ಪೂರ್ವಸಮಾಲೋಚನೆ ಸಭೆ
ಇದೇ ಮೇ ತಿಂಗಳ 20 ರಿಂದ 31ರ ವರೆಗೆ ದಕ್ಷಿಣ ಕನ್ನಡದ ವಿವಿಧ ಪುಣ್ಯಕ್ಷೇತ್ರಗಳಿಗೆ ಹಾಗೂ ಸಮಾಜ ಬಾಂಧವರ ಸಮ್ಮುಖದಲ್ಲಿ ಆರ್ಶೀವಚನ ನೀಡಲು ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಮಠ್ ಸಂಸ್ಥಾನ ದಾಭೋಲಿಯವರು ಪ್ರಥಮ ಬಾರಿಗೆ ಜಿಲ್ಲೆಗೆ ಚಿತ್ತೈಸಲಿರುವರು.
ಆ ಪ್ರಯುಕ್ತ ತಾ. 21.05.2017ರಂದು ಮಂಗಳೂರಿನ ಸಂಘನಿಕೇತನದಲ್ಲಿ ಸಮಸ್ತ ಕುಡಾಳ್ ದೇಶದ ಆದ್ಯಗೌಡ್ ಬ್ರಾಹ್ಮಣ ಸಮಾಜ ಬಾಂಧವರ ನೇತೃತ್ವದಲ್ಲಿ ಶ್ರೀಗಳನ್ನು ಅದ್ದೂರಿಯಿಂದ ಸ್ವಾಗತಿಸುವ ಕಾರ್ಯಕ್ರಮ ಜರಗಲಿರುವುದು 20 ವರ್ಷಗಳ ಬಳಿಕ ಶ್ರಿ ಮಠದಿಂದ ಪಾದುಕೆಗಳೊಂದಿಗೆ ಶ್ರೀ ಸ್ವಾಮೀಜಿಯವರು ದ.ಕ. ಜಿಲ್ಲೆಗೆ ಆಗಮಿಸುತ್ತಿರುವ ಈ ಶುಭ ಸಂದರ್ಭವನ್ನು ಸಕಲ ಸಮಾಜ ಬಾಂಧವರು ಯಶಸ್ವಿಗೊಳಿಸಬೇಕಾಗಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದೆ.
ಪೂರ್ವಭಾವಿ ಸಮಾಲೋ ಚನಾ ಸಭೆ: ಶ್ರೀಮಠ್ ದಾಭೋಲಿ ಸಂಸ್ಥಾನದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ಶ್ರೀ ದತ್ತಾ ನಂದ ಸರಸ್ವತಿ ಸ್ವಾಮೀಜಿಯವ ರು ದಿನಾಂಕ 20.05.2017 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಚಿತ್ತೈಸಲಿದ್ದು ಜಿಲ್ಲೆಯಾದ್ಯಂತ ಹತ್ತು ದಿನಗಳ ವಿಶೇಷ ಕಾರ್ಯಕ್ರಮ ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದಾರೆ. ಈ ಕಾರ್ಯ ಕ್ರಮದ ಯಶಸ್ಸಿಗಾಗಿ ಪುರೋ ಹಿತ ವೃಂದದವರ ಆಶೀರ್ವಾದ ದೊಂದಿಗೆ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಸಮಾಜ ಬಾಂಧವರ ಸಭೆಯನ್ನು ದಿನಾಂಕ 02.04.2017ರಂದು ಕಲ್ಲಡ್ಕದ ಶ್ರೀ ಮೀನಾಕ್ಷಿ ಕಲಾಮಂದಿರದ ಸಭಾಭವನದಲ್ಲಿ ಸಭೆ ನಡೆಸಲಾಯಿತು.
ಗುರುಗಳಿಗೆ ವಂದಿಸಿ, ಅವರ ಆಶೀರ್ವಾದ ಪಡೆದು ಜೀವನ ನಡೆಸುವುದು ನಮ್ಮ ಧರ್ಮವಾಗಿದೆ. ಈ ಹಿಂದೆ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಶ್ರೀ ಶ್ರೀ ಶ್ರೀ ದತ್ತಾನಂದ ಸ್ವಾಮೀಜಿಗಳು ಹಾಗೂ ಈಗಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಪ್ರದ್ಯುಮ್ನಾನಂದ ಸ್ವಾಮೀಜಿ ಗಳು ಜಿಲ್ಲೆಗೆ ಆಗಮಿಸಿ ಸಮಾಜ ಬಾಂಧವರಿಗೆ ಆಶೀರ್ವದಿಸಿದ್ದರು. ಇದರ ಫಲವಾಗಿ ಸಮಾಜವು ಇಂದು ಸಂಘಟಿತವಾಗಿ ಅಭಿವೃದ್ಧಿ ಹೊಂದಿದೆ. ಈಗ ಕಿರಿಯ ಸ್ವಾಮೀಜಿಗಳಾದ ದತ್ತಾನಂದ ಸರಸ್ವತಿ ಸ್ವಾಮೀಜಿಯವರು, ಶ್ರೀ ಶ್ರೀ ಶ್ರೀ ಪ್ರದ್ಯುಮ್ನಾನಂದ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪಾದುಕೆಗಳ ಜತೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಪ್ರೇರಣೆ ಮತ್ತು ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಈ ಸಂದರ್ಭದಲ್ಲಿ ಮಠದ ಸಂಪ್ರದಾಯದಂತೆ ಸ್ವಾಮೀಜಿಗಳ ಅನುಷ್ಟಾನಕ್ಕೆ ಎಲ್ಲಾ ಅನುಕೂಲಗಳನ್ನು ಕಲ್ಪಿಸಿ ಕೊಟ್ಟು, ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾಗುವಂತೆ ಸಮಾಜ ಬಾಂಧವರಿಗೆ ಸಭೆಯ ಉದ್ದೇಶವನ್ನು ಶ್ರೀ ಜಯರಾಂ ಭಟ್ ತಿಳಿಸಿದರು.
ಪುರೋಹಿತರಾದ ನಿತ್ಯಾನಂದ ಭಟ್ ಮಾತನಾಡುತ್ತಾ ಸ್ವಾಮೀಜಿಯವರ ಭೇಟಿಯ ಸಂದರ್ಭದಲ್ಲಿ ಪುರೋಹಿತ ವೃಂದವು ಎಲ್ಲಾ ರೀತಿಯ ಸಹಕಾರ ಕೊಟ್ಟು, ಸ್ವಾಮೀಜಿಯವರ ದಿನ ನಿತ್ಯದ ಅನುಷ್ಟಾನ ಮತ್ತು ಇತರ ವೈದಿಕ ಕಾರ್ಯಕ್ರಮಗಳ ಜವಾಬ್ದಾರಿಗಳನ್ನು ನಿರ್ವಹಿಸುತ್ತೇವೆ ಎಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನಕ್ಕೆ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪುರೋಹಿತರ ನಿಯೋಗವು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರಿಂದ ಪಡೆದ ನಿತ್ಯ ಅನುಷ್ಠಾನದ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ಸ್ವಾಗತ ಸಮಿತಿ ಹಾಗೂ ವಿವಿಧ ಉಪ-ಸಮಿತಿಗಳನ್ನು ರಚಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ರಮೇಶ್ ನಾಯಕ್ ಮೈರಾ, ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನಾರಾಯಣ ನಾಯಕ್ ದಂಡೆಮಾರ್, ಪ್ರೇಮ್‍ನಾಥ್ ನಾಯಕ್ ಸೋಲ್ತಾಡಿ, ರಾಜಾರಾಮ್ ನಾಯಕ್ ಕಲಾಯಿ, ವಾಸುದೇವ ನಾಯಕ್ ಇನೋಳಿ, ಮತ್ತು ಸುಧಾಕರ್ ಶೆಣೈ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ವಿಜಯಲಕ್ಷ್ಮೀ ನಾಯಕ್, ಕಾರ್ಯದರ್ಶಿಯಾಗಿ ಡಾ. ಸುಚೇತ ಶೆಣೈ, ಗುಂಡೂರು ರಮೇಶ್ ನಾಯಕ್, ಚಂದ್ರಶೇಖರ್ ಪ್ರಭು ಹೆನ್ನೂರು, ಕೋಶಾಧಿಕಾರಿಯಾಗಿ ಮೋಹನ್ ಪ್ರಭು ಅಡ್ಯೆ, ಸಲಹೆಗಾರರಾಗಿ ನಿತ್ಯಾನಂದ್ ಭಟ್, ಡಾ. ಉಮಾನಾಥ ಶೆಣೈ, ವೇದಮೂರ್ತಿ ಸಂಜೀವ ಭಟ್, ಗೌರವಾಧ್ಯಕ್ಷರಾಗಿ ಎಮ್.ಎಮ್. ಪ್ರಭು, ಡೆಚ್ಚಾರ್ ಗಣಪತಿ ಶೆಣೈ, ಸದಾಶಿವ ರಾವ್, ಬೆಂಗಳೂರು ಹಾಗೂ ಅನೇಕ ಪದಾಧಿಕಾರಿಯರನ್ನು ಒಳಗೊಂಡ ಸಮಿತಿಯನ್ನು ರಚಿಸ ಲಾಯತು. ದಿನಾಂಕ 20-05-2017 ರಿಂದ 30-05-2017 ರವರೆಗಿನ ಸ್ವಾಮೀಜಿಯವರ ಕಾರ್ಯಕ್ರಮಗಳ ಪಟ್ಟಿಯನ್ನು ನಿಗದಿಪಡಿಸಲಾಯಿತು.
ಸ್ವಾಮೀಜಿಯವರ ಪಾದ್ಯಪೂಜೆ, ಮಂತ್ರಾಕ್ಷತೆ ಮತ್ತು ಆಶೀರ್ವಚನ ಕಾರ್ಯಕ್ರಮಗಳು ಕ್ರಮವಾಗಿ, ಮಂಗಳೂರು, ಬ್ರಿಂಡೇಲ್-ಒಡ್ಡೂರು, ಪುಂಜಾಲ್ಕಟ್ಟೆ, ವಾಮದಪದವು-ಕರ್ಪೆ-ಸಿದ್ಧಕಟ್ಟೆ, ಮುಲಾರು, ಪುತ್ತೂರು, ಕೂಡಿಬೈಲು ಮತ್ತು ಕಲ್ಲಡ್ಕ ಮುಂತಾದುವುಗಳಲ್ಲಿ ನಡೆಸುವುದಾಗಿ ತೀರ್ಮಾನಿಸ ಲಾಯಿತು. ಸಂಪನ್ಮೂಲ ಕ್ರೋಢಿಕರಣ ಹಾಗೂ ಸಾಯಂಕಾಲದ ಹೊತ್ತಿನಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಸುವ ಬಗ್ಗೆ ಚರ್ಚಿಸಲಾಯಿತು. ಸಭೆಯ ಆರಂಭದಲ್ಲಿ ಪುರೋಹಿತ ವೃಂದ ದವರು ಪ್ರಾರ್ಥಿಸಿದರು. ರಮೇಶ್ ನಾಯಕ್ ಸ್ವಾಗತಿಸಿ, ಪ್ರತಿಷ್ಠಾನದ ಪದಾಧಿಕಾರಿ ಪ್ರಭಾಕರ್ ನಾಯಕ್ ಕರ್ಪೆ ವಂದಿಸಿದರು.
ಆಮಂತ್ರಣ ಪತ್ರಿಕೆ ಅನಾವರಣ
ದಿನಾಂಕ 05.05.17ರಂದು ಕಲ್ಲಡ್ಕದ ಮೀನಾಕ್ಷಿ ಕಲಾ ಮಂದಿರದಲ್ಲಿ ನಡೆದ ಜಿಲ್ಲಾ ಸ್ವಾಗತ ಸಮಿತಿಯ ಸಭೆಯಲ್ಲಿ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು, ದ.ಕ.ಜಿಲ್ಲೆಗೆ ಚಿತ್ತೈಸುವ ಆಮಂತ್ರಣ ಪತ್ರಿಕೆಯನ್ನು ಅನಾವರಣ ಗೊಳಿಸಲಾಯಿತು.
ದಿನಾಂಕ 03.05.2017 ರಂದು ಶ್ರೀ ಮಠ್ ಸಂಸ್ಥಾನ್ ದಾಬೋಳಿ ಮಠದಲ್ಲಿ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು, ದ.ಕ.ಜಿಲ್ಲೆಗೆ ಚಿತ್ತೈಸುವ ಆಮಂತ್ರಣ ಪತ್ರಿಕೆಯನ್ನು ಮಠಾಧೀಶರಾದ ಶ್ರೀ ಶ್ರೀ ಶ್ರೀ ಪ್ರದ್ಯುಮ್ನಾನಂದ ಸ್ವಾಮೀಜಿಯವರು, ಮಠದ ಟ್ರಸ್ಟಿಗಳ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಅನಾವರಣ ಗೊಳಿಸಿದರು.