ತುಳು ಫಿಲ್ಮ್ ಫೆಸ್ಟಿವಲ್ – 2018
ತುಳು ಚಲನಚಿತ್ರ ನಿರ್ಮಾಪಕರ ಸಂಘ (ರಿ), ಮಂಗಳೂರು, ಇವರ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ, ‘ತುಳು ಫಿಲ್ಮ್ ಫೆಸ್ಟಿವಲ್ -2018’ ಕಾರ್ಯಕ್ರಮವನ್ನು ತಾ. 05.01.2018ರಂದು ರಿಂದ 10.01.2018ರವರೆಗೆ ಸಿಟಿ ಸೆಂಟರ್ ಮಾಲ್ ನ ಸಿನಿ ಪೊಲೀಸ್ ಹಾಗೂ ಡೊನ್ ಬಾಸ್ಕೊ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ಮಾಪಕರಾದ ಶ್ರೀ ವಿಜಯ ಕುಮಾರ್ ಕೊಡಿಯಾಲ್, ಶ್ರೀಮತಿ ರೂಪಲಕ್ಷ್ಮೀ ದಂಪತಿ, ನಿರ್ಮಾಪಕರಾದ ಶ್ರೀ ಬಾಲಕೃಷ್ಣ ಶೆಟ್ಟಿ, ಅಧ್ಯಕ್ಷರಾದ ಶ್ರೀ ರಾಜೇಶ್ ಬ್ರಹ್ಮಾವರ, ಪ್ರೇಮ್ ಶೆಟ್ಟಿ, ಮುಂಬೈ, ಸಚ್ಚಿನ್ ಉಪ್ಪಿನಂಗಡಿ, ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಡಾ. ವಿಜಯಲಕ್ಷ್ಮೀ ನಾಯಕ್ ಮುಂತಾದವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸುಮಾರು 47 ತುಳು ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.