2017

    ಗೋವಾ: ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಎಸ್. ಸಂಜೀವ ಪಾಟೀಲ್ ಅವರಿಗೆ ಸನ್ಮಾನ

ಗೋವಾದಲ್ಲಿಯ ಕುಡಾಳ್ ದೇಶ್‍ಕರ್ ಆದ್ಯಗೌಡ್ ಬ್ರಾಹ್ಮಣ್ ಉನ್ನತಿ ಮಂಡಳ್‍ನ ವತಿಯಿಂದ ಏರ್ಪಡಿಸಿದ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಣಿಪಾಲದ ಸರಳೇಬೆಟ್ಟಿನ ಎಸ್. ಸಂಜೀವ ಪಾಟೀಲ್ ಅವರು 1997ರಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಬರೆದು ಪ್ರಕಟಿಸಿದ ‘ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ್ ಸಮಾಜ-ಜನಾಂಗೀಯ ಪರಿಚಯ ಎನ್ನುವ ಪುಸ್ತಕವನ್ನು, ಆಂಗ್ಲ ಭಾಷೆಯಲ್ಲಿ ‘ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ್ ಸಮಾಜ್-ಕಮ್ಯುನಿಟಿ ಗೈಡ್’ ಎಂಬ ಹೆಸರಿನ ಅನುವಾದಿತ ಕೃತಿ ಬಿಡುಗಡೆಗೊಳಿಸಲಾಯಿತು. ಬಳಿಕ ಬರೆದುದಕ್ಕಾಗಿ, ಸನ್ಮಾನಿಸಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಮಂಗಳೂರಿನ ಪ್ರತಿನಿಧಿಯಾಗಿ ವಿಷ್ಣುದಾಸ್ ಪಾಟೀಲ್, ಮುರಳೀಧರ್ ಪ್ರಭು ವಗ್ಗ, ರವೀಂದ್ರ ನಾಯಕ್, ಯಶವಂತ್ ನಾಯಕ್ ಶಕ್ತಿನಗರ ಮತ್ತು ಮನೋಜ್, ಬೆಂಗಳೂರು ಪ್ರತಿನಿಧಿಯಾಗಿ ರಮೇಶ್ ಅರೂರು, ರಾಜೇಂದ್ರ, ಮತ್ತು ಜಯಂತ್ ನಾಯಕ್ ಉಪಸ್ಥಿತರಿದ್ದರು.