ಅಭಿಮಾನದಲ್ಲಿ ಮಿಂದೆದ್ದ ಕ್ರಿಸ್ ಗೇಲ್
ಮಂಗಳೂರು: ಇತ್ತೀಚೆಗೆ ಅಂತಾರಾಷ್ಟ್ರೀ ಯ ಕ್ರಿಕೆಟ್ ಆಟಗಾರ ವೆಸ್ಟ್‍ಇಂಡೀಸ್‍ನ ಖ್ಯಾತ ಬ್ಯಾಟ್ಸ್ ಮನ್ ಕ್ರಿಸ್‍ಗೇಲ್ ಮಂಗಳೂರಿ ನ ಖ್ಯಾತ ಉದ್ಯಮಿ ಶ್ರೀ ರಮೇಶ್ ನಾಯಕ್ ಮೈರರವರ ಬಲ್ಮಠದಲ್ಲಿರುವ ವಾಣಿಜ್ಯ ಮಳಿಗೆ ಗೆ ಭೇಟಿ ನೀಡಿದರು. ಮಂಗಳೂರಿಗೆ ಮೊತ್ತ ಮೊದಲ ಬಾರಿಗೆ ಆಗಮಿಸುತ್ತಿರುವ ಕ್ರಿಸ್‍ಗೇಲ್ ರನ್ನು ಭಾರತೀಯ ಸಂಪ್ರದಾಯದಂತೆ ಶ್ರೀಮತಿ ಸುಚಿತ್ರಾ ರಮೇಶ್ ನಾಯಕ್‍ರವರು ತಿಲಕವಿಟ್ಟು, ಆರತಿಗೈದು ಸ್ವಾಗತಿಸಿದರು. ಪಾರಂಪರಿಕ ಸ್ವಾಗತದಿಂದ ಸಂತೋಷಗೊಂಡ ಕ್ರಿಸ್‍ಗೇಲ್ ಹರ್ಷೋಲ್ಲಾಸದಿಂದ ಮಳಿಗೆ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಅಭಿಮಾನಿ ಬಳಗ ‘ಗೈಲ್ ಗೈಲ್’ ಎಂದು ಹರ್ಷೋದ್ಗಾರಗೈದರು.
ಹಸನ್ಮುಖಿ ಗೈಲ್‍ನ್ನು ಕರಾವಳಿ ಸಂಪ್ರ ದಾಯದಂತೆ ಎಳನೀರು ಇತ್ತು, ಶ್ರೀ ರಮೇಶ್ ನಾಯಕ್ ಸತ್ಕರಿಸಿದರು. ಎಳನೀರು ಸವಿದ ಗೈಲ್, “ಮಂಗಳೂರು ಮತ್ತು ಬೆಂಗಳೂರು ಹೆಸರಿನಲ್ಲಿ ಕೆಲವು ಅಕ್ಷರಗಳ ವ್ಯತ್ಯಾಸವಿದೆ. ಆದರೆ ಅಭಿಮಾನದಲ್ಲಿ ಬಹಳ ಸಂತೋಷವಾಗಿದೆ, ನಿಮ್ಮ ತುಂಬು ಹೃದಯದ ಅಭಿಮಾನವೇ ನನಗೆ ಕ್ರಿಕೆಟ್‍ನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಕ ಶಕ್ತಿ” ಎಂದರು.
ಮಂಗಳೂರಿನ ಕ್ರೀಡಾಭಿಮಾನಿಗಳು ಕ್ರಿಸ್ ಗೈಲ್‍ರನ್ನು ಹತ್ತಿರದಿಂದ ನೋಡುವ ತವಕದ ಪರಿಣಾಮವಾಗಿ ಬಲ್ಮಠ ರಸ್ತೆಯಲ್ಲಿ ಸುಮಾರು ಒಂದು ತಾಸು ವಾಹನ ದಟ್ಟನೆಗೊಂಡು ಸಂಚಾರ ಸ್ಥಗಿತಗೊಂಡಿತ್ತು.
ಮಳಿಗೆಯಲ್ಲಿದ್ದಷ್ಟು ಹೊತ್ತು ಗೈಲ್ ಬಹಳ ಸಂತೋಷ ಚಿತ್ತದಿಂದಿದ್ದು, ಚಿಣ್ಣ ರೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದರು ಅಲ್ಲದೆ ಅಭಿಮಾನಿಗಳು ಗೈಲ್‍ರ ಹಸ್ತಾಕ್ಷರ, ಸೆಲ್ಫಿಗಳಿಗೆ ಮುಗಿಬಿದ್ದರು.
ಈ ಸಂದರ್ಭದಲ್ಲಿ ನಗರದ ಗಣ್ಯ ವ್ಯಕ್ತಿ ಗಳಾದ ಡಾ|| ಹಂಸರಾಜ್ ಆಳ್ವ, ಡಾ|| ಪವನ್ ಹೆಗ್ಡೆ ಮತ್ತು ದರ್ಬೆ ಪ್ರವೀಣ್ ನಾಯಕ್ ಹಾಗೂ ಹಲವಾರು ಪ್ರತಿಷ್ಠಿತರು ಉಪಸ್ಥಿತರಿದ್ದರು.
ನಮ್ಮ ಸಮಾಜದ ಪ್ರತಿಷ್ಠಿತರ ವ್ಯಾಪಾರಿ ಮಳಿಗೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರೀಡಾ ಪಟುವಿನ ಭೇಟಿಯು ನಮ್ಮ ಸಮಾಜದ ಪ್ರತಿಷ್ಠೆ ಹಾಗೂ ಕೀರ್ತಿ ಹೆಚ್ಚುವಂತೆ ಮಾಡಿದೆ ಎಂದು ಶ್ರೀ ಪೂರ್ಣಾನಂದ ವಾಣಿ ಪತ್ರಿಕೆಯ ಸಂಪಾದಕಿ ಅಭಿಪ್ರಾಯ ವ್ಯಕ್ತಪಡಿಸಿದರು.