ಕಾಸರಗೋಡು ಚಿನ್ನಾ 60ರ ತಾರಾಲೋಕ ಚಿತ್ರೋತ್ಸವಕ್ಕೆ ಚಾಲನೆ
ಪ್ರಸಿದ್ಧ ರಂಗಕರ್ಮಿ, ನಿರ್ದೇಶಕ, ನಟ ಕಾಸರಗೋಡು ಚಿನ್ನಾರವರ 60ರ ಸಂಭ್ರಮದ ತಾರಾಲೋಕ ಕಾರ್ಯಕ್ರಮದ ಅಂಗವಾಗಿ, ದಿನಾಂಕ 22.12.2017ರಂದು 3 ದಿನಗಳ ಚಲನಚಿತ್ರೋತ್ಸವವನ್ನು ಮಂಗಳೂರು ನಗರದ ಸಿಟಿ ಸೆಂಟರ್ ಮಾಲ್ ನ ಸಭಾಂಗಣದಲ್ಲಿ ಚಲನಚಿತ್ರ ಕಲಾವಿದರಾದ ಶ್ರೀ ಸುಂದರ್ ರಾಜ್ ಚಾಲನೆ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ವಿ. ಮನೋಹರ್, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಶ್ರೀಧರ್, ರಿಚಾರ್ಡ್ ಕ್ಯಾಸ್ಟಲಿನೋ, ನಾ.ದಾ.ಶೆಟ್ಟಿ, ರಾಜೇಶ್ ಬ್ರಹ್ಮಾವರ್, ಜಗನ್ನಾಥ್ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಸ್ವಾಗತಿಸಿ, ಪ್ರತಿಷ್ಠಾನದ ಪ್ರ. ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಕಾಸರಗೋಡು ಚಿನ್ನಾ 60ರ ತಾರಾಲೋಕ ಸಂಭ್ರಮದ 3ನೇದಿನದ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಪರವಾಗಿ ಚಿನ್ನಾ ದಂಪತಿಯರಿಗೆ ಅಭಿನಂದಿಸಲಾಯಿತು.