ಕು.ದೇ.ಆ.ಗೌ. ಬ್ರಾಹ್ಮಣ ಸಂಘ (ರಿ.) : ಮಹಾಸಭೆ
24.07.2016ರಂದು, ಪ್ರತಿಷ್ಠಾನದ ಪದಾಧಿಕಾರಿಗಳು, ದ.ಕ.ಜಿಲ್ಲಾ ಕು.ದೇ.ಆ.ಗೌ. ಬ್ರಾಹ್ಮಣ ಸಂಘದ ಮಹಾಸಭೆಯಲ್ಲಿ ಬಾಗವಹಿಸಿ, ನೂತನವಾಗಿ ರಚಿಸಿದ ಸಮಿತಿಯಲ್ಲಿ ನಮ್ಮ ಪದಾಧಿಕಾರಿಗಳು ಆಯ್ಕೆಗೊಂಡರು.
ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ ಸಂಘ (ರಿ.) ರಿ.ಸಂ. 18/1961 ದ.ಕ. ಜಿಲ್ಲೆ ಇದರ ವಾರ್ಷಿಕ ಮಹಾಸಭೆ ಅ. 29ರಂದು ಬಿ.ಸಿ. ರೋಡಿನ ಶ್ರೀ ರಕ್ತೇಶ್ವರಿ ದೇವಿ ಸಭಾಂಗಣದಲ್ಲಿ ಸಂಜೆ 3.00ಕ್ಕೆ ಡೆಚ್ಚಾರು ಶ್ರೀ ಗಣಪತಿ ಶೆಣೈರವರ ಅಧ್ಯಕ್ಷತೆಯಲ್ಲಿ ನೇರಳಕೋಡಿ ಶ್ರೀ ಗೋಪಾಲ ಪ್ರಭುಗಳ ಪ್ರಾರ್ಥನೆಯೊಂದಿಗೆ ಜರಗಿತು.
ಕಾರ್ಯದರ್ಶಿ ಶ್ರೀ ವೆಂಕಟ್ರಾಯ ಪ್ರಭು ಪೂರ್ಲಪಾಡಿ ಇವರು ಮಂಡಿಸಿದ ವಾರ್ಷಿಕ ವರದಿಯನ್ನು ಮಂಜೂರು ಮಾಡಲಾಯಿತು. ಈ ತನಕದ ಪರಿಶೋಧಿತ ಲೆಕ್ಕಪತ್ರಗಳನ್ನು ಪರಿಶೀಲಿಸಿ ಸರ್ವಾನುಮತದಿಂದ ಮಂಜೂರು ಮಾಡಲಾಯಿತು. ಮಂದಿನ ಸಾಲಿನ (2017-18) ರ ಯೋಜನೆಗಳಾದ 1. ಉಚಿತ ಆರೋಗ್ಯ ತಪಾಸಣಾ ಶಿಬಿರ 2. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ 3. ಸ್ವಸಮಾಜದ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸುವುದರ ಮತ್ತು 4. ವಗ್ಗ ಮಂಗಳಧಾಮದಲ್ಲಿರುವ ಸಂಘದ ಸ್ತಿರಾಸ್ತಿಯಲ್ಲಿರುವ ಕಟ್ಟಡವನ್ನು ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ಮಾಡಲಾಯಿತು. ಮುಚ್ಲುಕೋಡಿ ಶ್ರೀ ಶಾಂತರಾಮ ಪ್ರಭುಗಳು ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿಗಳಾದ ಕಲಾೈ ಪ್ರವೀಣಚಂದ್ರ ನಾಯಕ್ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ನೆಕ್ಕಿಲಾರು ಶಿವರಾಮ ನಾಯಕ್, ಕಾರ್ಯದರ್ಶಿ ವೆಂಕಟ್ರಾಯ ಪ್ರಭು ಪೂರ್ಲಪಾಡಿ, ಜೊತೆ ಕಾರ್ಯದರ್ಶಿ ಪ್ರವೀಣಚಂದ್ರ ನಾಯಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳೀಧರ ಪ್ರಭು ವಗ್ಗ, ಉಪಾಧ್ಯಕ್ಷರುಗಳಾದ ಬೆಳ್ತಂಗಡಿ ತಾಲೂಕಿನ ದಯಾನಂದ ನಾಯಕ್, ಮಂಗಳೂರಿನ ಜಗದೀಶ ಶೆಣೈ ಮತ್ತು ಪುತ್ತೂರಿನ ಡಾ| ಶಿವಪ್ರಕಾಶ್ ಮಾನಡ್ಕ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ್ ನಾಯಕ್ ಮೈರಾ ಹಾಗೂ ಕಾರ್ಯದರ್ಶಿಯಾದ ಡಾ| ವಿಜಯಲಕ್ಷ್ಮೀ ನಾಯಕ್ ಉಪಸ್ಥಿತರಿದ್ದರು.