ಸ್ಫೂರ್ತಿ-2016

ದಿನಾಂಕ ಆಗಸ್ಟ್ 5 ರಿಂದ 7 ರತನಕ ವಿಶ್ವ ಕೊಂಕಣಿ ಕೇಂದ್ರದಲ್ಲಿ, ಪದವೀಧರ, ಇಂಜಿನಿಯರಿಂಗ್, ಸ್ನಾತಕೋತರ ವಿದ್ಯಾರ್ಥಿಗಳಿಗೆ 3 ದಿನಗಳ ಸ್ಫೂರ್ತಿ-ಉನ್ನತಿ ವಾಸ್ತವ್ಯ ಶಿಬಿರವನ್ನು ಆಯೋಜಿಸಿದ್ದು, ಸುಮಾರು 78 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದಿನಾಂಕ ಆಗಸ್ಟ್ 14 ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ತರಬೇತಿಯನ್ನು ಎರಡು ಗುಂಪುಗಳಲ್ಲಿ ನಡೆಸಲಾಯಿತು.