ಸ್ನೇಹಮಿಲನ ಕಾರ್ಯಕ್ರಮ

ದಿನಾಂಕ 25.06.2016 ರಂದು ಬೆಂಗಳೂರಿನ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ  ಸಮಾಜ ಮತ್ತು ಬೆಂಗಳೂರಿನ ಬಂಧು-ಭಾಂಧವರೊಂದಿಗೆ ಶ್ರೀ ಸದಾಶಿವ ರಾವ್, ಇವರ ನೂತನವಾಗಿ ಉದ್ಘಾಟಿಸಿದ ಸಭಾಭವನದಲ್ಲಿ ಪ್ರಪ್ರಥಮ ಬಾರಿಗೆ ‘ಸ್ನೇಹಮಿಲನ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾಜದಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸಿದವರನ್ನು ಹಾಗೂ ಪ್ರತಿಷ್ಠಾನಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು.

ಐತಿಹಾಸಿಕ ಸ್ನೇಹ ಮಿಲನ- ಇದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ದಾಖಲೆ

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಬೆಂಗಳೂರು ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜ ಟ್ರಸ್ಟ್ ಮತ್ತು ಬೆಂಗಳೂರು ಬಂಧು ಬಾಂಧವರೊಂದಿಗೆ  ‘ಸ್ನೇಹ ಮಿಲನ’ ಸಭೆಯನ್ನು ಆಯೋಜಿಸಲಾಗಿತ್ತು.

    “ಪ್ರತಿಷ್ಠಾನವು ಸಮುದಾಯದ ಸಾಮಜಿಕ ಸಮಸ್ಯೆಗಳನ್ನು ಗುರುತಿಸಿ, ಸಮಾಜದ ಜನರನ್ನು ಒಟ್ಟುಗೂಡಿಸಿ, ಇಡೀ ಸಮುದಾಯವೇ ಭಾಗವಹಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ಕೆ ಮುಂದಾಳತ್ವ ವಹಿಸಿ, ಜನ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಪ್ರಪ್ರಥಮ ಬಾರಿಗೆ “ಐತಿಹಾಸಿಕ ಸ್ನೇಹ ಮಿಲನ” ನಡೆಸಿದ ಕೀರ್ತಿ ಪ್ರತಿಷ್ಠಾನಕ್ಕೆ ಸಲ್ಲುತ್ತದೆ ಮತ್ತು ಇವತ್ತಿನ ಈ ಸಭೆ ಎಲ್ಲರಿಗೂ ಸ್ಪೂರ್ತಿ ತಂದಿದೆ” ಎಂದು ಬೆಂಗಳೂರು ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಮಂಜುನಾಥ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಾದ ಶ್ರೀ ಸದಾಶಿವ ರಾವ್ ಮತ್ತು ಶ್ರೀಮತಿ ರೇಖಾ ಸದಾಶಿವ ರಾವ್, ಮಂಜುನಾಥ್ ಪಾಟೀಲ್, ವಾಮನ್ ಪ್ರಭು,ಹಂಡೀರ್, ಶಿವರಾಯ್ ಪ್ರಭು ಖಂಡಿಗೆ, ಪ್ರಭಾಕರ ಪ್ರಭು ಹೆಣ್ಣೂರು, ಡಾ. ಚಂದ್ರ, ಸುರೇಂದ್ರ ಸಾಮಂತ್, ಶ್ರೀಧರ್ ನಾಯಕ್ ದರ್ಬೆ, ರಾಜ್ ಗೋಪಾಲ್ ಶೆಣೈ, ಮತ್ತು ಜಯಂತ್ ನಾಯಕ್ ಇವರುಗಳನ್ನು ಅಭಿನಂದಿಸಲಾಯಿತು.

    ಪ್ರತಿಷ್ಠಾನದ ಮುಖ್ಯ ಕಾರ್ಯಚಟುವಟಿಕೆಗಳಾದ ವಿದ್ಯಾರ್ಥಿವೇತನ ವಿತರಣೆ, ಮಣಿಪಾಲ ಆರೋಗ್ಯ ಕಾರ್ಡ್, ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳು, ಸಾಮಾಜಿಕ ಆಧಾರಿತ ಸಮಸ್ಯೆಗಳು ಮತ್ತು ವಿವಾಹ ವೇದಿಕೆಯ ಬಗ್ಗೆ ಕ್ರಮವಾಗಿ ಸುಧೀರ್ ನಾಯಕ್, ಮುರಳೀಧರ ಪ್ರಭು, ಡಾ.ಪ್ರವೀಣ್ ಚಂದ್ರ ನಾಯಕ್, ಸಂಜಯ್ ಪ್ರಭು ಮತ್ತು ಎಂ.ಎಂ.ಪ್ರಭುರವರು ತಿಳಿಸಿದರು. ಪ್ರತಿಷ್ಠಾನಕ್ಕೆ ಧನಸಹಾಯ ನೀಡಿದವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಸಾಮಂತ್, ರೇಖಾ ಭುವನೇಶ್ ಪ್ರಭು, ಪ್ರಭಾಮಣಿ, ಜಗದೀಶ್ ಪಾಟೀಲ್, ಡಾ.ರಮೇಶ್ ಪ್ರಭು ಆರೂರು, ಸಂಜೀವ ರಾಯ್ ಮತ್ತು ಮುಖೇಶ್ ಪ್ರಭು, ಮತ್ತು ಸಂಜಯ್ ಪ್ರಭು ಉಪಸ್ಥಿತರಿದ್ದರು.

        ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ್ ನಾಯಕ್ ಸ್ವಾಗತಿಸಿ, ಶ್ರೀಮತಿ ಸುಚಿತ್ರಾ ರಮೇಶ್ ನಾಯಕ್  ಧನಸಹಾಯ ನೀಡಿದವರ ಹೆಸರನ್ನು ವಾಚಿಸಿದರು. ಡಾ.ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.