ಋಗುಪಾಕರ್ಮ 2015
‘’ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ವತಿಯಿಂದ ಋಗುಪಾಕರ್ಮ ದಿನದಂದು ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಪುರೋಹಿತರಿಗೆ ಗುರುನಮನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪುರೋಹಿತರಾದ ಶ್ರೀ ಪ್ರಶಾಂತ್ ಭಟ್ ಇರುವೈಲು ಮತ್ತು ಶ್ರೀ ಜಯರಾಮ್ ಭಟ್ ಕೂಡಿಬೈಲು ಗುರುವಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರತಿಷ್ಠಾನದ ಅಧ್ಯಕ್ಷರಾದ ಡಿ. ರಮೇಶ್ನಾಯಕ್, ಕಾರ್ಯಾಧ್ಯಕ್ಷರಾದ ಸಂಜಯ್ ಪ್ರಭು ಮತ್ತು ಸ್ಥಾಪಕ ಪ್ರಾಯೋಜಕರಾದ ಎಂ. ಎಂ. ಪ್ರಭು , ಡಾ|. ಸುಚೇತ ಸುಧಾಕರ ಶೆಣೈ , ಡಾ| ವಿಜಯಲಕ್ಷ್ಮಿ ನಾಯಕ್, ಸುಚಿತ್ರ ರಮೇಶ್ ನಾಯಕ್, ಸಂಜೀವ ಸಾಮಂತ್ , ರವೀಂದ್ರ ನಾಯಕ್ ಶಕ್ತಿನಗರ, ಡೆಚ್ಚಾರು ಗಣಪತಿ ಶೆಣೈ, ಡಾ|.ಪ್ರವೀಣ್ಚಂದ್ರ ನಾಯಕ್, ಸಂಜೀವ ಸಾಮಂತ್, ಮುರಳೀಧರ್ ಪ್ರಭು ವಗ್ಗ, ರತ್ನಾಕರ್ ಸಾಮಂತ್, ಬೊಲ್ಡೆ ಉಪೇಂದ್ರ ನಾಯಕ್, ಗೋಪಾಲ್ ಸಾಮಂತ್, ರವೀಂದ್ರ ಪ್ರಭು ಮಳಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜದ ಪುರೋಹಿತರಿಗೆ ಕಲ್ಲಚ್ಚು ಪ್ರಕಾಶನದ ಪುಸ್ತಕವನ್ನು ಮಹೇಶ್ ನಾಯಕ್ರವರು ವಿತರಿಸಿದರು ಹಾಗೂ ವೀರವೆಂಕಟೇಶ ಕ್ರಿಕೆಟರ್ಸ್ ಬಳಗವು ಕಾರ್ಯಕ್ರಮಕ್ಕೆ ಸಹಕರಿಸಿದರು.