AGM 2016

ಮಹಾಸಭೆಯ ವರದಿ-2015-16
ಕಾರ್ಯಸೂಚಿಯಂತೆ ನಡವಳಿಕೆಗಳು:

ಆರಂಭದಲ್ಲಿ ಪುರೋಹಿತರಾದ ಶ್ರೀ ನಿತ್ಯಾನಂದ ಭಟ್, ಇವರಿಂದ ಪ್ರಾರ್ಥನೆ ಮತ್ತು ಕಾರ್ಯಾಧ್ಯಕ್ಷ ಶ್ರೀ ಸಂಜಯ್ ಪ್ರಭುರವರಿಂದ ಸ್ವಾಗತ.

1. ಪ್ರಸ್ತಾವನೆ: ಸಭೆಯ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್, ಇವರು ಪ್ರತಿಷ್ಟಾನದ ನೂತನ ಆಡಳಿತ ಮಂಡಳಿ ರಚನೆ, ನಿಕಟಪೂರ್ವ ಪ್ರಧಾನ ಪ್ರಾಯೋಜಕರಾದ ಶ್ರೀ ಎಂ.ಎಂ.ಪ್ರಭು ಮತ್ತು ಶ್ರೀ ಡೆಚ್ಚಾರ್ ಗಣಪತಿ ಶೆಣೈಯವರು ಪ್ರತಿಷ್ಟಾನ ನಡೆಸಿ ಬಂದ ರೀತಿ, ನೂತನ ಆಡಳಿತ ಮಂಡಳಿಯಿಂದ ಶೆಕ್ಷಣಿಕವಾಗಿ, ಸಾಮಾಜಿಕವಾಗಿ, ಮತ್ತು ಧಾರ್ಮಿಕವಾಗಿ ನಡೆಸಿದ ಕಾರ್ಯಚಟುವಟಿಕೆಗಳ ಆಶಯ ಹಾಗೂ ಸಮಾಜ ನೀಡುತ್ತಿರುವ ಸಹಕಾರವನ್ನು ಸಂಕ್ಷಿಪ್ತವಾಗಿ ಸಭೆಯ ಮುಂದಿಟ್ಟರು.

2. ಪ್ರತಿಷ್ಟಾನವು ದಿನಾಂಕ 01.04.2015 ರಿಂದ 31.03.2016 ರವರೆಗೆ ಹಮ್ಮಿಕೊಂಡ ಚಟುವಟಿಕೆಗಳು-
• ದಿನಾಂಕ 09.04.2015ರಂದು ಮಣಿಪಾಲ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳೂರಿನಿಂದ ಬ್ರಹತ್ ವಾಹನ ಜಾಥಾವನ್ನು ಆಯೋಜಿಸಲಾಗಿತ್ತು. ಸುಮಾರು 40 ವಾಹನಗಳು ಮತ್ತು 150 ಮಂದಿ, ಜಾಥಾದಲ್ಲಿ ಪಾಲ್ಗೊಂಡಿದ್ದರು.
• ದಿನಾಂಕ 09, 10, 11, 12 ಮತ್ತು 13.04.2015 ರ ದಿನಗಳಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ, ಮಣಿಪಾಲದಲ್ಲಿ ಜರುಗಿದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸದಲ್ಲಿ ಪ್ರತಿಷ್ಠಾನ ಸದಸ್ಯರ ಸಕೀಯ ಭಾಗವಹಿಸುವಿಕೆ.
• ದಿನಾಂಕ 10-08-15 ರಂದು ಶ್ರೀದೇವಿ ಮೀನಾಕ್ಷಿ ದೇವಸ್ಥಾನ, ಮಟಪಾಡಿ ಕಲ್ಲಡ್ಕದಲ್ಲಿ ‘ಸಂಧ್ಯಾವಂದನೆ ಪ್ರಾತ್ಯಕ್ಷಿಕೆ ಶಿಬಿರ’ದ ಆಯೋಜನೆ ಮತ್ತು ಸುಮಾರು 200 ಮಂದಿ ಭಾಗವಹಿಸಿ, ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿದ್ದರು.
• ದಿನಾಂಕ 28/08/2015 ರಂದು ಸಾಮೂಹಿಕ ಋಗುಪಾಕರ್ಮ ಕಾರ್ಯಕ್ರಮ-ಕದ್ರಿ ಅಭಿಷೇಕ್ ಸಭಾಂಗಣದಲ್ಲಿ ಬೆಳಗ್ಗೆ 7 ರಿಂದ 9ರತನಕ ಆಯೋಜಿಸಿದ್ದು ಸುಮಾರು 50 ಮಂದಿ ಭಾಗವಹಿಸಿದ್ದರು.
• ದಿನಾಂಕ 11,12,13/09/2015 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೂರು ದಿನಗಳ ‘ವಾಸ್ತವ್ಯ ವ್ಯಕಿತ್ವ ವಿಕಸನ ಶಿಬಿರ ಸ್ಫೂರ್ತಿ-2015’ ಪದವಿ ಪೂರ್ವ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ. ಸುಮಾರು 45 ವಿದ್ಯಾರ್ಥಿಗಳು ಭಾಗವಹಿಸಿದ್ದರು.
• ದಿನಾಂಕ 18,19,20/09/2015 ರಂದು ಈ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮೂರು ದಿನಗಳ ‘ವಾಸ್ತವ್ಯ ವ್ಯಕಿತ್ವ ವಿಕಸನ ಶಿಬಿರ ಸ್ಫೂರ್ತಿ-2015’ ಪದವೀಧರ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ನಡೆಯಿತು. ಸುಮಾರು 68 ವಿದ್ಯಾರ್ಥಿಗಳು ಭಾಗವಹಿಸಿದ್ದರು.
• ದಿನಾಂಕ 02.10.2015ರಂದು ಟಿ.ವಿ.ರಮಣ ಪೈ ಸಭಾಂಗಣದಲ್ಲಿ ‘ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ’ ಕಾರ್ಯಕ್ರಮ’ ವನ್ನು ಹಮ್ಮಿಕೊಂಡಿದ್ದೆವು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
• ದಿನಾಂಕ 10.01.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಮತ್ತು ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಂಘ (ರಿ), ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಪುಂಜಾಲ್ಕಟ್ಟೆಯ ನಂದಗೋಕುಲ ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಪುರೋಹಿತರು, ಜ್ಯೋತಿಷ್ಯರು ಮತ್ತು ವಾಸ್ತು ಸಲಹೆಗಾರರಾದ ಶ್ರೀ ರತ್ನಾಕರ ಭಟ್ ಸರಪಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಶಿಬಿರದ ವಿಶೇಷವಾದ ಅಂಶವೆಂದರೆ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜದ ವೈದ್ಯರುಗಳು ಮತ್ತು ಆರೋಗ್ಯಕಾರ್ಯಕರ್ತರು ಮುಂದಾಳುತ್ವ ವಹಿಸಿ ಶಿಬಿರದ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ಶಿಬಿರದಲ್ಲಿ ಆರೋಗ್ಯ ತಪಾಸಣೆಯ ಜತೆಗೆ ‘ಆಯುರ್ವೇದ ಮನೆ-ಮದ್ದು, ಮಕ್ಕಳ ಹಲ್ಲಿನ ರಕ್ಷಣೆ, ಮುಖಾಂಗದ ಶಸ್ತ್ರಚಿಕಿತ್ಸೆ, ಮಧುಮೇಹ ಚಿಕಿತ್ಸೆ, ಪಾಶ್ರ್ವವಾಯು -ಪ್ರಥಮ ಚೆಕಿತ್ಸೆ, ಹೃದಯಾಘಾತ, ಬೆನ್ನು ಮೂಳೆ- ಸ್ಲಿಪ್ ಡಿಸ್ಕ್, ಆರೋಗ್ಯ ವಿಮೆ’ ಮುಂತಾದ ವಿಷಯಗಳ ಮಾಹಿತಿಯನ್ನು ಕ್ರಮವಾಗಿ ಸಮಾಜದ ವೈದ್ಯರುಗಳಾದ ಡಾ. ತ್ರಿವೇಣಿ ಕೂಡಿಬೈಲು, ಡಾ.ಗಿರೀಶ್ ನಾಯಕ್, ಡಾ. ರಿತೇಶ್ ಬಿ. ಪ್ರಭು, ಡಾ. ಪ್ರವೀಣ್ ಚಂದ್ರ ನಾಯಕ್, ಡಾ. ಮನೋಹರ್ ಪ್ರಭು, ಡಾ. ಭಾಸ್ಕರ್ ಪ್ರಭು, ವಿಕ್ರಮ್ ಮುಂತಾzವರು ಮಾಹಿತಿ ನೀಡಿದರು. ಡಾ. ಸುಚೇತ ಸುಧಾಕರ ಶೆಣೈ, ಡಾ. ವಿನಯ ಗಿರೀಶ ನಾಯಕ್, ಡಾ.ವಾಣಿ ರಿತೇಶ್, ಡಾ. ಶಿವಪ್ರಕಾಶ್, ಜನ ಸಾಮಾನ್ಯರ ತಪಾಸಣೆಯಲ್ಲಿ ತೊಡಗಿಸಿ ಕೊಂಡಿದ್ದರು. ಜತೆಗೆ ಆರೋಗ್ಯ ಕಾರ್ಯಕರ್ತರಾದ ಸುಜಾತ ರಮೇಶ್ ಸಾಮಂತ್, ಸುನಂದ, ಸುಜಾತ ಕಶೆಕೋಡಿ, ವಿಜಯಲಕ್ಷ್ಮಿ ಪುತ್ತೂರು, ರಮೇಶ್ ಕೊಡ್ನೀರು, ವರುಣ್, ರಮೇಶ್ ಪ್ರಭು ಸಹಕರಿಸಿದರು.
• ದಿನಾಂಕ 07.02.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಮತ್ತು ಶ್ರೀ ಪೂರ್ಣಾನಂದ ಮಂದಿರ(ರಿ), ಪುತ್ತೂರು, ಇದರ ಜಂಟಿ ಆಶ್ರಯದಲ್ಲಿ ಪುತ್ತೂರಿನ ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಪೂರ್ಣಾನಂದ ಮಂದಿರದ ಅಧ್ಯಕ್ಷರಾದ ಬಾಲಕೃಷ್ಣ ಪ್ರಭು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾಜದ ವೈದ್ಯರುಗಳು ಮತ್ತು ಪ್ಯಾರಾ ಮೆಡಿಕಲ್ ಕಾರುಕರ್ತರು ಪಾಲ್ಗೋಂಡು ಶಿಬಿರದಲ್ಲಿ ಭಾಗವಹಿಸಿದವರಿಗೆ ಆರೋಗ್ಯ ತಪಾಸಣೆ ನಡೆಸಿದರು.
• ದಿನಾಂಕ 07.02.2016 ರಂದು ಸಮಾಜದ ಪುರೋಹಿತ ವರ್ಗದವರೊಂದಿಗೆ ಮತ್ತು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ಪದಾಧಿಕಾರಿಯರೊಂದಿಗೆ ಸಾಮೂಹಿಕ ಬ್ರಹ್ಮೋಪದೇಶ ಮತ್ತು ಪೊಡಂಬೋಡಿ ಗೃಹಪ್ರವೇಶ’ ನಡೆಸುವ ಬಗ್ಗೆ ಪೂರ್ವ ತಯಾರಿ ಸಭೆ ನಡೆಯಿತು.
• ದಿನಾಂಕ 10.01.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಮತ್ತು ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಂಘ (ರಿ), ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಪುಂಜಾಲ್ಕಟ್ಟೆಯ ನಂದಗೋಕುಲ ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಪುರೋಹಿತರು, ಜ್ಯೋತಿಷ್ಯರು ಮತ್ತು ವಾಸ್ತು ಸಲಹೆಗಾರರಾದ ಶ್ರೀ ರತ್ನಾಕರ ಭಟ್ ಸರಪಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
• ದಿನಾಂಕ 07.02.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಮತ್ತು ಶ್ರೀ ಪೂರ್ಣಾನಂದ ಮಂದಿರ(ರಿ), ಪುತ್ತೂರು, ಇದರ ಜಂಟಿ ಆಶ್ರಯದಲ್ಲಿ ಪುತ್ತೂರಿನ ಸಭಾ ಭವನದಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಪೂರ್ಣಾನಂದ ಮಂದಿರದ ಅಧ್ಯಕ್ಷರಾದ ಬಾಲಕೃಷ್ಣ ಪ್ರಭು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾಜದ ವೈದ್ಯರುಗಳು ಮತ್ತು ಪ್ಯಾರಾ ಮೆಡಿಕಲ್ ಕಾರುಕರ್ತರು ಪಾಲ್ಗೋಂಡು ಶಿಬಿರದಲ್ಲಿ ಭಾಗವಹಿಸಿದವರಿಗೆ ಆರೋಗ್ಯ ತಪಾಸಣೆ ನಡೆಸಿದರು.
• ದಿನಾಂಕ 07.02.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ),ವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬ್ರಿಂಡೆಲ್‍ನಲ್ಲಿ ಹಮ್ಮಿಕೊಂಡ ‘ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ವೇದಮೂರ್ತಿ ಶ್ರೀ ಸಂಜೀವ ಭಟ್ ಇರುವೈಲು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
• ದಿನಾಂಕ 2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ(ರಿ), ಮಂಗಳೂರು ಮತ್ತು ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನ, ಮುಲಾರು ಇವರ ಜಂಟಿ ಆಶ್ರಯದಲ್ಲಿ ವೇದಮೂರ್ತಿ ಶ್ರೀ ಸಂಜೀವ ಭಟ್, ಇರುವೈಲು ಇವರ ನೇತೃತ್ವದಲ್ಲಿ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಪುರೋಹಿತರ ಪೌರೋಹಿತ್ಯದಲ್ಲಿ ಸಮಾಜದ ವಟುಗಳಿಗೆ ‘ಉಚಿತ ಸಾಮೂಹಿಕ ಬ್ರಹ್ಮೋಪದೇಶ’ವನ್ನು ಮುಲಾರು ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

• ದಿನಾಂಕ 08.04.2016 ರಂದು “ಉತ್ತಮ ನಾಯಕನಿದ್ದಾಗ ಇಡೀ ಸಮಾಜವೇ ಅವನನ್ನು ಬೆಂಬಲಿಸುತ್ತದೆ. ಹಾಗೆಯೇ ಪ್ರಸ್ತುತ: ದಿನಗಳಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ವು ರಾಜ್ಯಾದ್ಯಂತ ಇಡೀ ಕುಡಾಲ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮುದಾಯವನ್ನು ಒಟ್ಟು ಸೇರಿಸಿ, ಸಮಾಜದ ಮಾನಸಿಕ ಅಸ್ಥಿತ್ವದಿಂದ ಕೂಡಿದ ಕುಟುಂಬವನ್ನು ಗುರುತಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮನೆಯನ್ನು ಕಟ್ಟಿಸಿಕೊಟ್ಟು, ಆ ಕುಟುಂಬ ನೆಮ್ಮದಿಯ ಜೀವನವನ್ನು ಸಾಗಿಸಲು ಬೇಕಾದ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಟ್ಟು ಎಲ್ಲರ ಪ್ರೀತಿಗೆ ಪಾತ್ರರಾಗಿ ಪೂರ್ಣ ಆನಂದವನ್ನು ನೀಡುವಲ್ಲಿ ಸಫಲರಾಗಿದ್ದಾರೆ.” ಎಂದು ವೇದಮೂರ್ತಿ ಶ್ರೀ ಸಂಜೀವ ಭಟ್ ರವರು ಆಶೀರ್ವಚಿಸಿದರು. 

ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ನೇತೃತ್ವದಲ್ಲಿ ಹಮ್ಮಿಕೊಂಡ ಪಡಂಬೋಡಿ ಕುಟುಂಬದ ನೂತನ ಗೃಹಪ್ರವೇಶದ ಸಮಾರಂಭದಲ್ಲಿ ಸಾಂಕೇತಿಕವಾಗಿ ಮನೆಯ ಕೀಯನ್ನು ಆ ಕುಟುಂಬದ ಯಜಮಾನಿ ಶ್ರೀಮತಿ ಜಲಜ ಇವರಿಗೆ ಹಸ್ತಾಂತರಿಸುವ ಸಂಧರ್ಭದಲ್ಲಿ ಅಭಿಪ್ರಾಯ ಪಟ್ಟರು. 

ಆ ಬಳಿಕ ನಡೆದ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮಿ ನಾಯಕ್ ರವರು ಸಭೆಯ ಮುಂದೆ ಮಂಡಿಸಿದಾಗ, ನಿತ್ಯಾನಂದ ಭಟ್ ರವರ ಒಪ್ಪಿಗೆಯ ಮೇರೆಗೆ ಸಭೆಯು ಸರ್ವಾನುಮತದಿಂದ ವರದಿಯನ್ನು ಅಂಗೀಕರಿಸಿತು.

3. ದಿನಾಂಕ 27. 11. 2013 ರಿಂದ 31. 03. 2014 ನೇ ಸಾಲಿನ ಲೆಕ್ಕ ಪತ್ರ ಮಂಡನೆಯನ್ನು (ಆಂತರೀಕ ಲೆಕ್ಕ ಪರಶೋಧಕರಿಂದ ಪರಿಶೀಲಿಸಲ್ಪಟ್ಟ) ಖಜಾಂಚಿ ಶ್ರೀ ಸಂಜೀವ ಸಾಮಂತ್‍ರವರು ಸಭೆಯ ಮುಂದೆ ಮಂಡಿಸಿದರು. ಕಾರ್ಯಕ್ರಮಗಳನ್ನು ಕಡಿಮೆ ಖರ್ಚಿನಲ್ಲಿ ನಡೆಸುವುದು ಉತ್ತಮ. ಸಾಮೂಹಿಕ ಉಪನಯನ ಕಾರ್ಯಕ್ರಮದ ಖರ್ಚು ಜಾಸ್ತಿಯಾದಂತೆ ಕಾಣುತ್ತದೆ. ಎಂದು ಸುಧಾಕರ ಶೆಣೈ ಕೇಳಲಾದ ಪ್ರಶ್ನೆಗೆ ‘ಸ್ವಾಮಿಗಳು ಪ್ರಥಮ ಬಾರಿಗೆ ನಮ್ಮ ಸಮುದಾಯದ ಕಾರ್ಯಕ್ರಮಕ್ಕೆ ಬರುತ್ತಿದ್ದರಿಂದ, ಕೆಲವು ಸಾಂಪ್ರದಾಯಿಕ ಕ್ರಮಗಳನ್ನು ಮಾಡಲೇ ಬೇಕಿತ್ತು. ಮುಂದಿನ ದಿನಗಳಲ್ಲಿ ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮಗಳು ಆಗುವಂತೆ ನೋಡುವದಾಗಿ ಅಧ್ಯಕ್ಷರು ತಿಳಿಸಿದರು.
ಶ್ರೀ ಸುಧಾಕರ ಶೆಣೈರವರ ಅನುಮೋದನೆಯೊಂದಿಗೆ , ಸಭೆಯು ಸರ್ವಾನುಮತದಿಂದ ಲೆಕ್ಕಪತ್ರವನ್ನು ಮಂಜೂರು ಮಾಡಿತು.

4) ಸದಸ್ಯತನದ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ, ಪ್ರತಿಷ್ಠಾನದ ಮೂಲಕ ಅನೇಕಾನೇಕ ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಹಾಗೂ ಒಬ್ಬ ವಿದ್ಯಾರ್ಥಿನಿಯ ದತ್ತು ಸ್ವೀಕಾರ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂಪನ್ಮೂಲ ಕ್ರೋಢೀಕರಣ ಅನಿವಾರ್ಯ, ಸೇವಾ ಕಾರ್ಯವನ್ನು ಪ್ರತಿಷ್ಠಾನಕ್ಕೆ ನೀಡಲಿಚ್ಚಿಸುವವರು ನೀಡಬಹುದು, ಅವರು ಸದಸ್ಯರಾಗ ಬೇಕಾಗಿಲ್ಲ ಎನ್ನುವ ನೆಲೆಯಲ್ಲಿ ಸದಸ್ಯತನದ ಶುಲ್ಕವನ್ನು 1,000 ದಿಂದ 25,000 ಕ್ಕೆ ಪರಿಷ್ಕರಿಸಿ, ಎರಡು ವರ್ಷಗಳ ಅವದಿಯಲ್ಲಿ, ಕಂತುಗಳ ಮೂಲಕ ನೀಡುವ ಬಗ್ಗೆ ಚರ್ಚಿಸಲಾಯಿತು. ಸದಸ್ಯತನ ಮುಖ್ಯವಲ್ಲ, ಕಾರ್ಯಕರ್ತರ ತಂಡವೂ ಅಗತ್ಯ, ಸೇವಾಕಾರ್ಯ ಮಾಡುವವರಿಗೆ ಕಾರ್ಯಕರ್ತರ ತಂಡದಲ್ಲಿ ಸೇರಿಸ ಬಹುದು. ಈಗಾಗಲೇ 1,000 ರೂ ನೀಡಿರುವ ಪ್ರತಿಯೊಬ್ಬರೂ ಸ್ಥಾಪಕ ಸದಸ್ಯರಾಗಿರುತ್ತಾರೆ ಎಂದು ಶ್ರೀ ಎಂ. ಎಂ. ಪ್ರಭುರವರ ಸ್ಪಷ್ಟನೆಗೆ, ಪುರೋಹಿತ ಶ್ರೀ ನಿತ್ಯಾನಂದ ಭಟ್‍ರವರ ಅನುಮೋದನೆಯೊಂದಿಗೆ ಸಭೆಯು ಕರತಾಂಡನದ ಮೂಲಕ ಸದಸ್ಯತನದ ಶುಲ್ಕವನ್ನು ರೂ. 25,000 ನಿರ್ಧರಿಸುವ ನಿರ್ಣಯವನ್ನು ಕೈಗೊಂಡಿತು.

5. ಬೈಲೋ ಸಂಖ್ಯೆ …… ರಂತೆ ಆಡಳಿತ ಸದಸ್ಯರ ಸಂಖ್ಯೆಯು 15 ರಿಂದ 35 ಎಂದಿರುವುದರಿಂದ, ಈಗಾಗಲೇ ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆಯು 30 ಇರುವುದರಿಂದ, ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆಯನ್ನು ಬದಲಿಸುವ ಅಗತ್ಯವಿಲ್ಲವೆಂದು ಸಭೆಯು ನಿರ್ಣಯಿಸಿತು. ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಅಗತ್ಯವೆಂದು ಕಂಡುಬಂದಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರನ್ನು ಆಡಳಿತ ಮಂಡಳಿಗೆ ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

6. ಈಗಾಗಲೇ ಆಯ್ಕೆಗೊಂಡ ಪದಾಧಿಕಾರಿಗಳನ್ನು ಅಗತ್ಯವಿದ್ದಲ್ಲಿ ಬದಲಾಯಿಸುವ ಬಗ್ಗೆ – ನಿರಂತರವಾಗಿ 3 ಸಭೆಗಳಿಗೆ ಗೈರು ಹಾಜರಾದ್ದಲ್ಲಿ ಅವರ ಸದಸ್ಯತನ ರದ್ದಾಗುತ್ತದೆ. ಇಂತಹ ಸದಸ್ಯರನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ಬದಲಾಯಿಸುವ ಬಗ್ಗೆ ಶ್ರೀ ಎಂ. ಎಂ. ಪ್ರಭುರವರ ಸ್ಪಷ್ಟೀಕರಣ ನೀಡಿದ ಮೇರೆಗೆ ಪದಾಧಿಕಾರಿಗಳನ್ನು ಬದಲಾಯಿಸುವ ಅಧಿಕಾರವನ್ನು ಪ್ರತಿಷ್ಠಾನದ ಆಡಳಿತ ಮಂಡಳಿಗೆ ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

7. ಪ್ರತಿಷ್ಠಾನಕ್ಕೆ ಲೆಕ್ಕಪರಿಶೋಧಕರರಾಗಿ ಸಿಎ. ರವಿರಾಜ, ಗೋಪಾಲಕೃಷ್ಣ ಬಿಲ್ಡಿಂಗ್, 2ನೇ ಮಹಡಿ, ಬಂಟ್ಸಹಾಸ್ಟೆಲ್, ಮಂಗಳೂರು ಇವರನ್ನು ಗುರುತಿಸಿದ ಬಗ್ಗೆ ಮತ್ತು ಅವರನ್ನು ಮುಂದುವರೆಸುವ ಬಗ್ಗೆ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್‍ರವರು ತಿಳಿಸಿದರು. ಆಂತರೀಕ ಲೆಕ್ಕ ಪರಿಶೋಧಕರಾಗಿ ಶ್ರೀ ಪ್ರಭಾಕರ ಪ್ರಭು, ಮೇರಿಹಿಲ್, ನಿವೃತ್ತ ಬ್ಯಾಂಕ್ ಮನೇಜರ್ ಮತ್ತು ಶ್ರೀ ದಯಾನಂದ ಪ್ರಭು, ಎಂ.ಆರ್.ಪಿ.ಎಲ್ ರವರನ್ನು ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ ಪ್ರಭು ಸೂಚಿಸಿದಾಗ, ಸಭೆಯು ಮಂಜೂರು ಮಾಡಿತು.

8. ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳು – ಇಲ್ಲಿ ಶ್ರೀ ಗೋಪಾಲ ಕೃಷ್ಣ ಪ್ರಭು ವಗ್ಗರವರು ನೀಡಿದ ಪತ್ರವನ್ನು ಓದಲಾಯಿತು. ಅದರಲ್ಲಿ ಕರಪತ್ರವನ್ನು ಕೊಂಕಣಿ ಭಾಷೆಯಲ್ಲಿ ಮುದ್ರಿಸುವಂತೆ ಸೂಚಿಸಲಾಗಿತ್ತು.

9. ಶ್ರೀ ಮುರಳೀಧರ ಪ್ರಭು ವಗ್ಗ ಇವರು ಕೊಂಕಣಿ ಕಾರ್ಡ್‍ನ ಬಗ್ಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ಕೊಂಕಣಿ ಕಾರ್ಡ್‍ನ ನಿರ್ವಹಣೆಯನ್ನು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ನಿರ್ವಹಿಸಬೇಕೆಂದು ವಿನಂತಿಸಿದಾಗ, ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಮತ್ತು ಉಳಿದ ಪದಾಧಿಕಾರಿಗಳು ಒಪ್ಪಿಗೆ ನೀಡಿದರು.

10. ಈ ಬಾರಿ 17ನೇ ವರ್ಷದ ವಿದ್ಯಾರ್ಥಿವೇತನಕ್ಕೆ ಅರ್ಜಿಸಲ್ಲಿಸಿದ ಎಲ್ಲರಿಗೂ ವಿದ್ಯಾರ್ಥಿವೇತನ ನೀಡಿಲ್ಲ. ಕೆಲವರು ಶಿಬಿರಕ್ಕೆ ಬಂದು ವಾಪಾಸು ಹೋಗಿದ್ದಾರೆ ಅವರಿಗೆ ಉಳಿದುಕೊಳ್ಳುವಂತೆ ವಿನಂತಿಸಲಾಗಿತ್ತು. ಸುಳ್ಳು ಕಾರಣವನ್ನು ಹೇಳಿ ಹೋದವರಿಗೆ ವಿದ್ಯಾರ್ಥಿವೇತನ ನೀಡಿಲ್ಲ. ಮುಂದಿನ ಬಾರಿ ತಂದೆ ಯಾ ತಾಯಿ ಬರುವಂತೆ ಮತ್ತು ಶಿಬಿರದಲ್ಲಿ ಪಾಲ್ಗೊಂಡವರಿಗೆ ಮಾತ್ರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿವೇತನಕ್ಕೆ ಸೂಚಿಸುವವರು ಅವರ ಅರ್ಹತೆ ಮತ್ತು ಅಗತ್ಯತೆಯನ್ನು ಅರಿತು ಸೂಚಿಸಬೇಕು ಎಂದು ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ್ ಪ್ರಭು ತಿಳಿಸಿದರು.

11. ಮಾರ್ಚ್ 8 ರಂದು ನಡೆಯುವ ಸಾಮೂಹಿಕ ಉಪನಯನ ಕಾರ್ಯಕ್ರಮದ ಪತ್ರವನ್ನು ಶ್ರೀ ನಿತ್ಯಾನಂದ ಭಟ್‍ರವರು ಓದಿ, ಉಚಿತವಾಗಿ ನಡೆಸಿಕೊಡಲು ಸಹಭಾಗಿತ್ವ ನೀಡುವ ಬಗ್ಗೆ ಕೋರಿದರು. ಇದಕ್ಕೆ ಖಂಡಿತವಾಗಿಯೂ ಸಹಕರಿಸುವುದಾಗಿ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಮತ್ತು ಉಳಿದ ಪದಾಧಿಕಾರಿಗಳು ಒಪ್ಪಿಗೆ ನೀಡಿದರು.

12. ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಿದಾಗ, ಇರುವೈಲು ಗ್ರಾಮದ ಪೊಂಡಬೋಡಿಯಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಗುರುತಿಸುವಿಕೆ, ಪ್ರತಿಷ್ಠಾನ ನಡೆಸಿದ ಪರಿಶೀಲನೆ, ಮತು ಮುಂದೆ ಆಯೋಜಿಸಿಸುವ ಕ್ರಮಗಳ ಸಂಪೂರ್ಣ ಜವಾಬ್ದಾರಿವನ್ನು ಪ್ರತಿಷ್ಠಾನವಹಿಸುತ್ತದೆ ಎಂದು ಕಾರ್ಯಾಧ್ಯಕ್ಷರಾದ ಶ್ರೀ ಸಂಜಯ್ ಪ್ರಭು ತಿಳಿಸಿದರು. ಈ ಕುಟುಂಬದ ಹಿನ್ನಲೆ ಮತ್ತು ಸಮಸ್ಯೆಗಳನ್ನು ಶ್ರೀ ಬಾಲಕೃಷ್ಣರವರು ಸಭೆಗೆ ವಿವರಿಸಿದರು.

ತಾ. ಪಂ. ಸದಸ್ಯರಾದ  ಶ್ರೀಮತಿ ರೀಟಾ ಕುಟಿನೋ ಮತ್ತು ಪ್ರಭಾಕರ್ ಪ್ರಭು, ಗ್ರಾ.ಪಂ. ಸದಸ್ಯರಾದ ಶ್ರೀ ಜಯರಾಮ್ ಬಂಗೇರ, ಮತ್ತು ಶ್ರೀ ವಲೇರಿಯನ್ ಕುಟಿನೋ, ಅಂಗನವಾಡಿ ವಲಯಾಧಿಕಾರಿ ಶ್ರೀಮತಿ ನಾಗರತ್ನಮ್ಮ, ಸುಧೀರ್ ನಾಯಕ್, ಬರೆಪ್ಪಾಡಿ ನಾರಾಯಣ ಪ್ರಭು, ಸ್ಥಾಪಕ ಪ್ರಾಯೋಜಕರಾದ ಎಂ.ಎಂ.ಪ್ರಭಾಕರ ಮುಂತಾದವರು ಪ್ರತಿಷ್ಟಾನವು ತೆಗೆದು ಕೊಂಡ ಈ ಕಾರ್ಯಯೋಜನೆಯನ್ನು ಪ್ರಶಂಸಿಸಿ ಶುಭಹಾರೈಸಿದರು. ಈ ಕಾರ್ಯಯೋಜನೆಯಲ್ಲಿ ವಿಶೇóಷವಾಗಿ ಶ್ರಮಿಸಿದ ಪ್ರಶಾಂತ್ ಪ್ರಭು, ಪ್ರವೀಣ್ ಶೆಣ್ಯೆ, ಗಣೇಶ್ ವಾಮದಪದವು, ಯೋಗೀಶ್ ವಾಮದಪದವು ಮತ್ತು ಬಾಲಕೃóóಷ್ಣ ನಾಯಕ್ ಇವರಿಗೆ ಸನ್ಮಾನಿಸಲಾಯಿತು.

ಅಧ್ಯಕ್ಷ ಶ್ರೀ ಡಿ. ರಮೇಶ್ ನಾಯಕ್‍ರ ಮಾತು: ಪ್ರತಿಷ್ಠಾನದ ಮೂಲಕ ಉತ್ತಮ ಕಾರ್ಯಗಳು ಆಗುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಇದಕ್ಕೆ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಯಾವುದೇ ಲೋಪದೋಷವಿಲ್ಲದೆ ಪ್ರತಿಷ್ಠಿತ ಸಂಸ್ಥೆಯಾಗಿ ನಡೆಸುವ ಧೈರ್ಯ ನಮ್ಮಲ್ಲಿದೆ. ಎಲ್ಲರ ಆಶೀರ್ವಾದ ಬಯಸುತ್ತೇನೆ. ಭವಿಷ್ಯದಲ್ಲಿ ಯಾವುದೇ ಬೌಗೋಳಿಕ ವ್ಯಾಪ್ತಿಯಿಲ್ಲದೆ ಸಮಾಜ ಸೇವೆ ಮಾಡಬೇಕಾಗಿದೆ ಎಂದರು.

ವೇದಿಕೆಯಲ್ಲಿ ಮುಲಾರು ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಶ್ರೀ ನಾರಾಯಣ ನಾಯಕ್ ದರ್ಬೆ,  ಬೆಂಗಳೂರಿನ ಅಭಿವೃದ್ದಿ ಬಿಲ್ಡರ್ಸ್ ನ ಮಾಲಕ ಜಯಂತ್ ನಾಯಕ್, ಶ್ರೀ ಗೋಪಾಲ ಪ್ರಭು, ಉಡುಪಿ ಇಂಡಿಯನ್ ಫಾರ್ಮಸಿಟಿಕಲ್ ಕಂಪೆನಿಯ ಶ್ರೀಮತಿ ಕೀರ್ತಿಮಾಲಿನಿ ಪ್ರಭು, ಉಡುಪಿ ವಿದ್ಯಾಪ್ರಸರಕ್ ಮಂಡಲ್‍ನ ಅಧ್ಯಕ್ಷರಾದ ಶ್ರೀ ಸತೀಶ್ ಪಾಟೀಲ್, ಶ್ರೀ ಉಂಡಾರ್ ಪ್ರಭಾಕರ್ ಪ್ರಭು, ಬೆಂಗಳೂರಿನ ಶ್ರೀ ಪ್ರಭಾಕರ್ ಪ್ರಭು ಹೆಣ್ಣೂರು, ಶ್ರೀ ರಾಘವೇಂದ್ರ ಶೆಣೈ ಡೆಚ್ಚಾರು, ಕೆ.ಎಂ.ಸಿ, ಪೋಡ್ಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್ ಚಂದ್ರನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಪಧಾಧಿಕಾರಿಗಳಾದ ಸಂಜೀವ್ ಸಾಮಂತ್, ಗಣೇಶ್ ಶೆಣೈ ಮರೋಳಿ, ಕೂಡಿಬೈಲು ಶಿವರಾವ್, ಚಂದ್ರಶೇಖರ್ ಪ್ರಭು ಬಿ.ಸಿ.ರೋಡ್, ಮುರಳೀಧರ ಪ್ರಭು ವಗ್ಗ, ಡೆಚ್ಚಾರ್ ಗಣಪತಿ ಶೆಣೈ, ಭಾಸ್ಕರ್ ಪ್ರಭು, ವೆಂಕಟ್ರಾಯ ಪ್ರಭು, ಚಂದ್ರಹಾಸ ಪ್ರಭು, ಡಾ. ಸುಚೇತ ಶೆಣ್ಯೆ, ಸುಚಿತ್ರ ನಾಯಕ್, ರವೀಂದ್ರ ನಾಯಕ್, ಅಕ್ಷಯ್ ಪ್ರಭು, ನಿತೀನ್, ನಾಗೇಶ್ ಪ್ರಭು, ಶ್ರೀ ರಾಮ್ ಶೆಣ್ಯೆ, ಉಪಸ್ಥಿತರಿದ್ದರು. ಪ್ರತಿಷ್ಠಾನದ ಇರುವೈಲು ವಲಯ ಸಮಿತಿಯ ಸದಸ್ಯರಾದ ದಿನೇಶ್ ಪ್ರಭು, ಸುಬ್ರಮಣ್ಯ ನಾಯಕ್, ಕಮಲಾಕ್ಷ ಪ್ರಭು, ಪ್ರಶಾಂತ್ ಭಟ್, ಪ್ರದೀಪ್ ಶೆಣೈ, ಅಂಕಿತ, ಸೌಜನ್ಯ, ಶಕುಂತಳಾ, ಸದಾಶಿವ ನಾಯಕ್, ರಾಘವೇಂದ್ರ ನಾಯಕ್, ಸಂದೇಶ ನಾಯಕ್, ರಮೇಶ್ ಪ್ರಭು, ಲಕ್ಷ್ಮಣ ಪ್ರಭು, ಯಶವಂತ್ ನಾಯಕ್, ರಾಮಕೃಷ್ಣ ನಾಯಕ್ ಸಹಕರಿಸಿದರು. ಪ್ರತಿಷ್ಟಾನದ ಅಧ್ಯಕ್ಷರಾದ ರಮೇಶ್ ನಾಯಕ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ಸಂಜಯ್ ಪ್ರಭು ವಂದಿಸಿದರು. ಸಂದೇಶ ಭಟ್ ಪ್ರಾರ್ಥಿಸಿದರು. ಡಾ. ವಿಜಯಲಕ್ಷ್ಮೀ ನಾಯಕ್ ಪ್ರಸ್ತಾವಿಕ ಮಾತುಗಳಾಡಿದರು. ಸುರೇಶ್ ಇರುವೈಲು ಕಾರ್ಯಕ್ರಮ ನಿರ್ವಹಿಸಿದರು.