ಆರೋಗ್ಯ ಸುರಕ್ಷಾ ಯೋಜನೆ
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ವತಿಯಿಂದ ಸಹಾಯಧನ ಹಸ್ತಾಂತರ
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಪ್ರಯತ್ನದ ಫಲವಾಗಿ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಒದಗಿ ಬಂದ ರೂ 50,000/- ಚೆಕ್ ನ್ನು ಶ್ರೀ ಇರುವೈಲು ಕೋರಿಬೆಟ್ಟು ನಾರಾಯಣ ನಾಯಕ್ ಇವರಿಗೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ವೇದಮೂರ್ತಿ ಸಂಜೀವ ಭಟ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವೇದಮೂರ್ತಿ ಸಂಜೀವ ಭಟ್ರವರು ಪೊನ್ನೋಟ್ಟು ಕುಟುಂಬದ ಅಸಹಾಯಕತೆ ಮತ್ತು ಸಂಕಷ್ಟಗಳ ದಿನಗಳ ಬಗ್ಗೆ ತಿಳಿಸಿದರು. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾ£ವು ಇಂತಹ ಒಳ್ಳೆಯ ಕಾರ್ಯಗಳನ್ನು ಕೈಗೆತ್ತಿ ಕೊಳ್ಳುತ್ತಿಕೊಳ್ಳುತ್ತಿರುವುದು ಶ್ಲಾಘನೀಯ. ಎಂದು ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ದು;ಖತಪ್ತ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳುತ್ತಾ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಸಂಜಯ್ ಪ್ರಭು, ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ನಾಯಕ್, ಶ್ರೀ ಡೆಚ್ಚಾರು ಗಣಪತಿ ಶೆಣೈ, ಹಾಗೂ ಮುರಳೀಧರ ಪ್ರಭು ವಗ್ಗ ಉಪಸ್ಥಿತರಿದ್ದರು.