ನಾಟ್ಯ ಕಲಾವಿದೆ ಕು| ಧನ್ಯಶ್ರೀ ರಂಗ ಪ್ರವೇಶ

ಬಿಸಿರೋಡು ಕೈಕುಂಜೆ ನಿವಾಸಿ ರಾಮ್‍ಗಣೇಶ್ ಪ್ರಭು ಮತ್ತು ಶ್ರೀಮತಿ ಶುಭಲಕ್ಷ್ಮೀ ಪ್ರಭುರವರ ಪುತ್ರಿ ಮತ್ತು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.)ಯ ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಶಿಷ್ಯೆ ಕು| ಧನ್ಯಶ್ರೀ ಪ್ರಭುರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಮಂಗಳೂರು ಪುರಭವನದಲ್ಲಿ ಆ. 6ರಂದು ಜರಗಿತು.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಪ್ರಧಾನ ಅರ್ಚಕ ವೇ|ಮೂ| ಲಕ್ಷ್ಮಿನಾರಾಯಣ ಅಸ್ರಣ್ಣ ಅವರು, ಧನ್ಯಶ್ರೀಯವರ ಕಲಾಪ್ರತಿಭೆಯನ್ನು ಶ್ಲಾಘಿಸಿ ಆಶೀರ್ವದಿಸಿದರು.

ಹಿರಿಯ ನಾಟ್ಯಗುರು ಶಾಂತಲಾ ಪ್ರಶಸ್ತಿ ಪುರಸ್ಕøತ ಉಳ್ಳಾಲ ಮೋಹನ ಕುಮಾರ್, ಕು| ಧನ್ಯಶ್ರೀಯವರ ಮೊದಲ ನೃತ್ಯಗುರು ವಿದೂಷಿ ವಿದ್ಯಾಮನೋಜ್, ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಪುರಸ್ಕøತ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಧರ್ಮಪತ್ನಿ ಸಂಗೀತಾ, ವಿದೂಷಿ ಪ್ರೀತಿಕಲಾ ಅವರು ಧನ್ಯಶ್ರೀಪ್ರಭುರವರ ಮನಪೂರ್ವಕವಾಗಿ ಶಿಷ್ಯೆಯನ್ನ ಹರಸಿದರು. ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್ ಮೈರಾ, ಸುಚಿತ್ರಾ ನಾಯಕ್ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶ್ರೀ ಪೂರ್ಣಾನಂದವಾಣಿ ಪತ್ರಿಕೆಯ ಸಂಪಾದಕಿ ಡಾ | ವಿಜಯಲಕ್ಷ್ಮೀ ನಾಯಕ್, ಡಾ| ಸುಚೇತ್ ಶೆಣೈ ಮತ್ತು ಶ್ರೀ ಸುಧಾಕರ ಶೆಣೈ ದಂಪತಿಗಳು, ಶ್ರೀ ಗಣೇಶ್ ಶೆಣೈ ಮರೋಳಿ, ಶ್ರೀ ರವೀಂದ್ರ ನಾಯಕ್ ಮತ್ತು ಅಕ್ಷತಾ ದಂಪತಿಗಳು, ವಗ್ಗ ಶ್ರೀ ಮುರಳೀಧರ ಪ್ರಭು ಉಪಸ್ಥಿತರಿದ್ದರು.