ಸ್ಫೂರ್ತಿ-2017

ದಿನಾಂಕ ಆಗಸ್ಟ್ 5 ರಿಂದ 7 ರತನಕ ವಿಶ್ವ ಕೊಂಕಣಿ ಕೇಂದ್ರದಲ್ಲಿ, ಪದವೀಧರ, ಇಂಜಿನಿಯರಿಂಗ್, ಸ್ನಾತಕೋತರ ವಿದ್ಯಾರ್ಥಿಗಳಿಗೆ 3 ದಿನಗಳ ಸ್ಪೂರ್ತಿ-ಉನ್ನತಿ ವಾಸ್ತವ್ಯ ಶಿಬಿರವನ್ನು ಆಯೋಜಿಸಿದ್ದು, ಸುಮಾರು 78 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದಿನಾಂಕ ಆಗಸ್ಟ್ 14 ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ತರಬೇತಿಯನ್ನು ಎರಡು ಗುಂಪುಗಳಲ್ಲಿ ನಡೆಸಲಾಯಿತು.

‘ಸ್ಪೂರ್ತಿ-2017’ 3 ದಿನಗಳ ಸನಿವಾಸ ಶಿಬಿರ
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಸ್ವ-ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 3 ದಿನಗಳ ‘ಸ್ಪೂರ್ತಿ-2017’ ಸನಿವಾಸ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಶಿಬಿರವನ್ನು ದಿನಾಂಕ 21.07.2017 ರಿಂದ 23.07.2017 ರ ತನಕ ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರದಲ್ಲಿ ಹಮ್ಮಿಕೊಂಡಿತ್ತು.

ವಿಶ್ವ ಕೊಂಕಣಿ ಕೇಂದ್ರದ ಸಹ ನಿರ್ದೇಶಕರಾದ ಶ್ರೀಗುರುದತ್ತ್ ಬಾಳಿಗ, ಆರಂಭದಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಲು ಇರಬೇಕಾಗಿರುವ ಮನೋಸ್ಥೈರ್ಯ ಹಾಗೂ ಶಿಬಿರದ ನಿಯಮಗಳನ್ನು ತಿಳಿಸುವ ಮೂಲಕ  ಶಿಬಿರಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶವೀನಾ, ಇವರು ಭಾಷಣ ಮಾಡುವ ರೀತಿ, ಗುಂಪಿನಲ್ಲಿರುವಾಗ ಪ್ರತಿಯೊಬ್ಬರಲ್ಲಿ ಇರಬೇಕಾದ ಸಾಮಥ್ರ್ಯಗಳ ಬಗ್ಗೆ ಚಟುವಟಿಕೆ ಹಾಗೂ ಚರ್ಚಾ ವಿಧಾನದಿಂದ ತಿಳಿಸಿ ಕೊಟ್ಟರು. ಸ್ವ-ಸಮಾಜದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಪ್ರವೀಣ್ ಚಂದ್ರನಾಯಕ್, ಇವರು ಇಂದಿನ ಪ್ರಸ್ತುತ: ದಿನಗಳಲ್ಲಿ ಆಯ್ಕೆ ಮಾಡುವಂತಹ ಕ್ಷೇತ್ರಗಳ ಬಗೆಗಿನ ಅಭಿಪ್ರಾಯ, ‘ಯಾರಲ್ಲಿ ಅಹಂ ಇರುತ್ತದೋ, ಅವರಲ್ಲಿ ಜ್ಞಾನ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮಲ್ಲಿರುವ ಅಹಂನ್ನು ಸಂಪೂರ್ಣ ಅಳಿಸಿ, ಜ್ಞಾನವನ್ನು ಹೆಚ್ಚಿಸುವ ಮೂಲಕ ಹೊ¸ ಪ್ರಯೋಗಗಳಿಂದ ಹೊಸ ಕ್ಷೇತ್ರದಲ್ಲಿ ಸಾಧನೆ ಮಾಡುವ ಅವಕಾಶಗಳನ್ನು ನಾವೇ ಸೃಷ್ಟಿಸಬಹುದು ಎಂಬುವುದನ್ನು ತಮ್ಮ ಜೀವನದ ಅನುಭವವನ್ನೇ ನಿದರ್ಶನವಾಗಿಟ್ಟುಕೊಂಡು, ಅರ್ಥಪೂರ್ಣವಾಗುವಂತೆ ಮನದಟ್ಟುಗೊಳಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿವೇದಿತಾ ಮಿರಾಜ್‍ಕರ್, ಇವರು ತಮ್ಮ ತಮ್ಮ ಸಾಮರ್ಥ್ಯ, ದುರ್ಬಲತೆ, ಸಿಗಬಹುದಾದ ಅವಕಾಶಗಳು, ಅಡೆತಡೆಗಳನ್ನು  ಗುರುತಿಸುವುದರೊಂದಿಗೆ ಸ್ವ-ಮೌಲ್ಯಮಾಪನದ ಅಂಶಗಳನ್ನು, ಉತ್ತಮ ನಾಯಕನಲ್ಲಿರಬೇಕಾದ ನಾಯಕತ್ವದ ಗುಣಗಳನ್ನು, ಸಮಾಜದಲ್ಲಿ ನಡೆದುಕೊಳ್ಳುವ ರೀತಿ, ಸಭ್ಯಾಚಾರ, ಶಿಷ್ಟಾಚಾರದ ಬಗ್ಗೆ ವಿವಿಧ ಸನ್ನಿವೇಶಗಳನ್ನು ಕಲ್ಪಿಸಿ, ಪರಿಣಾಮಕಾರಿಯಾಗಿ, ಸೂಕ್ಷ್ಮವಾಗಿ ತಿಳಿಸಿದರು. ವಿಶ್ವ ಕೊಂಕಣಿ ಕೇಂದ್ರದ ಶ್ರೀಮತಿ ಸಹನಾ ಮತ್ತು ಗೀತಾ ಸಾಮಂತ್ ಗುಂಪು ಚಟುವಟಿಕೆಗಳನ್ನು ನಡೆಸಿಕೊಟ್ಟರು.  ಪ್ರಾತ: ಕಾಲದಲ್ಲಿ ಸ್ವ-ಸಮಾಜದ ಯೋಗ ತರಬೇತುದಾರರಾದ ಶ್ರೀ ದೀಪಕ್ ನಾಯಕ್ ಮತ್ತು ಶ್ರೀಮತಿ ಶ್ವೇತಾ ದೀಪಕ್ ನಾಯಕ್ ದಂಪತಿ, ಮೇರಿಹಿಲ್, ಅನೇಕ ಯೋಗಾಸನಗಳ ಪ್ರಾತ್ಯಕ್ಷಿಕೆಯ ಜತೆಗೆ, ಇನ್ನಿತರ ಆರೋಗ್ಯ ಟಿಪ್ಸ್‍ಗಳ ಮಾಹಿತಿಯನ್ನು ನೀಡಿದರು.
ಸಮಾರೋಪದಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರು ತಮ್ಮ ಶಿಬಿರದ ಅನುಭವಗಳನ್ನು ವ್ಯಕ್ತಪಡಿಸಿದರು. ಪ್ರತಿಷ್ಠಾನದ ಸ್ಥಾಪಕ ಪ್ರಾಯೋಜಕರಾದ ಶ್ರೀ ಎಂ.ಎಂ.ಪ್ರಭು, ವಿದ್ಯಾರ್ಥಿವೇತನದ ಅರ್ಜಿಯನ್ನು ಭರ್ತಿಗೊಳಿಸುವ ಕ್ರಮವನ್ನು ತಿಳಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ನಾಯಕ್, ಸಂಜಯ್ ಪ್ರಭು, ಸಂಜೀವ ಸಾಮಂತ್, ಡಾ. ಸುಚೇತ ಶೆಣೈ, ಅನಂತ್ ಪ್ರಭು ಮರೋಳಿ, ವಿಜಯ್ ಶೆಣೈ ಕೊಡಂಗೆ, ಗೋಪಾಲ ಶೆಣೈ ಕೊಡಂಗೆ,  ಉಪೇಂದ್ರ ನಾಯಕ್, ಮುgಳೀಧರ ಪ್ರಭು, ನಂದಕಿಶೋರ್ ಸೋಲ್ತಾಡಿ, ನಾಗೇಶ್ ಪ್ರಭು, ಮುಂತಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಸುಧೀರ್ ನಾಯಕ್, ಬೆಂಗಳೂರು ಇವರು ಸಂಪೂರ್ಣ ಶಿಬಿರದ ಜವಾಬ್ದಾರಿಯನ್ನು ವಹಿಸಿ, ಯಶಸ್ವಿಯಾಗಿ ನಡೆಸಿಕೊಟ್ಟರು.

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ- ‘ಪ್ರಗತಿ-2017’ ಸನಿವಾಸ ಶಿಬಿರ
ದಿನಾಂಕ 29 ಮತ್ತು 30, ಜುಲೈ 2017 ರಂದು ಸ್ವ-ಸಮಾಜದ ಪದವಿ ಪೂರ್ವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಒಂದು ದಿನ ದ ‘ಪ್ರಗತಿ -2017’ ಸನಿವಾಸ ವ್ಯಕ್ತಿತ್ವ ವಿಕಸನ ಶಿಬಿರವನ್ನು ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರದಲ್ಲಿ ಪ್ರತಿಷ್ಠಾನವು ಹಮ್ಮಿಕೊಂಡಿತ್ತು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ದೇಶದ ರಕ್ಷಣೆಯ ಸೇನಾ ವಿಭಾಗದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸ್ವ-ಸಮಾಜದ ಕರ್ನಲ್ ಮಾಧವ ಶ್ಯಾನ್‍ಭಾಗ್, ಹಾಗೂ ಸೇನೆಯಲ್ಲಿ  ಮೆಡಿಕಲ್ ವಿಭಾಗದಲ್ಲಿ ಕಣ್ಣಿನ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ. ಲಾವಣ್ಯ ಮಾಧವ ಶ್ಯಾನ್‍ಭಾಗ್, ದಂಪತಿ, ತಮ್ಮ ಅನುಭವಗಳನ್ನು ಎಳೆ ಎಳೆಯಾಗಿ ತಿಳಿಸುವ ಮೂಲಕ ಸೇನೆಯಲ್ಲಿ ಇರುವಂತಹ ಔದ್ಯೋಗಿಕ ಹುದ್ದೆಗಳ ವಿವರ ಹಾಗೂ ಆ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುವ ರೀತಿಯನ್ನು, ಮತ್ತು ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಸೇನೆಯನ್ನು ಸೇರುವಂತೆ ಪ್ರೇರಣೆ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಉಡುಪಿಯ ಸ್ವದೇಶಿ ಔಷಧ ಭಂಡಾರದ ಶ್ರೀ ಮನೋಜ್ ಪ್ರಭು, ಇವರು ತನ್ನ ಅನುಭವದ ಜತೆಗೆ ಮೆಡಿಸಿನ್‍ಗೆ ಸಂಬಂಧಿಸಿದ ಔದ್ಯೋಗಿಕ ಅವಕಾಶಗಳು ಹಾಗೂ ವಾಣಿಜ್ಯೋದ್ಯಮದ ಬಗ್ಗೆ  ತಿಳಿಸಿದರು. ಪ್ರಾತ: ಕಾಲದಲ್ಲಿ ಸ್ವ-ಸಮಾಜದ ಯೋಗ ತರಬೇತುದಾರರಾದ ಶ್ರೀ ದೀಪಕ್ ನಾಯಕ್ ಮತ್ತು ಶ್ರೀಮತಿ ಶ್ವೇತಾ ದೀಪಕ್ ನಾಯಕ್ ದಂಪತಿ, ಮೇರಿಹಿಲ್, ಅನೇಕ ಯೋಗಾಸನಗಳ ಪ್ರಾತ್ಯಕ್ಷಿಕೆಯ ಜತೆಗೆ, ಆರೋಗ್ಯ ಟಿಪ್ಸ್‍ಗಳ ಮಾಹಿತಿಯನ್ನು ನೀಡಿದರು. ವಿಶ್ವ ಕೊಂಕಣಿ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಪ್ರವೀಣ್ ಗುಡಿ, ಇವರು ಈ ಹಂತದಲ್ಲಿ ತಮ್ಮ ತಮ್ಮ ಸಾಮರ್ಥ್ಯ, ದುರ್ಬಲತೆ, ಸಿಗಬಹುದಾದ ಅವಕಾಶಗಳು, ಅಡೆತಡೆಗಳನ್ನು ತಿಳಿದುಕೊಂಡು, ದುರ್ಬಲತೆಯನ್ನು ಹೋಗಲಾಡಿಸಿ ಗುರಿಯನ್ನು ತಲುಪುವುದು, ಮುಂದಿನ ದಿನಗಳಲ್ಲಿ ಮಾಡುವ ಸಾಧನೆಯನ್ನು ಮರುಕಳಿಸಿ, ಸೂಕ್ತ ಮಾರ್ಗೋಪಾಯಗಳನ್ನು ರೂಪಿಸುವುದು, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿ, ಖಿನ್ನತೆ, ಗೊಂದಲವನ್ನು ನಿವಾರಿಸುವ ಬಗ್ಗೆ ವೀಡಿಯೋ ತುಣುಕುಗಳ ಪ್ರದರ್ಶನದಿಂದ ಅರ್ಥೈಸಿ ಕೊಟ್ಟರು. ವಿಶ್ವ ಕೊಂಕಣಿ ಕೇಂದ್ರದ ಸಹ ನಿರ್ದೇಶಕರಾದ ಶ್ರೀಗುರುದತ್ತ್ ಬಾಳಿಗ, ಮಾರ್ಗದರ್ಶನ ನೀಡಿ ಶಿಬಿರಕ್ಕೆ ಚಾಲನೆ ನೀಡಿದರು. ಸಹನಾ ಮತ್ತು ಗೀತಾ ಸಾಮಂತ್ ಸಹಕರಿಸಿದರು.
ಸಮಾರೋಪದಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರು ತಮ್ಮ ಶಿಬಿರದ ಅನುಭವಗಳನ್ನು ವ್ಯಕ್ತಪಡಿಸಿದರು. ಪ್ರತಿಷ್ಠಾನದ ಸ್ಥಾಪಕ ಪ್ರಾಯೋಜಕರಾದ ಶ್ರೀ ಎಂ.ಎಂ.ಪ್ರಭು, ವಿದ್ಯಾರ್ಥಿವೇತನದ ಅರ್ಜಿಯನ್ನು ಭರ್ತಿಗೊಳಿಸುವ ಕ್ರಮವನ್ನು ತಿಳಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ಇವರು ‘ಮುಂದಿನ ದಿನಗಳಲ್ಲಿ ಪ್ರತಿಷ್ಠಾನ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ’ ತಿಳಿಸಿದರು. ಶ್ರೀ ಮುರಳೀಧರ ಪ್ರಭು,  ಇವರು ಸ್ವಸಮಾಜದ ಪತ್ರಿಕೆ-ಪೂರ್ಣಾನಂದ ವಾಣಿ, ಮಣಿಪಾಲ ಆರೋಗ್ಯ ಕಾರ್ಡ್ ಹಾಗೂ ಆದಾಯ, ಜಾತಿ ಮತ್ತು ಪ್ರಮಾಣ ಪತ್ರದ ವಿಚಾರವಾಗಿ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ನಾಯಕ್ ವಂದಿಸಿದರು. ಸಂಜಯ್ ಪ್ರಭು, ಡಾ. ಪ್ರವೀಣ್ ಚಂದ್ರನಾಯಕ್, ಡಾ. ಸುಚೇತ ಶೆಣೈ, ಅನಂತ್ ಪ್ರಭು ಮರೋಳಿ, ವಿಜಯ್ ಶೆಣೈ ಕೊಡಂಗೆ, ಗೋಪಾಲ ಶೆಣೈ ಕೊಡಂಗೆ,  ಉಪೇಂದ್ರ ನಾಯಕ್, ಮುgಳೀಧರ ಪ್ರಭು, ನಂದಕಿಶೋರ್ ಸೋಲ್ತಾಡಿ, ನಾಗೇಶ್ ಪ್ರಭು, ಪ್ರಭಾಕರ್ ಪ್ರಭು ವೇಣೂರು, ರ ವೀಂಧ್ರ ನಾಯಕ್ ಕುಂಟಲ್ಪಾಡಿ, ರತ್ನಾಕರ್ ಸಾಮಂತ್, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕರ್ತರಾದ ಮಲ್ಲಿಕಾ, ಜ್ಯೋತಿ ಸಾಮಂತ್, ಅಂಕಿತ, ಪ್ರಶಾಂತ್, ದುರ್ಗಾನಂದ, ಮಧುಸೂದನ್, ಮಹಿಮಾ ಶೆಣೈ, ಪ್ರವೀಣ್ ಶೆಣೈ, ಪ್ರದೀಪ್ ಶೆಣೈ, ಧನುಷ್ ತೊಕ್ಕೊಟ್ಟು, ಶಿವಾನಂದ ಸಾಮಂತ್ ಮುಂತಾದವರು ಉಪಸ್ಥಿತರಿದ್ದರು.

‘ಉನ್ನತಿ-2017’ ಮತ್ತು ‘ಪರಿಣತಿ-2017’ – 3 ದಿನಗಳ ಸನಿವಾಸ ವ್ಯಕ್ತಿತ್ವ ವಿಕಸನ ಶಿಬಿರ
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪ್ರತಿಭೆಗಳನ್ನು ರೂಪಿಸುವ ದೃಷ್ಟಿಯಿಂದ 2ನೇ ಮತ್ತು 3ನೇ ವರ್ಷದ ಪದವಿ ವಿದ್ಯಾರ್ಥಿಯರಿಗೆ ‘ಉನ್ನತಿ-2017’ ಮತ್ತು ‘ಪರಿಣತಿ-2017’ 3 ದಿನಗಳ ಸನಿವಾಸ ವ್ಯಕ್ತಿತ್ವ ವಿಕಸನ ಶಿಬಿರವನ್ನು ದಿನಾಂಕ 01.09.2017 ರಿಂದ 03.09.2017ರವರೆಗೆ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಪರಿಣಾಮಕಾರಿ ಸಂವಹನ, ಒತ್ತಡ ಮತ್ತು ಸಮಯ ನಿರ್ವಹಣೆ, ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುವ ಬಗೆ, ಸಂದರ್ಶನ ಪೂರ್ವ ತಯಾರಿ, ವೃತ್ತಿ ನಿಲುವುಗಳು, ಗುಂಪು ಚರ್ಚೆ, ಶಿಷ್ಟವರ್ತನೆಗಳು ಮತ್ತು ಅಣುಕು ಸಂದರ್ಶನದ ಮೂಲಕ ಸಂದರ್ಶನ ಎದುರಿಸುವ ತಂತ್ರವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಿದ್ಯಾ ಶೆಣೈ, ಶ್ರೀಮತಿ ನಿವೇದಿತಾ ಮಿರಾಜ್ಕರ್, ಶ್ರೀಮತಿ ಶವೀನಾ, ಶ್ರೀಮತಿ ಚಂದ್ರಿಕಾ ಮಲ್ಯ ಮುಂತಾದವರಿಂದ ಪ್ರಾತ್ಯಕ್ಷಿಕೆಯ ಮುಖಾಂತರ ತಿಳಿದುಕೊಂಡರು.  
ಸಮಾಜದಲ್ಲಿ ಸ್ವ-ಪ್ರಯತ್ನದಿಂದ ಸಾಧನೆಗೈದು ಉನ್ನತ ಮಟ್ಟವನ್ನು ಪಡೆದ, ಹಾಗೂ ಎಲ್ಲರಿಗೂ ಆದರ್ಶರೆನಿಸಿದ ಮಹನೀಯರ ಅನುಭವದ ಮಾತುಗಳನ್ನು ಆಲಿಸಲು ವಿದ್ಯಾರ್ಥಿಯರೊಂದಿಗೆ ನೇರ ಮತ್ತು ಮುಕ್ತ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಸತೀಶ್ ಪಾಟೀಲ್, ಮಣಿಪಾಲ, ಇವರು ಉದ್ಯಮವನ್ನು ಆರಂಭಿಸಿ ಎದುರಿಸಿದ ಸೋಲುಗಳು, ಆ ಸೋಲಿನಿಂದ ಹೊರಬರಲು ನಡೆಸಿದ ಪ್ರಯತ್ನ ಹಾಗೂ ಇಂದು ಪ್ರಸಿದ್ಧಿ ಪಡೆದ ‘ವೇಗಾ ಟ್ರಾನ್ಸ್ ಪೋರ್ಟ’ನ ಮಾಲಕರಾಗಿ, ಆನುಭವದ ವಿಚಾರಗಳನ್ನು ಹಂಚಿಕೊಂಡರು. ಮಣಿಪಾಲ ವಿಶ್ವವಿದ್ಯಾನಿಲಯದ ಶ್ರೀ ಬಾಲಕೃಷ್ಣ ಪ್ರಭು, ಇವರು ‘ ಜೀವನದಲ್ಲಿ ಸೋಲು ಕಂಡಾಗ ಸಕಾರಾತ್ಮಕ ಚಿಂತನೆಯಿಂದ ಅವಕಾಶಗಳನ್ನು ಹೇಗೆ ಬೆಳಸಬಹುದು ಎಂದು ಸ್ವ ಜೀವನದ ನಿದರ್ಶನದೊಂದಿಗೆ ವಿವರಿಸಿದರು. ದೂರದರ್ಶನದ ಶ್ರೀ ಜಯರಾಂ ಶ್ಯಾನುಭಾಗ್, ಇವರು ಮಾದ್ಯಮಗಳಲ್ಲಿನ ಉದ್ಯೋಗಾವಕಾಶಗಳು, ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ, ರಾಜಕೀಯ ಧೋರಣೆಗಳು, ಲೇಖನಗಳನ್ನು ಬರೆಯುವ ಹಾಗೂ ಪ್ರಪಂಚದ ಘಟನೆಗಳನ್ನು ವಿಶ್ಲೇಷಿಸಿ ಸತ್ಯಾಸತ್ಯತೆಯನ್ನು ಅರಿಯಬೇಕು’ ಎಂದು ತಿಳಿಸಿದರು. ಸಿಂಗಾಪುರದ ನ್ಯಾನಿಯಾಗ್ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಮುಗಿಸಿದ ಶ್ರೀ ವಿಕ್ರಮ್ ಶೆಣೈಇವರು ‘Brain controlled computer system’ ವಿಚಾರವಾಗಿ ನಡೆಸಿದ ಅಧ್ಯಯನದ ಬಗ್ಗೆ ತಿಳಿಸುತ್ತಾ, ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗುವ ಸಾಧ್ಯತೆಗಳನ್ನು ತಿಳಸಿದರು ಹಾಗೂ ಅವರ ಅಧ್ಯಯನದ ಅನ್ವಯಗಳನ್ನು ನೀಡಿದರು.  ಇತಿಹಾಸ ತಜ್ಞರಾದ ಶ್ರೀ ಉಮಾನಾಥ ಶೆಣೈ ಇವರು ಸಂಶೋಧನಾ ಕ್ಷೇತ್ರಗಳು, NET ಪರೀಕ್ಷೆಗಳ ವಿಚಾರವಾಗಿ ಹಾಗೂ ಶ್ರೀಮತಿ ವಿಜಯ ಕುಮಾರಿ, ಇವರು ತಹಶೀಲ್ದಾರಳಾಗಿ ಕೈಗೆತ್ತಿದ ಸವಾಲುಗಳನ್ನು, IAS, KAS ಪರೀಕ್ಷೆಗಳನ್ನು ಬರೆಯುವ, ತಯಾರಿ ನಡೆಸುವ ಅಂಶಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಗುಂಪಿನಲ್ಲಿ ನಾಟಕ, ನೃತ್ಯ, ಹಾಡು ರಚನೆ ಮುಂತಾದ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ವಿಶ್ವ ಕೊಂಕಣಿ ಕೇಂದ್ರದ ಸಹ ನಿರ್ದೇಶಕರಾದ ಗುರುದತ್ತ್ ಬಂಟ್ವಾಳ್ಕರ್, ಸಹನಾ ಮತ್ತು ಗೀತಾ ಸಾಮಂತ್ ಸಹಕರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಅನಂತ್ ಪ್ರಭು, ಸುಚಿತ್ರ ರಮೇಶ್ ನಾಯಕ್, ರವೀಂಧ್ರ ನಾಯಕ್, ಸಂಜಯ್ ಪ್ರಭು, ವಿಜಯ್ ಶೆಣೈ, ಮುರಳೀಧರ್ ಪ್ರಭು ವಗ್ಗ, ರತ್ನಾಕರ್ ಸಾಮಂತ್, ಗಣೇಶ್ ಶೆಣೈ, ಡಾ. ವಿಜಯಲಕ್ಷ್ಮೀ ನಾಯಕ್, ಡಾ. ಸುಚೇತ ಶೆಣೈ, ಮುಂತಾದವರು ಉಪಸ್ಥಿತರಿದ್ದರು. ಶಿಬಿರದ ಸಂಪೂರ್ಣ ನಿರ್ವಹಣೆಯನ್ನು ಸುಧೀರ್ ನಾಯಕ್ ನಡೆಸಿದರು.  

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದಿಂದ ಯುವಜನತೆಗೆ ನಾಯಕತ್ವ ಶಿಬಿರ
ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಸಧೃಢತೆ, ಬಲಗೊಳ್ಳುವ ನಿಟ್ಟಿನಲ್ಲಿ ಯುವಜನತೆಯಲ್ಲಿ ನಾಯಕತ್ವದ ವ್ಯಕ್ತಿತ್ವವನ್ನು ಬೆಳೆಸುವ ಉದ್ದೇಶದಿಂದ ಪ್ರತಿಷ್ಠಾನದ ವಗ್ಗ, ಕಲ್ಲಡ್ಕ, ಪುತ್ತೂರು, ಬೆಳ್ತಂಗಡಿ, ವಾಮದಪದವು, ಕರ್ಪೆ, ಇರುವೈಲು, ಮಂಗಳೂರು ಹೀಗೆ ಎಲ್ಲಾ ವಲಯಗಳ ಆಯ್ದ ಪದಾಧಿಕಾರಿಗಳಿಗೆ 2 ದಿನಗಳ ಸನಿವಾಸ ‘ನಾಯಕತ್ವ ಶಿಬಿರ- 2017’ನ್ನು ದಿನಾಂಕ 02.09.2017 ಮತ್ತು  03.09.2017ರಂದು ‘ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ‘ನಾಯಕನಿಗೆ ಇರಬೇಕಾದ ಗುಣಗಳು’ -ಬದ್ಧತೆ, ಸಮಸ್ಯೆಯನ್ನು ಬಗೆಹರಿಸುವುದು, ಸಂಘಟನೆ, ಮುಂದಾಳುತ್ವ, ತ್ಯಾಗ, ಸಮಯದ ನಿರ್ವಹಣೆ, ಮುಕ್ತ ಮನಸ್ಸು, ಅಲ್ಪಾವಧಿ ಹಾಗೂ ದೀರ್ಘಾವಧಿ ಉದ್ದೇಶಗಳ ಚಿಂತನೆ, ಯೋಜನೆಗಳ ರಚನೆ, ಅಗತ್ಯತೆಗಳ ಗುರುತಿಸುವಿಕೆ, ಸಕಾರಾತ್ಮಕ ಚಿಂತೆ, ಆತ್ಮವಿಶ್ವಾಸ, ದೂರದೃಷ್ಠಿ ನಿರ್ಧರಿಸುವಿಕೆ, ವೈಜ್ಞಾನಿಕವಾಗಿ ಚಿಂತಿಸುವ, ಜವಾಬ್ದಾರಿಯನ್ನು ನಿರ್ವಹಿಸುವ, ಮುಂದಿನ ಯೋಜನೆಗಳನ್ನು ರೂಪಿಸುವ ಹೀಗೆ ಅನೇಕ ವಿಚಾರಗಳನ್ನು ಸಂಪನ್ಮೂಲ ವ್ಯಕ್ತಿ ಶ್ರೀ ಗಿರಿಧರ ಕಾಮತ್ ಮತ್ತು ವಿಶ್ವ ಕೊಂಕಣಿ ಕೇಂದ್ರದ ಸಹ ನಿರ್ದೇಶಕರಾದ ಗುರುದತ್ತ್ ಬಂಟ್ವಾಳ್ಕರ್ ಪ್ರಾತ್ಯಕ್ಷಿಕೆ, ವಿಡಿಯೋ ತುಣುಕು, ಗುಂಪು ಚರ್ಚೆಯ ಮೂಲಕ ಮನದಟ್ಟು ಗೊಳಿಸಿದರು. ಶಿಬಿರಾರ್ಥಿಗಳು ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡರು. ‘ಪ್ರತೀ ವರ್ಷ ಇಂತಹ ಶಿಬಿರಗಳನ್ನು ನಡೆಸಬೇಕು, ಈ ಮೂಲಕ ನಾವು ಹೊಸ ಹೊಸ ಯೋಜನೆಗಳನ್ನು, ವಿಚಾರಗಳನ್ನು ತಿಳಿದು ಕೊಂಡಾಗ ನಮ್ಮ ವಲಯಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ಆತ್ಮವಿಶ್ವಾಸದಿಂದ ಮಾಡಬಹುದು’ ಎಂದು ಶಿಬಿರಾರ್ಥಿಗಳು ಅಭಿಪ್ರಾಯ ಪಟ್ಟರು.