AGM 2015

ಮಹಾಸಭೆಯ ವರದಿ-2014-15

ಕಾರ್ಯಸೂಚಿಯಂತೆ ನಡವಳಿಕೆಗಳು:

ಆರಂಭದಲ್ಲಿ ಪುರೋಹಿತರಾದ ಶ್ರೀ ನಿತ್ಯಾನಂದ ಭಟ್, ಇವರಿಂದ ಪ್ರಾರ್ಥನೆ ಮತ್ತು ಕಾರ್ಯಾಧ್ಯಕ್ಷ ಶ್ರೀ ಸಂಜಯ್ ಪ್ರಭುರವರಿಂದ ಸ್ವಾಗತ.

1. ಪ್ರಸ್ತಾವನೆ: ಸಭೆಯ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್, ಇವರು ಪ್ರತಿಷ್ಟಾನದ ನೂತನ ಆಡಳಿತ ಮಂಡಳಿ ರಚನೆ, ನಿಕಟಪೂರ್ವ ಪ್ರಧಾನ ಪ್ರಾಯೋಜಕರಾದ ಶ್ರೀ ಎಂ.ಎಂ.ಪ್ರಭು ಮತ್ತು ಶ್ರೀ ಡೆಚ್ಚಾರ್ ಗಣಪತಿ ಶೆಣೈಯವರು ಪ್ರತಿಷ್ಟಾನ ನಡೆಸಿ ಬಂದ ರೀತಿ, ನೂತನ ಆಡಳಿತ ಮಂಡಳಿಯಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತ್ತು ಧಾರ್ಮಿಕವಾಗಿ ನಡೆಸಿದ ಕಾರ್ಯಚಟುವಟಿಕೆಗಳ ಆಶಯ ಹಾಗೂ ಸಮಾಜ ನೀಡುತ್ತಿರುವ ಸಹಕಾರವನ್ನು ಸಂಕ್ಷಿಪ್ತವಾಗಿ ಸಭೆಯ ಮುಂದಿಟ್ಟರು.

2. ಪ್ರತಿಷ್ಟಾನವು ದಿನಾಂಕ 01.04.2013 ರಿಂದ 31.03.2014 ರವರೆಗೆ ಹಮ್ಮಿಕೊಂಡ ಚಟುವಟಿಕೆಗಳ/ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ನಾಯಕ್ ರವರು ಸಭೆಯ ಮುಂದೆ ಮಂಡಿಸಿದಾಗ, ಬೆಳ್ತಂಗಡಿ ಶ್ರೀ ದಯಾನಂದರವರ ಒಪ್ಪಿಗೆಯ ಮೇರೆಗೆ ಸಭೆಯು ಸರ್ವಾನುಮತದಿಂದ ವರದಿಯನ್ನು ಅಂಗೀಕರಿಸಿತು.

3. ದಿನಾಂಕ 27. 11. 2013 ರಿಂದ 31. 03. 2014 ನೇ ಸಾಲಿನ ಲೆಕ್ಕ ಪತ್ರ ಮಂಡನೆಯನ್ನು (ಆಂತರೀಕ ಲೆಕ್ಕ ಪರಶೋಧಕರಿಂದ ಪರಿಶೀಲಿಸಲ್ಪಟ್ಟ) ಖಜಾಂಚಿ ಶ್ರೀ ಸಂಜೀವ ಸಾಮಂತ್‍ರವರು ಸಭೆಯ ಮುಂದೆ ಮಂಡಿಸಿ, ಕೇಳಲಾದ ಪ್ರಶೆÀ್ನಗಳಿಗೆ ಉತ್ತರಿಸಿದಾಗ ಶ್ರೀಮತಿ ಜ್ಯೋತಿ ಪ್ರಭುರವರ ಅನುಮೋದನೆಯೊಂದಿಗೆ , ಸಭೆಯು ಸರ್ವಾನುಮತದಿಂದ ಲೆಕ್ಕಪತ್ರವನ್ನು ಮಂಜೂರು ಮಾಡಿತು.

4) ಸದಸ್ಯತನದ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ, ಪ್ರತಿಷ್ಠಾನದ ಮೂಲಕ ಅನೇಕಾನೇಕ ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಹಾಗೂ ಒಬ್ಬ ವಿದ್ಯಾರ್ಥಿನಿಯ ದತ್ತು ಸ್ವೀಕಾರ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂಪನ್ಮೂಲ ಕ್ರೋಢೀಕರಣ ಅನಿವಾರ್ಯ, ಸೇವಾ ಕಾರ್ಯವನ್ನು ಪ್ರತಿಷ್ಠಾನಕ್ಕೆ ನೀಡಲಿಚ್ಚಿಸುವವರು ನೀಡಬಹುದು, ಅವರು ಸದಸ್ಯರಾಗ ಬೇಕಾಗಿಲ್ಲ ಎನ್ನುವ ನೆಲೆಯಲ್ಲಿ ಸದಸ್ಯತನದ ಶುಲ್ಕವನ್ನು 1,000 ದಿಂದ 25,000 ಕ್ಕೆ ಪರಿಷ್ಕರಿಸಿ, ಎರಡು ವರ್ಷಗಳ ಅವದಿಯಲ್ಲಿ, ಕಂತುಗಳ ಮೂಲಕ ನೀಡುವ ಬಗ್ಗೆ ಚರ್ಚಿಸಲಾಯಿತು. ಸದಸ್ಯತನ ಮುಖ್ಯವಲ್ಲ, ಕಾರ್ಯಕರ್ತರ ತಂಡವೂ ಅಗತ್ಯ, ಸೇವಾಕಾರ್ಯ ಮಾಡುವವರಿಗೆ ಕಾರ್ಯಕರ್ತರ ತಂಡದಲ್ಲಿ ಸೇರಿಸ ಬಹುದು. ಈಗಾಗಲೇ 1,000 ರೂ ನೀಡಿರುವ ಪ್ರತಿಯೊಬ್ಬರೂ ಸ್ಥಾಪಕ ಸದಸ್ಯರಾಗಿರುತ್ತಾರೆ ಎಂದು ಶ್ರೀ ಎಂ. ಎಂ. ಪ್ರಭುರವರ ಸ್ಪಷ್ಟನೆಗೆ, ಪುರೋಹಿತ ಶ್ರೀ ನಿತ್ಯಾನಂದ ಭಟ್‍ರವರ ಅನುಮೋದನೆಯೊಂದಿಗೆ ಸಭೆಯು ಕರತಾಂಡನದ ಮೂಲಕ ಸದಸ್ಯತನದ ಶುಲ್ಕವನ್ನು ರೂ. 25,000 ನಿರ್ಧರಿಸುವ ನಿರ್ಣಯವನ್ನು ಕೈಗೊಂಡಿತು.

5. ಬೈಲೋ ಸಂಖ್ಯೆ …… ರಂತೆ ಆಡಳಿತ ಸದಸ್ಯರ ಸಂಖ್ಯೆಯು 15 ರಿಂದ 35 ಎಂದಿರುವುದರಿಂದ, ಈಗಾಗಲೇ ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆಯು 30 ಇರುವುದರಿಂದ, ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆಯನ್ನು ಬದಲಿಸುವ ಅಗತ್ಯವಿಲ್ಲವೆಂದು ಸಭೆಯು ನಿರ್ಣಯಿಸಿತು. ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಅಗತ್ಯವೆಂದು ಕಂಡುಬಂದಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರನ್ನು ಆಡಳಿತ ಮಂಡಳಿಗೆ ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

6. ಈಗಾಗಲೇ ಆಯ್ಕೆಗೊಂಡ ಪದಾಧಿಕಾರಿಗಳನ್ನು ಅಗತ್ಯವಿದ್ದಲ್ಲಿ ಬದಲಾಯಿಸುವ ಬಗ್ಗೆ – ನಿರಂತರವಾಗಿ 3 ಸಭೆಗಳಿಗೆ ಗೈರು ಹಾಜರಾದ್ದಲ್ಲಿ ಅವರ ಸದಸ್ಯತನ ರದ್ದಾಗುತ್ತದೆ. ಇಂತಹ ಸದಸ್ಯರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಬದಲಾಯಿಸುವ ಬಗ್ಗೆ ಶ್ರೀ ಎಂ. ಎಂ. ಪ್ರಭುರವರ ಸ್ಪಷ್ಟೀಕರಣ ನೀಡಿದ ಮೇರೆಗೆ ಪದಾಧಿಕಾರಿಗಳನ್ನು ಬದಲಾಯಿಸುವ ಅಧಿಕಾರವನ್ನು ಪ್ರತಿಷ್ಠಾನದ ಆಡಳಿತ ಮಂಡಳಿಗೆ ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

7. ಪ್ರತಿಷ್ಠಾನಕ್ಕೆ ಲೆಕ್ಕಪರಿಶೋಧಕರರಾಗಿ ಸಿಎ. ರವಿರಾಜ, ಗೋಪಾಲಕೃಷ್ಣ ಬಿಲ್ಡಿಂಗ್, 2ನೇ ಮಹಡಿ, ಬಂಟ್ಸಹಾಸ್ಟೆಲ್, ಮಂಗಳೂರು ಇವರನ್ನು ಗುರುತಿಸಿದ ಬಗ್ಗೆ ಮತ್ತು ಅವರನ್ನು ಮುಂದುವರೆಸುವ ಬಗ್ಗೆ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್‍ರವರು ತಿಳಿಸಿದರು. ಆಂತರೀಕ ಲೆಕ್ಕ ಪರಿಶೋಧಕರಾಗಿ ಶ್ರೀ ಪ್ರಭಾಕರ ಪ್ರಭು, ಮೇರಿಹಿಲ್, ನಿವೃತ್ತ ಬ್ಯಾಂಕ್ ಮನೇಜರ್ ಮತ್ತು ಶ್ರೀ ದಯಾನಂದ ಪ್ರಭು, ಎಂ.ಆರ್.ಪಿ.ಎಲ್ ರವರನ್ನು ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ ಪ್ರಭು ಸೂಚಿಸಿದಾಗ, ಸಭೆಯು ಮಂಜೂರು ಮಾಡಿತು.

8. ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳು – ಇಲ್ಲಿ ಶ್ರೀ ಗೋಪಾಲ ಕೃಷ್ಣ ಪ್ರಭು ವಗ್ಗರವರು ನೀಡಿದ ಪತ್ರವನ್ನು ಓದಲಾಯಿತು. ಅದರಲ್ಲಿ ಕರಪತ್ರವನ್ನು ಕೊಂಕಣಿ ಭಾಷೆಯಲ್ಲಿ ಮುದ್ರಿಸುವಂತೆ ಸೂಚಿಸಲಾಗಿತ್ತು.

9. ಶ್ರೀ ಮುರಳೀಧರ ಪ್ರಭು ವಗ್ಗ ಇವರು ಕೊಂಕಣಿ ಕಾರ್ಡ್‍ನ ಬಗ್ಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಕೊಂಕಣಿ ಕಾರ್ಡ್‍ನ ನಿರ್ವಹಣೆಯನ್ನು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ನಿರ್ವಹಿಸಬೇಕೆಂದು ವಿನಂತಿಸಿದಾಗ, ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಮತ್ತು ಉಳಿದ ಪದಾಧಿಕಾರಿಗಳು ಒಪ್ಪಿಗೆ ನೀಡಿದರು.

10. ಈ ಬಾರಿ 17ನೇ ವರ್ಷದ ವಿದ್ಯಾರ್ಥಿವೇತನಕ್ಕೆ ಅರ್ಜಿಸಲ್ಲಿಸಿದ ಎಲ್ಲರಿಗೂ ವಿದ್ಯಾರ್ಥಿವೇತನ ನೀಡಿಲ್ಲ. ಕೆಲವರು ಶಿಬಿರಕ್ಕೆ ಬಂದು ವಾಪಾಸು ಹೋಗಿದ್ದಾರೆ ಅವರಿಗೆ ಉಳಿದುಕೊಳ್ಳುವಂತೆ ವಿನಂತಿಸಲಾಗಿತ್ತು. ಸುಳ್ಳು ಕಾರಣವನ್ನು ಹೇಳಿ ಹೋದವರಿಗೆ ವಿದ್ಯಾರ್ಥಿವೇತನ ನೀಡಿಲ್ಲ. ಶಿಬಿರದಲ್ಲಿ ಪಾಲ್ಗೊಂಡವರಿಗೆ ಮಾತ್ರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿವೇತನಕ್ಕೆ ಸೂಚಿಸುವವರು ಅವರ ಅರ್ಹತೆ ಮತ್ತು ಅಗತ್ಯತೆಯನ್ನು ಅರಿತು ಸೂಚಿಸಬೇಕು ಎಂದು ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ್ ಪ್ರಭು ತಿಳಿಸಿದರು.

11. ಮಾರ್ಚ್ 8 ರಂದು ನಡೆಯುವ ಸಾಮೂಹಿಕ ಉಪನಯನ ಕಾರ್ಯಕ್ರಮದ ಪತ್ರವನ್ನು ಶ್ರೀ ನಿತ್ಯಾನಂದ ಭಟ್‍ರವರು ಓದಿ, ಉಚಿತವಾಗಿ ನಡೆಸಿಕೊಡಲು ಸಹಭಾಗಿತ್ವ ನೀಡುವ ಬಗ್ಗೆ ಕೋರಿದರು. ಇದಕ್ಕೆ ಖಂಡಿತವಾಗಿಯೂ ಸಹಕರಿಸುವುದಾಗಿ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಮತ್ತು ಉಳಿದ ಪದಾಧಿಕಾರಿಗಳು ಒಪ್ಪಿಗೆ ನೀಡಿದರು.

12. ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಿದಾಗ, ಇರುವೈಲು ಗ್ರಾಮದ ಪೊಂಡಬೋಡಿಯಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಗುರುತಿಸುವಿಕೆ, ಪ್ರತಿಷ್ಠಾನ ನಡೆಸಿದ ಪರಿಶೀಲನೆ, ಮತು ಮುಂದೆ ಆಯೋಜಿಸಿಸುವ ಕ್ರಮಗಳ ಸಂಪೂರ್ಣ ಜವಾಬ್ದಾರಿವನ್ನು ಪ್ರತಿಷ್ಠಾನವಹಿಸುತ್ತದೆ ಎಂದು ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ್ ಪ್ರಭು ತಿಳಿಸಿದರು. ಈ ಕುಟುಂಬದ ಹಿನ್ನಲೆ ಮತ್ತು ಸಮಸ್ಯೆಗಳನ್ನು ಶ್ರೀ ಬಾಲಕೃಷ್ಣರವರು ಸಭೆಗೆ ವಿವರಿಸಿದರು.

ಅಧ್ಯಕ್ಷ ಶ್ರೀ ಡಿ. ರಮೇಶ್ ನಾಯಕ್‍ರ ಮಾತು: ಪ್ರತಿಷ್ಠಾನದ ಮೂಲಕ ಉತ್ತಮ ಕಾರ್ಯಗಳು ಆಗುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಇದಕ್ಕೆ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಯಾವುದೇ ಲೋಪದೋಷವಿಲ್ಲದೆ ಪ್ರತಿಷ್ಠಿತ ಸಂಸ್ಥೆಯಾಗಿ ನಡೆಸುವ ಧೈರ್ಯ ನಮ್ಮಲ್ಲಿದೆ. ಎಲ್ಲರ ಆಶೀರ್ವಾದ ಬಯಸುತ್ತೇನೆ. ಭವಿಷ್ಯದಲ್ಲಿ ಯಾವುದೇ ಬೌಗೋಳಿಕ ವ್ಯಾಪ್ತಿಯಿಲ್ಲದೆ ಸಮಾಜ ಸೇವೆ ಮಾಡಬೇಕಾಗಿದೆ ಎಂದರು.
ಕೊನೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಭಾಸ್ಕರ ಪ್ರಭುರವರಿಂದ ವಂದನಾರ್ಪಣೆ ನೆರವೇರಿತು.

01.04.2014 ರಿಂದ 31.03.2015 ರವರೆಗಿನ ಕಾರ್ಯಕ್ರಮಗಳ ವಿವರ:
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ(ರಿ) ವು ಕಳೆದ ಸಾಲಿನಲ್ಲಿ (2014-2015) ನಿಮ್ಮೆಲ್ಲರ ಸಹಕಾರ ಮತ್ತು ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನೆರವೇರಿಸಿದ ಕೆಲವು ಸೇವಾ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಲು ಸಂತೋಷ ಪಡುತ್ತೇವೆ. ಈ ಸತ್ಕಾರ್ಯದಲ್ಲಿ ನೀವೂ ಸಹಭಾಗಿಗಳಾಗಿರುವುದಕ್ಕೆ ಅಭಿನಂದನೆಗಳು.

1. ದಿನಾಂಕ 29, ಜೂನ್, 2014ರಂದು ಶ್ರೀ ಅನಂತರಾಮ್ ಪರ್ಕಳ ಮತ್ತು ಶ್ರೀ ವೆಂಕಟ್ರಾಯ ಪೆರ್ನೆ ಇವರ ಕ್ಯಾನ್ಸರ್ ಚಿಕಿತ್ಸೆಯ ವೈದ್ಯಕೀಯ ನೆರವಿಗಾಗಿ ತಲಾ ರೂ 10,000 ಧನ ಸಹಾಯ.

2. ದಿನಾಂಕ 29, ಜೂನ್, 2014, ಆದಿತ್ಯವಾರದಂದು 17ನೇ ವರ್ಷದ ‘ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಮತ್ತು ಆರೋಗ್ಯ ಮಾಹಿತಿ’ ಕಾರ್ಯಕ್ರಮವು ಮಂಗಳೂರಿನ ಸುಬ್ರಮಣ್ಯ ಸದನದಲ್ಲಿ ನೆರವೇರಿತು. ಶ್ರೀ ಮುರಳೀಧರ ಪ್ರಭು ವಗ್ಗ – ಕೊಂಕಣಿ ಕಾರ್ಡ್ ಮಾಹಿತಿ, ಶ್ರೀ ದಿನೇಶ್ ಸಾಮಂತ್ ಆರೋಗ್ಯವಿಮೆ ಹಾಗೂ ಡಾ ಪ್ರವೀಣ್ ಚಂದ್ರ – ಡಯಾಬಿಟೀಸ್ ಮತ್ತು ಅಂಗಾಂಗಗಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಸುಮಾರು 85 ಮಂದಿಗೆ ವಿದ್ಯಾರ್ಥಿವೇತನ ಮತ್ತು 25 ಮಂದಿಗೆ ಪ್ರತಿಭಾ ಪುರಸ್ಕಾರ ಪ್ರಧಾನ. ಸುಮಾರು 6 ಲಕ್ಷ ಮೊತ್ತ ವಿದ್ಯಾರ್ಥಿವೇತನ ಪ್ರಧಾನ. ಬೆಂಗಳೂರಿನ ಉದ್ಯಮಿ ಶ್ರೀ ಸದಾಶಿವ ರಾವ್ ದಂಪತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯರಾಗಿ ಶ್ರೀ ಉಮಾನಾಥ ಶೆಣೈ,  ಶ್ರೀಮತಿ ವಿಜಯಾ ಉಮಾನಾಥ ಶೆಣೈ,  ಮೇರಿಹಿಲ್ ಶ್ರೀ ಶಿವಾನಂದ ದಪಂತಿ, ಶ್ರೀ ಪ್ರೇಮ್‍ನಾಥ್ ನಾಯಕ್ ಸೋಲ್ತಾಡಿ, ಶ್ರೀ ಸುನೀಲ್ ಪಾಟೀಲ್ ದಂಪತಿ, ಶ್ರೀ ಅಣ್ಣಪ್ಪ ನಾಯಕ್, ಡಾ. ರಾಜಲಕ್ಷ್ಮಿ ನಿರಂಜನ ರಾವ್, ಶ್ರೀಮತಿ ಕೀರ್ತಿ, ಶ್ರೀ ದಿನೇಶ್ ಪ್ರಭು, ಶ್ರೀಮತಿ ಗೀತಾ. ಪಿ. ಶೆಣೈ,  ಶ್ರೀ ಸಂಜಯ್ ಕುಲಕರ್ಣಿ, ವಿಶ್ವ ಕೊಂಕಣಿ ಕೇಂದ್ರದ ಸಹನಿರ್ದೇಶಕರಾದ ಶ್ರೀ ಗುರುದತ್ತ ಬಾಳಿಗ, ಭವಾನಿ ಶಂಕರ ಭಟ್, ಕೂಡಿಬೈಲು ಶ್ರೀನಿವಾಸ ಶೆಣೈ, ಡಾ ರಿತೇಶ್ ಪ್ರಭು ದಂಪತಿ, ಡಾ ಗಿರೀಶ್ ದಂಪತಿ, ಶ್ರೀ ರಾಜಾರಾಮ್ ಪ್ರಭು ಕಲ್ಲಗುಡ್ಡೆ, ಶ್ರೀ ಮನೋಜ್, ಶ್ರೀ ಬಾಲಕೃಷ್ಣ ಪರ್ಕಳ, ಶ್ರೀಮತಿ ಸುಚೇತಾ ಬಾಲಕೃಷ್ಣ ಉಪಸ್ಥಿತರಿದ್ದರು. ಬೆಂಗಳೂರಿನ ಶ್ರೀಮತಿ ಗೀತಾ. ಪಿ. ಶೆಣೈ ಮತ್ತು ಬೆಳಗಾಂ ನ ಶ್ರೀ ಸಂಜಯ್ ಕುಲಕರ್ಣಿ ಪ್ರತಿಷ್ಠಾನದ ವೆಬೆಸೈಟನ್ನು ಉದ್ಘಾಟಿಸಿದರು. ವಿಶ್ವ ಕೊಂಕಣಿ ಕೇಂದ್ರ ಮತ್ತು ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಣೆ, ಶ್ರೀ ನಾರಾಯಣ ಮಾಸ್ಟರ್ ಕಿನ್ನಾಜೆ, ಶ್ರೀ ಡೆಚ್ಚಾರು ಗಣಪತಿ ಶೆಣೈ, ಶ್ರೀ ರಾಮಚಂದ್ರ ಅಂಕೋಲಾ ರವರನ್ನು ಸನ್ಮಾನಿಸಲಾಯಿತು. ಶ್ರೀ ಎಂ.ಎಂ. ಪ್ರಭು ಅಧ್ಯಕ್ಷತೆವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ನಾಯಕ್ ವಾರ್ಷಿಕ ವರದಿ ಮಂಡಿಸಿದರು. ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಸ್ವಾಗತಿಸಿದರು. ಶ್ರೀ ಸಂಜಯ್ ಪ್ರಭು ಪ್ರಾಸ್ತಾವಿಕವಾಗಿ ನುಡಿದರು. ಶ್ರೀ ಭಾಸ್ಕರ್ ಪ್ರಭು ಮತ್ತು ಶ್ರೀ ಪ್ರಭಾಕರ್ ಪ್ರಭು ವಂದಿಸಿದರು. ಶ್ರೀ ರಮೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

3. ದಿನಾಂಕ 20,21 ಮತ್ತು 22, ಮೇ 2014 ರಂದು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದವರಿಗೆ ಮತ್ತು ಇತರ ಆಸಕ್ತ ಯುವಕ/ಯುವತಿಯರಿಗೆ ಮೂರು ದಿನಗಳ ಸನಿವಾಸ ವ್ಯಕ್ತಿತ್ವ ವಿಕಸನಾ ಕಾರ್ಯಾಗಾರವನ್ನು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು. ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕಾಧ್ಯಕ್ಷರಿಂದ ಶ್ರೀ ಬಸ್ತಿ ವಾಮನ ಶೆಣೈಯವರಿಂದ ಉದ್ಘಾಟನೆ, ಶ್ರೀ ಕೊಡಂಗೆ ಗೋಪಾಲ ಶೆಣೈ, ಶ್ರೀ ಕೊಡಂಗೆ ವಿಜಯ ಶೆಣೈ ಡಾ. ರಾಜಲಕ್ಷ್ಮಿ ನಿರಂಜನ ರಾವ್, ವಿಶ್ವ ಕೊಂಕಣಿ ಕೇಂದ್ರದ ಸಹನಿರ್ದೇಶಕರಾದ ಶ್ರೀ ಗುರುದತ್ತ ಬಾಳಿಗ ಮುಖ್ಯ ಅತಿಥಿಯರಾಗಿ ಭಾಗವಹಿಸಿದರು. ಸುಮಾರು 45 ವಿದ್ಯಾರ್ಥಿಗಳು ದ.ಕ ಮತ್ತು ಉಡುಪಿ ಜಿಲ್ಲೆಯಿಂದ ಭಾಗವಹಿಸಿದರು.

4. ಮೇ 22, 2014ರಂದು ಸುಮಾರು 50 ಸಮಾಜ ಭಾಂದವರು ಸೇರಿಕೊಂಡು ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಪೂರಕವಾದ ಪ್ರಶ್ನಾವಳಿಯನ್ನು ಡಾ. ವೈ. ರವೀಂಧ್ರ ರಾವ್ ರವರ ಮಾರ್ಗದರ್ಶನದಲ್ಲಿ ರಚಿಸಲಾಯಿತು.

5. ದಿನಾಂಕ 23.05.2014ರಂದು ಮಂಗಳಧಾಮದಲ್ಲಿ ನಡೆದ ಸ್ವಾಮಿ ಪಾದ ಪೂಜೆಯಲ್ಲಿ ಭಾಗವಹಿಸಿ, ಪ್ರತಿಷ್ಠಾನದ ವತಿಯಿಂದ ಪಾದುಕೆಯ ಮಹತ್ವ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ನಾಯಕ್‍ರವರು ಮಾಹಿತಿ ನೀಡಿದರು.

6. ದಿನಾಂಕ 26.06.2014ರಂದು ವೆಬ್ ಸೈಟ್ ನಲ್ಲಿ ಪ್ರಕಟಿಸಿದ ಜಾತಿಪಟ್ಟಿಯಲ್ಲಿ ನಮ್ಮ ಸಮಾಜದ ಹೆಸರನ್ನು “ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ” ಎಂದು ತಿದ್ದುಪಡಿ ತರುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಮಂಗಳೂರು, ಇವರಿಗೆ ಮನವಿ ಸಲ್ಲಿಸಲಾಯತು.

13/7/2014 ವಿಶ್ವ ಕೊಂಕಣಿ ಕೇಂದ್ರದಲ್ಲಿ ಸುಮಾರು 25 ಮಂದಿ ಮುಂಬೈನ ಕೆ.ಡಿಎ.ಜಿ.ಬಿ ಸಮಾಜ ಭಾಂಧವರೊಂದಿಗೆ ಜಂಟಿ ಸಭೆ ಮತ್ತು ಅಪರಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

7. ದಿನಾಂಕ 14.07.2014 ರಂದು ಅಖಿಲ ಭಾರತ ಕುಡಾಲ್ ದೇಶ್ಕರ್ ರವರು ಮುಂಬೈಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಶ್ರೀ ಸಂeಯ್ ಪ್ರಭುರವರು ಭಾಗವಹಿಸಿದರು.

8. ದಿನಾಂಕ 22.07.2014ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ನಮ್ಮ ಸಮಾಜದ ಪುರೋಹಿತರೊಂದಿಗೆ ಸಭೆ ಕರೆದು ಸಾಮೂಹಿಕ ಯಜ್ಞೋಪವೀತ ಕಾರ್ಯಕ್ರಮ ಮತ್ತು ‘ಪ್ರತಿಷ್ಠಾನದ ಕಾರ್ಯಕ್ರಮಗಳಲ್ಲಿ ಪುರೋಹಿತ ವರ್ಗದ ಪಾತ್ರ ಬಗೆ ಚರ್ಚಿಸಲಾಯಿತು.

9. ದಿನಾಂಕ 28.07.2014 ರಂದು ನಾಗಾಲ್ಯಾಂಡ್ ಗವರ್ನರ್ ಶ್ರೀ ಪದ್ಮನಾಭ ಆಚಾರ್ಯ ದಂಪತಿಯರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಷ್ಠಾನ ಮೂಲಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

10. ದಿನಾಂಕ 28.07.2014 ರಂದು ಶ್ರೀ ಸುರೇಶ್ ಕುಮಾರ್, ಮಾಜಿ ನಗರಾಭಿವೃದ್ಧಿ ಸಚಿವರು, ಕರ್ನಾಟಕ ಸರಕಾರ, ಇವರೊಂದಿಗೆ ಮಧುಮೇಹ ಕಾಯಿಲೆಯ ಬಗ್ಗೆ ಸಮಾಲೋಚನೆ-ಡಾ. ಪ್ರವೀಣ್ ನಾಯಕ್

9. ದಿನಾಂಕ 10.08.2014ರಂದು ಮಂಗಳೂರಿನ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಯಜ್ಞೋಪವೀತ ಕಾರ್ಯಕ್ರಮದಲ್ಲಿ 100ಕ್ಕೂ ಮಿಕ್ಕಿದ ಸಮಾಜ ಭಾಂದವರು ಸೇರಿಕೊಂಡಿದ್ದರು. ಮಾತೃವಲ್ಲದೆ, ಡಾ ಜಿ.ಎನ್.ಭಟ್ ರವರು ಬೌಧಿಕವಾಗಿ ಆ ದಿನದ ಮಹತ್ವ ಮತ್ತು ಭಾಗವಹಿಸಿದ ಪುರೋಹಿತರಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು.

10. ದಿನಾಂಕ 10.08.2014ರಂದು ಸಾರಸ್ವತ ಬ್ಯಾಂಕ್‍ನ ಸ್ಥಾಪಕ ಅಧ್ಯಕ್ಷರಾದ ದಿವಂಗತ ಏಕನಾಥ ಠಾಗೂರವರ ಅಕಾಲಿಕ ನಿಧನಕ್ಕೆ ಪ್ರತಿಷ್ಠಾನ ಮೂಲಕ ಶೃದ್ಧಾಂಜಲಿ ಸಭೆಯನ್ನು ಮಂಗಳೂರಿನ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

11. ದಿನಾಂಕ 20.08.2014ರಂದು ನಮ್ಮ ಸಮಾಜದ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು, ಪೂರ್ವ ತಯಾರಿಯಾಗಿ ಸುಮಾರು 120 ಕ್ಷೇತ್ರ ಕಾರ್ಯಕರ್ತರಿಗೆ ಪ್ರಶ್ನಾವಳಿಯನ್ನು ಬಳಸುವ ತರಬೇತಿಯನ್ನು ವಿಶ್ವ ಕೊಂಕಣಿ ಕೇಂದ್ರದ ಸಹಭಾಗಿತ್ವದಲ್ಲಿ ಡಾ. ವೈ. ರವೀಂಧ್ರ ರಾವ್ ಮತ್ತು ಶ್ರೀ ಗುರುದತ್ತ ಬಾಳಿಗರವರ ಮಾರ್ಗದರ್ಶನದಲ್ಲಿ ನೆರವೇರಿತು. ತರಬೇತಿಯ ಸಮಾರೋಪ ಸಮಾರಂಭದಲ್ಲಿ ಡಾ. ವೈ. ರವೀಂಧ್ರ ರಾವ್‍ರವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

12. ದಿನಾಂಕ 20.08.2014ರಂದು ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯವರು ಹಮ್ಮಿಕೊಂಡ ‘ಕೊಂಕಣಿ ಮಾನ್ಯತಾ ದಿವಸ್’ ಕಾರ್ಯಕ್ರಮದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ನಡೆಸುವ ಸೇವಾ ಕಾರ್ಯಕ್ಕೆ ‘ಉತ್ತಮ ಸೇವಾ ಸಂಸ್ಥೆ’ ಎಂದು ಪ್ರಶಸ್ತಿ ನೀಡಿ ಗೌರವಿಸಿತು. ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್, ಶ್ರೀ ಸಂಜಯ್ ಪ್ರಭು, ಡಾ. ವಿಜಯಲಕ್ಷ್ಮಿ ನಾಯಕ್, ಶ್ರೀ ಸಂಜೀವ ಸಾಮಂತ್, ಶ್ರೀ ರವೀಂಧ್ರ ನಾಯಕ್‍ರವರು ಉಪಸ್ಥಿತರಿದ್ದರು.

13. ದಿನಾಂಕ 01.10.2014 ರಂದು ಕೇಂದ್ರ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಶ್ರೀ ಶ್ರೀಪಾದ ನಾಯಕ್, ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್, ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ ಪ್ರಭು, ಶ್ರೀ ಗೋಪಾಲ ಶೆಣೈ ಕೊಡಂಗೆ, ಶ್ರೀಮತಿ ಸುಚಿತ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ನಾಯಕ್ ಮತ್ತು ಸಂಪರ್ಕಾಧಿಕಾರಿ ಶ್ರೀ ರವೀಂಧ್ರ ನಾಯಕ್ ಉಪಸ್ಥಿತರಿದ್ದರು.

ದಿನಾಂಕ 18.10.2014 ರಿಂದ 19.10.2014 ಕೊಂಕಣಿ ಭಾಸ ಆನಿ ಸಂಸ್ಕøತಿ ಪ್ರತಿಷ್ಟಾನ (ರಿ) ಮಂಗಳೂರು, ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಟ್ರಸ್ಟ್, ಬೆಂಗಳೂರು, ಹರಿದಾಸ ಶ್ರೇಷ್ಠ ಸಂತ ಭದ್ರಗಿರಿ ಅಚ್ಯುತದಾಸಜೀ ಸಂಸ್ಮರಣ- ಟಿ.ವಿ.ರಮಣ ಪೈ ಕನ್ವೆನ್‍ಷನಲ್ ಸಭಾಂಗಣ’, ಮಂಗಳೂರು.

14. ದಿನಾಂಕ 22.10.2014 ರಂದು ತನ್ನ ಎರಡೂ ಕಣ್ಣುಗಳನ್ನು ದಾನ ಮಾಡಿದ ಒಡ್ಡೂರು ಪ್ರವೀಣ್ ನಾಯಕ್ ರವರಿಗೆ ಶೃದ್ದಾಂಜಲಿ ಸಭೆಯನ್ನು ಎಡಪದವಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಆಯೋಜಿಸಲಾಗಿತ್ತು.

15. ದಿನಾಂಕ 22, ಮತ್ತು 23.11.2014 ರಂದು ಅಖಿಲ ಭಾರತ ಕುಡಾಲ್ ದೇಶ್ಕರ್‍ರವರು ಸಮನ್ವಯ ಸಮಿತಿಯ ಸಭೆಯನ್ನು ಬೆಳಗಾಂ ಸಂಜೀವ ಕುಲಕರ್ಣಿಯವರ ‘ಸಂಕಲ್ಪ ಭೂಮಿ’ ವಿಶ್ರಾಂತಿ ಧಾಮದಲ್ಲ್ಲಿ ಆಯೋಜಿಸಿದ್ದು, ಪ್ರತಿಷ್ಠಾನದ ಸದಸ್ಯರಾದ ಮುರಳೀಧರ ವಗ್ಗ, ಸಂಜಯ್ ಪ್ರಭು ಭಾಗವಹಿಸಿದ್ದರು.

16. ರಾಷ್ಟ್ರೀಯ ಐ.ಒ.ಬಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆದಿರುವುದು.

17. ಪ್ರತಿಷ್ಠಾನ ಮೂಲಕ ಕೊಂಕಣಿ ಕಾರ್ಡ್ ಎಲ್ಲರಿಗೂ ಸಿಗುವಂತೆ ವ್ಯವಸ್ಥೆ.

18. ನಮ್ಮ ಸಮಾಜದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಅನುಷ್ಠಾನದ ಸಂದರ್ಭದಲ್ಲಿ ಗಮನಕ್ಕೆ ಬಂದ ಮಂಗಳೂರಿನ ಇರುವೈಲು ಗ್ರಾಮದ ಪೊಂಡಬೋಡಿಯ ಮನೆಯಲ್ಲಿ ಮಾನಸಿಕ ಅಸ್ವಸ್ಥರಾದ ಕುಟುಂಬಕ್ಕೆ ಎರಡು ಬಾರಿ ಭೇಟಿ ನೀಡಿ, ಅವರ ವೈದ್ಯಕೀಯ ಚಿಕಿತ್ಸೆ ಮತ್ತು ಮುಂದಿನ ಕ್ರಮಗಳ ¨ಗೆ ಚರ್ಚಿಸಿರುವುದು.

19. ಪ್ರತಿಷ್ಠಾನದ ಮೂಲಕ ಕು. ಜ್ಯೋತಿ, (ಶ್ರೀ ಹರಿಶ್ಚಂದ್ರರವರ ಮಗಳು) ಇವರ ಇಂಜಿನಿಯರ್ ವಿದ್ಯಾಭ್ಯಾಸಕ್ಕೆ ಮತ್ತು ಹೋಸ್ಟೆಲ್ ವ್ಯವಸ್ಥೆ ನೀಡಿ ದತ್ತು ಸ್ವೀಕಾರ.

20. ದಿನಾಂಕ 11.01.21015 ರಂದು ಕೆನರಾ ಹೈಸ್ಕೂಲ್‍ನಲ್ಲಿ ಚಿನ್ನ ನಿರ್ದೇಶನದ ಸಿನೇಮಾ ‘ಉಜ್ವಾಡು’ ಇದರ ಸಿ.ಡಿ ಬಿಡುಗಡೆಯಲ್ಲಿ ಶ್ರೀ ರಮೇಶ್ ನಾಯಕ್ ರವರು ಮುಖ್ಯ ಅತಿಥಿಯರಾಗಿ ಭಾಗವಹಿಸಿದ್ದರು.

21. ದಿನಾಂಕ 25.01.2015 ರಂದು ಉಡುಪಿ ಜಿಲ್ಲಾ ಸ್ನೇಹ ಸಮ್ಮಿಲನದಲ್ಲಿ ಸಕ್ರೀಯ ಪಾಲ್ಗೊಳ್ಳುವಿಕೆ

22.. ದಿನಾಂಕ 01.02.2015 ರಂದು ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಮಣಿಪಾಲದಲ್ಲಿ ಜರುಗಿದ ರಜತ ದ್ವಾರ ಬಂಧ ನಿರ್ಮಾಣಕ್ಕೆ ರಜತ ಸಮರ್ಪಣಾ ಕಾರ್ಯಕ್ರಮಕ್ಕೆ ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ್ ನಾಯಕ್ ರವರು ಅತಿಥಿಯಾಗಿ ಭಾಗವಹಿಸಿದ್ದರು.

23. ದಿನಾಂಕ 08.02.2015, ಉಚಿತ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರವನ್ನು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಭಾರತ ಸರಕಾರದ ಆಯುಷ್ ಸಚಿವರಾದ ಶ್ರೀ ಪಾದ ನಾಯಕ್, ಕರ್ನಾಟಕ ಸರಕಾರದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಮತ್ತು 108 ಜಿ.ಎಮ್.ಆರ್ ನ ಸಿ.ಇ.ಒ ಶ್ರೀ ಜಗದೀಶ್ ಪಾಟೀಲ್ ರವರ ಗೌರವ ಉಪಸ್ಥಿತಿಯಲ್ಲಿ -ಲಯನ್ಸ್ ಸೇವಾ ಮಂದಿರ, ಬಿ.ಸಿ.ರೋಡ್‍ನಲ್ಲಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ವಿಶೇಷ ಹಾಗೂ ನುರಿತ ತಜ್ಞ ವೈದ್ಯರುಗಳಾದ ಡಾ. ಅರುಣ್ ಎಸ್ (ಸಾಮಾನ್ಯ ರೋಗ ತಜ್ಞರು, ಡಾ. ಪದ್ಮನಾಭ ಕಾಮತ್ (ಹೃದಯ ರೋಗ ತಜ್ಞರು), ಡಾ. ಈಶ್ವರ ಕೀರ್ತಿ (ಬೆನ್ನು ಮೂಳೆ ತಜ್ಞರು), ಡಾ. ಪ್ರವೀಣ್‍ಚಂದ್ರ ನಾಯಕ್ ( ಮಧುಮೇಹ ತಜ್ಞರು), ಡಾ. ಪ್ರಹ್ಲಾದ್ ಕುಷ್ಟಗಿ (ಸ್ತ್ರಿ ರೋಗ ತಜ್ಞರು) ಮತ್ತು ಡಾ. ಅಭಿನ್ ಹೊಳ್ಳ ( ಕಣ್ಣಿನ ತಜ್ಞರು) ಭಾಗವಹಿಸಿದ್ದರು. ಸಮಾಜದ ವೈದ್ಯರುಗಳಾದ ಡಾ. ತ್ರಿವೇಣಿ ಕೂಡಿಬೈಲು, ಡಾ. ರಿತೇಶ್ ಬಿ ಪ್ರಭು, ಡಾ. ಪ್ರವೀಣ್‍ಚಂದ್ರ ನಾಯಕ್, ಡಾ. ಮನೋಹರ್ ಪ್ರಭು, ಡಾ. ಸುಚೇತ ಶೆಣೈ, ಡಾ. ರಾಮ್ ರಾಜೇಶ್ ಮುಂತಾದವರು ಮಾಹಿತಿ ನೀಡಿದರು. ಡಾ.ವಾಣಿ ರಿತೇಶ್, ಮತ್ತು ಡಾ.ಪೂರ್ಣಾನಂದ ಜನಸಾಮಾನ್ಯರ ತಪಾಸಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಜತೆಗೆ ಆರೋಗ್ಯ ಕಾರ್ಯಕರ್ತರಾದ ಸುಜಾತ ರಮೇಶ್ ಸಾಮಂತ್, ಸರೋಜಾ, ಸುಜಾತ ರಾಘವೇಂದ್ರ ಕಶೆಕೋಡಿ, ಅಶ್ವಿನಿ ಗುರುಪ್ರಸಾದ್, ರಮೇಶ್ ಪ್ರಭು, ವಿಜಯ ಉಪೇಂದ್ರ ನಾಯಕ್, ಮಂಜುನಾಥ್, ಗುರುರಾಜ್, ವಿನೀತ್ ವಗ್ಗ ಸಹಕರಿಸಿದರು. ಸುಮಾರು 600 ಜನಕ್ಕಿಂತಲೂ ಹೆಚ್ಚು ಜನರು ಶಿಬಿರದ ಸದುಪಯೋಗವನ್ನು ಪಡೆದು ಕೊಂಡರು.

24. ದಿನಾಂಕ 21.02.2015 ರಂದು -ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪ ದಲ್ಲಿ ಹಮ್ಮಿದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಶ್ರೀ ಕೆ.ರಮೇಶ್ ನಾಯಕ್ ರಾಯಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.

25. ದಿನಾಂಕ 21.02.2015 ರಂದು ಟಿ.ವಿ.ರಮಣ ಪೈ ಕನ್ವೆನ್ ಷನಲ್ ಸಭಾಂಗಣ’, ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಕೇಂದ್ರದ ‘ಪ್ರೇರಣಾ ವಿಷನ್ ಟಿ.ವಿ.ಎಮ್’ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ

26. ದಿನಾಂಕ 8.03.2015 ಶ್ರೀದೇವಿ ಮೀನಾಕ್ಷಿ ದೇವಸ್ಥಾನ, ಮಟಪಾಡಿ ಕಲ್ಲಡ್ಕ ಇದರ ಪ್ರತಿಷ್ಠಾ ಮಹೋತ್ಸವ ಮತ್ತು ಸಾಮೂಹಿಕ ಬ್ರಹ್ಮೋಪದೇಶ-ಸುಬ್ರಮಣ್ಯ ಮಠಾಧೀಶರಿಂದ ಆಶೀರ್ವಚನ ಮತ್ತು ಡಾ. ಪ್ರಭಾಕರ್ ಭಟ್ ರವರಿಂದ ಹಿತನುಡಿಗಳು. ಮಹೇಶ್ ಠಾಗೂರ್, ದಿನೇಶ್ ಪ್ರಭು, ಶ್ರೀಧರ್ ನಾಯಕ್, ಇವರ ಉಪಸ್ಥಿತಿ. ಸುಮಾರು ……….. ವಟುಗಳ ಬ್ರಹ್ಮೋಪದೇಶ ನೇರವೇರಿತು. ಸುಮಾರು 700 ಬಂಧು ಭಾಂಧವರು ನೆರೆದಿದ್ದರು.

27. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರಾಯಿ ರಮೇಶ ನಾಯಕ್ ಇವರಿಗೆ ವಿಶ್ವ ಕೊಂಕಣಿ ಕೇಂದ್ರದಿಂದ ಸನ್ಮಾನ

28. ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನ, ಮುಲಾರು, ಕಲ್ಲಡ್ಕ-ಇದರ ಪ್ರತಿಷ್ಠಾ ಮಹೋತ್ಸವದಲ್ಲಿ ಸಕ್ರೀಯ ಪಾಲ್ಗೊಳ್ಳುವಿಕೆ.