ಋಗುಪಾಕರ್ಮ 2017

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದಿಂದ ವಿವಿಧ ಕಡೆಗಳಲ್ಲಿ ಋಗುಪಾಕರ್ಮ ಆಚರಣೆ

ಪ್ರತಿಷ್ಠಾನದ ವತಿಯಿಂದ ಮಂಗಳೂರು,ವಗ್ಗ, ಬೆಳ್ತಂಗಡಿ ಮತ್ತು ವಾಮದಪದವು ಮುಂತಾದ ಕಡೆಗಳಲ್ಲಿ ಋಗುಪಾಕರ್ಮ ಕಾರ್ಯಕ್ರಮವು ಜರುಗಿತು.

ಮಂಗಳೂರು: ಋಗುಪಾಕರ್ಮ ಆಚರಣೆ

ಮಂಗಳೂರು: ದಿನಾಂಕ 28.07.2017ನೇ ಶುಕ್ರವಾರದಂದು ಬೆಳಗ್ಗೆ ಗಂಟೆ 7 ರಿಂದ ಮರೋಳಿ ಸಂಜೀವ ಸಾಮಂತರ ಮನೆಯಲ್ಲಿ ಸಮಾಜದ ಪುರೋಹಿತರಾದ ಶ್ರೀ ಪ್ರಶಾಂತ್ ಭಟ್, ಕಟ್ಟಣಿಗೆ ಇವರ ನೇತೃತ್ವದಲ್ಲಿ ಶಾಸ್ತ್ರ ವಿಧಿಯನುಸಾರವಾಗಿ ಸ್ವ-ಸಮಾಜ ಬಾಂಧವರ ಸಾಮೂಹಿಕ ಋಗುಪಾಕರ್ಮ ಕಾರ್ಯಕ್ರಮವು ನೆರವೇರಿತು. ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್ ಮೈರಾ, ಕಾರ್ಯಾಧ್ಯಕ್ಷ ಸಂಜಯ್ ಪ್ರಭು, ಅನಂತ್ ಪ್ರಭು ಮರೋಳಿ, ಭಾಸ್ಕರ ಪ್ರಭು ಕುಲಶೇಖರ್, ಗೋಪಾಲ್ ಶೆಣೈ ಕೊಡಂಗೆ, ವಿಜಯ್ ಶೆಣೈ ಕೊಡಂಗೆ, ರವೀಂಧ್ರ ನಾಯಕ್ ಶಕ್ತಿನಗರ ಮುಂತಾದ ಪದಾಧಿಕಾರಿಗಳು ಪಾಲ್ಗೋಂಡಿದ್ದರು. ಪೌರೋಹಿತ್ಯದಲ್ಲಿ ನವೀನ್ ಭಟ್ ಪದ್ರೆಂಗಿ ಮತ್ತು ಸಂದೇಶ್ ಭಟ್ ಇರುವೈಲು ಸಾಥ್ ನೀಡಿದರು.

 ವಗ್ಗ: ಋಗುಪಾಕರ್ಮ ಆಚರಣೆ

ಜು. 28ರಂದು ವಗ್ಗ ಶಾರದಾಂಭ ಭಜನಾ ಮಂದಿರದಲ್ಲಿ ಶ್ರೀ ಪೂರ್ಣಾನಂದ ಸೇವಾ   ಪ್ರತಿಷ್ಠಾನ    ವಗ್ಗ    ವಲಯ   ವತಿಯಿಂದ   ಸಮಾಜದ   ಪುರೋಹಿತರಾದ ಶ್ರೀ ಜಯರಾಮ ಭಟ್ ಮತ್ತು ಶ್ರೀ ಹರೀಶ್ ಭಟ್ ಕೊಲ್ಯ ಇವರ ನೇತೃತ್ವದಲ್ಲಿ ಸಾಮೂಹಿಕ ಋಗುಪಾಕರ್ಮ ಕಾರ್ಯಕ್ರಮವು ನೆರವೇರಿತು.

   

ವಾಮದಪದವು: ಋಗುಪಾಕರ್ಮ ಆಚರಣೆ

ದಿನಾಂಕ 28-7-2017ನೇ ಶುಕ್ರವಾರದಂದು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಸಮುದಾಯ ಭವನದಲ್ಲಿ ಎಸ್.ಪಿ.ಎಸ್.ಪಿ. ವಾಮದಪದವು ವಲಯ ವತಿಯಿಂದ ಸಮಾಜದ ಪುರೋಹಿತರಾದ ಶ್ರೀ ವಸಂತ ಭಟ್ ಕಿನ್ನಾಜೆ ಮತ್ತು ಶ್ರೀ ಶಿವರಾಯ ಭಟ್ ವಾಮದಪದವು ಇವರ ನೇತೃತ್ವದಲ್ಲಿ ಸಾಮೂಹಿಕ ಋಗುಪಾಕರ್ಮ ಜರುಗಿತು.