ರೀ ರಾಮ್ ಶೆಣ್ಯೆ, ಉಪಸ್ಥಿತರಿದ್ದರು. ಪ್ರತಿಷ್ಠಾನದ ಇರುವೈಲು ವಲಯ ಸಮಿತಿಯ ಸದಸ್ಯರಾದ ದಿನೇಶ್ ಪ್ರಭು, ಸುಬ್ರಮಣ್ಯ ನಾಯಕ್, ಕಮಲಾಕ್ಷ ಪ್ರಭು, ಪ್ರಶಾಂತ್ ಭಟ್, ಪ್ರದೀಪ್ ಶೆಣೈ, ಅಂಕಿತ, ಸೌಜನ್ಯ, ಶಕುಂತಳಾ, ಸದಾಶಿವ ನಾಯಕ್, ರಾಘವೇಂದ್ರ ನಾಯಕ್, ಸಂದೇಶ ನಾಯಕ್, ರಮೇಶ್ ಪ್ರಭು, ಲಕ್ಷ್ಮಣ ಪ್ರಭು, ಯಶವಂತ್ ನಾಯಕ್, ರಾಮಕೃಷ್ಣ ನಾಯಕ್ ಸಹಕರಿಸಿದರು. ಪ್ರತಿಷ್ಟಾನದ ಅಧ್ಯಕ್ಷರಾದ ರಮೇಶ್ ನಾಯಕ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ಸಂಜಯ್ ಪ್ರಭು ವಂದಿಸಿದರು. ಸಂದೇಶ ಭಟ್ ಪ್ರಾರ್ಥಿಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ಪ್ರಸ್ತಾವಿಕ ಮಾತುಗಳಾಡಿದರು. ಸುರೇಶ್ ಇರುವೈಲು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

Current ye@r *