ವೃತ್ತಿ ಮಾರ್ಗದರ್ಶನ 2017

ದಿನಾಂಕ 14.04.2017 ರಂದು ಕಲ್ಲಡ್ಕದ ಮೀನಾಕ್ಷಿ ಕಲಾ ಮಂದಿರದಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾಲೇಜು ಸಂತ ಆಲೋಷಿಯಸ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರು ಪ್ರೋ. ರೋನಾಲ್ಡ್ ಪಿಂಟೋ, ಇವರು 10ನೇ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ‘ವೃತ್ತಿ ಮಾರ್ಗದರ್ಶನ’ ಕುರಿತು ತಿಳಿಸಿದರು.

ವೃತ್ತಿ ಮಾರ್ಗದರ್ಶನ ಉದ್ಯೋಗಂ ಮನುಷ್ಯ ಲಕ್ಷಣಂ – ಶ್ರೀ ರೋನಾಲ್ಡ್ ಪಿಂಟೋ

‘ವಿದ್ಯೆ,ಬುದ್ಧಿ ಮತ್ತು ಉದ್ಯೋಗ’ ಈ ಮೂರು ಅಂಶಗಳೂ ತ್ರಿಮೂರ್ತಿಗಳಂತೆ ಪ್ರತಿಯೊಬ್ಬರೂ ಉನ್ನತ ಜೀವನ ನಡೆಸುವಲ್ಲಿ ಪ್ರಭಾವ ಬೀರುವ ಅಂಶಗಳಾಗಿವೆ ಇಂದಿನ ಕಾಲಮಾನಕ್ಕೆ ತಕ್ಕಂತೆ ‘ಉದ್ಯೋಗಂ ಮನುಷ್ಯ ಲಕ್ಷಣಂ’ ಎಂದು ಬದಲಿಸಿರುವುದು ಅರ್ಥಪೂರ್ಣವಾಗಿದೆ ಪ್ರತಿಯೊಬ್ಬರೂ, ತಮ್ಮ ಜೀವನದಲ್ಲಿ ಉನ್ನತವಾದ ಹುದ್ದೆಯನ್ನು ಪಡೆಯಬೇಕೆಂಬ ಆಸೆಯನ್ನು ಹೊಂದಿರುತ್ತಾರೆ ಇದನ್ನು ನನಸು ಮಾಡಲು ವಿದ್ಯಾರ್ಥಿಗಳು 10ನೇ ತರಗತಿ, ಪದವಿಪೂರ್ವ ಹಂತದಲ್ಲಿ ಯಾವ ವಿಷಯಗಳನ್ನು ಆಯ್ಕೆ ಮಾಡಬೇಕು ? ಎನ್ನುವ ಬಗ್ಗೆ ಮಾಹಿತಿ ಪಡೆದು,ಪದವಿ ಶಿಕ್ಷಣವನ್ನು ಮುಂದುವರಿಸುವುದು ಅತ್ಯಗತ್ಯ ಎಂದು ಮಂಗಳೂರಿನ ಪ್ರತಿಷ್ಠಿತ ಕಾಲೇಜು ಸಂತ ಅಲೋಷಿಯಸ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರಾದ ರೋನಾಲ್ಡ್ ಪಿಂಟೋ ತಿಳಿಸಿದರು. ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ). ಮತ್ತು ಪ್ರತಿಷ್ಠಾನದ ವಗ್ಗ ವಲಯ ಸಮಿತಿಯವರು ಏ. 14ರಂದು ಶ್ರೀ ಮೀನಾಕ್ಷಿ ಮಂದಿರ ಕಲ್ಲಡ್ಕದಲ್ಲಿ 10ನೇ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹಮ್ಮಿಕೊಂಡ ‘ವೃತ್ತಿ ಮಾರ್ಗದರ್ಶನ’ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಿಳಿಸಿದರು.

ಶಿಕ್ಷಣ ಪಡೆಯುವ ಜತೆಗೆ, ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದು ಅನಿವಾರ್ಯವಾಗಿದೆ. ಸರಕಾರಿ ಹುದ್ದೆಗಳನ್ನು ಪಡೆಯಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದು ಕಡ್ಡಾಯವಾಗಿದೆ. ಇದಕ್ಕೆ ಪೂರ್ವಸಿದ್ಧತೆ ಯಾವ ರೀತಿ ಮಾಡಬೇಕೆಂದು ತಿಳಿದು ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿದುಕೊಳ್ಳಬೇಕು. ‘ಪ್ರತಿ ದಿನಾ ವಾರ್ತಾ ಪತ್ರಿಕೆಯನ್ನು ಜ್ಞಾನ ಪಡೆಯುವ ಉದ್ದೇಶದಿಂದ ಓದಬೇಕು’ ಎಂದು ತಮ್ಮ ಅಬಿಪ್ರಾಯ ವ್ಯಕ್ತಪಡಿಸಿದರು. ದ.ಕ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಬಿರದಲ್ಲಿ ಭಾಗವಹಿಸಿ, ಮಾಹಿತಿಯನ್ನು ಪಡೆದುಕೊಂಡರು. ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್ ಸ್ವಾಗತಿಸಿ, ವಗ್ಗ ಪ್ರತಿಷ್ಠಾನದ ವಲಯ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಮಾತಿಬೆಟ್ಟು ವಂದಿಸಿದರು. ಡಾ| ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.