ಅಭಿನಂದನ ಕಾರ್ಯಕ್ರಮ
Felicitating union minister Sri Sripad Naik at Vishwa Konkani Kendra by Sri Poornananda Seva Prathishtana.
‘ಸಾಧನ ಸಂಭ್ರಮ’ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ರಮೇಶ್ ನಾಯಕ್, ರಾಯಿ, ಪ್ರತಿಷ್ಠಾನದ ವತಿಯಿಂದ ಅಭಿನಂದನೆ
ಬಿ.ಸಿ.ರೋಡ್ ಸ್ಪರ್ಶ ಕಲಾಮಂದಿರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ರಮೇಶ್ ನಾಯಕ್, ರಾಯಿ, ಅವರ ‘ಸಾಧನ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರ ಸಾಧನೆಯ ಅವಲೋಕನ ಹಾಗೂ ಗುರುವಂದನೆಯೊಂದಿಗೆ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್ ಮೈರ, ಸುಚಿತ್ರಾ ನಾಯಕ್, ಡಾ. ಡಾ.ವಿಜಯಲಕ್ಷ್ಮೀ ನಾಯಕ್, ಅನಂತ ಪ್ರಭು ಮರೋಳಿ, ವಗ್ಗ ವಲಯ ಅಧ್ಯಕ್ಷರಾದ ರಾಮಕೃಷ್ಣ ಪ್ರಭು ಮಾರಿಬೆಟ್ಟು, ಹಿರಿಯರಾದ ಗೋಪಾಲ ಪ್ರಭು ನೇರಳಕೋಡಿ, ವಗ್ಗ ಮುರಳೀಧರ ಪ್ರಭು, ಡಿ. ರಾಮ್‍ರಾಯ್ ನಾಯಕ್ ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು.
ಶ್ರೀಯುತ ಸಂಜೀವ ನಾಯಕ್ ಕಲ್ಲೇಗ
ಕಶೆಕೋಡಿ ಶ್ರೀ ಲಕ್ಮೀ ವೆಂಕಟ್ರಮಣ ದೇವಸ್ಥಾನದ ಜೀರ್ಣೊದ್ದಾರ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ , ಇಡೀ ಸಮುದಾಯವನ್ನು ಒಟ್ಟು ಮಾಡಿ , ಊರ ಜನರ ಪ್ರೀತಿ ವಿಶ್ವಾಸಗಳಿಸಿ ವೈದಿಕ ವಿಧಿವಿಧಾನಗಳ ಮೂಲಕ ಭಕ್ತಿಪೂರ್ವಕವಾಗಿ ಬಹಳ ವಿಜ್ರಂಬಣೆಯಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು, ದಾಭೋಳಿ ಶ್ರೀಮಠ್ ಸಂಸ್ಥಾನದ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಯುತ ಸಂಜೀವ ನಾಯಕ್ ಕಲ್ಲೇಗ ಇವರನ್ನು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ವತಿಯಿಂದ ಅಬಿನಂದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ಥುವಾರಿ ಸಚಿವರಾದ ಸನ್ಮಾನ್ಯ ಶ್ರೀ ರಮಾನಾಥ ರೈ, ಪ್ರತಿಷ್ಠಾನದ ಅದ್ಯಕ್ಷರಾದ ಶ್ರೀ ರಮೇಶ್ ನಾಯಕ್ ಮೈರ, ಮಹೇಶ್ ಠಾಕೂರ್, ಸತೀಶ್ ಪಾಟೀಲ್, ಬೆಂಗಳೂರಿನ ಮಂಜುನಾಥ್ ಪಾಟೀಲ್, ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳಾದ ಶ್ರೀ ಸಂಜಯ್ ಪ್ರಭು, ಡಾ.ವಿಜಯಲಕ್ಷ್ಮೀ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಶ್ರೀ ಶ್ರೀಪಾದ ನಾಯಕ್
ದಿನಾಂಕ 01.10.2014 ರಂದು ಕೇಂದ್ರ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಶ್ರೀ ಶ್ರೀಪಾದ ನಾಯಕ್, ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್, ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ ಪ್ರಭು, ಶ್ರೀ ಗೋಪಾಲ ಶೆಣೈ ಕೊಡಂಗೆ, ಶ್ರೀಮತಿ ಸುಚಿತ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ನಾಯಕ್ ಮತ್ತು ಸಂಪರ್ಕಾಧಿಕಾರಿ ಶ್ರೀ ರವೀಂಧ್ರ ನಾಯಕ್ ಉಪಸ್ಥಿತರಿದ್ದರು.
SPVSSN
ನಾಗಾಲ್ಯಾಂಡ್ ಗವರ್ನರ್ ಶ್ರೀ ಪದ್ಮನಾಭ ಆಚಾರ್ಯ
ದಿನಾಂಕ 28.07.2014 ರಂದು ನಾಗಾಲ್ಯಾಂಡ್ ಗವರ್ನರ್ ಶ್ರೀ ಪದ್ಮನಾಭ ಆಚಾರ್ಯ ದಂಪತಿಯರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಷ್ಠಾನ ಮೂಲಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಿನಾಂಕ 28.07.2014 ರಂದು ಶ್ರೀ ಸುರೇಶ್ ಕುಮಾರ್, ಮಾಜಿ ನಗರಾಭಿವೃದ್ಧಿ ಸಚಿವರು, ಕರ್ನಾಟಕ ಸರಕಾರ, ಇವರೊಂದಿಗೆ ಮಧುಮೇಹ ಕಾಯಿಲೆಯ ಬಗ್ಗೆ ಸಮಾಲೋಚನೆ-ಡಾ. ಪ್ರವೀಣ್ ನಾಯಕ್
Marla
Dechar Ganapathi Shenoy
80 th bday celeb Sri Basti Vaman Shenoy dated 16 th jul 2014