ಸ್ವಾಮೀಜಿಯ ಭೇಟಿ

ಶ್ರೀಮಠ್ ಸಂಸ್ಥಾನ್ ದಾಭೋಳಿಯ ಸಂಜೀವಿನಿ ಸಮಾಧಿಸ್ಥ ಮಠಾಧೀಶ ಪರಮಪೂಜ್ಯ ಶ್ರೀಮದ್ ಪೂರ್ಣಾನಂದ ಸ್ವಾಮಿ ಮಹಾರಾಜ್ ಅವರ ಪವಿತ್ರ ಪಾದುಕೆಗಳೊಂದಿಗೆ ಕಿರಿಯ ಶ್ರೀಗಳಾದ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದಿಗ್ವಿಜಯ

ಸ್ಥಾನ ದಾಭೋಳಿಯ ಪರಮಪೂಜ್ಯ ಶ್ರೀಮತ್ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ಹನ್ನೆರಡು ದಿನಗಳ ಆಶೀರ್ವಚನ ಕಾರ್ಯಕ್ರಮಕ್ಕಾಗಿ ಮೇ 20ರಂದು ಜಿಲ್ಲೆಗೆ ಆಗಮಿಸಿದರು. ಪೂಜ್ಯರು ಕೂಳೂರಿನ ಫಲ್ಗುಣಿ ನದಿಯ ತಟದಲ್ಲಿ ಸಂಜೆ 5 ಗಂಟೆಗೆ ಪುರಪ್ರವೇಶ ಮಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಶ್ರೀ ರಮೇಶ್ ನಾಯಕ್ ಮೈರಾ ಇವರು ಶ್ರೀಗಳಿಗೆ ಹಾರಾರ್ಪಣೆ ಮಾಡಿದ ಬಳಿಕ ಬಾಜಾ ಭಜಂತ್ರಿಗಳೊಂದಿಗೆ ಹಲವು ವಾಹನಗಳ ಸಹಿತ ಪೂಜ್ಯರನ್ನು ಶಕ್ತಿನಗರದ ಶ್ರೀ ಶಾರದಾ ಚಂದ್ರಮೌಳೀಶ್ವರ ಧ್ಯಾನ ಮಂದಿರಕ್ಕೆ ಕರೆತರಲಾಯಿತು.

ದಿನಾಂಕ 24-05-2017ರಂದು ಸಂಜೆ ಗುರುಪೀಠ ಶೃಂಗೇರಿ ಶಾರದಾ ದೇವಿ ಕ್ಷೇತ್ರಕ್ಕೆ ಪೂಜ್ಯ ಸ್ವಾಮೀಜಿಯವರು ಭೇಟಿ ನೀಡಿದರು.

ಶಾರದಾಂಬೆಯ ದರ್ಶನ ಪಡೆದು ಸ್ವಲ್ಪ ಸಮಯ ಧ್ಯಾನ ನಿರತರಾಗಿ, ಬಳಿಕ ತುಂಗಭದ್ರಾ ನದಿ ಬಳಿ ಅನುಷ್ಠಾನಗೊಳಿಸಿದರು. ಶಂಕರಾಚಾರ್ಯ ಪೀಠದಲ್ಲಿ ಧ್ಯಾನ ನಿರತರಾದ ಬಳಿಕ ಭಿಕ್ಷೆ ಸ್ವೀಕರಿಸಿ ಮೊಕ್ಕಾಂ ಸ್ಥಳಕ್ಕೆ ಪ್ರಯಾಣಿಸಿದರು.
ಈ ಸಂದರ್ಭದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ದಿನಾಂಕ 21-5-2017ರಂದು ಪೂರ್ವಾಹ್ನ ಗಂಟೆ 8ಕ್ಕೆ ನಗರದ ಗೋಕರ್ಣನಾಥ ದೇವಸ್ಥಾನದ ಬಳಿ ಮಾತೆಯರಿಂದ ಪೂರ್ಣಕುಂಭ, ಮಂಗಳವಾದ್ಯ, ಚೆಂಡೆಗಳೊಂದಿಗೆ ವಿಶೇಷ ವಾಹನದಲ್ಲಿ ಪೂಜ್ಯರನ್ನು ಮಂಗಳೂರಿನ ಸಂಘನಿಕೇತನದ ಸಭಾಭವನಕ್ಕೆ ಕರೆತರಲಾಯಿತು. ಸಮಾಜ ಬಾಂಧವರಿಂದ ಸಾಮೂಹಿಕ ಪಾದುಕ ಪೂಜನದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ವಸಮಾಜದ ದೇವಸ್ಥಾನಗಳು, ಸಂಘ ಸಂಸ್ಥೆಗಳು, ಪುರೋಹಿತ ವೃಂದ, ವ್ಯಕ್ತಿಗತವಾಗಿ ಪೂಜ್ಯರಿಗೆ ಫಲ ತಾಂಬೂಲ, ಹಾರ, ಗುರು ಕಾಣಿಕೆಗಳೊಂದಿಗೆ ನಮನಪೂರ್ವಕ ಗೌರವಾರ್ಪಣೆ ನಡೆಯಿತು. ಬಳಿಕ ಸಮಾಜಕ್ಕೆ ವಿಶೇಷ ಸೇವೆ ಸಲ್ಲಿಸಿದ ವೇದಮೂರ್ತಿ ಸಂಜೀವ ಭಟ್ ಕಟ್ಟಣಿಗೆ, ಶ್ರೀ ಸಂಜೀವ ನಾಯಕ್ ಕಲ್ಲೇಗ, ಶ್ರೀ ಹೆನ್ನೂರು ಪ್ರಭಾಕರ ಪ್ರಭು, ಶ್ರೀ ಗಣಪತಿ ಶೆಣೈ ಡೆಚ್ಚಾರ್ ಹಾಗೂ ಶ್ರೀ ಮಠ್ ಸಂಸ್ಥಾನ್  ದಾಭೋಳಿಯ  ಆಡಳಿತ  ಮಂಡಳಿಗೆ  ವಿಶ್ವಸ್ಥರಾಗಿ  ಆಯ್ಕೆಗೊಂಡ   ಶ್ರೀ ಎಂ.ಎಂ. ಪ್ರಭು,    ಶ್ರೀ ರವೀಂದ್ರ ನಾಯಕ್ ಬೋಳಂಗಡಿ, ಶ್ರೀ ಪಾಂಡುರಂಗ ಪ್ರಭು, ಶ್ರೀ ಡಾ| ರಮೇಶ್ ಪ್ರಭು ಆರೂರು ಮುಂತಾದವರನ್ನು ಪೂಜ್ಯ ಸ್ವಾಮಿಗಳು ಫಲ ಮಂತ್ರಾಕ್ಷತೆ ಶಾಲು, ಹಾರ ಮತ್ತು ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು. ಅಂಕೋಲದ ರಾಮಚಂದ್ರ ಸಾಮಂತ್ ಇವರು ಮಠದ ಮಾಜಿ ಟ್ರಸ್ಟಿ ಆಗಿದ್ದರು ಮತ್ತು ಅಂಕೋಲ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಶ್ರೀ ಸೂರ್ಯ ನಾರಾಯಣ ದತ್ತಗುರು ಪಂಚಾಯತ್‍ನ ಮಂದಿರದ ಆಡಳಿತ ಸದಸ್ಯರಾಗಿದ್ದು, ಇವರನ್ನು ಪೂಜ್ಯ ಸ್ವಾಮೀಜಿಯವರು, ಫಲ ಮಂತ್ರಾಕ್ಷತೆ ಹಾಗೂ ಶಾಲು ಹಾರ ಹಾಕಿ ಅಭಿನಂದಿಸಿದರು.

    ಸಭಾ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಶ್ರೀ ರಮೇಶ್ ನಾಯಕ್ ಮೈರಾ ಸ್ವಾಗತಿಸಿ, ದಾಭೋಳಿ ಮಠದ ಟ್ರಸ್ಟಿ ಶ್ರೀ ಎಂ.ಎಂ. ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀ ಸಂಜಯ್ ಪ್ರಭು ವಂದಿಸಿ, ಡಾ| ವಿಜಯಲಕ್ಷ್ಮೀ ನಾಯಕ್ ಅಭಿನಂದನೆಯನ್ನು ನೆರವೇರಿಸಿಕೊಟ್ಟರು. ಶ್ರೀ ಶಾಂತರಾಮ ಮುಚ್ಲುಕೋಡಿ ಕಾರ್ಯಕ್ರಮ ನಿರೂಪಿಸಿದರು.

    ಸಭಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಿತಾರ್ ವಾದಕ ಕೊಚ್ಚಿಕಾರ್ ಶ್ರೀ ದೇವ್‍ದಾಸ್ ಪ್ರಭು ಅವರು ಸಿತಾರ ವಾದನದ ಮೂಲಕ ಸಂಗೀತದ ಇಂಪು ನೀಡಿದರು.

    ಅಪರಾಹ್ನ ವಿಶೇಷ ಪಾದುಕಾ ಪೂಜನಗಳು ಜರುಗಿದವು. ಸಂಜೆ 7ರಿಂದ ಶಕ್ತಿ ನಗರದ ಚಂದ್ರ ಮೌಳೀಶ್ವರ ಧ್ಯಾನ ಮಂದಿರ, ಕರಾಡ ಭವನದಲ್ಲಿ ಅರೆಹೊಳೆ ಪ್ರತಿಷ್ಠಾನದವರು ಪೌರಾಣಿಕ ರೂಪಕವನ್ನು ಒಳಗೊಂಡ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿದರು ಮತ್ತು ಕುಲಶೇಖರದ ಶ್ರೀಮತಿ ಸುಧಾ ಮತ್ತು ಸಹೋದರಿಯರು ಮತ್ತು ಮಕ್ಕಳು ಸೇರಿ ನಾಮ ಸಂಕೀರ್ತನ ನಡೆಸಿಕೊಟ್ಟರು.

 

    ಮೇ   21ರಂದು   ಸಂಘನಿಕೇತನದಲ್ಲಿ   ಶ್ರೀ   ಸಂಜೀವ  ನಾಯಕ್  ಕಲ್ಲೆಗ,ಶ್ರೀ  ಗಣಪತಿ  ಶೆಣೈ  ಡೆಚ್ಚಾರು,   ಶ್ರೀ ವೇದಮೂರ್ತಿ   ಸಂಜೀವ  ಭಟ್  ಕಟ್ಟಣಿಗೆ, ಶ್ರೀ ಗೋಪಾಲಕೃಷ್ಣ ನಾಯಕ್ ಮಟ್ಪಾಡಿ ಕಲ್ಲಡ್ಕ, ಶ್ರೀ ಹೆನ್ನೂರು ಪ್ರಭಾಕರ ಪ್ರಭು ಬೆಂಗಳೂರು ಮತ್ತು ಶ್ರೀಮಠ್ ಸಂಸ್ಥಾನ್ ದಾಭೋಳಿ ಇದರ ಆಡಳಿತ ಮಂಡಳಿಗೆ ಪ್ರಥಮ ಬಾರಿ ಆಯ್ಕೆಗೊಂಡ ವಿಶ್ವಸ್ಥರನ್ನು ಪೂಜ್ಯ ಶ್ರೀಗಳು ಅಭಿನಂದಿಸಿದರು.

 ಶ್ರೀಗಳು ಸಮಾಜದಿಂದ ಪ್ರಾಯೋಜಿತವಾದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಮಂಗಳೂರಿನ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಸಹಕಾರಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಪೂಜ್ಯರಿಗೆ ಫಲ, ಪುಷ್ಪ, ವಿಶೇಷ ಲಕ್ಷ್ಮೀ ದೇವಿಯ ಮೂರ್ತಿ ಹಾಗೂ ಧಾರ್ಮಿಕ ಗ್ರಂಥಗಳನ್ನು ನೀಡಿ ಸಕಲ ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಿ, ಗೌರವಿಸಲಾಯಿತು.

    ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯ ಮಹನೀಯರು, ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗ ಫಲ ಪುಷ್ಪ ಗುರುಕಾಣಿಕೆಗಳನ್ನು ನೀಡಿ ಪೂಜ್ಯರಿಂದ ಆಶೀರ್ವಾದ ಪಡೆದರು. ಪೂಜ್ಯರು ತಮ್ಮ ಆಶೀರ್ವಚನದಲ್ಲಿ “ಸಮಾಜದವರು ಇಂತಹ ಒಂದು ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸಿ, ನಡೆಸಿಕೊಂಡು ಬರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಶುಭ ಹಾರೈಸಿದರು.

 ಮೇ 23ರಂದು ಕರ್ಪೆ, ತೋಟ ಎಂಬಲ್ಲಿ ನೂತನ ಗೃಹ ‘ಶ್ರೀರಾಮ್’ ಇದರ ಗೃಹ ಪ್ರವೇಶ ಹಾಗೂ ಭೀಮರತಿ ಶಾಂತಿಯೊಂದಿಗೆ 70ನೇ ಜನ್ಮ ದಿನದ ಸಂಭ್ರಮಾಚರಣೆಯನ್ನು ಆಚರಿಸಿದ ಸಮಾಜದ ಪ್ರಖ್ಯಾತ ಗ್ರಾಮೀಣ ಪ್ರದೇಶದ ವೈದ್ಯ ಡಾ| ರಾಮರಾಯ ಪ್ರಭು ಕರ್ಪೆ ಇವರ ನೂತನ ಗೃಹಕ್ಕೆ ಶ್ರೀಗಳು ಭೇಟಿ ನೀಡಿ ಫಲ ಪುಷ್ಪಾದಿಗಳನ್ನು ಸ್ವೀಕರಿಸಿ, ಕುಟುಂಬಸ್ಥರಿಗೆ ಮತ್ತು ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

 

 ಮೇ 23ರಂದು ಶ್ರೀಗಳು ಪೂರ್ವಾಹ್ನ 8ಕ್ಕೆ ಮೊಕ್ಕಾಂ ಸ್ಥಳದಿಂದ ಗಂಜಿಮಠದ ಗಣಪತಿ ದೇವಸ್ಥಾನಕ್ಕೆ ಫಲ, ಪುಷ್ಪ ಕಾಣಿಕೆಯನ್ನು ಸಲ್ಲಿಸಿದರು. ತದನಂತರ ಹೊರಟು ಎಡಪದವು ಶ್ರೀರಾಮ ಭಜನಾ ಮಂದಿರಕ್ಕೆ ಆಗಮಿಸುವಾಗ ಬ್ರಿಂಡೇಲ್-ಒಡ್ಡೂರು-ಇರುವೈಲು ವಲಯದ ವತಿಯಿಂದ ಅದ್ಧೂರಿಯ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸಾಮೂಹಿಕ ಪಾದುಕಾ ಪೂಜನ, ಆಶೀರ್ವಚನ, ಗುರು ಸಮಾರಾಧನೆ ನಡೆಯಿತು. ಈ ಸಂದರ್ಭದಲ್ಲಿ ವೇದಮೂರ್ತಿ ಸಂಜೀವ ಭಟ್ ಕಟ್ಟಣಿಗೆ, ಮೋಹನ್ ನಾಯಕ್ ಒಡ್ಡೂರು, ವಾಸುದೇವ ಸಾಮಂತ್ ಕಟ್ಟಣಿಗೆ, ಬಾಲಕೃಷ್ಣ ನಾಯಕ್ ಬ್ರಿಂಡೇಲ್, ಗಣೇಶ್ ಪ್ರಭು ಮಜಲುಕೋಡಿ, ಚಿದಾನಂದ ಒಡ್ಡೂರು, ಪ್ರಭಾಕರ ಪ್ರಭು ಒಡ್ಡೂರು, ದಿನೇಶ್ ಪ್ರಭು ಪಂಜ, ಸುರೇಶ್ ನಾಯಕ್ ಮತ್ತಿತರ ಸಮಾಜ ಬಾಂಧವರು ಉಪಸ್ಥಿತರಿದ್ದರು.
 

ಪೂಜ್ಯರು ಬೆಳ್ತಂಗಡಿಯ ವೇಣೂರಿನ ವತ್ಸಲಾ ಅಣ್ಣಪ್ಪ ನಾಯಕ್ ಅವರ ‘ಎಕ್ವಾ ಸೂಪರ್’ ಹೆಸರಿನ ಶುದ್ಧ ಕುಡಿಯುವ ನೀರಿನ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು. ಸಮಾಜದವರ ಇಂತಹ ಉದ್ಯಮಶೀಲತೆಯನ್ನು ಸ್ವಾಮೀಜಿಯವರು ಮೆಚ್ಚಿ, ಪ್ರೋತ್ಸಾಹಿಸಿದರು ಮತ್ತು ಅವರ ಮನೆಗೆ ಭೇಟಿ ನೀಡಿ ಆಶೀರ್ವದಿಸಿದರು.
 

ಸಮಾಜದ ಕೊಡುಗೈದಾನಿ ಹಾಗೂ ಮಂಗಳೂರು ವಲಯದ ಅಧ್ಯಕ್ಷ ಶ್ರೀ ವಿಜಯ ಶೆಣೈ ಕೊಡಂಗೆ ಇವರು ಸ್ವಾಮೀಜಿಯವರನ್ನು ಬಹಳ ಆದರದಿಂದ ಫಲ, ಪುಷ್ಪ, ಕಾಣಿಕೆ ನೀಡಿ ಗೌರವಿಸಿದರು. ಇವರಿಗೆ ಮತ್ತು ಕುಟುಂಬಸ್ಥರಿಗೆ ಸ್ವಾಮೀಜಿಯವರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
 

 ಶ್ರೀಮಠ್ ಸಂಸ್ಥಾನ್ ದಾಭೋಳಿಯ ಪರಮಪೂಜ್ಯ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದ.ಕ. ಜಿಲ್ಲೆಯಲ್ಲಿ ಪೂಜ್ಯರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರು ಗೌರವಾದರದಿಂದ ಪೂಜ್ಯರನ್ನು ಬರ ಮಾಡಿಸಿಕೊಂಡರು. ಇಬ್ಬರು ಶ್ರೀಗಳು ತಮ್ಮ ತಮ್ಮ ಮಠಗಳು ಮತ್ತು ಇವತ್ತಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಸ್ಥಿತಿಗತಿಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ಸುಬ್ರಹ್ಮಣ್ಯ ಶ್ರೀಗಳು ಮಠದ ಸದ್ಗತಿಗೆ ಅನುಸಾರವಾಗಿ ಪೂಜ್ಯ ಶ್ರೀಗಳನ್ನು ಶಾಲು ಹೊದಿಸಿ, ಫಲ ಪುಷ್ಪಗಳನ್ನು ನೀಡಿ ಗೌರವಿಸಿ, ಮಗದೊಮ್ಮೆ ಕ್ಷೇತ್ರಕ್ಕೆ ಆಗಮಿಸುವಂತೆ ಹಾಗೂ ಶ್ರೀಮಠ್ ಸಂಸ್ಥಾನ್ ದಾಭೋಳಿಗೆ ಅವಕಾಶ ದೊರಕಿದಾಗ ತಾವು ಬರುವುದಾಗಿ ತಿಳಿಸಿದರು.
 

 24-05-2017ರಂದು ಕುಡಾಲ ದೇಶಸ್ಥ ಗೌಡ್ ಬ್ರಾಹ್ಮಣ ಸಂಘ (ರಿ.) ಮಂಗಳಧಾಮ, ವಗ್ಗ ಇಲ್ಲಿಯ ಶ್ರೀ ಪೂರ್ಣಾನಂದ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಾಜ ಬಾಂಧವರು ಶ್ರೀಗಳನ್ನು ಪೂರ್ಣಕುಂಭ ಕಲಶದೊಂದಿಗೆ ಬರಮಾಡಿಕೊಂಡಾಗ ಅಧ್ಯಕ್ಷರಾದ ಶ್ರೀ ಡೆಚ್ಚಾರು ಗಣಪತಿ ಶೆಣೈ, ಕಾರ್ಯದರ್ಶಿಗಳಾದ ವೆಂಕಟ್ರಾಯ ಪ್ರಭು ಪೂರ್ಲಪಾಡಿ ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಭಕ್ತಾದಿಗಳನ್ನು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
 

 “ನಿಷ್ಕಲ್ಮಷ ಭಾವದಿಂದ ಭಗವಂತನ್ನು ಪ್ರಾರ್ಥಿಸಿದಾಗ ಉತ್ತಮ ಫಲ ದೊರಕುವುದು. ನಮ್ಮ ಕರ್ತವ್ಯವನ್ನು ಸದಾಚಾರದಿಂದ ನಿರ್ವಹಿಸಿದಾಗ ಫಲವನ್ನು ಭಗವಂತ ದಯಪಾಲಿಸು ತ್ತಾನೆ” ಎಂದು ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಶ್ರೀಮಠ್ ಸಂಸ್ಥಾನ್ ದಾಭೋಳಿಯ ಕಿರಿಯ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ಬಂಟ್ವಾಳ ತಾಲೂಕಿನ ವಾಮದಪದವು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ  ಭೇಟಿ ನೀಡಿದ ಸಂದರ್ಭದಲ್ಲಿ ಆಶೀರ್ವಚನ ಮಾತುಗಳಲ್ಲಿ ತಿಳಿಸಿದರು.

    ಈ ಸಂದರ್ಭ ಶ್ರೀಮತ್ ಪೂರ್ಣಾನಂದ ಸ್ವಾಮಿ ಮಹಾರಾಜ್ ಅವರ ಪಾದುಕಾ ಪೂಜೆ ನಡೆಯಿತು. ಶ್ರೀಮಠ್ ಸಂಸ್ಥಾನ್ ದಾಭೋಳಿಯ ಸಂಜೀವಿನಿ ಸಮಾಧಿಸ್ಥ ಮಠಾಧೀಶ ಶ್ರೀಮತ್  ಪೂರ್ಣಾನಂದ  ಸ್ವಾಮಿ  ಮಹಾರಾಜ್  ಅವರ  ಪವಿತ್ರ ಪಾದುಕೆಗಳೊಂದಿಗೆ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಆಗಮಿಸಿದ್ದು, ಅವರನ್ನು ಕರ್ಪೆ, ಸಂಗಬೆಟ್ಟು, ವಾಮದಪದವು ಸಮಾಜದವರು ಪೂರ್ಣಕುಂಭ ಸ್ವಾಗತದೊಂದಿಗೆ ಗೌರವಿಸಿದರು.

    ಈ ಸಂದರ್ಭದಲ್ಲಿ ಡಿ. ರಮೇಶ್ ನಾಯಕ್ ಮೈರಾ, ಎಂ.ಎಂ. ಪ್ರಭು ಮಂಗಳೂರು, ಗಣಪತಿ ಶೆಣೈ ಡೆಚ್ಚಾರ್, ನಿತ್ಯಾನಂದ ಭಟ್ ಬರೆಪ್ಪಾಡಿ, ಡಾ| ವಿಜಯಲಕ್ಷ್ಮೀ ನಾಯಕ್, ಪ್ರಭಾಕರ ಪ್ರಭು ನಡಿಬೈಲು, ರವೀಂದ್ರ ನಾಯಕ್ ಬೋಳಂಗಡಿ, ರವೀಂದ್ರ ಪ್ರಭು ಅರಮನೆ, ಗಣಪತಿ ನಾಯಕ್ ದೇವರಮನೆ, ರವೀಂದ್ರ ನಾಯಕ್ ಕಿನ್ನಾಜೆ, ಶಶಿಧರ ಶೆಣೈ, ವಿದ್ಯಾಧರ ಪ್ರಭು ದೋಟ, ಗಣೇಶ್ ಪ್ರಭು ಓಮ, ಪ್ರಭಾಕರ ಪ್ರಭು ಬಸ್ತಿಕೋಡಿ, ಮುರಳೀಧರ ಪ್ರಭು, ರಾಮರಾಯ ಪ್ರಭು, ಸದಾಶಿವ ಪ್ರಭು ನಯನಾಡು, ಪ್ರಕಾಶ್ ಪ್ರಭು ಗುಂಡಿದಡ್ಡ, ನವೀನ ಶೆಣೈ ಮೂರ್ಜೆ, ವಿಶ್ವನಾಥ ನಾಯಕ್ ಪರಾರಿ, ಸುಜಯ ಪ್ರಭು ಓಮ, ಪುರಂದರ ನಾಯಕ್ ವಾಮದಪದವು, ದಿನೇಶ್ ನಾಯಕ್, ರಾಜೇಶ್ ನಾಯಕ್ ಬಿಲ್ಲಾಡಿ, ಶಿವರಾಮ ನಾಯಕ್, ರಾಘವೇಂದ್ರ ಪ್ರಭು, ಸದಾಶಿವ ನಾಯಕ್, ಗಣೇಶ್ ಪ್ರಭು ಭವಂತಬೆಟ್ಟು, ವಾಮದಪದವು ಪೂರ್ಣಾನಂದ ಕ್ರಿಕೇಟರ್ಸ್‍ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
 

ದಿನಾಂಕ 25-05-2017ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವ ಆತ್ಮೀಯತೆಯೊಂದಿಗೆ ಬರಮಾಡಿಸಿಕೊಂಡು ಶಾಲು ಹೊದಿಸಿ ಶ್ರೀ ಲಕ್ಷ್ಮೀ ದೇವಿಯ ವಿಗ್ರಹ ನೀಡಿ ಗೌರವಿಸಿದರು. ಧರ್ಮಸ್ಥಳದ ಬಹುಮುಖಿ ಸಮಾಜ ಸೇವಾ ಕಾರ್ಯಗಳಾದ ಗ್ರಾಮೀಣಾಭಿವೃದ್ಧಿ, ಸ್ತ್ರೀ ಸಬಲೀಕರಣ, ಮದ್ಯವರ್ಜನ ಶಿಬಿರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ, ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
 

ಸರಪಾಡಿ ರತ್ನಾಕರ್ ಭಟ್ ಅವರ ಮದ್ದಡ್ಕದಲ್ಲಿರುವ ವೇದಾಶ್ರಯ ಮನೆಗೆ ಶ್ರೀಗಳನ್ನು ಮದ್ದಡ್ಕದಿಂದ ಪೂರ್ಣ ಕುಂಭ ಸ್ವಾಗತದ ಮೂಲಕ ಬರಮಾಡಿಕೊಂಡರು, ಮತ್ತು ಮನೆಯಲ್ಲಿ ಪಾದುಕಾ ಪೂಜೆಯನ್ನು ನೆರವೇರಿಸಿ ಫಲ ಮಂತ್ರಾಕ್ಷತೆ ಸ್ವೀಕರಿಸಿದರು ಮತ್ತು ಶ್ರೀಗಳು ಅವರ ಕುಟುಂಬದವರನ್ನು ಮತ್ತು ಮನೆಯಲ್ಲಿ ನೆರೆದಿದ್ದ ಸಮಾಜ ಬಾಂಧವರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
 

 “ನಾವು ದೇವರ ದಾಸರಾಗಬೇಕು, ಹೇಗೆ ಆಹಾರ ಸೇವಿಸುವಾಗ, ಉಡುಗೆ ತೊಡುವಾಗ ಒಳ್ಳೆಯದನ್ನು ಬಯಸುತ್ತೇವೆಯೋ ಹಾಗೆಯೇ ದೇವರನ್ನು ಪೂಜಿಸುವಾಗ, ಧ್ಯಾನ, ಜಪ ಮಾಡುವಾಗ ಒಳ್ಳೆಯ ಮನಸ್ಸಿನಿಂದ, ಸಮಚಿತ್ತದಿಂದ ಮಾಡಿದರೆ ಭಗವಂತನ ದಯೆ ಪ್ರಾಪ್ತಿಯಾಗುತ್ತದೆ. ನಾವು ಯಾವಾಗಲೂ ನಿರ್ಗುಣದಿಂದ ಸದ್ಗುಣದ ಪಥದತ್ತ ನಡೆಯಬೇಕು” ಎಂದು ದಾಭೋಳಿ ಮಠದ ಸ್ವಾಮೀಜಿ ಶ್ರೀ ದತ್ತಾನಂಧ ಸರಸ್ವತಿ ಸ್ವಾಮೀಜಿ ಹೇಳಿದರು.

    ಅವರು ಪುಂಜಾಲಕಟ್ಟೆಯ ನಂದಗೋಕುಲ ಸಭಾಭವನದಲ್ಲಿ ಜರಗಿದ ಸಮಾರಂಭದಲ್ಲಿ ಬೆಳ್ತಂಗಡಿ ವಲಯದ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜ ಬಾಂಧವರಿಗೆ ಆಶೀರ್ವಚನ ನೀಡಿ ಮಾತನಾಡಿದರು.

    ಮಂಗಳೂರಿನಿಂದ ಆಗಮಿಸಿದ ಶ್ರೀಗಳನ್ನು ಪುಂಜಾಲಕಟ್ಟೆಯ ದೈಕಿನಕಟ್ಟೆಯಿಂದ ವಾಹನ ಜಾಥಾದ ಮೂಲಕ ಕರೆತಂದು ಪೂರ್ಣಕುಂಭ ಸ್ವಾಗತ ನೀಡಲಾಯಿತು. ತದನಂತರ ಸಾಮೂಹಿಕ ಪಾದುಕಾ ಪೂಜನ, ಗುರುಗಳ ಆಶೀರ್ವಚನ, ಭಜನಾ ಕಾರ್ಯಕ್ರಮ, ಗುರು ಸಮಾರಾಧನೆ ಮೊದಲಾದ ಕಾರ್ಯಕ್ರಮಗಳು ನಡೆದವು. ಬೆಳ್ತಂಗಡಿ ವಲಯದ ಸ್ವಾಗತ ಸಮಿತಿಯ ಅಧ್ಯಕ್ಷ ದಯಾನಂದ ನಾಯಕ್, ಕಾರ್ಯಾಧ್ಯಕ್ಷ ಪ್ರಭಾಕರ ಪ್ರಭು ವೇಣೂರು, ಗೌರವಾಧ್ಯಕ್ಷ ದೇವಣ್ಣ ಪ್ರಭು, ಪ್ರಧಾನ ಕಾರ್ಯದರ್ಶಿ ಯೋಗೀಶ್ ನಾಯಕ್, ಉಪಾಧ್ಯಕ್ಷರಾದ ವಿಶ್ವನಾಥ   ಶೆಣೈ,   ಪ್ರಭಾಕರ್  ಭಟ್  ಇಡ್ಯ,  ಸತೀಶ್  ಪ್ರಭು,  ಸುಧಾಕರ  ಪ್ರಭು,ನಂದನ್ ಶೆಣೈ ಪೆರ್ಮರೋಡಿ, ದೇವಿಪ್ರಸಾದ್, ತಾರಾ ಪ್ರಭು, ಯಶವಂತ ನಾಯಕ್, ಗೌರವ ಸಲಹೆಗಾರರಾದ ಬಾಲಕೃಷ್ಣ ಶೆಣೈ, ಮೋಹನ್ ಪ್ರಭು, ಸದಾಶಿವ ಪ್ರಭು ನೈನಾಡು, ಕಾರ್ಯದರ್ಶಿಗಳಾದ   ರಮೇಶ್   ನಾಯಕ್   ಉಜಿರೆ,   ಗೋವಿಂದ   ಸಾಮಂತ್,ಸುರೇಶ್  ನಾಯಕ್,  ಪ್ರದೀಪ್  ನಾಯಕ್,  ವತ್ಸಲಾ  ನಾಯಕ್,  ಸುಮಂಗಲಾ  ಪ್ರಭು,ಮಾಲತಿ ಪ್ರಭು, ವೀಣಾ ನಾಯಕ್, ಪ್ರಭಾಕರ ಪ್ರಭು ಸದಸ್ಯರಾದ ವಿನೋದ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಶ್ರೀಗಳಿಂದ ಆಶೀರ್ವಾದ ಪಡೆದರು.
 

  ಸಿದ್ದಕಟ್ಟೆ, ಅಸೈ, ಶ್ರೀ ಮೋಹನ್ ನಾಯಕ್ ಅವರು ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳನ್ನು ಮನೆಗೆ ಬರಮಾಡಿಕೊಂಡರು. ಶ್ರೀ ಮೋಹನ್ ನಾಯಕ್ ಕುಟುಂಬಸ್ಥರಿಗೆ ಮತ್ತು ಸೇರಿದ್ದ ಸಮಾಜ ಬಾಂಧವರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
 

  27-05-2017 ಅಪರಾಹ್ನ 3 ಗಂಟೆಗೆ ಕಲ್ಲಡ್ಕ ಶ್ರೀ ಮೀನಾಕ್ಷಿ ಕಲಾ ಮಂದಿರದಲ್ಲಿ ಪೂಜ್ಯರ ಸಮ್ಮುಖದಲ್ಲಿ ಭಗಿನಿಯರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶ್ರೀ ವೈಭವ ಲಕ್ಷ್ಮೀ ಪೂಜನ ನಡೆಸಿದರು. ಜತೆಯಲ್ಲಿ ಪೂಜ್ಯರಿಂದ ಆಶೀರ್ವಚನ ರೂಪದಲ್ಲಿ ಪಡೆದುಕೊಂಡ ಲಲಿತಸಹಸ್ರನಾಮ ಪುಸ್ತಕವನ್ನು ಸಾಮೂಹಿಕವಾಗಿ ಪಠಿಸಿದರು. ಶ್ರೀ ದೇವಿಯ ಭವ್ಯ ಅಲಂಕಾರ, ಪೂಜಾ ವಿಧಿಗಳು ಎಲ್ಲರ ಮನಸ್ಸಿನಲ್ಲಿ ದೈವಿಕ ಭಾವನೆ ಉಂಟು ಮಾಡಿತು.
 

 ಮೇ 27ರಂದು ಶ್ರೀಮದ್ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಮಹಮ್ಮಾಯಿ ದೇವಸ್ಥಾನ, ಮುಲಾರು ಇಲ್ಲಿಗೆ ಭೇಟಿ ನೀಡಿದಾಗ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ದೇವರ ದರ್ಶನ ಪಡೆದರು. ಸಾಮೂಹಿಕ ಪಾದುಕಾ ಪೂಜೆ ಬಳಿಕ ಸಮಾಜ ಬಾಂಧವರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಆ ಸಂದರ್ಭದಲ್ಲಿ ನಾರಾಯಣ ನಾಯಕ್ ದರ್ಬೆ, ವೆಂಕಟ್ರಾಯ ಪ್ರಭು ಕಲ್ಲಡ್ಕ, ಮೋಹನ ಪ್ರಭು ಅಡ್ಯೆ, ರಮೇಶ್ ಭಟ್ ಮುಲಾರು, ರಾಮಗಣೇಶ್ ಪ್ರಭು ನೇರಳಕೋಡಿ, ಶಾಂತಾರಾಮ್ ಪ್ರಭು ಮುಚ್ಚಿಲಕೋಡಿ, ಪ್ರಶಾಂತ್ ಭಟ್ ಮುಲಾರು, ರಮೇಶ ಪ್ರಭು ಬಾಯಿಲ, ಹರೀಶ್ ನಾಯಕ್ ನಟ್ಟಿಬೈಲು, ರವೀಂದ್ರ ನಾಯಕ್ ಮುಲಾರು, ನಿತ್ಯಾನಂದ ಭಟ್ ಬರೆಪ್ಪಾಡಿ, ರಾಜಾರಾಮ್ ನಾಯಕ್ ಕಲಾಯಿ, ರಮೇಶ್ ನಾಯಕ್ ಗುಂಡೂರು, ಕರುಣಾಕರ ಪ್ರಭು ಬಾಯಿಲ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
 
    

ಪುತ್ತೂರು ಪುರುಷರಕಟ್ಟೆ ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರಕ್ಕೆ ಜಾಗ ನೀಡಿದ ಪುರುಷರಕಟ್ಟೆ ಉದಯಭಾಗ್ಯ ಹೋಟೇಲ್ ಮಾಲಕ ಸುರೇಶ್ ಪ್ರಭು ಅವರ  ‘ಉದಯಭಾಗ್ಯ’  ಮನೆಗೆ  ಭೇಟಿ   ನೀಡಿದರು.   ಪಾದುಕಾ  ಪೂಜೆ  ನಡೆದ  ಬಳಿಕ ಸುರೇಶ್ ಪ್ರಭು ಕುಟುಂಬಸ್ಥರಿಗೆ ಮತ್ತು ಸೇರಿದ್ದ ಸಮಾಜ ಬಾಂಧವರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
 

ಶ್ರೀಮಠ್ ಸಂಸ್ಥಾನ್ ದಾಭೋಳಿಯಲ್ಲಿ ವೈದಿಕ ಅಧ್ಯಯನ ಮಾಡಿದ ಶ್ರೀ ದೇವಿಪ್ರಸಾದ್ ಭಟ್ ಅವರ ಮನೆಗೆ ಭೇಟಿ ನೀಡಿದ ಶ್ರೀಗಳು ಫಲ ಸ್ವೀಕರಿಸಿ, ಶ್ರೀ ದೇವಿ ಪ್ರಸಾದ್ ಭಟ್ ಮತ್ತು ಅವರ ತಂದೆ-ತಾಯಿ ಹಾಗೂ ಮನೆಯವರನ್ನು ಆಶೀರ್ವದಿಸಿದರು.
 

 ಕಾರಿನಲ್ಲಿ ಆಗಮಿಸಿದ ಶ್ರೀಮದ್ ದತ್ತಾನಂದ ಸರಸ್ವತಿ ಸ್ವಾಮೀಜಿಯವರನ್ನು ದರ್ಬೆ ವೃತ್ತದಲ್ಲಿ  ಸ್ವಾಗತಿಸಲಾಯಿತು.  ಪುತ್ತೂರು   ವಲಯ   ಸ್ವಾಗತ   ಸಮಿತಿ   ಗೌರವಾಧ್ಯಕ್ಷ ಡಾ| ಭಾಸ್ಕರ ಎಂ. ಅವರು ಮಲ್ಲಿಗೆ ಹಾರ ಹಾಕಿ ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಮಂತ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಸ್ವಾಮೀಜಿಯವರನ್ನು 100ಕ್ಕೂ ಮಿಕ್ಕಿದ ವಾಹನ ಜಾಥಾದಲ್ಲಿ ಪುರುಷಕಟ್ಟೆಗೆ  ಕರೆದುಕೊಂಡು ಹೋಗಲಾಯಿತು.

    ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ಕಟ್ಟೆಯ ಬಳಿಯಿಂದ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದಾಭೋಲಿಪುರ ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರಕ್ಕೆ ಕರೆದುಕೊಂಡು ಬರಲಾಯಿತು. ರಸ್ತೆಯಿಂದ ಭಜನಾ ಮಂದಿರಕ್ಕೆ ಬರುವ ದಾರಿಯುದ್ದಕ್ಕೂ   ಸ್ವಾಮೀಜಿಯವರ   ಪಾದಗಳಿಗೆ   ಪುಷ್ಪಾರ್ಚನೆ   ಮಾಡಿ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಚೆಂಡೆ, ಸಾಕ್ಸೋಫೋನ್ ವಾದನ ಅಳವಡಿಸಲಾಗಿತ್ತು.

    ಬಳಿಕ ಭಜನಾ ಮಂದಿರದ ಬಳಿಯ ಸಭಾಭವನದಲ್ಲಿ ದಾಭೋಲಿಯ ಸಂಜೀವಿನಿ ಸಮಾಧಿಸ್ಥ ಮಠಾಧೀಶ ಶ್ರೀಮದ್ ಪೂರ್ಣಾನಂದ ಸ್ವಾಮಿ ಮಹಾರಾಜ್‍ರ ಪಾದುಕೆಗಳಿಗೆ ಸಾಮೂಹಿಕ ಪಾದುಕೆ ಪೂಜೆ ನಡೆಯಿತು. ನೂರಾರು ಮಂದಿ ಪಾದುಕೆ ಪೂಜೆ ಮಾಡಿಸಿದರು. ಶ್ರೀ ಗುರು ಪೂರ್ಣಾನಂದ ಭಜನಾ ಮಂಡಳಿಯವರಿಂದ ಈ ಸಂದರ್ಭದಲ್ಲಿ  ಪಾದುಕಾ ಪೂಜೆ ನಡೆಯಿತು.
    ಕಾರ್ಯಕ್ರಮದಲ್ಲಿ ಪುತ್ತೂರು ವಲಯ ಅಲ್ಲದೆ ಹೊರ ತಾಲೂಕಿನ ಸಮಾಜ ಬಾಂಧವರೂ ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲರವರು ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

    ಸನ್ಮಾನ: ಶ್ರೀ ಗುರು ಪೂರ್ಣಾನಂದ ಭಜನಾ ಮಂಡಳಿಯವರಿಗೆ ಪ್ರಾರಂಭದಲ್ಲಿ ಒಂದು ವರ್ಷ ಕಾಲ ಭಜನೆ ನಡೆಸಲು ತನ್ನ ಮನೆಯಲ್ಲಿ ಸ್ಥಳಾವಕಾಶ ನೀಡಿ ಸಹಕರಿಸಿದ ಶ್ರೀನಿವಾಸ ನಾಯಕ್  ಪಾದೆ,   ಭಜನಾ   ಮಂದಿರ   ನಿರ್ಮಿಸಲು   ಜಾಗ   ನೀಡಿದ ಸುರೇಶ್ ಪ್ರಭು ಉದಯ ಭಾಗ್ಯ ಮತ್ತು ದ.ಕ. ಜಿಲ್ಲಾ ಸ್ವಾಗತ ಸಮಿತಿಯ ಅಧ್ಯಕ್ಷ ರಮೇಶ್ ನಾಯಕ್ ಮೈರಾ ಅವರನ್ನು ಸ್ವಾಮೀಜಿಯವರು ಶಾಲು, ಫಲಪುಷ್ಪ, ಸ್ಮರಣಿಕೆ ಹಾಗೂ ಮಂತ್ರಾಕ್ಷತೆ ನೀಡಿ ಸನ್ಮಾನಿಸಿದರು.

        ಪುತ್ತೂರು   ವಲಯ   ಸ್ವಾಗತ   ಸಮಿತಿಯ   ರಾಮಕೃಷ್ಣ   ಪ್ರಭು   ಸವಣೂರು,ಮಹೇಶ್ ಪ್ರಭು ಮಣಿಯ, ಕೋಶಾಧಿಕಾರಿ ಪದ್ಮನಾಭ ಪ್ರಭು ಬೀರ್ನಹಿತ್ಲು, ಉಪಾಧ್ಯಕ್ಷರುಗಳಾದ ಸತೀಶ್ ಪ್ರಭು ಮಣಿಯ, ಸೀತಾರಾಮ ಪ್ರಭು ಕಲ್ಯಾರು, ಸುರೇಶ್ ಪ್ರಭು ಶೆಟ್ಟಿಮಜಲು, ಬಾಲಕೃಷ್ಣ   ನಾಯಕ್   ಉದ್ದಮಜಲು,   ಉಮೇಶ್   ಶೆಣೈ   ಆರ್ಯಮುಗೇರು, ಬಾಲಕೃಷ್ಣ ನಾಯಕ್ ಮಜಲು, ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರದ ಅಧ್ಯಕ್ಷೆ ವಿಮಲ  ನಾಯಕ್  ಎಲಿಕ,  ಗಣೇಶ್  ಪ್ರಭು   ಕಲ್ಯಾರು,   ಗೀತಾ   ಶೆಣೈ   ಮಣಿಯ, ಶಾಂತಾರಾಮ ಪ್ರಭು ಎಲಿಕ, ಹರಿಕೃಷ್ಣ ನಾಯಕ್ ಮಜಲು, ದೇವಿಪ್ರಸಾದ್ ಭಟ್ ಮಜಪ್ಪಾಲ, ಚಂದ್ರಹಾಸ ಪ್ರಭು ಪುರುಷರಕಟ್ಟೆ, ರಾಧಿಕಾ ಸಾಮಂತ್ ನೆಕ್ರಾಜೆ, ಸುಭಾಶ್ಚಂದ್ರ ನಾಯಕ್ ಮಜಲು ಹಾಗೂ ವಿಜೇಶ್ ನಾಯಕ್ ಮಜಲು, ನವೀನ್ ಪ್ರಭು, ಅನಿಲ್ ಪ್ರಭು ಮತ್ತು ದೇವಿಪ್ರಸಾದ್,  ಮೋಹನ್  ನಾಯಕ್,   ಸಂಜನಾ  ನಾಯಕ್,   ಸೃಜನ್   ನಾಯಕ್, ನವೀನ್ ನಾಯಕ್, ವಾಸುದೇವ ನಾಯಕ್, ಸುಶಾಂತ್ ನಾಯಕ್, ಪ್ರಶಾಂತ್ ನಾಯಕ್, ಕೇಶವ    ಎಂ.,    ಸುರೇಶ್    ಪ್ರಭು    ಉದಯ  ಭಾಗ್ಯ, ಹರೀಶ್  ನಾಯಕ್  ನರಿಮೊಗರು, ರಮೇಶ್ ಸಾಮಂತ್, ರಾಘವೇಂದ್ರ ನಾಯಕ್ ಚಂದ್ರಂ ಸಾಗ್, ಸಂತೋಷ್ ನಾಯಕ್ ಚಂದ್ರಂ  ಸಾಗ್,  ಪದ್ಮನಾಭ  ಪ್ರಭು,  ಮಹೇಶ್ ಪ್ರಭು ಮಣಿಯ, ಹರಿಕೃಷ್ಣ ನಾಯಕ್ ಮಜಲು, ಸುಭಾಶ್ಚಂದ್ರ  ನಾಯಕ್ ಮಜಲು, ರಾಜೇಶ್ ಪ್ರಭು, ನಾಗೇಶ್  ನಾಯಕ್,  ಗಣೇಶ್  ನಾಯಕ್,  ರಾಜೇಶ್  ನಾಯಕ್, ಡಾ|  ಶಿವಪ್ರಕಾಶ್, ಸತೀಶ್ ನಾಯಕ್, ಸುಧಾಕರ ಪ್ರಭು, ಪ್ರಭಾಕರ ಪ್ರಭು, ರತ್ನಾಕರ ಪ್ರಭು ಹಾಗೂ ಇನ್ನಿತರ ಸಮಾಜ  ಬಾಂಧವರು  ಸಹಕರಿಸಿದರು.  ಜಿಲ್ಲಾ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ವಿಜಯಲಕ್ಷ್ಮೀ ನಾಯಕ್ ಮಂಗಳೂರು, ದಾಭೋಲಿ ಮಠದ ಟ್ರಸ್ಟಿ ಎಂ.ಎಂ. ಪ್ರಭು, ರವೀಂದ್ರ ಬೋಳಂಗಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂಜೀವ ನಾಯಕ್ ಕಲ್ಲೇಗ ಮತ್ತಿತರರು ಉಪಸ್ಥಿತರಿದ್ದರು.

 

 ಡೆಚ್ಚಾರು ಶ್ರೀ ರಾಘವೇಂದ್ರ ಶೆಣೈ ಅವರ ಮನೆಗೆ ಭೇಟಿ ನೀಡಿದ ಶ್ರೀಗಳನ್ನು ಫಲ, ಗುರುಕಾಣಿಕೆ, ಸ್ಮರಣಿಕೆ ನೀಡಿ, ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹಿರಿಯರಾದ ಡೆಚ್ಚಾರು ಪದ್ಮನಾಭ ಶೆಣೈ, ಡೆಚ್ಚಾರು ಗಣಪತಿ ಶೆಣೈ, ನಿ. ಶಿಕ್ಷಕ ಗೋಪಾಲಕೃಷ್ಣ ಪ್ರಭು, ಸ್ವಾಗತ ಸಮಿತಿ ಅಧ್ಯಕ್ಷ ರಮೇಶ್ ನಾಯಕ್ ಮೈರಾ ಉಪಸ್ಥಿತರಿದ್ದರು.
 

ಮೇ 29ರಂದು ಕೂಡಿಬೈಲು ಮಹಾದೇವಿ ಮಹಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ಬಳಿಕ ದೇವರ ದರ್ಶನ ಪಡೆದರು. ಬಳಿಕ ಸಾಮೂಹಿಕ ಪಾದಪೂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀನಿವಾಸ ಶೆಣೈ ಕೂಡಿಬೈಲು, ಗಣಪತಿ ಶೆಣೈ ಡೆಚ್ಚಾರು, ಭಾಸ್ಕರ ನಾಯಕ್ ಕೂಡಿಬೈಲು, ಶಿವರಾವ್ ಕೂಡಿಬೈಲು, ರತ್ನಾಕರ್ ಶೆಣೈ, ರಾಜೇಶ್ ನಾಯಕ್ ಕೂಡಿಬೈಲು, ಹರೀಶ್ ನಾಯಕ್ ಇಳಿಯೂರು, ಅಶೋಕ್ ನಾಯಕ್ ಕಕ್ಕೆಪದವು, ಜಯರಾಮ್ ಭಟ್ ಮುಲ್ಕಾಜೆಮಾಡ ಮತ್ತಿತರು ಉಪಸ್ಥಿತರಿದ್ದರು.

 ಕಶೆಕೋಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ದೇವರ ದರ್ಶನ ಪಡೆದು ಜೀರ್ಣೋದ್ಧಾರದ ಕಾಮಗಾರಿಯನ್ನು ವೀಕ್ಷಿಸಿ, ದೇವಸ್ಥಾನದ ಆಡಳಿತ ಮಂಡಳಿ ನೀಡಿದ ಗುರು ಕಾಣಿಕೆಯನ್ನು ಸ್ವೀಕರಿಸಿ, ಆಡಳಿತ ಮಂಡಳಿಯ ಸದಸ್ಯರನ್ನು ಮತ್ತು ಅಲ್ಲಿ ಸೇರಿದ್ದ ಎಲ್ಲಾ ಸಮಾಜ ಬಾಂಧವರನ್ನು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಜೀರ್ಣೋದ್ಧಾರದ ಕೆಲಸವು ಆದಷ್ಟು ಬೇಗ ಆಗಲೆಂದು ಹಾರೈಸಿದರು.

 ಪೂಜ್ಯ ಶ್ರೀಗಳ ದಿಗ್ವಿಜಯದ ಸಂದರ್ಭದಲ್ಲಿ ಅವರ ವಾಹನ ಚಾಲಕರಾಗಿ ಎಲ್ಲಾ ದಿನಗಳಲ್ಲೂ ಜೊತೆಗಿದ್ದ, ಶ್ರೀಗಳು ಮೆಚ್ಚಿದ ಸಾರಥಿಯಾಗಿದ್ದ, ಪಾರ್ಲ ಕೃಷ್ಣ ಪ್ರಭು ಮತ್ತು ಲಕ್ಷ್ಮೀ ಇವರ ಪುತ್ರ ಅಶೋಕ್ ಅವರು ಸ್ವಾಗತ ಸಮಿತಿಯ ವತಿಯಿಂದ ನೀಡಲ್ಪಟ್ಟ ಸ್ಮರಣಿಕೆಯನ್ನು ಪೂಜ್ಯ ಶ್ರೀಗಳಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಪದಾಧಿಕಾರಿಗಳು ಜೊತೆಗಿದ್ದರು.

 ಶ್ರೀಗಳು ಮಠದಿಂದ ಹೊರಟ ನಂತರ ಎಲ್ಲಾ ಕಾರ್ಯಕ್ರಮಗಳಲ್ಲಿ ಪೂರ್ತಿ ಅವರ ಜೊತೆಗಿದ್ದ, ಸಮಾಜದ ಪುರೋಹಿತರಾದ ಶ್ರೀ ನಿತ್ಯಾನಂದ ಭಟ್ ಅವರ ಮನೆಗೆ ಶ್ರೀಗಳು ಭೇಟಿ ನೀಡಿದರು. ಶ್ರೀ ನಿತ್ಯಾನಂದ ಭಟ್ ಮತ್ತು ಮನೆಯವರು ಶ್ರೀಗಳಿಗೆ ಫಲ ಕಾಣಿಕೆ ಮತ್ತು ಗುರುದಕ್ಷಿಣೆ ನೀಡಿ ಗೌರವಿಸಿದರು. ಕುಟುಂಬಸ್ಥರಿಗೆ ಮತ್ತು ಸೇರಿದ್ದ ಸಮಾಜ ಬಾಂಧವರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
 

 ಶ್ರೀಮಠ್ ಸಂಸ್ಥಾನ್ ದಾಭೋಳಿಯ ಮಠಾಧೀಶರಾದ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ದಿನಾಂಕ 20-5-2017ರಿಂದ 01-06-2017ರ ತನಕ 13 ದಿನಗಳ ದ.ಕ. ಜಿಲ್ಲಾ ದಿಗ್ವಿಜಯ ಸಮಾರೋಪ ಸಮಾರಂಭ ಇದೇ ಮೇ 31ರಂದು ಬಂಟ್ವಾಳದ ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ  ಸಕಲ ಭಕ್ತಿ ಗೌರವದೊಂದಿಗೆ ವೈಭವೋಪೇತವಾಗಿ ಜರುಗಿತು.
    ಈ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನಗಳನ್ನು ನೀಡುತ್ತಾ “ನಾವು ದೇವರಿಗೆ ಶರಣಾಗಿ, ನಮ್ಮ ಮನಸ್ಸಿನಲ್ಲಿ ನಿತ್ಯವೂ ದೇವರನ್ನು ಜಪಿಸಬೇಕು. ಇತರರಿಗೆ ಒಳ್ಳೆಯದನ್ನೇ ಬಯಸುತ್ತಾ, ತಂದೆ-ತಾಯಿಯರಲ್ಲಿ ದೇವರನ್ನು ಕಾಣುತ್ತಾ, ಅವರ ಸೇವೆಯೇ ‘ದೇವರ ಸೇವೆ’ ಎಂದು ತಿಳಿದು ಅವರನ್ನು ಸಂತೋಷದಿಂದ ನೋಡಿಕೊಳ್ಳಬೇಕು ಹಾಗೂ ನಮ್ಮಲ್ಲಿ ವೃದ್ಧಾಶ್ರಮಗಳಿಗೆ ಅವಕಾಶ ನೀಡಬಾರದು. ಧಾರ್ಮಿಕ ಅನುಷ್ಠಾನಗಳನ್ನು ಶುದ್ಧ ಹಾಗೂ ಸಮಚಿತ್ತದಿಂದ ಮಾಡಿದಾಗ ಮಾತ್ರ ನಾವು ಭಗವಂತನಿಗೆ ಹತ್ತಿರವಾಗುತ್ತೇವೆ ಮತ್ತು ಉತ್ತಮ ಫಲ ಪ್ರಾಪ್ತಿ ಆಗುತ್ತದೆ” ಎಂದು ಆಶೀರ್ವದಿಸುತ್ತಾ ಸಮಾಜದ ಎಲ್ಲರೂ ಒಂದಾಗಿ ಸಂಘಟನೆ ಮತ್ತು ಅಭಿವೃದ್ಧಿಗಾಗಿ ದುಡಿಯಬೇಕೆಂಬ ಶುಭ ಸಂದೇಶದೊಂದಿಗೆ ಹಾರೈಸಿದರು.
    ಶ್ರೀಗಳನ್ನು ಆ ದಿನ ಬೆಳಿಗ್ಗೆ ಭವ್ಯ ಮೆರವಣಿಗೆಯಲ್ಲಿ ಬಂಟ್ವಾಳದ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಸಮಾಜ ಬಾಂಧವರು ಬರಮಾಡಿಕೊಂಡರು. ಆ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಪೂರ್ಣ ಕುಂಭ ಸ್ವಾಗತವನ್ನು ನೀಡಿ ಭಕ್ತಿ ಗೌರವದೊಂದಿಗೆ ಸ್ವಾಗತಿಸಿದರು.

    ಶ್ರೀಗಳು ವೆಂಕಟರಮಣ ದೇವರ ದರ್ಶನ ಪಡೆದ ನಂತರ ಆಡಳಿತ ಮಂಡಳಿಯವರು ದೇವಸ್ಥಾನದ ಇತಿಹಾಸ, ಅನುಷ್ಠಾನ, ಕಟ್ಟುಪಾಡು, ಆಚರಣೆ ಹಾಗೂ ಉತ್ಸವಗಳ ಸಮಗ್ರ ಮಾಹಿತಿಯನ್ನು ನೀಡಿದರು.
    ದ.ಕ. ಜಿಲ್ಲೆಯ ಹಲವಾರು ಕಡೆಗಳಲ್ಲಿ ಹಮ್ಮಿಕೊಂಡ ಆಶೀರ್ವಚನ ಕಾರ್ಯಕ್ರಮಕ್ಕೆ ರೂಪಾಯಿ 10,000/- ಮತ್ತು ಮೇಲ್ಪಟ್ಟು ದೇಣಿಗೆ ನೀಡಿದವರನ್ನು ಹಾಗೂ 13 ದಿನಗಳಲ್ಲಿ ಸ್ವಾಮೀಜಿಯವರೊಂದಿಗೆ ಇದ್ದು, ಸಂಪೂರ್ಣ ವೈದಿಕ ಕಾರ್ಯ ಹಾಗೂ ಅನುಷ್ಠಾನಗಳ ಜವಾಬ್ದಾರಿ ಹೊತ್ತ ಸಮಾಜದ ಎಲ್ಲಾ ಪುರೋಹಿತ ವರ್ಗದವರನ್ನು ಅಲ್ಲದೆ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದ ಪದಾಧಿಕಾರಿಗಳನ್ನು ಕಾರ್ಯಕರ್ತರನ್ನು ಗುರುತಿಸಿ ಶಾಲು ಹೊದಿಸಿ ಸ್ಮರಣಿಕೆ ಮತ್ತು ಫಲ ಮಂತ್ರಾಕ್ಷತೆಯನ್ನು ನೀಡಿ ಸ್ವಾಮೀಜಿಯವರು ಆಶೀರ್ವದಿಸಿದರು.

    ಪಾಕ ತಜ್ಞ ಶ್ರೀ ಕಮಲಾಕ್ಷ ಪ್ರಭು ಒಡ್ಡೂರು, ಊಟೋಪಚಾರದ ಮೇಲುಸ್ತುವಾರಿ ವಹಿಸಿದ್ದ ಶ್ರೀ ಗಣೇಶ್ ಶೆಣೈ ಮರೋಳಿ, ದೃಶ್ಯ ಮಾಧ್ಯಮ ಮತ್ತು ಛಾಯಗ್ರಾಹಕರಾದ ಶ್ರೀ ಪ್ರವೀಣ್‍ಚಂದ್ರ ನಾಯಕ್ ಕಲಾಯಿ, ಶ್ರೀ ಶಿವಪ್ರಸಾದ್ ಕಲಾಯಿ, ಶ್ರೀ ಪ್ರಭಾಕರ ಮಡಂತ್ಯಾರು ಮತ್ತು ಶ್ರೀ ದೀಪಕ್ ನಾಯಕ್ ವಗ್ಗ ಹಾಗೂ ಸ್ವಾಮೀಜಿಯವರೊಂದಿಗೆ ಸಾರಥಿಯಾಗಿ ಶ್ರೀ ಅಶೋಕ್ ಸಿದ್ಧಕಟ್ಟೆ, ಸ್ವಾಮೀಜಿಯವರ ಎಲ್ಲಾ ಕಾರ್ಯಕ್ರಮಕ್ಕೆ ಉಚಿತವಾಗಿ ವಾಹನ ಸೌಲಭ್ಯ ಒದಗಿಸಿದ ಇಂದಾಜೆ ಶ್ರೀ ಬಾಲಕೃಷ್ಣ ನಾಯಕ್ ಪರ್ಕಳ ಅದೇ ರೀತಿ ಶ್ರೀ ವಿಠಲ್ ಪ್ರಭು ಮಕ್ಕಾರು, ಶ್ರೀ ಹರೀಶ್ ನಾಯಕ್ ನಟ್ಟಿಬೈಲು ಹಾಗೂ ದಾಭೋಳಿಯ ಮಠದಿಂದ ಬಂದಿರುವ ಸ್ವಾಮೀಜಿಯವರ ಶಿಷ್ಯರಾದ ಶ್ರೀ ಲಾಲಾಜಿ ಶಂಕರ ಪ್ರಭು, ಶ್ರೀ ಗುರು ಪ್ರಸಾದ್ ದೇಸಾಯಿ, ಶ್ರೀ ಮಹೇಶ್ವರ್ ಠಾಕೂರ್ ಅವರನ್ನು ವಿಶೇಷವಾಗಿ ಶಾಲು ಹೊದಿಸಿ, ಸ್ಮರಣಿಕೆ, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸಮಾರೋಪ ಸಮಾರಂಭದ ಸಂಪೂರ್ಣ ಜವಾಬ್ದಾರಿ ವಹಿಸಿ ಯಶಸ್ವಿಗೊಳಿಸಿದ ನ್ಯಾಯವಾದಿಗಳಾದ ಶ್ರೀ ರಾಜಾರಾಂ ನಾಯಕ್ ಕಲಾಯಿ ಹಾಗೂ ಶ್ರೀ ಶ್ರೀನಿವಾಸ ಶೆಣೈ ಕೂಡಿಬೈಲು ಇವರನ್ನು ಶ್ರೀಗಳು ವಿಶೇಷವಾಗಿ ಶಾಲು ಹೊದಿಸಿ, ಗಂಧದ ಮಾಲೆ ಹಾಕಿ, ಸ್ಮರಣಿಕೆ ನೀಡಿ ಅಭಿನಂದಿಸಿ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

    ಸ್ವಾಮೀಜಿಯವರಿಗೆ ದ.ಕ. ಜಿಲ್ಲಾ ಸ್ವಾಗತ ಸಮಿತಿಯ ಪರವಾಗಿ ಗುರು ಕಾಣಿಕೆಯಾಗಿ ಶ್ರೀ ಆದಿ ನಾರಾಯಣ ದೇವರ ಪಂಚಲೋಹದ ವಿಗ್ರಹ, ಶ್ರೀ ಮದ್  ಭಗವದ್ಗೀತೆಯ ಹಿಂದಿ ಭಾಷಾ ಗ್ರಂಥಗಳು, ಒಟ್ಟು ಕಾರ್ಯಕ್ರಮದ ತುಣುಕು ಚಿತ್ರಗಳಿರುವ ಫೋಟೊ ಆಲ್ಬಂ ಹಾಗೂ ರೂ. 3,30,000/- ಮೊತ್ತವನ್ನು ಫಲ ಪುಷ್ಪಾದಿಗಳೊಂದಿಗೆ ಸಮರ್ಪಿಸಿ ಆಶೀರ್ವಾದವನ್ನು ಪಡೆಯಲಾಯಿತು. ಬೆಳಗ್ಗೆಯಿಂದಲೇ ಎಲ್ಲಾ ಕಡೆಗಳಿಂದ ಸಮಾಜ ಬಾಂಧವರು ಬಹಳ ಉತ್ಸಾಹ ಹಾಗೂ ಸಂತೋಷದಿಂದ ಆಗಮಿಸಿದರು. ಸಭಾಂಗಣದಲ್ಲಿ ಸ್ವಾಮೀಜಿಯವರ ಶಿಷ್ಯಂದಿರು ಮತ್ತು ಭಕ್ತರು ಕಿಕ್ಕಿರಿದು ನೆರೆದಿದ್ದರು. ಇದು ಎಲ್ಲರಿಗೂ ಆನಂದ ಮುದವನ್ನು ನೀಡುವಂತಿತ್ತು. ನೆರೆದಿರುವ ಎಲ್ಲಾ ಸಮಾಜ ಬಾಂಧವರು ಸ್ವಾಮೀಜಿಯವರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿ ಧನ್ಯರೆನಿಸಿಕೊಂಡರು.

    ಸಭಾ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಸ್ವಾಗತ ಸಮಿತಿಯ ಅಧ್ಯಕ್ಷ ಡಿ. ರಮೇಶ್ ನಾಯಕ್ ಮೈರ ಸ್ವಾಗತಿಸಿ, ಸಂಜಯ್ ಪ್ರಭು ವಂದಿಸಿದರು. ಶ್ರೀಮತಿ ಸುಚಿತ್ರಾ ರಮೇಶ್ ನಾಯಕ್, ಶ್ರೀಮತಿ ಜ್ಯೋತಿ ಸಂಜಯ್ ಪ್ರಭು, ಶ್ರೀಮತಿ ಗೀತಾ ರತ್ನಾಕರ್ ಸಾಮಂತ್ ಹಾಗೂ ಡಾ| ಸುಚೇತಾ ಸುಧಾಕರ ಶೆಣೈ ಅವರು ಉದಾರ ದೇಣಿಗೆ ನೀಡಿ ಸ್ಮರಣಿಕೆ ಸ್ವೀಕರಿಸುವವರ ಪಟ್ಟಿಯನ್ನು ವಾಚಿಸಿದರು. ಶ್ರೀ ಎಂ.ಎಂ. ಪ್ರಭುಗಳು ಪ್ರಸ್ತಾವನೆಯನ್ನು ನೀಡುತ್ತಾ ಆಶೀರ್ವಚನಗಳನ್ನು ಯಾಚಿಸುತ್ತಾ ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶಕವನ್ನು ನೀಡಬೇಕಾಗಿ ಶ್ರೀಗಳಲ್ಲಿ ನಿವೇದಿಸಿಕೊಂಡರು.

    ಪ್ರಧಾನ ಕಾರ್ಯದರ್ಶಿ ಡಾ| ವಿಜಯಲಕ್ಷ್ಮೀ ನಾಯಕ್ 11 ದಿನಗಳಿಂದ ನಡೆದ ಆಶೀರ್ವಚನ ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಮನ ಮುಟ್ಟುವಂತೆ ಸಭೆಯ ಮುಂದಿಟ್ಟರು. ಇವೆಲ್ಲಾ ಕಾರ್ಯಕ್ರಮಗಳನ್ನು ಆಲಿಸಿದ ಸಭಿಕರ ಮನಸ್ಸು ಧನ್ಯತಾ ಭಾವವನ್ನು ಸೂಚಿಸುವಂತಿತ್ತು. ಶ್ರೀ ಶಾಂತಾರಾಮ್ ಪ್ರಭು ಮುಚ್ಲುಕೋಡಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ವಲಯ ಅಧ್ಯಕ್ಷರುಗಳಾದ ಶ್ರೀ ದಯಾನಂದ ಪ್ರಭು ಬೆಳ್ತಂಗಡಿ, ಶ್ರೀ ಪ್ರಭಾಕರ ಪ್ರಭು ವೇಣೂರು, ಶ್ರೀ ಪ್ರಭಾಕರ ಪ್ರಭು ವಾಮದಪದವು, ಶ್ರೀ ಮೋಹನ್ ನಾಯಕ್ ಒಡ್ಡೂರು, ಶ್ರೀ ಶ್ರೀನಿವಾಸ ಶೆಣೈ ಕೂಡಿಬೈಲು, ಶ್ರೀ ಶ್ರೀನಿವಾಸ ಸಾಮಂತ್ ಪುತ್ತೂರು, ಶ್ರೀ ದರ್ಬೆ ನಾರಾಯಣ ನಾಯಕ್ ಕಲ್ಲಡ್ಕ ಮತ್ತು ಶ್ರೀ ವಿಜಯ ಶೆಣೈ ಕೊಡಂಗೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪದಾಧಿಕಾರಿಗಳಾದ ವೆಂಕಟ್ರಾಯ ಪ್ರಭು ಪೂರ್ಲಪಾಡಿ, ಮುರಳೀಧರ ಪ್ರಭು ವಗ್ಗ, ರಮೇಶ್ ನಾಯಕ್ ಗುಂಡೂರು, ಮೋಹನ್ ಪ್ರಭು ಅಡ್ಯೆ, ಜಗದೀಶ್ ಶೆಣೈ ಮರೋಳಿ, ಪ್ರಶಾಂತ್ ಮರೋಳಿ, ಸುಧೀರ್ ನಾಯಕ್ ಬೆಂಗಳೂರು, ರತ್ನಾಕರ ಸಾಮಂತ್ ಲ್ಯಾಂಡ್‍ಲಿಂಕ್ಸ್, ಶಿವರಾವ್ ಕೂಡಿಬೈಲು, ಸಂಜೀವ ಸಾಮಂತ್ ಮರೋಳಿ, ಬಾಲಕೃಷ್ಣ ನಾಯಕ್ ಹೋಟೇಲ್ ಸಾರಥಿ, ಯೋಗೀಶ್ ನಾಯಕ್ ವೈಭವ್ ಜ್ಯುವೆಲ್ಲರ್ಸ್, ನಾಗೇಶ್ ಪ್ರಭು ಕುಂಟಲ್ಪಾಡಿ, ಯಶವಂತ ಪ್ರಭು ಶಕ್ತಿನಗರ, ಜಯರಾಮ್ ನಾಯಕ್, ರಂಜಿತಾ ಜಯರಾಮ್ ನಾಯಕ್,  ಉಪೇಂದ್ರ ನಾಯಕ್ ಮೇರಿಹಿಲ್, ಟ್ರಸ್ಟಿ ರವೀಂದ್ರ ನಾಯಕ್ ಬೋಳಂಗಡಿ, ರಮೇಶ್ ಪ್ರಭು ಆರೂರು, ರಾಜಾರಾಂ ಪ್ರಭು ಕಲ್ಲುಗುಡ್ಡೆ, ಚಿದಾನಂದ ಒಡ್ಡೂರು, ಜಯಪ್ರಕಾಶ್ ಪ್ರಭು ಕೋರ್ಡೇಲ್, ರಾಧಾಕೃಷ್ಣ ಶೆಣೈ ಕೂಡಿಬೈಲು ಮತ್ತಿತರರು ಉಪಸ್ಥಿತರಿದ್ದರು.

 ಶ್ರೀಮದ್ ದತ್ತಾನಂದ ಸರಸ್ವತಿ ಶ್ರೀಗಳು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಕ್ಷೇತ್ರದಲ್ಲಿ ಶ್ರೀಗಳು ಕೆಲಹೊತ್ತು ಧ್ಯಾನ ನಿರತರಾಗಿದ್ದರು. ಈ ಮೊದಲು ಕ್ಷೇತ್ರದ ಅಸ್ರಣ್ಣರು ಶ್ರೀಗಳನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ರಮೇಶ್ ನಾಯಕ್ ಮೈರ, ಡಾ| ವಿಜಯಲಕ್ಷ್ಮೀ ನಾಯಕ್ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

 ಶಕ್ತಿನಗರ, ಮೇ 29: ಶ್ರೀ ಧಾಬೋಲಿ ಮಠದ ಕಿರಿಯ ಸ್ವಾಮೀಜಿ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ಇಲ್ಲಿನ ವಿಶ್ವ ಕೊಂಕಣಿ ಕೇಂದ್ರಕ್ಕೆ ಭೇಟಿ ನೀಡಿದರು. ವಿಶ್ವ ಕೊಂಕಣಿ ಕೇಂದ್ರ ಗ್ರಂಥಾಲಯ, ಕೀರ್ತಿ ಮಂದಿರ (ಹಾಲ್ ಆಫ್ ಫೇಮ್), ವಸ್ತು ಸಂಗ್ರಹಾಲಯ (ಮ್ಯೂಸಿಯಂ), ಅಡಿಟೋರಿಯಂ, ಸೆಮಿನಾರ್ ಹಾಲ್, ಡಿಜಿಟಲೈಸೇಶನ್, ಲ್ಯಾಂಗ್ವೇಜ್ ಲ್ಯಾಬ್, ಹಾಸ್ಟೆಲ್ ಬ್ಲಾಕ್‍ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
    ವಿಶ್ವ ಕೊಂಕಣಿ ಕೇಂದ್ರವು ಹಮ್ಮಿಕೊಂಡಿರುವ ಅಭಿವೃದ್ಧಿ ಬಗ್ಗೆ ಹಾಗೂ ಕೈಗೊಂಡ ಕಾರ್ಯಗಳ ಬಗ್ಗೆ ಕೇಂದ್ರವು ರೂಪಿಸಿರುವ ‘ವಿಶನ್ ಕೊಂಕಣಿ-2030’ ಕುರಿತಾಗಿ ಹಾಗೂ ಮಾತೃಭಾಷೆ ರಕ್ಷಣೆ ಮಾಡುವಲ್ಲಿ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರ ಚಟುವಟಿಕೆಯನ್ನು ಶ್ಲಾಘಿಸಿದರು. ಕೇಂದ್ರ ಉಪಾಧ್ಯಕ್ಷ ಎಲೆನ್ ಸಿ.ಎ. ಪಿರೇರಾ, ವೆಂಕಟೇಶ ಎನ್. ಬಾಳಿಗಾ, ಖಜಾಂಚಿ ಬಿ.ಆರ್. ಭಟ್, ಅಖಿಲ ಭಾರತ ಕೊಂಕಣಿ  ಖಾರ್ವಿ  ಮಹಾಜನ  ಸಭಾ  ಅಧ್ಯಕ್ಷ  ಕೆ.ಬಿ.  ಖಾರ್ವಿ,  ಕೊಂಕಣಿ  ಭಾಷಾ ಮಂಡಲದ ಅಧ್ಯಕ್ಷೆ
ಗೀತಾ ಸಿ. ಕಿಣಿ, ಕಾರ್ಯದರ್ಶಿ ಮೀನಾಕ್ಷಿ ಎನ್. ಪೈ, ದಿನೇಶ್ ಶೇಟ್, ಎಂ.ಆರ್. ಕಾಮತ್, ಧಾಬೋಲಿ ಮಠದ ಟ್ರಸ್ಟಿ ಎಂ.ಎಂ. ಪ್ರಭು, ಕುಡಾಲ ದೇಶಸ್ಥ  ಆದ್ಯ  ಗೌಡ  ಬ್ರಾಹ್ಮಣ  ಸಂಘ  ಪೂರ್ಣಾನಂದ  ಪ್ರತಿಷ್ಠಾನ  ಅಧ್ಯಕ್ಷ ಡಿ. ರಮೇಶ್ ನಾಯಕ್, ಕಾರ್ಯದರ್ಶಿ ವಿಜಯಲಕ್ಷ್ಮೀ, ಹಿರಿಯರಾದ ವಗ್ಗ ಮಾಧವ ಪ್ರಭು, ಗಿರಿಧರ ಕಾಮತ್, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು, ವಿಶ್ವ ಕೊಂಕಣಿ ಕೇಂದ್ರ ಭಾಷಾ ಸಂಸ್ಥಾನ ಸಹಾಯಕ ನಿರ್ದೇಶಕ ಗುರುದತ್ತ ಬಂಟ್ವಾಳ ಮತ್ತಿತರರಿದ್ದರು. ಬಸ್ತಿ ವಾಮನ ಶೆಣೈ ಸ್ವಾಗತಿಸಿ, ಸಂಜಯ್ ಪ್ರಭು ವಂದಿಸಿದರು.

 

ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ಬೀಳ್ಕೊಡುಗೆ ಸಮಾರಂಭದ ದಿನ ಕರಾಡ ಭವನದಲ್ಲಿ ಹಿರಿಯ ವ್ಯಕ್ತಿಗಳಾದ ಶಕ್ತಿನಗರದ ಕೊಡಂಗೆಯಲ್ಲಿ ನೆಲೆಸಿರುವಮಂಗಳೂರು ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆದ ಶ್ರೀ ಗೋಪಾಲ ಶೆಣೈ ಮತ್ತು ಅವರ  ಧರ್ಮಪತ್ನಿ ಮೋಹಿನಿ ಶೆಣೈ ಅವರು ತಮ್ಮ ಸ್ವಂತ ಭೂಮಿಯಲ್ಲಿ 20 ಸೆಂಟ್ಸ್ ಸ್ಥಳವನ್ನು ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಸಭಾಭವನ ಕಟ್ಟಡ ನಿರ್ಮಾಣಕ್ಕೆ ದಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ.

 ನಮ್ಮ ಸಮಾಜದ ಗುರುಪೀಠ ಶ್ರೀ ಮಠ್ ಸಂಸ್ಥಾನ ದಾಭೋಳಿ ಮಠದ ಸ್ವಾಮೀಜಿಯವರು ದಕ್ಷಿಣ ಕನ್ನಡ ಜಿಲ್ಲೆಗೆ  ಚಿತ್ತೈಸಿ,  ನಮ್ಮ  ಸಮಾಜ  ಬಾಂಧವರ ‘ಗುರುವಂದನೆ’ಯನ್ನು ಮನಸಾರೆ ಸ್ವೀಕರಿಸಿ, ತಮ್ಮ ಆಶೀರ್ವಚನಗಳಿಂದ ನಮ್ಮನ್ನು ಪುನೀತಗೊಳಿಸಿ ತಮ್ಮ ಈ  ದಿಗ್ವಿಜಯವನ್ನು  ಯಶಸ್ವಿಯಾಗಿ  ಹಾಗೂ ಅರ್ಥಪೂರ್ಣವಾಗಿ    ಸಮಾಪ್ತಿಗೊಳಿಸಿರುವುದು ಅಭಿನಂದನೀಯ.
    ಆ ಪ್ರಯುಕ್ತ ಈ ‘ಗುರುವಂದನಾ’ ಕಾರ್ಯಕ್ರಮದ ಯಶಸ್ವಿಗೆ ತನು-ಮನ-ಧನಗಳ ಮೂಲಕ ಸಹಾಯ-ಸಹಕಾರಗಳನ್ನಿತ್ತ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ನಮ್ಮ ಹೃತ್ಪೂರ್ವಕ ನಮನಗಳನ್ನು ಅರ್ಪಿಸುತ್ತೇವೆ.
     ಮುಂದೆ ಕಾರ್ಯೋನ್ಮುಖಗೊಳ್ಳಲು ನಿಮ್ಮ ಈ ಸ್ಪೂರ್ತಿಯು ಸಹಕಾರ ನಮ್ಮನ್ನು ಹುರಿದುಂಬಿಸುತ್ತದೆ. ಅದನ್ನೇ ‘ಹವ್ಯಾಸ’ವಾಗಿಟ್ಟುಕೊಂಡರೆ ನಿರಂತರ ಕಾರ್ಯ ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ.
    ಈ ಕಾಯಕ್ರಮದ ಅಭೂತಪೂರ್ವ ಯಶಸ್ವಿಗೆ ಸಮಾಜ ಬಾಂಧವರ ಸಹಕಾರದಷ್ಟೇ ಮುಖ್ಯವಾದದ್ದು ನಮ್ಮ ಸ್ವಾಗತ ಸಮಿತಿಗಳು ಹಾಗೂ ಪುರೋಹಿತರ ಕಠಿಣ ಪರಿಶ್ರಮ. ಇವರೆಲ್ಲರಿಗೂ ನಮ್ಮ ತುಂಬು ಹೃದಯದ ಕೃತಜ್ಞತೆಗಳು.
    ಧನಾತ್ಮಕ ವಿಚಾರಗಳನ್ನು ತುಂಬಿಕೊಂಡಾಗ ಮನಸ್ಸು ಶಕ್ತಿಯುತ ಸಾಧನವಾಗುತ್ತದೆ. ಆಗ ಬದುಕು ಬದಲಾವಣೆಯ ಮಾರ್ಗದಲ್ಲಿ ಸಾಗುತ್ತದೆ. ‘ಪ್ರತಿಷ್ಠೆ’ ನಮ್ಮ ಕನ್ನಡಕದ ಮೇಲಿನ ಧೂಳಿದ್ದಂತೆ, ಅದನ್ನು ಒರೆಸಿಕೊಂಡಾಗ ಎದುರಿಗಿರುವುದು ಸ್ಪಷ್ಠವಾಗುತ್ತದೆ ಹಾಗೂ ತಪ್ಪು ತಿಳುವಳಿಕೆ ದೂರವಾಗುತ್ತದೆ.
    ನಮ್ಮ ವಿಚಾರಗಳಲ್ಲಿ ‘ಧನಾತ್ಮಕತೆ’ಯನ್ನು ಮೇಲಿರಿಸಿಕೊಂಡು, ಮುಂದಿನ ಸವಾಲುಗಳನ್ನು ಎದುರಿಸುತ್ತ ಸಮಾಜಮುಖೀ ಕಾರ್ಯಗಳಲ್ಲಿ ನಮ್ಮ ಕೈ ಬಲಪಡಿಸಿ ಎಂಬ ಆತ್ಮೀಯ ಹಾಗೂ ವಿನಯಪೂರ್ವಕ ವಿನಂತಿಯೊಂದಿಗೆ
ಡಿ. ರಮೇಶ್ ನಾಯಕ್ ಮೈರ
ಅಧ್ಯಕ್ಷರು,
ದ.ಕ. ಜಿಲ್ಲಾ ಸ್ವಾಗತ ಸಮಿತಿ ಮತ್ತು ಪದಾಧಿಕಾರಿಗಳು,
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ