AGM 2017
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ, 2016-17ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 03.09.2017ರಂದು, ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು. ಸಭೆಯಲ್ಲಿ ಮುಖ್ಯವಾಗಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಮುಂದಿನ ಪ್ರತೀ ಕಾರ್ಯ ಯೋಜನೆಗಳ ಜವಾಬ್ದಾರಿಯನ್ನು ಪದಾಧಿಕಾರಿಯರಿಗೆ ನೀಡಲಾಯಿತು. 2016-17ನೇ ಸಾಲಿನ ಲೆಕ್ಕಪತ್ರವನ್ನು ಕೋಶಾಧ್ಯಕ್ಷ ಶ್ರೀ ಸಂಜೀವ ಸಾಮಂತ್ ಮಂಡಿಸಿದರು. ಕಳೆದ ಸಾಲಿನಲ್ಲಿ ವಿಧಿವಶರಾದ ಪ್ರತಿಷ್ಠಾನದ ಸದಸ್ಯರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಮೂಲಕ, ಸ್ಥಾಪಕ ಪ್ರಾಯೋಜಕರಾದ ಎಂ.ಎಂ. ಪ್ರಭು ನುಡಿನಮನ ಅರ್ಪಿಸಿದರು. ಪ್ರತಿಷ್ಠಾನವು 2016-17ನೇ ಸಾಲಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ಸಂಕ್ಷಿಪ್ತ ವಿವರವನ್ನು ಉಪಾಧ್ಯಕ್ಷೆ ಡಾ. ಸುಚೇತಾ ಶೆಣೈ, ಮತ್ತು ಪದಾಧಿಕಾರಿ ರತ್ನಾಕರ್ ಸಾಮಂತ್ ನೀಡಿದರು. 2015-16ನೇ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ನಾಯಕ್ ಮಂಡಿಸಿದರು. “ನಮ್ಮ ಸಮಾಜದಲ್ಲಿನ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸಗಳಾಗಬೇಕು. ನಮ್ಮ ಸಮಾಜದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಹಾಗೂ ರಾಜಕೀಯ ನೆಲೆಗಳಲ್ಲಿ ಅಭಿವೃದ್ಧಿ ಕಾಣಬೇಕು. ದಿ. ಹರೀಶ್ಚಂದ್ರ ಸಾಮಂತ್ ಮತ್ತು ಪಡಂಬೋಡಿಯಂತಹ ಕುಟುಂಬಗಳಿಗೆ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ ಮತ್ತು ಸಿಕ್ಕ ಅವಕಾಶ ಎಂದು ಬಾವಿಸೋಣ. ಅಂತಹ ಹಲವಾರು ಹಿಂದುಳಿದ ಕುಟುಂಬಗಳು ಇದ್ದು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆರ್ಥಿಕವಾಗಿ ಅವರನ್ನು ಸದೃಢಗೊಳಿಸಬೇಕು. ವಿದ್ಯಾರ್ಥಿವೇತನ ನೀಡಿಕೆ ನಮ್ಮ ಸಮಾಜದ ಯುವ ಪ್ರತಿಭೆಗಳಲ್ಲಿ ಅಂದರೆ ಭಾವಿ ಪ್ರಜೆಗಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವ, ಅವರನ್ನು ಸಮಾಜದ ಪ್ರದಾನವಾಹಿನಿಯಲ್ಲಿ ಹಿಡಿದಿಟ್ಟುಕೊಳ್ಳುವ ಹಾಗೂ ಅವರ ಬಂಧುಗಳಲ್ಲಿ ಪ್ರತಿಷ್ಠಾನದ ಮತ್ತು ಸಮಾಜದ ಬಗ್ಗೆ ಹೆಚ್ಚಿನ ಅಭಿಮಾನ ಹುಟ್ಟಿಸುವ ಒಂದು ಪ್ರಕ್ರಿಯೆಯಾಗಿರುತ್ತದೆ. ಕಶೆಕೋಡಿ ದೇವಸ್ಥಾನ, ಇದು ನಮ್ಮ ಸಮಾಜದ ದೇವಸ್ಥಾನ ಎಂದು ತಿಳಿದು ನಾವೆಲ್ಲರೂ ಒಗ್ಗಟ್ಟಾಗಿ ಇದರಲ್ಲಿ ತನು-ಮನ-ಧನದಿಂದ ಪಾಲ್ಗೊಳ್ಳುವ, ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಸೇವೆ ಸಲ್ಲಿಸಲು ಇದು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ದೊರಕಿದ ಸುವರ್ಣ ಅವಕಾಶ. ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ಟೀಕೆಗಳು ಅಪವಾದಗಳು ಸ್ವಾಭಾವಿಕ, ಅವುಗಳು ನಮ್ಮನ್ನು ಒಂದು ರೀತಿಯ ಜಾಗ್ರತ ಸ್ಥಿತಿಗೆ ಅಥವಾ ನಮ್ಮ ಮನೋಬಲಕ್ಕೆ, ಪೌಷ್ಠಿಕತೆಯಿಂದ ಕೂಡಿದ ಆಹಾರ ಎಂದು ಬಾವಿಸುವ, ಇದರಿಂದ ಧೃತಿಗೆಡುವ ಅವಶ್ಯಕತೆ ಇಲ್ಲ” ಎಂದು ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ವ್ಯಕ್ತಪಡಿಸಿದರು. ಕಾರ್ಯಾಧ್ಯಕ್ಷ ಸಂಜಯ್ ಪ್ರಭು ವಂದಿಸಿದರು. ಸಲಹೆಗಾರರಾದ ಡಾ. ಪ್ರವೀಣ್ ಚಂದ್ರ ನಾಯಕ್, ದ.ಕ.ಜಿಲ್ಲಾ ಅಧ್ಯಕ್ಷ, ಸಲಹೆಗಾರರಾದ ಡೆಚ್ಚಾರ್ ಗಣಪತಿ ಶೆಣ್ಯೆ, ಗಣೇಶ್ ಶೆಣೈ, ಪ್ರಭಾಕರ್ ಪ್ರಭು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿನಾಂಕ 01.04.2016 ರಿಂದ 31.03.2017 ರ ತನಕದ ಕಾರ್ಯಕ್ರಮಗಳು:
1) ದಿನಾಂಕ 03.04.2016ರಂದು ಸ್ವ-ಸಮಾಜದ ಪುರೋಹಿತ ವರ್ಗ, ಇವರ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ, ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ 5 ವಟುಗಳಿಗೆ ಉಚಿತ ಸಾಮೂಹಿಕ ಬ್ರಹ್ಮೋಪದೇಶ ನಡೆಯಿತು.
2) ದಿನಾಂಕ 08.04.2016 ರಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ)ದ ನೇತೃತ್ವದಲ್ಲಿ ಹಮ್ಮಿಕೊಂಡ ಪಡಂಬೋಡಿ ಕುಟುಂಬದ ನೂತನ ಗೃಹಪ್ರವೇಶದ ಸಮಾರಂಭದಲ್ಲಿ ವೇದಮೂರ್ತಿ ಶ್ರೀ ಸಂಜೀವ ಭಟ್ ರವರು ಸಾಂಕೇತಿಕವಾಗಿ ಮನೆಯ ಕೀಯನ್ನು ಆ ಕುಟುಂಬದ ಯಜಮಾನಿ ಶ್ರೀಮತಿ ಜಲಜ ಇವರಿಗೆ ಹಸ್ತಾಂತರಿಸಿ “ ಪ್ರತಿಷ್ಟಾನದ ಸಮಾಜಮುಖಿ ಯೋಜನೆಗಳು ಇನ್ನಿತರ ಸಮುದಾಯಕ್ಕೆ ಮಾದರಿಯಾಗಿದೆ, ಈ ಬಗ್ಗೆ ಹೆಮ್ಮೆಯೆನಿಸುತ್ತಿದೆ” ಎಂದು ವೇದಮೂರ್ತಿ ಶ್ರೀ ಸಂಜೀವ ಭಟ್ ರವರು ಆಶೀರ್ವಚಿಸಿದರು. ತಾ. ಪಂ. ಸದಸ್ಯರಾದ ಶ್ರೀಮತಿ ರೀಟಾ ಕುಟಿನೋ ಮತ್ತು ಪ್ರಭಾಕರ್ ಪ್ರಭು, ಗ್ರಾ.ಪಂ. ಸದಸ್ಯರಾದ ಶ್ರೀ ಜಯರಾಮ್ ಬಂಗೇರ, ಮತ್ತು ಶ್ರೀ ವಲೇರಿಯನ್ ಕುಟಿನೋ, ಅಂಗನವಾಡಿ ವಲಯಾಧಿಕಾರಿ ಶ್ರೀಮತಿ ನಾಗರತ್ನಮ್ಮ, ಶ್ರೀ ಸುಧೀರ್ ನಾಯಕ್, ಬರೆಪ್ಪಾಡಿ ಶ್ರೀ ನಾರಾಯಣ ಪ್ರಭು, ಸ್ಥಾಪಕ ಪ್ರಾಯೋಜಕರಾದ ಶ್ರೀ ಎಂ.ಎಂ.ಪ್ರಭು ಮುಂತಾದವರು ಪ್ರತಿಷ್ಟಾನವು ತೆಗೆದು ಕೊಂಡ ಈ ಕಾರ್ಯಯೋಜನೆಯನ್ನು ಪ್ರಶಂಸಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.
3) ದಿನಾಂಕ 25.06.2016 ರಂದು ಬೆಂಗಳೂರಿನ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜ ಮತ್ತು ಬೆಂಗಳೂರಿನ ಬಂಧು-ಭಾಂಧವರೊಂದಿಗೆ ಶ್ರೀ ಸದಾಶಿವ ರಾವ್, ಇವರ ನೂತನವಾಗಿ ಉದ್ಘಾಟಿಸಿದ ಸಭಾಭವನದಲ್ಲಿ ಪ್ರಪ್ರಥಮ ಬಾರಿಗೆ ‘ಸ್ನೇಹಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾಜದಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸಿದವರನ್ನು ಹಾಗೂ ಪ್ರತಿಷ್ಠಾನಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು.
4) ದಿನಾಂಕ 10.07.2016ರಂದು ವಗ್ಗ ವಲಯದ ಸಮಾಜ ಬಾಂಧವರೊಂದಿಗೆ ‘ವಗ್ಗ ವಲಯ ಸಮಿತಿ’ ರಚಿಸುವ ನಿಟ್ಟಿನಲ್ಲಿ, ವಗ್ಗದ ಶಾರದಾ ಭಜನಾ ಮಂದಿರದಲ್ಲಿ ಸಭೆ ಕರೆದು, ಸಮಿತಿಯನ್ನು ರಚಿಸಲಾಯಿತು. ಅದೇ ದಿನ ಸಾಯಂಕಾಲ, ಸಿದ್ಧಕಟ್ಟೆ, ಕರ್ಪೆ ಮತ್ತು ವಾಮದಪದವು ಸಮಾಜ ಬಾಂಧವರೊಂದಿಗೆ ಚರ್ಚಿಸಿ, ವಾಮದಪದವು-ಸಿದ್ಧಕಟ್ಟೆ ವಲಯ ಸಮಿತಿಯನ್ನು ರಚಿಸಲಾಯಿತು. ದಿನಾಂಕ 17.07.2016ರಂದು, ಪುತ್ತೂರಿನ ನಟರಾಜ ಮಂದಿರದಲ್ಲಿ ಪುತ್ತೂರು, ಉಪ್ಪಿನಂಗಡಿಯನ್ನು ಸೇರಿಸಿ ‘ ಪುತ್ತೂರು ವಲಯ ‘ ಸಮಿತಿಯನ್ನು ರಚಿಸಲಾಯಿತು.
5) 24.07.2016ರಂದು, ಪ್ರತಿಷ್ಠಾನದ ಪದಾಧಿಕಾರಿಗಳು, ದ.ಕ.ಜಿಲ್ಲಾ ಕು.ದೇ.ಆ.ಗೌ. ಬ್ರಾಹ್ಮಣ ಸಂಘದ ಮಹಾಸಭೆಯಲ್ಲಿ ಬಾಗವಹಿಸಿ, ನೂತನವಾಗಿ ರಚಿಸಿದ ಸಮಿತಿಯಲ್ಲಿ ನಮ್ಮ ಪದಾಧಿಕಾರಿಗಳು ಆಯ್ಕೆಗೊಂಡರು.
6) ದಿನಾಂಕ 24.07.2016ರಂದು ಅಪರಾಹ್ನ, ಪ್ರತಿಷ್ಠಾನದ ಪದಾಧಿಕಾರಿಯಾದ ಶ್ರೀ ಯಶವಂತ ನಾಯಕ್, ಇವರ ಮನೆಯಲ್ಲಿ ‘ಬೆಳ್ತಂಗಡಿ ವಲಯ’ ಸಮಿತಿ ರಚಿಸಲಾಯಿತು.
7) ದಿನಾಂಕ ಆಗಸ್ಟ್ 5 ರಿಂದ 7 ರತನಕ ವಿಶ್ವ ಕೊಂಕಣಿ ಕೇಂದ್ರದಲ್ಲಿ, ಪದವೀಧರ, ಇಂಜಿನಿಯರಿಂಗ್, ಸ್ನಾತಕೋತರ ವಿದ್ಯಾರ್ಧಿಗಳಿಗೆ 3 ದಿನಗಳ ಸ್ಪೂರ್ತಿ-ಉನ್ನತಿ ವಾಸ್ತವ್ಯ ಶಿಬಿರವನ್ನು ಆಯೋಜಿಸಿದ್ದು, ಸುಮಾರು 78 ವಿದ್ಯಾರ್ಧಿಗಳು ಪಾಲ್ಗೊಂಡಿದ್ದರು. ದಿನಾಂಕ ಆಗಸ್ಟ್ 14 ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ತರಬೇತಿಯನ್ನು ಎರಡು ಗುಂಪುಗಳಲ್ಲಿ ನಡೆಸಲಾಯಿತು.
8) ದಿನಾಂಕ 31.07.2016ರಂದು, ಕಲ್ಲಡ್ಕ ಮೀನಾಕ್ಷಿ ಮಂದಿರದಲ್ಲಿ, ಇನೋಳಿ, ಬೋಳಂಗಡಿ, ಮತ್ತು ಕಲ್ಲಡ್ಕ ವ್ಯಾಪ್ತಿಯನ್ನು ಸೇರಿಸಿ, ‘ಕಲ್ಲಡ್ಕ ವಲಯ’ ಸಮಿತಿಯನ್ನು ರಚಿಸಲಾಯಿತು.
9) ದಿನಾಂಕ 18.08.2016ರಂದು ಶ್ರೀ ಪ್ರಶಾಂತ್ ಭಟ್ ಇವರ ನೇತೃತ್ವದಲ್ಲಿ ಶ್ರೀ ಸಂಜೀವ ಸಾಮಂತ್, ಇವರ ಮನೆಯಲ್ಲಿ ‘ಯಜುರ್‍ಪಾಕರ್ಮ’ ಕಾರ್ಯಕ್ರಮ ನೆರವೇರಿತು.
10) ದಿನಾಂಕ 20.08.2016ರಂದು ಮಂಗಳೂರಿನ ರಮಣ ಪೈ ಸಭಾಭವನದಲ್ಲಿ, ವಿಶ್ವ ಕೊಂಕಣಿ ಕೇಂದ್ರ ಆಯೋಜಿಸಿz ವಿದ್ಯಾರ್ಥಿ ವೇತನಾ ಕಾರ್ಯಕ್ರಮ ‘ಕ್ಷಮತಾ-2016’ ಕಾರ್ಯಕ್ರಮದಲ್ಲಿ ನಮ್ಮ ಪದಾಧಿಕಾರಿಗಳು ಭಾಗವಹಿಸಿದ್ದರು.
11) ದಿನಾಂಕ 12.10.2016ರಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ, ನಮ್ಮ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿದ ಕುರಿತು ಮಾರ್ಗದರ್ಶಕರಾದ ಡಾ. ರವೀಂಧ್ರನಾಥ್ ರಾವ್, ಬ್ರಹ್ಮಾವರ, ಇವರೊಂದಿಗೆ ಚರ್ಚೆ ನಡೆಸಲಾಗಿತ್ತು. ಈ ಅಧ್ಯಯನಕ್ಕೆ ಪೂರಕವಾದ ಅಂಶಗಳನ್ನು ಸಂಗ್ರಹಿಸಿ ಕೊಡುವ ಜವಾಬ್ದಾರಿಯನ್ನು ಶ್ರೀ ಎಂ.ಎಂ.ಪ್ರಭು ವಹಿಸಿದರು.
12) ದಿನಾಂಕ 20.11.2016ರಂದು ಬಂಟ್ಸ್ ಹಾಸ್ಟೆಲ್‍ನ ಸಿ.ವಿ.ನಾಯಕ್ ಸಭಾಂಗಣದಲ್ಲಿ ಪ್ರತಿಷ್ಠಾನದ ಮೂಲಕ ‘19ನೇ ವಿದ್ಯಾರ್ಥಿವೇತನಾ ಮತ್ತು ಪ್ರತಿಭಾ ಪುರಸ್ಕಾರ- 2016’ ಕಾರ್ಯಕ್ರಮವು ಜರುಗಿತು. ಈ ಸಂಧರ್ಭದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್ ರವರು ನಿವೃತ್ತ ಯೋಧರನ್ನು, ಕೃಷಿಕರನ್ನು ಅಭಿನಂದಿಸಿದರು.
13) ದಿನಾಂಕ 25.12.2016ರಂದು, ಗೋವಾದಲ್ಲಿಯ ಕುಡಾಳ್ ದೇಶ್ಕರ್ ಆದ್ಯ್ ಗೌಡ್ ಬ್ರಾಹ್ಮಣ್ ಉನ್ನತಿ ಮಂಡಳ್‍ನ ವತಿಯಿಂದ ಏರ್ಪಡಿಸಿದ ‘ಸ್ನೇಹ ಸಮ್ಮೇಳನ’ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪದಾಧಿಕಾರಿ ಮುರಳೀಧರ ಪ್ರಭು, ವಗ್ಗ, ರವೀಂಧ್ರ ನಾಯಕ್ ಕುಂಟಲ್ಪಾಡಿ, ಯಶವಂತ್ ಪ್ರಭು ಶಕ್ತಿನಗರ ಭಾಗವಹಿಸಿದ್ದರು.
14) ದಿನಾಂಕ 01.01.2017ರಂದು ಮಂಗಳೂರಿನ ಪುರಭವನದಲ್ಲಿ ಕಲ್ಲಡ್ಕದ ಶ್ರೀ ಭಾಸ್ಕರ ಪ್ರಭು ಮತ್ತು ಶ್ರೀಮತಿ ಜಯಲಕ್ಷ್ಮೀ ಪ್ರಭು ದಂಪತಿಯ ಪುತ್ರಿ ಕು. ಕೀರ್ತಿ ಪ್ರಭು, ಇವರ ಭರತನಾಟ್ಯ ರಂಗಪ್ರವೇಶ ನೆರವೇರಿತು. ಪ್ರತಿಷ್ಠಾನದ ವತಿಯಿಂದ, ಇವರಿಗೆ ಹೂಗುಚ್ಛ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
15) ದಿನಾಂಕ 06.01.2017ರಂದು ಸಮುದಾಯದ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ, ಇಡೀ ಸಮಾಜವೇ ಸಂಘಟನಾತ್ಮಕವಾಗಿ ಬಲಗೊಳ್ಳುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಹೊಸವರುಷದ ಶುಭವಸರದಲ್ಲಿ ಸಮುದಾಯಕ್ಕೆಂದೇ ಮೀಸಲಾದ ‘ಶ್ರೀ ಪೂರ್ಣಾನಂದ ವಾಣಿ’ ಪತ್ರಿಕೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ಇವರು ಪ್ರತಿಷ್ಠಾನದ ಕಛೇರಿಯಲ್ಲಿ ಅನಾವರಣಗೊಳಿಸಿದರು.
16) ದಿನಾಂಕ 07.02.2017ರಂದು ಬಂಟ್ವಾಳದ ನಿತ್ಯಾನಂದ ಭಜನಾ ಮಂದಿರದಲ್ಲಿ ಸ್ವ-ಸಮಾಜದ ಪುರೋಹಿತ ವರ್ಗದೊಂದಿಗೆ ಪ್ರತಿಷ್ಠಾನದ ಮೂಲಕ ಹಮ್ಮಿಕೊಳ್ಳಬಹುದಾದ ಧಾರ್ಮಿಕ ಕಾರ್ಯಕ್ರಮ ವಿಚಾರವಾಗಿ ಸಭೆ ನಡೆಸಲಾಯಿತು.
17) ದಿನಾಂಕ 9,10,11, ಫೆಬ್ರವರಿ, 2017ರಂದು, ಮಂಗಳೂರಿನ ಪುರಭವನದಲ್ಲಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯವರು ಹಮ್ಮಿಕೊಂಡ ‘ಕೊಂಕಣಿ ಲೋಕೋತ್ಸವ-2017’ ಸಾಂಸ್ಕ್ರತಿ, ಭಾಷಾ, ಕಲಾ ಮೇಳದಲ್ಲಿ ಪ್ರತಿಷ್ಟಾನದ ಪದಾಧಿಕಾರಿಗಳು ಸಕ್ರೀಯವಾಗಿ ಭಾಗವಹಿಸಿದ್ದರು.
18) ದಿನಾಂಕ 18, ಫೆಬ್ರವರಿ, 2017ರಂದು ಮಂಗಳೂರು ಶಕ್ತಿನಗರದ ವೀರ ವೆಂಕಟೇಶ ಕ್ರಿಕೇಟರ್ಸ್, ಇದರ 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು, ಶಕ್ತಿನಗರದ ಸರಕಾರಿ ಶಾಲಾ ಮೈದಾನದಲ್ಲಿ ನೆರವೇರಿತು. ಪ್ರತಿಷ್ಟಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
19) ದಿನಾಂಕ 26.02.2017ರಂದು ಪ್ರತಿಷ್ಠಾನ, ಕಲ್ಲಡ್ಕ ವಲಯ ಸಮಿತಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ), ಮತ್ತು ಫಾಧರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಇವರ ಸಂಯುಕ್ತ ಆಶ್ರಯದಲ್ಲಿ ಕಲ್ಲಡ್ಕದ ಮೀನಾಕ್ಷಿ ಕಲಾ ಮಂದಿರದಲ್ಲಿ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವನ್ನು ಆಯೋಜಿಸಲಾಗಿತ್ತು.
20) ದಿನಾಂಕ 27.02.2017ರಂದು ದೈವಾದೀನರಾದ ಇರುವೈಲು ಹರಿಶ್ಚಂದ್ರ ಸಾಮಂತ್, ಇವರ ಅಂತ್ಯಕ್ರಿಯೆಯನ್ನು ಸಮಾಜದ ಪುರೋಹಿತರಾದ ಶ್ರೀ ಚಂದ್ರಹಾಸ್ ಭಟ್, ಇವರ ನೇತೃತ್ವದಲ್ಲಿ ಶಕ್ತಿನಗರದ ರುದ್ರಭೂಮಿಯಲ್ಲಿ ವಿಧಿ-ವಿಧಾನದ ಮೂಲಕ ನೆರವೇರಿಸಲಾಯಿತು. ದಿನಾಂಕ 11.03.2017ರಂದು ಕದ್ರಿ ಮಂಜುನಾಥ ದೇವಸ್ಥಾನದ ಅಭಿಷೇಕ್ ಮಂದಿರದಲ್ಲಿ, ಇವರ ವೈಕುಂಠ ಸಮಾರಾಧನೆ ಮತ್ತು ಶೃದ್ಧಾಂಜಲಿ ಸಭೆ ನಡೆಯಿತು.
21) ದಿನಾಂಕ 12.03.2017ರಂದು, ಮುಲಾರು ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದಲ್ಲಿ ವೇದಮೂರ್ತಿ ಶ್ರೀ ಸಂಜೀವ ಭಟ್, ಕಟ್ಟಣಿಗೆ ಇವರ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಿತು. ಪ್ರತಿಷ್ಠಾನದ ಪದಾಧಿಕಾರಿಗಳು ಸಕ್ರೀಯವಾಗಿ ಭಾಗವಹಿಸಿದ್ದರು.
01.04.2017 ರ ನಂತರದ ಕಾರ್ಯಕ್ರಮಗಳು
22) ದಿನಾಂಕ 14.04.2017ರಂದು ಕಲ್ಲಡ್ಕದ ಮೀನಾಕ್ಷಿ ಕಲಾ ಮಂದಿರದಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾಲೇಜು ಸಂತ ಆಲೋಷಿಯಸ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರು ಪ್ರೋ. ರೋನಾಲ್ಡ್ ಪಿಂಟೋ, ಇವರು 10ನೇ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ‘ವೃತ್ತಿ ಮಾರ್ಗದರ್ಶನ’ ಕುರಿತು ತಿಳಿಸಿಕದರು.
23) ದಿನಾಂಕ 16.04.17ರಂದು, ಕು.ಆ,ಗೌ. ಬ್ರಾಹ್ಮಣ ಸಂಘ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ, ಪ್ರತಿಷ್ಠಾನದ ಬೆಳ್ತಂಗಡಿ ವಲಯ, ಮಹಿಳಾ ಸಂಘ, ಇವರ ಸಂಯುಕ್ತ ಆಶ್ರಯದಲ್ಲಿ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವನ್ನು ಪುಂಜಾಲ್‍ಕಟ್ಟೆಯ ನಂದಗೋಕುಲ ಸಭಾಭವನದಲ್ಲಿ ನಡೆಯಿತು.
24) ದಿನಾಂಕ 03.05,.2017ರಂದು ಶ್ರೀ ಮಠ್ ಸಂಸ್ಥಾನ್ ದಾಬೋಳಿ ಮಠದಲ್ಲಿ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು, ದ.ಕ.ಜಿಲ್ಲೆಗೆ ಚಿತ್ತೈಸುವ ಆಮಂತ್ರಣ ಪತ್ರಿಕೆಯನ್ನು ಮಠಾಧೀಶರಾದ ಶ್ರೀ ಶ್ರೀ ಶ್ರೀ ಪ್ರದ್ಯುಮ್ನಾನಂದ ಸ್ವಾಮೀಜಿಯವರು, ಮಠದ ಟ್ರಸ್ಟಿಗಳ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಅನಾವರಣ ಗೊಳಿಸಿದರು.
25) ದಿನಾಂಕ 05.05.17ರಂದು ಕಲ್ಲಡ್ಕದ ಮೀನಾಕ್ಷಿ ಕಲಾ ಮಂದಿರದಲ್ಲಿ ನಡೆದ ಜಿಲ್ಲಾ ಸ್ವಾಗತ ಸಮಿತಿಯ ಸಭೆಯಲ್ಲಿ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು, ದ.ಕ.ಜಿಲ್ಲೆಗೆ ಚಿತ್ತೈಸುವ ಆಮಂತ್ರಣ ಪತ್ರಿಕೆಯನ್ನು ಅನಾವರಣ ಗೊಳಿಸಲಾಯಿತು.
26) ದಿನಾಂಕ 20.05.2017ರ ಶನಿವಾರ ಜ್ಯೇಷ್ಠ ಮಾಸದ, ಶುಕ್ಲ ಪಕ್ಷ, ಷಷ್ಠಿ ಬುಧವಾರ 31.05.2017ರ ಪರ್ಯಂತ ಶ್ರೀ ಮಠ್ ಸಂಸ್ಥಾನ್ ದಾಬೋಳಿ ಮಠದ ಸಂಜೀವಿನಿ ಸಮಾಧಿಸ್ಥ ಮಠಾಧೀಶ ಪರಮ ಪೂಜ್ಯ ಶ್ರೀಮದ್ ಪೂರ್ಣಾನಂದ ಸ್ವಾಮಿ ಮಹಾರಾಜ್, ಅವರ ಕೃಪಾಶೀರ್ವಾದ ಮತ್ತು ಪವಿತ್ರ ಪಾದುಕೆಗಳೊಂದಿಗೆ ವಿದ್ಯಮಾನ ಮಠಾಧೀ± ಪರಮಪೂಜ್ಯ ಶ್ರೀಮದ್ ಪ್ರದ್ಯುಮ್ನಾನಂದ ಸ್ವಾಮಿ ಮಹಾರಾಜರ ಸದಿಚ್ಛೆ ಮತ್ತು ಆಶೀರ್ವಾದಗಳೊಂದಿಗೆ ಶ್ರೀ ಮoದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರ ದ.ಕ.ಜಿಲ್ಲಾ ಆಶೀರ್ವಚನ ಕಾರ್ಯಕ್ರಮವನ್ನು ಸಮಾಜದ ವಿವಿಧ ಸಂಘ ಸಂಸ್ಥೆಗಳು ಮತ್ತು ಪುರೋಹಿತ ವರ್ಗದ ಸಹಯೋಗದಲ್ಲಿ ಸುಮಾರು 10 ಕಡೆಗಳಲ್ಲಿ ಯಶಸ್ವಿಯಾಗಿ ನೆರವೇರಿತು.
27) ದಿನಾಂಕ 24.06.2017ರಂದು ಶ್ರೀ ಸದಾಶಿವ ರಾವ್ ಬೋಲ್ಡೆ, ಇವರ ಮನೆಯಲ್ಲಿ ಪ್ರತಿಷ್ಠಾನದ ವತಿಯಿಂದ ಒಡ್ಡಾರು, ಪದ್ರೆಂಗಿ, ಮಳಲಿ ಹಾಗೂ ಇರುವೈಲು, ಪಂಜ ಸಮುದಾಯವನ್ನು ಸೇರಿಸಿ ‘ ವಲಯ ಸಮೀತಿ’ಯನ್ನು ರಚಿಸಲಾಯಿತು.
28) ದಿನಾಂಕ 06.07.17ರಂದು ಮಂಗಳೂರಿನ ಪುರಭವನದಲ್ಲಿ ಬಿ.ಸಿ.ರೋಡಿನ ಶ್ರೀ ರಾಮ್ ಗಣೇಶ ಪ್ರಭು ಮತ್ತು ಶ್ರೀಮತಿ ಶುಭಲಕ್ಷ್ಮೀ ಪ್ರಭು ದಂಪತಿಯ ಪುತ್ರಿ ಕು. ಧನ್ಯಶ್ರೀ ಪ್ರಭು, ಇವರ ಭರತನಾಟ್ಯ ರಂಗಪ್ರವೇಶ ನೆರವೇರಿತು. ಪ್ರತಿಷ್ಠಾನದ ವತಿಯಿಂದ, ಇವರಿಗೆ ಹೂಗುಚ್ಛ , ಸ್ಮರಣಿಕೆ ನೀಡಿ ಅಭಿನಂದಿಸಿ, ಶುಭ ಹಾರೈಸಿದರು.
29) ದಿನಾಂಕ ರಿಂದ ರವರೆಗೆ ಪದವಿ ವಿದ್ಯಾರ್ಥಿಗಳಿಗೆ ‘ಸ್ಫೂರ್ತಿ-2017’ ಹಾಗೂ ದಿ. 29. ಮತ್ತು 30 ಜುಲೈ, 17ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ‘ಪ್ರಗತಿ-2017’ ಸವಿವಾಸ ವ್ಯಕ್ತಿತ್ವ ವಿಕಸನ ಶಿಬಿರವನ್ನು ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
30) ಇಂದಬೆಟ್ಟು ಶ್ರೀನಿವಾಸ ಸಾಮಂತರ ಮಗ ಕಾರ್ತಿಕ್ ಸಾಮಂತ್, ಇವರ ಅನಾರೋಗ್ಯದ ವೆಚ್ಚಕ್ಕಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ರೂ 1,25,000/- ಸಹಾಯಧನ ಮಂಜೂರು ಗೊಳಿಸುವಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು ಸಂಸದರನ್ನು ಭೇಟಿ ನೀಡಿ ಹಣ ಮಂಜೂರುಗೊಳಿಸುವಂತೆ ಮುತುವರ್ಜಿವಹಿಸಿದ್ದರು.
31) ದಿನಾಂಕ 28.07.17ರಂದು ಮರೋಳಿ ಶ್ರೀ ಸಂಜೀವ ಸಾಮಂತ್, ಇವರ ಮನೆಯಲ್ಲಿ ಪ್ರತಿಷ್ಠಾನದ ವತಿಯಿಂದ ಶ್ರೀ ಪ್ರಶಾಂತ್ ಭಟ್ ಕಟ್ಟಣಿಗೆ, ಇವರ ನೇತೃತವದಲ್ಲಿ ಸಾಮೂಹಿಕ ಋಗುಪಾಕರ್ಮ’ ಕಾರ್ಯಕ್ರಮ ನೆರವೇರಿತು. ಅದೇ ರೀತಿ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಸಮುದಾಯ ಭವನದಲ್ಲಿ, ವಾಮದಪದವು ವಲಯ ಸಮಿತಿಯಿಂದ ಶ್ರೀ ವಸಂತ್ ಭಟ್ ಕಿನ್ನಾಜೆ ಮತ್ತು ಶ್ರೀ ಶಿವರಾಯ್ ಭಟ್ ವಾಮದಪದವು, ಇವರ ನೇತೃತ್ವದಲ್ಲಿ ‘ಸಾಮೂಹಿಕ ಋಗುಪಾಕರ್ಮ’ ಕಾರ್ಯಕ್ರಮ ಜರುಗಿತು. ವಗ್ಗ ವಲಯದಿಂದ ಶ್ರೀ ಜಯರಾಮ್ ಭಟ್ ಮತ್ತು ಶ್ರೀ ಹರೀಶ್ ಭಟ್, ಇವರ ನೇತೃತ್ವದಲ್ಲಿ ಶಾರದಾಂಭ ಭಜನಾ ಮಂದಿರದಲ್ಲಿ ಋಗುಪಾಕರ್ಮ ಕಾರ್ಯಕ್ರಮ ನಡೆಯಿತು.
32) ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಒದಗಿ ಬಂದ ರೂ 50,000/- ಚೆಕ್ ನ್ನು ಶ್ರೀ ಇರುವೈಲು ಕೋರಿಬೆಟ್ಟು ನಾರಾಯಣ ನಾಯಕ್ ಇವರಿಗೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಮೈರಾ, ವೇದಮೂರ್ತಿ ಸಂಜೀವ ಭಟ್ ಹಸ್ತಾಂತರಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.