Scholarship – 2017
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದಿಂದ 20ನೇ ವರ್ಷದ ‘ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ’ ಪ್ರದಾನ ಸಮಾರಂಭ
ಸಮಾಜದ ಅಭಿವೃದ್ಧಿ ಶಿಕ್ಷಣವೇ ಅಡಿಪಾಯ-ಶ್ರೀ ಪಿ.ಎ.ಪಾಟೀಲ್
ಅಂತರಾಷ್ಟ್ರೀಯ ಖ್ಯಾತಿಯ ‘ಲುಪಿನ್ ಲಿಮಿಟೆಡ್’ ಸಂಸ್ಥೆಯ ಉನ್ನತ ಹುದ್ದೆಯಿಂದ ನಿವೃತ್ತಿ ಹೊಂದಿ ಈಗ ‘ಸಪ್ತಗಿರಿ ಹರ್ಬಲ್ಸ್’ನ ಮಾಲಿಕರಾಗಿ ತನ್ನ ಅನುಭವ ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಮ್ಮ ಸಮಾಜದ ಹೆಮ್ಮೆಯ ಸುಪುತ್ರ ಪರಾರಿ ಶ್ರೀ ಆತ್ಮಾರಾಮ್ ಪಾಟೀಲ್ (P.ಂ.PಂಖಿIಐ) ಮುಖ್ಯ ಭಾಷಣಗಾರರಾಗಿ ಮಾತನಾಡುತ್ತಾ ತನ್ನ ವಿದ್ಯಾರ್ಥಿ ಜೀವನವನ್ನು ನೆನಪಿಸಿದರು. “ಈಗಿನ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯ, ಸಹಕಾರ ಮತ್ತು ಅದರ ಜೊತೆಯಲ್ಲಿ ಕಲಿಕಾ ಪ್ರಜ್ನೆ ಮತ್ತು ಕಲಿಕಾ ಚಾತುರ್ಯವನ್ನು ವಿವರಿಸಿದರು. ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳು ಮತ್ತು ಬದ್ಧತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ತನ್ನ ವಿದ್ಯಾರ್ಥಿ ಜೀವನದಲ್ಲಿ ಒಟ್ಟು 99 ಅಂಕಗಳನ್ನು ಪಡೆದರೆ ಪ್ರಸ್ತುತ ವಿದ್ಯಾರ್ಥಿಗಳು ಒಂದೊಂದು ವಿಷಯದಲ್ಲಿ 99 ಅಂಕಗಳನ್ನು ಪಡೆಯುತ್ತಿರುವುದು ಅವರ ಕಲಿಕಾ ಸಾಮರ್ಥ್ಯವನ್ನು ತೋರಿಸುತ್ತಿದೆ ಎಂದು ಹೇಳುತ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು. ಇಂತಹ ಯುವ ಪ್ರತಿಭೆಗಳನ್ನು ಅಭಿನಂದಿಸಿ ಅವರ ಪ್ರತಿಭೆಗಳಿಗೆ ಪುರಸ್ಕರಿಸುವ ಅವಕಾಶ ಒದಗಿ ಬಂದಿರುವುದು ನನಗೆ ಬಹಳ ಸಂತೋಷವಾಗಿದೆ” ಎಂದರು.
ಸಮುದಾಯದಲ್ಲಿ ಯುವ ಜನರ, ಮುಖ್ಯವಾಗಿ ವಿದ್ಯಾರ್ಥಿಗಳ ಪಾತ್ರವೇನೆಂಬುದು ತಿಳಿಹೇಳುತ್ತಾ “ಶಿಕ್ಷಣದ ಮಹತ್ವ, ವಿದ್ಯಾರ್ಥಿಗಳ ಜವಾಬ್ದಾರಿಗಳು, ಸದ್ಯದ ಪರಿಸ್ಥಿತಿಯಲ್ಲಿರುವ ಒತ್ತಡಗಳು, ಮಾನಸಿಕ ತುಮುಲತೆಯನ್ನು ವಿವರಿಸಿ ಮಾರ್ಗದರ್ಶನ ನೀಡಿದರು. ಪ್ರಸ್ತುತ ದಿನಗಳಲ್ಲಿ ಉತ್ತಮ ಶಿಕ್ಷಣ ದುಬಾರಿಯಾಗಿದ್ದು ವಿದ್ಯಾರ್ಥಿವೇತನದ ಅವಶ್ಯಕತೆಯನ್ನು ಬೊಟ್ಟುಮಾಡಿದರು. ಮುಂದಿನ ಯುವಜನತೆಯು ಈ ಪ್ರತಿಷ್ಠಾನವನ್ನು ಮುನ್ನಡೆಸಿ ಭವಿಷ್ಯತ್ತಿನ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಮಹತ್ಕಾರ್ಯವನ್ನು ಮುಂದುವರಿಸಬೇಕೆಂದು ಮನವಿ ಮಾಡಿದರು.
ಪ್ರತಿಷ್ಠಾನದ ಎಲ್ಲಾ ಕಾರ್ಯಯೋಜನೆಗಳನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿ ಕೊಂಡಾಡಿದ ಶ್ರೀ ಪಾಟೀಲರು, ಪದಾಧಿಕಾರಿಗಳು ತಮ್ಮ ಬಿಡುವಿಲ್ಲದ ಕಾರ್ಯ ಚಟಿವಟಿಕೆಗಳ ಮದ್ಯೆ ಸಮಯವನ್ನು ಹೊಂದಿಸಿಕೊಂಡು ಸಮಾಜಕ್ಕಾಗಿ, ಸಮಾಜದ ಅಭಿವೃದ್ಧಿಗಾಗಿ ಸಂಘಟಿತರಾಗಿ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯ ಎಂದು ಹೇಳುತ್ತಾ ಅಭಿನಂದಿಸಿದರು. ಪ್ರತಿಷ್ಠಾನದ ಮುಂದಿನ ಎಲ್ಲಾ ಕಾರ್ಯ ಯೋಜನೆಗಳು ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭವನ್ನು ಹಾರೈಸುತ್ತಾ, ದಿI ಹರಿಶ್ಚಂದ್ರ ಸಾಮಂತ್ ಮತ್ತು ಪಡಂಬೋಡಿ ಕುಟುಂಬದಂತವರ ಆರೋಗ್ಯ ಮತ್ತು ಸಾಮಾಜಿಕ ಕಳಕಳಿಯ ಸೇವೆ ಸಲ್ಲಿಸಿದ್ದು ಮಾನವೀಯತೆಗೆ ಹಿಡಿದ ಕೈಗನ್ನಡಿಯಂತಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಷ್ಠಾನದ ಸಹ ಪ್ರಾಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ಮತ್ತು ಪ್ರತಿಯೊಬ್ಬರಿಗೂ ಅಭಿನಂದಿಸಿ ಇಂತಹ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ಆರೋಗ್ಯವಿಮಾ, ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯಯೋಜನೆಗಳನ್ನು ಮಾಡುತ್ತಿರುವ ಪ್ರತಿಷ್ಠಾನದ ಜೊತೆಯಲ್ಲಿ ಸಹ ಪ್ರಾಯೋಜಕರಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಮಾತ್ರವಲ್ಲದೆ, ಇನ್ನೂ ಹೆಚ್ಚಿನ ಸಮಾಜ ಬಾಂಧವರು ಮತ್ತು ಸಂಘ ಸಂಸ್ಥೆಯವರು ಇದರ ಸಹ ಪ್ರಾಯೋಜಕತ್ವವನ್ನು ಪಡೆಯುವ ಔಚಿತ್ಯವನ್ನು ವಿವರಿಸಿ, ಕೈ ಜೋಡಿಸಲು ವಿನಂತಿಸಿದರು. ಜೊತೆಗೆ ತಾನೂ ಕೂಡಾ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ನೀಡುತ್ತೇನೆಂಬ ಭರವಸೆಯನ್ನು ನೀಡಿದರು.
ಉದ್ಘಾಟಕರ ಮಾತು:
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಯಲಿ- ಶ್ರೀ ರತ್ನಾಕರ್ ಭಟ್, ಸರಪಾಡಿ
“ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಯಬೇಕು. ಇಂತಹ ವಾತಾವರಣವನ್ನು ಕಲ್ಪಿಸಲು ಸಮುದಾಯದ ಸಂಘಟನೆಗಳ ಪಾತ್ರ ಮಹತ್ತರವಾದುದು. ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದರ ಜತೆಗೆ ಮುಂದಿನ ದಿನಗಳಲ್ಲಿ ತಮ್ಮ ಜವಾಬ್ದಾರಿಯ ಬಗ್ಗೆ ತಿಳಿದು ಕೊಂಡು ಪ್ರಬುದ್ಧರಾಗಿ ಕಾರ್ಯ ಪ್ರವೃತ್ತರಾಗಿ ನಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿಷ್ಠಾನ ನೀಡುವ ವಿದ್ಯಾರ್ಥಿವೇತನವನ್ನು ಸರಿಯಾಗಿ ಬಳಸಿಕೊಳ್ಳಬೇಕು ಮಾತೃವಲ್ಲದೆ ಪ್ರತಿಭಾ ಪುರಸ್ಕಾರದ ಗೌರವವನ್ನು ಸದಾನೆನಪಿನಲ್ಲಿಟ್ಟು ಪ್ರತಿಷ್ಠಾನದ ಕಾರ್ಯಯೋಜನೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿ ಬದುಕಿನಲ್ಲಿ ಪಡೆದು ಕೊಳ್ಳುವ ಎಲ್ಲಾ ಅನುಭವಗಳನ್ನು ಬಳಸಿಕೊಂಡು ಸಮಾಜ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಭವಿಷ್ಯzಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲು ಸಾಧ್ಯ. ಈ ಮೂಲಕ ನೆಮ್ಮದಿಯ ಸಮಾಜವನ್ನು ಕಟ್ಟಿಕೊಳ್ಳುವುದು ಸುಲಭ” ಎಂದು ಪುರೋಹಿತ, ವಾಸ್ತುತಜ್ಞ ರತ್ನಾಕರ್ ಭಟ್, ಸರಪಾಡಿ ತಿಳಿಸಿದರು.
ಇವರು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಮಂಗಳೂರಿನ ಸಿ.ವಿ.ನಾಯಕ್ ಸಭಾಂಗಣದಲ್ಲಿ ಹಮ್ಮಿಕೊಂಡ 20ನೇ ವರ್ಷದ ‘ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ, ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ವಾಗತ ನುಡಿಗಳು: ಮೈರಾ ಶ್ರೀ ಡಿ. ರಮೇಶ್ ನಾಯಕ್
“ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮುದಾಯದ ಎಲ್ಲರಿಗೂ ಸಾರ್ವಭೌಮ ಮತ್ತು ಪ್ರಜಾಸತ್ತಾತ್ಮಕ, ಸುಸಂಘಟಿತ, ಸುಸಂಸ್ಕೃತ ಸಮಾಜವನ್ನು ರೂಪಿಸುವುದಕ್ಕಾಗಿ, ಸಮಾಜದ ಎಲ್ಲಾ ಜನರಿಗೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ನ್ಯಾಯವನ್ನು, ಆಚಾರ-ವಿಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ, ವ್ಯಕ್ತಿಗೌರವ, ಸಮಾಜದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆ ಮೂಡಿಸುವುದಕ್ಕಾಗಿ, ದೃಢ ಸಂಕಲ್ಪ ಮಾಡಿ ಮುನ್ನಡೆಯುತ್ತಿರುವ ಸಂಘಟನೆ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಎಂದು ಹೇಳಲು ಸಂತೋಷ ಮತ್ತು ಅಭಿಮಾನ ಪಡುತ್ತಿದ್ದೇವೆ” ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಅವರು ಸ್ವಾಗತ ಭಾಷಣದಲ್ಲಿ ತಿಳಿಸಿದರು.
“ಪ್ರತಿಷ್ಠಾನವು ಸರಳ ಮತ್ತು ಶೀಘ್ರ ಆಡಳಿತಾತ್ಮಕ ಉದ್ದೇಶದಿಂದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ವಲಯಗಳಾಗಿ ವಿಕೇಂದ್ರಿಕರಿಸಲಾಗಿದೆ. ಮತ್ತು ಪ್ರತೀ ವಲಯದಲ್ಲಿ ಅಧ್ಯಕ್ಷರು ಹಾಗೂ ಕನಿಷ್ಠ 21 ಮಂದಿ ಪದಾಧಿಕಾರಿಗಳನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಿಯೋಜಿಸಲಾಗಿದೆ. ಎಲ್ಲಾ ಪದಾಧಿಕಾರಿಗಳು ನಮ್ಮ ಸಮುದಾಯದ ಹಾಗೂ ಪ್ರತಿಷ್ಠಾನದ ಎಲ್ಲಾ ಕಾರ್ಯ ಯೋಜನೆಗಳನ್ನು ತಳಮಟ್ಟದಲ್ಲಿ ಪ್ರತಿಯೊಂದು ಮನೆಗೂ ತಲುಪಿಸುವುದರಲ್ಲಿ ಈ ನಿಷ್ಠಾವಂತ, ಜವಾಬ್ದಾರಿಯುತ ಪದಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬ ಪದಾಧಿಕಾರಿಗೆ ಗರಿಷ್ಠ ಹತ್ತು ಮನೆಗಳಾಗಿ ಅವರವರ ಪರಿಸರದಲ್ಲಿ ಹಂಚಿಕೆ ಮಾಡಲಾಗಿದೆ. ಇಂತಹ ಭದ್ರ ಬುನಾದಿ ಹಾಕಿ ಪ್ರತಿಷ್ಠಾನವನ್ನು ಸುಸಂಘಟಿಸಿ ತಳಮಟ್ಟದಲ್ಲಿ ಬೇರೂರುವಂತೆ ಮಾಡಲಾಗಿದೆ. ಇಂತಹ ಜವಾಬ್ದಾರಿಯುತ ಕಠಿಣ ಪರಿಶ್ರಮದಿಂದ, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಇಂತಹ ಕಾರ್ಯಪಡೆ ನಮ್ಮ ಸಮಾಜದಲ್ಲಿ ಇರುವುದು ಅಭಿಮಾನಪಡುವಂತಹ ವಿಷಯ ಎಂದು ತಿಳಿಸಿದರು. ಪ್ರತಿಷ್ಠಾನ 20 ವರ್ಷಗಳನ್ನು ಪೂರೈಸಿದ ಈ ಸುಸಂದರ್ಭದಲ್ಲಿ ಕಳೆದ 4 ವರ್ಷಗಳಿಂದ ಪ್ರತೀ ವರ್ಷ ಸುಮಾರು 150 ಮಕ್ಕಳಿಗೆ ಸುಮಾರು ರೂಪಾಯಿ 13 ಲಕ್ಷ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಸದ್ರಿ ಸಾಲಿನಲ್ಲಿ 149 ಯುವ ಪ್ರತಿಭೆಗಳು ಸುಮಾರು 12 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರದಾನ ಮಾಡಲು ಸಂತೋಷವಾಗುತ್ತದೆ ಎಂದು ತಿಳಿಸಿದರು. “ಪ್ರತಿಷ್ಠಾನದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ನಿಮ್ಮೆಲ್ಲರ ತನು-ಮನ ಧನದ ಜೊತೆಗೆ ಪಾಲ್ಗೊಳ್ಳುವಿಕೆಯೇ ಕಾರಣ. ಅದಕ್ಕಾಗಿ ಪ್ರತಿಷ್ಠಾನ ನಿಮಗೆಲ್ಲರಿಗೂ ಅಬಾರಿಯಾಗಿದೆ” ಎಂದು ಎಲ್ಲರನ್ನು ಅಭಿನಂದಿಸಿದರು.
ಪ್ರಾಸ್ತಾವಿಕ ಮಾತುಗಳು- ಸಂಜಯ್ ಪ್ರಭು
“ ಪದವಿ-ಪೂರ್ವ, ಡಿಪ್ಲೋಮಾ, ಪದವಿ, ಹಾಗೂ ಇಂಜಿನಿಯರ್ ವಿದ್ಯಾರ್ಥಿಗಳಿಗೆ 3 ದಿನಗಳ ಸ-ನಿವಾಸ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಂತೆ ಮಾಡಿ ಪೂರಕವಾದ ಧನ ಸಹಾಯ, ಪ್ರೋತ್ಸಾಹ ನೀಡುವ, ಗ್ರಾಮೀಣ ಮಟ್ಟದ ವಲಯ ಪದಾಧಿಕಾರಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಪರಿಣಾಮಕಾರಿ ನಾಯಕತ್ವ ಸಾಮಥ್ಯ ತರಬೇತಿ, ಮಾತ್ರವಲ್ಲದೆ ಕೃಷಿಕರಿಗೆ, ಗುಡಿ ಕೈಗಾರಿಕೆಗೆ ಮತ್ತು ಸ್ವ ಉದ್ಯೊಗ ನಡೆಸುವವರಿಗೆ ಸರಕಾರ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸೌಲಭ್ಯಗಳ ಸದುಪಯೋಗ ಮಾಡುವ ಬಗ್ಗೆ, ಅವಶ್ಯಕತೆಯುಳ್ಳ ಕುಟುಂಬಗಳ ಆರೋಗ್ಯ ವಿಮೆ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ರಕ್ತದಾನ, ನೇತ್ರದಾನ, ಅಂಗಾಂಗ ದಾನ ಮತ್ತು ದೇಹದಾನಗಳ ಸ್ಪಷ್ಡ ಮಾಹಿತಿ, ಪ್ರೇರಣೆ, ಹಾಗೂ ಮಾರ್ಗದರ್ಶನ ನೀಡುವ, ಪಡಂಬೋಡಿಯಂತಹ ಅವಶ್ಯಕತೆಯುಳ್ಳ ಕುಟುಂಬಗಳ ಆರೋಗ್ಯ ತಪಾಸಣೆ, ಮತ್ತು ಚಿಕಿತ್ಸೆ ಮುಂತಾದ ಕಾರ್ಯ ಯೋಜನೆಗಳ ಬಗ್ಗೆ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸಂಜಯ್ ಪ್ರಭು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಿದರು. ಮಾತ್ರವಲ್ಲದೆ, ಪ್ರತಿಷ್ಠಾನವು ಕೈಗೊಳ್ಳುವ ಸಮಾಜಮುಖಿ ಚಿಂತನೆಯ ಶೈಕ್ಷಣಿಕ, ಔದ್ಯೋಗಿಕ, ಸಾಂಸ್ಕøತಿಕ, ವೈದ್ಯಕೀಯ, ಸಾಮಾಜಿಕ, ಧಾರ್ಮಿಕ ಮತ್ತು ವ್ಯಕ್ತಿತ್ವ ನಿರ್ಮಾಣ ಕಾರ್ಯಕ್ರಮಗಳಿಗೆ ರೂ.50,000/- ನೀಡುವ ಮೂಲಕ ಸಹಪ್ರಾಯೋಜಕರಾಗುವ ಯೋಜನೆಯ ಬಗ್ಗೆ ಸವಿವರವಾಗಿ ತಿಳಿಸಿದರು. ಸಹಪ್ರಾಯೋಜಕರು ಪ್ರತಿಷ್ಠಾನ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳ ವೇದಿಕೆಯಲ್ಲಿ ಒಬ್ಬ ಗಣ್ಯರಾಗಿ ಹಾಗೂ ಅತಿಥೇಯರಾಗಿಯೂ ಗೌರವಿಸಲ್ಪಡುವ, ಹಾಗೂ ಸಮುದಾಯದ ಸಂಘ ಸಂಸ್ಥೆಗಳು, ದೇವಸ್ಥಾನಗಳು, ಒಂದು ಕುಟುಂಬದವರು, ವ್ಯಕ್ತಿಗಳು ಪ್ರಾಯೋಜಕತ್ವವನ್ನು ಪಡೆಯುವ ವಿಚಾರಗಳನ್ನು ತಿಳಿಸಿದರು.
ಮನ ಮಿಡಿದ ಮಾತು – ಕು | ಜ್ಯೋತಿ ಹರಿಶ್ಚಂದ್ರ ಸಾಮಂತ್
ಇರುವೈಲು ದಿI ಹರಿಶ್ಚಂದ್ರ ಸಾಮಂತರ ಪುತ್ರಿ ಕು | ಜ್ಯೋತಿ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಒಡನಾಟ ಮತ್ತು ಅನಿಸಿಕೆಗಳನ್ನು ಸವಿವರವಾಗಿ ತಿಳಿಸುತ್ತಾ ತನ್ನನ್ನು ಬೆಳೆಸಿದ ರೀತಿ ಹಾಗೂ ತನ್ನ ಎಲ್ಲಾ ವಿದ್ಯಾಭ್ಯಾಸಕ್ಕೆ ಮಾಡಿದ ಸಹಾಯ-ಸಹಕಾರ,ಪಿ.ಯು.ಸಿ ಯಿಂದ-ಇಂಜಿನಿಯರಿಂಗ್ ತನಕ ವಿದ್ಯಾಭ್ಯಾಸ ಪಡೆಯಲು ಕಾಲೇಜು ಶುಲ್ಕ, ಹಾಸ್ಟೇಲ್ ಶುಲ್ಕ ಮತ್ತು ಇನ್ನಿತರ ಎಲ್ಲಾ ಖರ್ಚು ವೆಚ್ಚಗಳನ್ನು ಒದಗಿಸಿಕೊಟ್ಟು ನನ್ನ ಪೋಷಕರಾಗಿ ಸಲಹಿದ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದಂತಹ ಸಂಸ್ಥೆ ನಮ್ಮ ಸಮಾಜದಲ್ಲಿ ಇರುವುದು ನಮ್ಮ ಸಮುದಾಯದ ಪುಣ್ಯ ಹಾಗೂ ನಾನು ಈ ಸಮಾಜದಲ್ಲಿ ಹುಟ್ಟಿರುವುದಕ್ಕಾಗಿ ಹೆಮ್ಮೆ ಮತ್ತು ಅಭಿಮಾನ ಪಡುತ್ತೇನೆ ಎಂದು ತನ್ನ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ನನ್ನ ತಂದೆ ಹರಿಶ್ಚಂದ್ರ ಸಾಮಂತರಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಎಲ್ಲಾ ತರಹದ ಚಿಕಿತ್ಸೆಯನ್ನು ಕೊಡಿಸಿದರು ಅಲ್ಲದೇ ಅವರ ಮರಣಾನಂತರ ಶವ ಸಂಸ್ಕಾರದಿಂದ ಹಿಡಿದು ಎಲ್ಲಾ ವಿಧಿ ಕಾರ್ಯಗಳನ್ನು ನೆರವೇರಿಸಿ ಕೊಟ್ಟಿರುವುದು ಮಾತ್ರವಲ್ಲದೆ ತಂದೆಯ ಮರಣಾನಂತರ ನನಗೆ ಸರಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ಸವಲತ್ತು ಮತ್ತು ಸೌಲಭ್ಯಗಳನ್ನು ಸಿಗುವಂತೆ ಈಗಲೂ ಅವರು ಪ್ರಯತ್ನಗಳನ್ನು ಮಾಡುತ್ತಾ ಇದ್ದಾರೆ. ಪ್ರತಿಷ್ಠಾನದ ಪದಾಧಿಕಾರಿಗಳು ಅವರ ಕೆಲಸಗಳನ್ನು ಬದಿಗೊತ್ತಿ ಸಮಾಜಕ್ಕಾಗಿ ಮತ್ತು ಪ್ರತಿಷ್ಠಾನದ ಕಾರ್ಯಯೋಜನೆಗಳಿಗಾಗಿ ಅವರ ಸಮಯವನ್ನು ವಿನಿಯೋಗಿಸುತ್ತಿರುವುದು ಪ್ರಶಂಸನೀಯ ಹಾಗೂ ಅವರ ಸ್ಪಂದನೆ ಅದ್ಭುತವಾಗಿದೆ. ಯಾವುದೇ ಸಮುದಾಯವು ಈ ರೀತಿಯ ಸಂಘಟನೆಯನ್ನು ಹೊಂದಿರಲು ಸಾಧ್ಯವೇ ಇಲ್ಲ ಆದ್ದರಿಂದ ಇದು ಇತರ ಎಲ್ಲಾ ಸಮುದಾಯಕ್ಕೂ “ಮಾದರಿ ಸಂಘಟನೆ”ಯಾಗಿದೆ. ಪ್ರತಿಷ್ಠಾನವು ನನಗೆ ಮತ್ತು ಸಮಾಜಕ್ಕೆ ನೀಡಿದ ಸೇವೆಯನ್ನು ನಾನು ಈ ಜನ್ಮದಲ್ಲಿ ಮರೆಯಲು ಸಾಧ್ಯವಿಲ್ಲ” ಎಂದು ಸಭೆಯ ಮುಂದೆ ವಿವರಿಸಿದಾಗ ಸಮಾಜ ಬಾಂಧವರ ಮನ ಕರಗುವಂತೆ ಮಾಡಿತು.
ಈ ಸಂಧರ್ಭದಲ್ಲಿ ನಿವೃತ್ತ ಸೈನಿಕ ಮೂಕಾಂಡಿ ಶ್ರೀ ರಾಮಚಂದ್ರ ನಾಯಕ್, ಯುವ ಜನತೆಯಲ್ಲಿ ದೇಶಪ್ರೇಮ ಬೆಳೆಸಲು ಶ್ರಮಿಸುವ ಶ್ರೀ ವಿಕ್ರಮ್ ನಾಯಕ್ ಶಕ್ತಿನಗರ, ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ಅನಂತ ಪ್ರಭು ಕಟ್ಟಣಿಗೆ, ರಾಷ್ಟ್ರೀಯ ವಿಮಾ ಪ್ರವೇಶ ಪರೀಕ್ಷೆಯಲ್ಲಿ 4ನೇ ರ್ಯಾಂಕ್ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಬೆಂಗಳೂರಿನ ಶ್ರೀ ಸುಜಯ್ ಜಯಂತ್ ನಾಯಕ್, ಕ್ಲಿನಿಕಲ್ ಬಯೋ ಕೆಮಿಸ್ಟ್ರಿ ವಿಭಾಗಲ್ಲಿ 2 ನೇ ರ್ಯಾಂಕ್ ಗಳಿಸಿದ ಶ್ರೀಮತಿ ಅಶ್ವಿನಿ ನಾಯಕ್, ಭರತನಾಟ್ಯ ಕಲಾವಿದೆ ಕು. ಧನ್ಯಶ್ರೀ ಪ್ರಭು, ತಮ್ಮ 4ನೇ ವಿವಾಹ ವಾರ್ಷಿಕೋತ್ಸವದ ಸವಿನೆನಪಿಗಾಗಿ ಅಂಗಾಂಗ ದಾನ ಮಾಡಲು ನಿರ್ಧರಿಸಿದ ಆದರ್ಶ ದಂಪತಿ ಶ್ರೀ ಸರ್ವೋತ್ತಮ್ ಶೆಣೈ ಮತ್ತು ಶ್ರೀಮತಿ ಶಶಿಕಲಾ ಶೆಣೈ, ನಾನಿಂಜ, ಪ್ರಗತಿಪರ ಕೃಷಿಕ ಶ್ರೀ ಶಿವಾನಂದ ನಾಯಕ್ ಸಮೃದ್ಧಿ ಫಾಮ್ಸ್, ಕೆಮ್ಮಾಯಿ ಮತ್ತು ಶ್ರೀ ಹರೀಶ್ ನಾಯಕ್ ನಟ್ಟಿಬೈಲ್, ದೈಹಿಕ ಶಿಕ್ಷಕರಾದ ಶರವೇಗದ ಸರದಾರ ಶ್ರೀ ರಾಧಾಕೃಷ್ಣ ಪ್ರಭು ಪಣಕಜೆ, ಕಂಪೆನಿ ಸೆಕ್ರೇಟರಿ ಶ್ರೀ ಪ್ರಥ್ವಿರಾಜ್ ನಾಯಕ್ ಪುತ್ತೂರು, ಮಣಿಪಾಲ ವಿಶ್ವವಿದ್ಯಾಲಯದಿಂದ ಪಿ.ಎಚ್. ಡಿ ಪಡೆದ ಡಾ. ಸರೀತಾ ಎನ್. ಪಾಟೀಲ್, ಉತ್ತಮ ಭಾಷಣಗಾರ್ತಿ ಕು. ಪ್ರಜ್ಞಾ ಪ್ರಭಾಕರ್ ಪ್ರಭು ವೇಣೂರು, ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ವಿಶೇಷವಾಗಿ ಅಭಿನಂದಿಸಲಾಯಿತು.
ಅಂತೆಯೇ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿಭಾಗದಲ್ಲಿ 85% ಗಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗುರುತಿಸಿ ಪ್ರತಿಭಾ ಪರಸ್ಕಾರ ನೀಡಿ ಅಭಿನಂದಿಸಲಾಯಿತು.
ಪ್ರತಿಷ್ಠಾನಕ್ಕೆ ಧನಸಹಾಯ ಮಾಡಿದ ದಾನಿಗಳ ಅಮೃತ ಹಸ್ತದಿಂದ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಪ್ರತಿಷ್ಠಾನದ ಪ್ರಸಕ್ತ ಸಾಲಿನ ಸಹಪ್ರಾಯೋಜಕರಾದ ಶ್ರೀಮತಿ ಪ್ರೇಮಲತಾ ಉಮೇಶ್ ಪ್ರಭು ಬನ್ನೂರು, ಶ್ರೀಮತಿ ದಿವ್ಯ ವಿನಯ್ ಸಾಮಂತ್, ಭಾರಧ್ವಾಜ ಫೌಂಡೇಶನ್‍ನ ವತಿಯಿಂದ ಶ್ರೀ ಸುಧಾಕರ್ ಶೆಣ್ಯೆ, ದ.ಕ ಜಿಲ್ಲಾ ಕು.ದೇ.ಗೌ. ಬ್ರಾಹ್ಮಣ್ ಸಂಘ (ರಿ) ದ ಅಧ್ಯಕ್ಷರಾದ ಡೆಚ್ಚಾರ್ ಶ್ರೀ ಗಣಪತಿ ಶೆಣ್ಯೆ, ಶ್ರೀ ಕೇಶವ ನಾಯಕ್ ಮೈರಾ, ಶ್ರೀ ರಮೇಶ್‍ನಾಯಕ್ ಮೈರಾ ಇವರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಶ್ರೀ ಅಕ್ಷತ್ ಪಾಟೀಲ್, ಶ್ರೀ ಬಿ. ರಾಜೇಂದ್ರ ನಾಯಕ್, ಐಕಾನ್ ಇಂಜಿನಿಯರಿಂಗ್ ವಕ್ರ್ಸ್, ಶ್ರೀ ನಾರಾಯಣ್ ಪ್ರಭು ವಗ್ಗ, ಶ್ರೀ ಶ್ರೀನಿವಾಸ ಶೆಣ್ಯೆ ಕೂಡಿಬೈಲು, ಶ್ರೀ ಸುಧೀರ್ ಅಚ್ಯುತ್ ನಾಯಕ್, ಶ್ರೀ ವೆಂಕಟ್ರಮಣ ನಾಯಕ್ ಮಲ್ಲಿಕಟ್ಟೆ, ಶ್ರೀ ಗೋಪಾಲ ಶೆಣ್ಯೆ ಕೊಡಂಗೆ, ಶ್ರೀ ನಾರಾಯಣ್ ನಾಯಕ್ ಕಿನ್ನಾಜೆ, ಬರೆಪ್ಪಾಡಿ ಶ್ರೀ ನಾರಾಯಣ್ ಪ್ರಭು, ಶ್ರೀ ಗೋಪಾಲಕೃಷ್ಣ ಪ್ರಭು ವಗ್ಗ, ನೇರಳೆಕೋಡಿ ಶ್ರೀ ಗೋಪಾಲ್ ಪ್ರಭು, ಶ್ರೀ ಜಯಂತ್ ನಾಯಕ್ ಅಬಿವೃದ್ಧಿ ಬಿಲ್ಡರ್ಸ್, ಬೆಂಗಳೂರು, ವಲಯ ಅಧ್ಯಕ್ಷರುಗಳಾದ ಶ್ರೀ ದಿವಾಕರ್ ಶೆಣ್ಯೆ ಮರೋಳಿ, ಶ್ರೀ ಗಣೇಶ್ ಪ್ರಭು ಓಮ, ಶ್ರೀ ವಿದ್ಯಾಧರ್ ಪ್ರಭು ದೋಟ, ಶ್ರೀ ದಯಾನಂದ ನಾಯಕ್ ಬೆಳ್ತಂಗಡಿ, ಶ್ರೀ ಮೋಹನ್ ನಾಯಕ್ ಒಡ್ಡೂರು, ಶ್ರೀ ಶಾಂತಾರಾಮ್ ನಾಯಕ್ ಕಡಂಬು, ಮತ್ತು ಶ್ರೀ ರಾಮಕೃಷ್ಣ ಪ್ರಭು ಮಾರಿಬೆಟ್ಟು, ಶ್ರೀ ವೆಂಕಟ್ರಾಯ್ ಪ್ರಭು ಪೂರ್ಲಪಾಡಿ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಸಂಜೀವ್ ಸಾಮಂತ್ ಮರೋಳಿ, ಶಿವರಾವ್ ಕೂಡಿಬೈಲು, ಮುರಳೀಧರ್ ಪ್ರಭು ವಗ್ಗ, ರವೀಂಧ್ರ ಪ್ರಭು ಶಕ್ತಿನಗರ, ಅನಂತ್ ಪ್ರಭು ಮರೋಳಿ, ಗಣೇಶ್ ಶೆಣ್ಯೆ ಮರೋಳಿ, ಡಾ. ಸುಚೇತಾ ಶೆಣ್ಯೆ ಮರೋಳಿ, ಸುಚಿತ್ರಾ ರಮೇಶ್ ನಾಯಕ್, ಆಶಾಲತಾ ಪ್ರಭಾಕರ್ ಪ್ರಭು, ಭಾಸ್ಕರ್ ಪ್ರಭು, ಚಂದ್ರಹಾಸ ಪ್ರಭು ಪುರುಷರಕಟ್ಟೆ, ಪ್ರಭಾಕರ್ ಪ್ರಭು ನಡಿಬೈಲು, ರವೀಂಧ್ರ ಪ್ರಭು ಮಳಲಿ, ಶಿವ ಪ್ರಸಾದ್ ಪಡೀಲ್, ಸತೀಶ್ ಶೆಣ್ಯೆ ಮರೋಳಿ, ವಿಠಲ್ ಶೆಣ್ಯೆ ಮರೋಳಿ, ಸತ್ಯವತಿ ವಿಷ್ಣು ಮೂರ್ತಿ ಪ್ರಭು, ಗೀತಾ ನಾಯಕ್ ಶಕ್ತಿನಗರ, ಲಕ್ಷ್ಮೀ ವೆಂಕಟೇಶ್ ಪ್ರಭು, ಚಿದಾನಂದ ಪ್ರಭು ಒಡ್ಡೂರು, ನಾಗೇಶ್ ಪ್ರಭು ಕುಂಟಲ್ಪಾಡಿ, ಪ್ರವೀಣ್ ಇರುವೈಲು, ಮಲ್ಲಿಕಾ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಸಂದೇಶ್ ಭಟ್ ಇರುವೈಲು, ಶ್ರೀ ಸುರೇಶ್ ಪ್ರಭು ಇರುವೈಲು, ನೇರಳೆಕೋಡಿ ಶ್ರೀ ಗೋಪಾಲ್ ಪ್ರಭು, ಮತ್ತು ಶ್ರೀ ವಾಸುದೇವ ನಾಯಕ್, ಇನೋಳಿ, ಇವರು ನಾಮಸ್ಮರಣೆಯನ್ನು ನಡೆಸಿಕೊಟ್ಟರು. ಶ್ರೀ ಪ್ರಭಾಕರ್ ಪ್ರಭು ವೇಣೂರು, ಮತ್ತು ಡಾ. ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ್ ಸಾಮಂತ್ ವಂದಿಸಿದರು.