“ಗೌರವ ಅಭಿನಂದನೆ ”
33ನೆಯ ಕೊಂಕಣಿ ಮಾನ್ಯತಾ ದಿನದ ವಿಶೇಷ ಕಾರ್ಯಕ್ರಮವನ್ನು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸುಸಂದರ್ಭದಲ್ಲಿ ನಮ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಅದ್ಭುತ ಸ್ಥಾನ ಪಡೆದ ಭರತನಾಟ್ಯ ಪ್ರವೀಣೆ ಕುಮಾರಿ ರೆಮೋನಾ ಇವೆಟ್ ಪಿರೇರಾ ಅವರನ್ನು ನಮ್ಮ ಸಮಾಜದ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಲೇಖಕರಾದ 97 ವರ್ಷ ಪ್ರಾಯದ ಮಟ್ಟಾರು ವಿಠಲ ಕಿಣಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕೇರಳ ರಾಜ್ಯದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಗೌರವಾನ್ವಿತ ಜಸ್ಟಿಸ್ ಎನ್ ನಾಗರೇಶ್ ಅವರ ಸಂದೇಶವನ್ನು ಜಾಲತಾಣದ ಮೂಲಕ ನೀಡಲಾಯಿತು
ಕಾರ್ಯಕ್ರಮದಲ್ಲಿ ಗೋವಾದಿಂದ ಬಂದಿದ್ದ ಡಾ.ಭೂಷಣ್ ಭಾವೆ, ಪ್ರಖ್ಯಾತ ಕೊಂಕಣಿ ಅನುವಾದಕರಾದ ಶ್ರೀ ರಮೇಶ ಲಾಡ್, ಪುಷ್ಪಾ ಬಾಬ್ಡೆ, ಪುಣೇ ಯ ಪ್ರಗತಿ ಎಜುಕೇಶನ್ ಪೌಂಡೇಶನ್ ಟ್ರಸ್ಟಿಗಳಾದ ಅನ್ವಿತ್ ಪಾಟಕ್ ಹಾಗೂ ಪ್ರಾಚೀ ನವಾಟೆ, ಕೊಚ್ಚಿನ್ ಬಂದ ಡಾಕ್ಟರ್ ಗೋಕುಲ್ ದಾಸ್ ಪ್ರಭು, ಲೆಫ್ಟಿನೆಂಟ್ ಗವರ್ನರ್ ಪಿ.ಜಿ. ಕಾಮತ್, ಪ್ರಖ್ಯಾತ ಲೇಖಕಿ ಹಾಗೂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿ ಶಕುಂತಲಾ ಅಜಿತ್ ಭಂಡಾರ್ಕರ್, ( ಲೆಫ್ಟಿನೆಂಟ್ ಗವರ್ನರ್ ಅಜಿತ್ ಭಂಡಾರ್ಕರ್ ಅವರ ಹೆಂಡತಿ), ಪ್ರಖ್ಯಾತ ಲೇಖಕರಾದ ಎಚ್.ಎಮ್. ಪೆರ್ನಾಲ್. ದೆಹಲಿಯ ರಾಷ್ಟ್ರೀಯ ಕೊಂಕಣಿ ಪರಿಷತ್ ಇದರ ಸದಸ್ಯರಾದ ಮೆಲ್ವಿನ್ ರಾಡ್ರಿಗಸ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೊಂಕಣಿ ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

