ಪ್ರತಿಭಾ ಸಂಭ್ರಮ-2017
ಪ್ರತಿಷ್ಠಾನದ ಮಂಗಳೂರು ವಲಯದಿಂದ ‘ಪ್ರತಿಭಾ ಸಂಭ್ರಮ-2017’
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಮಂಗಳೂರು ವಲಯದ ವತಿಯಿಂದ ‘ಪ್ರತಿಭಾ ಸಂಭ್ರಮ-2017’ ಸಾಂಸ್ಕ್ರತಿಕ ಕಾರ್ಯಕ್ರಮವು ದಿನಾಂಕ 03.12.2017ರಂದು ಶ್ರೀ ವೀರ ನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು. ಕು ಸಾನ್ವಿ ಗಣೇಶ್ ಪ್ರಭು, ಶಕ್ತಿನಗರ (ನೃತ್ಯ), ಕು. ಪ್ರಕೃತಿ ಪ್ರಭು, ಕುಲಶೇಖರ್ (ನೃತ್ಯ), ಕು. ದಿಶಾ ಮತ್ತು ಕು. ವೀಕ್ಷಾ ಶೆಣ್ಯೆ ಮರೋಳಿ (ನೃತ್ಯ), ಮಾ. ವೇದ್ಯ ವಿನಯ್ ಸಾಮಂತ್ (ದೇಶ ಭಕ್ತಿಗೀತೆ ಹಾಡು), ಮಾ. ನವಲ್ ಕಿಶೋರ್ ನಾಯಕ್ (ಶ್ಲೋಕ), ಮಾ. ತುಷಾರ್ ಸಾಮಂತ್ (ನೃತ್ಯ), ಕು. ಅನಘ ರತ್ನ ರಮೇಶ್ ನಾಯಕ್ (ನೃತ್ಯ) ಹೀಗೆ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು. ಮಾತ್ರವಲ್ಲದೆ ಶ್ರೀ ಅನಂತ್ ಪ್ರಭು, ಬಿಇ್ವ್ಶ ಇವರ ಮುಂದಾಳುತ್ದಲ್ಲಿ ಮಕ್ಕಳಿಗೆ ಹಾಗೂ ಹಿರಿಯರಿಗೆ ಆಟ-ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮವು ಶ್ರೀಮತಿ ದೀಪ ಪ್ರಭು ಮತ್ತು ಶ್ರೀ ವರುಣ್ ಪ್ರಭು, ಬೆಂಗಳೂರು, ಇವರ ಮದುವೆ ಪ್ರಯುಕ್ತ, ಶ್ರೀ ಸತೀಶ್ ಶೆಣ್ಯೆ ಮರೋಳಿಯವರ ಪ್ರಾಯೋಜಕತ್ವದಲ್ಲಿ, ಶ್ರೀ ಶಿವಪ್ರಸಾದ್ ನಾಯಕ್, ಉದ್ದಮಜಲು, ಮತ್ತು ಶ್ರೀ ವಿಠಲ್ ಶೆಣ್ಯೆ, ಬೋಳಂಗಡಿಯವರ ಮುಂದಾಳುತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.
ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಪ್ರತಿಷ್ಠಾನದ ಮೂಲ ಉದ್ದೇಶ ಹಾಗೂ ಕಾರ್ಯ ವೈಖರಿಗಳನ್ನು ಸಭೆಗೆ ತಿಳಿಸಿದರು. ಶ್ರೀಮತಿ ಸತ್ಯವತಿ ವಿಷ್ಣುಮೂರ್ತಿ ಪ್ರಭು, ಶ್ರೀಮತಿ ಗೀತಾ ಗೋಪಾಲ್ ನಾಯಕ್, ಶ್ರೀಮತಿ ದಿವ್ಯಾ ಸಾಮಂತ್, ಮತ್ತು ಶ್ರೀಮತಿ ಲಕ್ಷ್ಮೀ ವೆಂಕಟೇಶ್ ಪ್ರಭು ಕಾರ್ಯಕ್ರಮಕ್ಕೆ ವಿಶೇಷವಾಗಿ ಬೆಂಗಳೂರಿನ ವಕೀಲರಾದ ಶ್ರೀ ಕೆ. ಜಿ. ನಾಯಕ್, ಮುಂಬೈನ ಶ್ರೀ ಅನಿಲ್ ಅಚ್ಯುತ್ ನಾಯಕ್, ಶ್ರೀ ರಾಜೇಂದ್ರ ನಾಯಕ್, ಐಕಾನ್ ಇಂಜಿನಿಯರಿಂಗ್ ವಕ್ರ್ಸ್, ಬೆಂಗಳೂರು ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಂಗಳೂರು ವಲಯ ಅಧ್ಯಕ್ಷರಾದ ಶ್ರೀ ದಿವಾಕರ್ ಶೆಣ್ಯೆ ಮರೋಳಿ ವಂದಿಸಿದರು. ಶ್ರೀಮತಿ ದಿವ್ಯ ವಿನಯ್ ಸಾಮಂತ್ ಕಾರ್ಯಕ್ರಮ ನಿರ್ವಹಿಸಿದರು.