ಶ್ರೀ ಲಕ್ಮ್ಷೀ ವೆಂಕಟರಮಣ ದೇವಸ್ಥಾನ ಕಶೆಕೋಡಿ
ಶ್ರೀ ಲಕ್ಮ್ಷೀ ವೆಂಕಟರಮಣ ದೇವಸ್ಥಾನ ಕಶೆಕೋಡಿ
ಸಭಾಕಾರ್ಯಕ್ರಮ
ಶ್ರೀ ಕಶೆಕೋಡಿ ಶ್ರೀ ಲಕ್ಮೀ ವೆಂಕಟ್ರಮಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ – ಧಾರ್ಮಿಕ ಸಭೆ
ಹಿಂದೂ ಸಂಸ್ಕೃತಿ ಜಗತ್ತಿಗೆ ಮಾದರಿ: ಪದ್ಮನಾಭ ಕೊಟ್ಟಾರಿ
‘ಹಿಂದೂ ಸಂಸ್ಕೃತಿ ಜಗತ್ತಿಗೆ ಮಾದರಿ. ನಮ್ಮಲ್ಲಿ ಪುರುಷ-ಮಹಿಳೆ ಎಂಬ ಭೇಧ-ಭಾವವಿಲ್ಲ. ಸಮಾನತೆ ಧರ್ಮದ ನೆಲೆಗಟ್ಟು. ಕಾಲಾನುಕ್ರಮದಲ್ಲಿ ಬಂದಿದ್ದ ಕಟ್ಟುಪಾಡುಗಳು ಸಾಮಾಜಿಕ ಕ್ಷೋಭೆಗಳಿಂದ ಸಮಾಜದಲ್ಲಿ ಅನೇಕ ಒಡಕುಗಳಿಗೆ ಕಾರಣವಾಯಿತು. ಆದರೂ ಆಧುನಿಕ ಸಮಾಜದಲ್ಲಿ ಸ್ತ್ರೀ – ಪುರುಷ ಭಿನ್ನತೆ ಕಾಣುತ್ತಿಲ್ಲ. ಮಹಿಳೆ ಮನೆಯ ದೀಪ. ಕುಟುಂಬದ ನಿರ್ವಹಣೆ ತಾಯಿಯ ಸ್ಥಾನದಲ್ಲಿದ್ದ ಮಹಿಳೆಗೆ ಸಲ್ಲುತ್ತದೆ. ಸಂಸ್ಕೃತಿ ಬೆಳೆದು ಬರುವುದು ತಾಯಿಯಿಂದ. ಮಕ್ಕಳು ಸಮಾಜದ ಬಳುವಳಿಯಾಗಲು ಮಾತೆಯೇ ಕಾರಣ. ಇತಿಹಾಸ ಪುರುಷರ ಹಿಂದೆ, ಅವರ ತಾಯಿಯ ಪ್ರಭಾವ ಕಾಣ¨ಹುದಾಗಿದೆ.” ಎಂದು ಮಾಜಿ ಶಾಸಕರಾದ ಶ್ರೀ ಪದ್ಮನಾಭ ಕೊಟ್ಟಾರಿ ಹೇಳಿದರು.
ಅವರು ಕಶೆಕೋಡಿ ಶ್ರೀ ಕಶೆಕೋಡಿ ಶ್ರೀ ಲಕ್ಮೀ ವೆಂಕಟ್ರಮಣ ದೇವಸ್ಥಾನದಅಷ್ಟಬಂಧ ಬ್ರಹ್ಮಕಲಶೋತ್ಸವ ನೂತನ ಶಿಲಾವಿಗ್ರಹ, ಧ್ವಜಸ್ತಂಭ, ನವಗ್ರಹ ಪ್ರತಿಷ್ಠೆ ಅಂಗವಾದ ಧಾರ್ಮಿಕ ಸಭೆ ಉಧ್ಘಾಟಿಸಿ ಮಾತನಾಡಿದರು.
ವಿಶೇಷ ಉಪನ್ಯಾಸ:
ಈ ಸಂದರ್ಭದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಪ್ರ. ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ನಾಯಕ್ ವಿಶೇಷ ಉಪನ್ಯಾಸ ನೀಡಿ, ಸಮಾಜದಲ್ಲಿ, ಕುಟುಂಬದಲ್ಲಿ ಮಹಿಳೆಯ ಪಾತ್ರ ಪ್ರಧಾನವಾಗಿದೆ. ಒಟ್ಟು ಮನೆಯ ಕ್ಷೇಮ ಮಹಿಳೆಯ ಕೈಯಲ್ಲಿದೆ. ಸಮಾಜ ಪುರುಷ ವರ್ಗದಿಂದ ಮಾತ್ರ ಮುನ್ನಡೆಯಲಾರದು, ಇರ್ವರೂ ಒಂದಾಗಿ ಸಾಗುವುದರಿಂದ ಬದುಕು ಸುಸಂಸ್ಕøತವಾಗುವುದು. ಮಹಿಳೆ ಕ್ಷಮಾಗುಣದಿಂದ ಶ್ರೇಷ್ಠಳಾಗುತ್ತಾಳೆ. ಆಧುನಿಕ ವ್ಯವಸ್ಥೆಯಲ್ಲ್ಠಿ ಶೈಕ್ಷಣಿಕವಾಗಿ ಮುಂದೆ ಬಂದಂತೆ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿರುವುದು ನಾರಿ ವರ್ಗಕ್ಕೆ ಸಲ್ಲುವ ಗೌರವವಾಗಿದೆ. ನಮ್ಮ ಸಂಸ್ಕøತಿಯನ್ನು ಮಕ್ಕಳಲ್ಲಿ ಬೆಳೆಸುವುದರೊಂದಿಗೆ, ಮುಂದಿನ ಪೀಳಿಗೆಗೆ ರವಾನಿಸಿ, ಸಂರಕ್ಷಿಸುವ ಕಾರ್ಯದಲ್ಲಿ ಮಹಿಳೆಯ ಪಾತ್ರ ಮಹತ್ತರವಾದುದು. ಹಿಂದೂ ಸಂಸ್ಕೃತಿಯಲ್ಲಿ ಆಚರಿಸುವ ಅನೇಕ ಹಬ್ಬಗಳ ಅರ್ಥ, ಪ್ರಾಮುಖ್ಯತೆಯ ಜತೆಗೆ ವೈಜ್ಞಾನಿಕ ಹಿನ್ನಲೆಯನ್ನು ತಿಳಿದು ಕೊಂಡಾಗ ಹಬ್ಬಗಳ ಆಚರಣೆಯು ಅರ್ಥಪೂರ್ಣವಾಗುವುದು. ಭಗವದ್ಗೀತೆ’ ಎಲ್ಲಾ ಹಿಂದೂ ಮನೆಯಲ್ಲಿ ಇರಲೇ ಬೇಕಾದ ಪೂಜನೀಯ ಕೃತಿ. ಶ್ಲೋಕಗಳನ್ನು ಯಾಂತ್ರಿಕವಾಗಿ ಬಾಯಿಪಾಠ ಮಾಡದೇ, ಅವುಗಳ ಅರ್ಥವನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅನ್ವಯಿಸಬೇಕು. ಹಿರಿಯರಾಗಲಿ, ಕಿರಿಯರಾಗಲೀ ಮೊಬೈಲನ್ನು ಅತಿಯಾಗಿ ಬಳಸುವುದರಿಂದ ಸಂಘಜೀವನ ನಡೆಸಲು ಸಾಧ್ಯವಿಲ್ಲ. ಮಕ್ಕಳನ್ನು ಭಾವುಕರಾಗಿ ಬೆಳೆಸಬೇಕು. ಹಿರಿಯರನ್ನು ತಾತ್ಸಾರ ಭಾವನೆಯಿಂದ ನೋಡದೆ ಗೌರವಿಸುವುದನ್ನು ಕಲಿಸಬೇಕು. ಅವರು ಅನಾರೋಗ್ಯದಲ್ಲಿದ್ದರೆ, ಸಾಂತ್ವಾನದ ಮಾತುಗಳಿಂದ ಅವರು ಬೇಗನೇ ಗುಣಮುಖರಾಗುವ ಮನೋಭಾವನೆಯನ್ನು ಬೆಳೆಸಿ, ಪೌಷ್ಟಿಕವಾದ ಆಹಾರವನ್ನು ನೀಡಿ, ಪ್ರೀತಿಯಿಂದ ನೋಡಬೇಕು. ಮಕ್ಕಳಿಗೆ ಕುಟುಂಬದೊಂದಿಗಿನ ಸಂಬಂಧಗಳನ್ನು (ಮಾವ-ಅತ್ತೆ, ಮೈದುನ, ಅತ್ತಿಗೆ, ದೊಡ್ಡಮ್ಮ, ಚಿಕ್ಕಪ್ಪ ಹೀಗೆ) ತಿಳಿಸಬೇಕು. ಈ ರೀತಿಯಲ್ಲಿ ಹಳದಿ-ಕುಂಕುಮ, ಅಕ್ಷತೆ-ಮಂತ್ರಾಕ್ಷತೆ, ತುಳಸಿದೀಪ, ಹೊಸ್ತಿಲ ಬಗೆಗಿನ ಮಹತ್ವವನ್ನು ವಿವರಿಸಿದರು.
ಉಡುಪಿ ಕು.ದೇ.ಆ.ಗೌ. ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಪಾಟೀಲ್, ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಠಲ್ ನ್ಯಾಕ್, ಬಂಟ್ವಾಳ ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ್ ಶೆಣ್ಯೆ, ಸಾಂಧರ್ಭಿಕವಾಗಿ ಮಾತನಾಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಸಂಜೀವ ನಾಯಕ್ ಕಲ್ಲೇಗ, ಕಂಟೀಕ ಅನಂತ ಶೆಣ್ಯೆ, ಪ್ರಧಾನ ಅರ್ಚಕ ಗುರುವಾಯೂರ ಭಟ್,ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ತಾ.ಪಂ.ಸದಸ್ಯೆ ಲಕ್ಮೀ ಗೋಪಾಲ್ ಆಚಾರ್ಯ, ವಿಠಲ್ ನಾಯಕ್ ಪತ್ತುಮುಡಿ, ಡಾ. ಸುಚೇತ ಶೆಣ್ಯೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.