ಅಭಿವೃದ್ಧಿ ಕಾರ್ಯಾಗಾರ
ಎರಡು ದಿನಗಳ ಈ ಯುನೆಸ್ಕೋ ನಿರ್ದೇಶಿತ “ಸಾಮುದಾಯಿಕ ಸಹಭಾಗಿತ್ವ” ಆಧಾರಿತ ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ಕುಡಾಳ್ ದೇಶಸ್ಥ್ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಸುಮಾರು 85 ಪ್ರತಿನಿಧಿಗಳು ಚರ್ಚಿಸಿ ಸ್ವಸಮಾಜವು ಪ್ರಸಕ್ತ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಪರಿಹಾರಗಳ ಅನುಷ್ಠಾನಕ್ಕಾಗಿ ಈ ಕೆಳಗೆ ಕಾಣಿಸಲಾದ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಂಡಿದ್ದೇವೆ.
ಈ ನಿರ್ಣಯಗಳನ್ನು ಕುಡಾಳ್ ದೇಶಸ್ಥ್ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಪ್ರತಿಯೊಬ್ಬ ಸದಸ್ಯನಿಗೂ ತಲುಪಿಸಿ ಎಲ್ಲಾ ಸಮಾಜ ಬಾಂಧವರ ಬೆಂಬಲದೊಂದಿಗೆ ಯಶಸ್ವಿಯಾಗಿ ಕೈಗೊಂಡು ಇಸವಿ 2020ರೊಳಗಾಗಿ ಸ್ವಸಮಾಜದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ.
ಮುಂದಿನ ಒಂದು ವರ್ಷದೊಳಗೆ (2014 ರೊಳಗೆ) ಕೈಗೊಳ್ಳುವ ಯೋಜನೆಗಳು:
- ಕುಡಾಳ್ ದೇಶಸ್ಥ್ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಹಾಗೂ ಜನಗಣತಿಯನ್ನು ನಡೆಸುವುದು.
- ಕುಡಾಳ್ ದೇಶಸ್ಥ್ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ತಾಲೂಕು/ಜಿಲ್ಲಾ ಮಟ್ಟದ ಸಂಘಟನೆಗಳನ್ನು ಬಲಪಡಿಸುವುದು. ಪ್ರತಿನಿಧಿಗಳನ್ನು ರಾಜ್ಯ ಸಂಘಕ್ಕೆ ನೇಮಿಸುವುದು. ಜಿಲ್ಲಾವಾರು ಮಹಿಳಾ ಮತ್ತು ಯುವ ಘಟಕಗಳನ್ನು ಸ್ಥಾಪಿಸುವುದು.
- ಮಂಗಳೂರು, ಉಡುಪಿ, ಬೆಂಗಳೂರು, ಅಂಕೋಲ, ಹುಬ್ಬಳ್ಳಿ, ಕಾರವಾರಗಳಲ್ಲಿ ಯುವಕರಿಗಾಗಿ ಒಂದು ದಿನದ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು. (ಶಿಕ್ಷಣ, ನೈತಿಕ, ಉದ್ಯೋಗ, ಸ್ವೋದ್ಯೋಗ ಮತ್ತು ಕೌನ್ಸೆಲಿಂಗ್)
- ತಾಲೂಕುವಾರು ಮಕ್ಕಳ ಸಾಂಸ್ಕೃತಿಕ ಶಿಬಿರಗಳನ್ನು ನಡೆಸುವುದು. 2013-14ನೇ ಸಾಲಿನಲ್ಲಿ ಒಂದು ಪೈಲಟ್ ಶಿಬಿರ ಮತ್ತು 2014 ಎಪ್ರಿಲ್-ಮೆ ತಿಂಗಳಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುವುದು.
- ಎಮರ್ಜೆನ್ಸಿ ಹೆಲ್ಪ್ ಲೈನ್ ಮತ್ತು ಮೆಡಿಕಲ್ ಸೆಲ್ ಸ್ಥಾಪನೆ. (ಸಮಾಜದ ವೈದ್ಯರುಗಳ ಬಗ್ಗೆ ಮಾಹಿತಿ. ರಕ್ತದಾನಿಗಳ ಬಗ್ಗೆ ಮಾಹಿತಿ. ಮೆಡಿಸಿನ್ ಬ್ಯಾಂಕ್.) ಸಾಮುದಾಯಿಕ ಆರೋಗ್ಯವಿಮೆ ಸ್ಥಾಪನೆ. ಇತರ ವಿಮೆಗಳ ಬಗ್ಗೆ ಮಾಹಿತಿ ಕೈಪಿಡಿ ರಚನೆ.
- ಕುಡಾಳ್ ದೇಶಸ್ಥ್ ಆದ್ಯ ಗೌಡ್ ಬ್ರಾಹ್ಮಣ ಸಮಗ್ರ ವಿದ್ಯಾನಿಧಿ ಸ್ಥಾಪನೆ ಮತ್ತು ಪ್ರಸಕ್ತ ಸ್ವಜಾತಿ ವಿದ್ಯಾರ್ಥಿ ವೇತನಗಳ ಸಮರ್ಪಕ ನಿರ್ವಹಣೆ. ಇತರ ವಿದ್ಯಾರ್ಥಿವೇತನಗಳ ಜೊತೆಗೆ ಸಂಪರ್ಕ.
- ಶ್ರೀಮಠ ದಾಭೋಲಿಯ ಜೊತೆಗೆ ಸಂಪರ್ಕ ಮತ್ತು ಸಂವಹನವನ್ನು ಬಲಪಡಿಸುವುದು. ಮಠದಲ್ಲಿ ವಸಂತ ಶಿಬಿರಗಳನ್ನು, ಮಠಕ್ಕೆ ಪ್ರವಾಸಗಳನ್ನು ಏರ್ಪಡಿಸುವುದು.
- ಎಲ್ಲಾ ದಾಖಲೆಗಳಲ್ಲಿ ಸ್ವಜಾತಿ ಹೆಸರನ್ನು “ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ” ಎಂದು ನಮೂದಿಸಲು ಸ್ವಜಾತಿ ಬಾಂಧವರಲ್ಲಿ ಅರಿವು ಮೂಡಿಸುವುದು.
ಮುಂದಿನ ಐದು ವರ್ಷಗಳಲ್ಲಿ (2020ರೊಳಗೆ) ಕೈಗೊಳ್ಳಬೇಕಾದ ಯೋಜನೆಗಳು:
- ಜಿಲ್ಲಾವಾರು ಸಭಾಭವನ ನಿರ್ಮಾಣ.
- ಬ್ಯಾಂಕಿಂಗ್ ಮತ್ತು ಇನ್ಸೂರೆನ್ಸ್ ಕ್ಷೇತ್ರದಲ್ಲಿ ನಮ್ಮ ಸಮಾಜದ ಯುವಕರನ್ನು ಪ್ರೋತ್ಸಾಹಿಸುವುದು.
- ಕನಿಷ್ಟ 50% ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಾಂತ್ರಿಕ ವಿದ್ಯಾಭ್ಯಾಸಕ್ಕೆ ಸೇರಿಸುವುದು.
- ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಹೆಸರಿನಲ್ಲಿ ಕೋ-ಆಪರೆಟಿವ್ ಸೊಸೈಟಿ ಸ್ಥಾಪನೆ.
- 2020ರೊಳಗೆ ನಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಶಕ್ತರಾಗುವಂತೆ ನೋಡಿಕೊಳ್ಳುವುದು.