‘ತೀಸ್ ಕಾಣಿಯೋ’ ಪುಸ್ತಕ ಅನಾವರಣ
ತಾ. 09.12.2013ರಂದು ಮಂಗಳೂರು ಡೊಂಗರಕೇರಿಯ ಕೆನರಾ ಶಾಲೆಯ ಸಭಾಭವನದಲ್ಲಿ ಕಾಸರಗೋಡು ಚಿನ್ನಾರವರ ‘ತೀಸ್ ಕಾಣಿಯೋ’ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಉದಯವಾಣಿ ಪತ್ರಿಕೆಯ ಮನೋಹರ್ ಪ್ರಸಾದ್, ಕೊಡಿಯಾಲ್ ಖಬರ್ ಪತ್ರಿಕೆಯ ವೆಂಕಟೇಶ್ ಬಾಳಿಗ, ಕೊಂಕಣಿ ಅಧ್ಯಯನ ಪೀಠದ ಮುಖ್ಯಸ್ಥರಾದ ಹಂಗ್ಯೋ ಐಸ್ಕ್ರೀಂನ ಮಾಲಕರಾದ ಪ್ರದೀಪ್ ಶೆಣೈ, ಕವಿತಾ ಟ್ರಸ್ಟ್ ನ ಅಧ್ಯಕ್ಷ ವಿದ್ಯಾ ಕಾಮತ್, ಮುಂತಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ನಾಯಕ್, ಕಾರ್ಯಕ್ರಮ ನಿರೂಪಿಸಿದರು.